ವಾಟ್ಸಅಪ್‌‌‌ಗೆ ಚಾಟಿ ಬೀಸಿದ ಸರ್ವೋಚ್ಚ ನ್ಯಾಯಾಲಯ

ನವದೆಹಲಿ: ಹೊಸ ಗೌಪ್ಯತೆ ನೀತಿ ಜಾರಿಗೆ ತರಲು ಮುಂದಾಗಿದ್ದ ಮೆಸೆಜಿಂಗ್‌ ಅಪ್ಲಿಕೇಶನ್‌ ವ್ಯಾಟ್ಸಪ್‌ಗೆ ಚಾಟಿ ಬೀಸಿದ ಸರ್ವೋಚ್ಚ ನ್ಯಾಯಾಲಯ, ಹಣಕ್ಕಿಂತ ನಾಗರಿಕರ ಗೌಪ್ಯತೆ ಮುಖ್ಯವಾಗಿದೆ ಎಂದು ಅಭಿಪ್ರಾಯಟ್ಟಿದೆ. ಕೇಂದ್ರ ಸರಕಾರ ಹಾಗೂ ವ್ಯಾಟ್ಸಪ್‌ಗೆ ನೊಟೀಸ್‌ ನೀಡಿದ ನ್ಯಾಯಾಲಯ, ನ್ಯಾಯಾಲಯವು ಜನರ ಗೌಪ್ಯತೆ ಬಗ್ಗೆ ಗಂಭೀರ ಕಾಳಜಿ ಹೊಂದಿದೆ. ಜನರ ಗೌಪ್ಯತೆ ರಕ್ಷಿಸುವುದು ನಮ್ಮ ಕರ್ತವ್ಯ ಎಂದು … Continued

ʼಯುವಿʼ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲು

ದಲಿತರ ವಿರುದ್ಧ ಜಾತಿ ನಿಂದನೆ ಮಾಡಿದ ಕ್ರಿಕೆಟಿಗ ಯುವರಾಜ್‌ ಸಿಂಗ್‌ ವಿರುದ್ಧ ಹರಿಯಾಣ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಕಳೆದ ವರ್ಷ ಜೂನ್‌ನಲ್ಲಿ ಹನ್ಸಿ ಮೂಲದ ನ್ಯಾಯವಾದಿ ರಜತ್‌ ಕಲ್ಸನ್‌ ಹಿಸ್ಸಾರ್‌ ಜಿಲ್ಲೆಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸಾಮಾಜಿಕ ಜಾಲತಾಣ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಇನ್ನೊಬ್ಬ ಆಟಗಾರನನ್ನು ಉಲ್ಲೇಖಿಸುವಾಗ ಈ ಹೇಳಿಕೆ ನೀಡಿದ್ದರು ಎಂದು ಕಲ್ಸನ್‌ ಆರೋಪಿಸಿದ್ದರು. … Continued

ನೆರೆ ದೇಶಗಳಲ್ಲೂ ಬಿಜೆಪಿ ಸರಕಾರ: ತ್ರಿಪುರ ಸಿಎಂ ವಿವಾದಾತ್ಮಕ ಹೇಳಿಕೆ

ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ಮುಖಂಡ ಅಮಿತ್‌ ಶಾ ನೆರೆ ದೇಶಗಳಾದ ನೇಪಾಳ ಹಾಗೂ ಶ್ರೀಲಂಕಾದಲ್ಲಿ ಬಿಜೆಪಿ ಸರಕಾರ ರಚನೆಯ ಉದ್ದೇಶ ಹೊಂದಿದ್ದಾರೆ ಎಂದು ತ್ರಿಪುರ ಮುಖ್ಯಮಂತ್ರಿ ಬಿಪ್ಲಬ್‌ ಕುಮಾರ್‌ ದೇಬ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ದೇಶದಲ್ಲಿ ಮಾತ್ರವಲ್ಲದೇ ನೇಪಾಳ ಹಾಗೂ ಶ್ರೀಲಂಕಾದಲ್ಲಿ ಬಿಜೆಪಿಯನ್ನು ಸಂಘಟಿಸಿ ಅಲ್ಲಿ ಬಿಜೆಪಿ ಸರಕಾರ ರಚನೆ ಮಾಡುವ ಉದ್ದೇಶ … Continued

ಉತ್ತರಾಖಂಡ ಪ್ರವಾಹ: ಮೃತ ಸಂಖ್ಯೆ ೫೩ಕ್ಕೆ ಏರಿಕೆ

ಉತ್ತರಾಖಂಡದಲ್ಲಿ ಹಿಮ ಬಂಡೆ ಕುಸಿದು ಉಂಟಾದ ಪ್ರವಾಹ ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ೫೩ಕ್ಕೆ ಏರಿಕೆಯಾಗಿದೆ. ಸೋಮವಾರ ಅವಶೇಷಗಳ ಅಡಿಯಿಂದ ಮೂರು ಶವಗಳನ್ನುಹೊರ ತೆಗೆಯಲಾಗಿದೆ. ಚಮೋಲಿ ಜಿಲ್ಲೆಯ ಆದಿತಿ ಸುರಂಗ ಹಾಗೂ ತಪೋವನ-ವಿಷ್ಣುಗಡ ಪ್ರದೇಶದಿಂದ ಶವಗಳನ್ನು ಹೊರತೆಗೆಯಲಾಗಿದೆ ಎಂದು ಜಿಲ್ಲಾಧಿಕಾರಿ ಸ್ವಾತಿ ಬದೋರಿಯಾ ತಿಳಿಸಿದ್ದಾರೆ. ಫೆ.೭ರಂದು ಹಿಮ ಬಂಡೆ ಕುಸಿದು ಪ್ರವಾಹ ಉಂಟಾಗಿದ್ದು ಇದರಿಂದ ೧೫೧ ಜನರು … Continued

ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿಶಿಷ್ಟ ದಾಖಲೆ ಬರೆದ ಸ್ಪಿನ್ನರ್‌ ಆರ್.‌ ಅಶ್ವಿನ್

ಚೆನ್ನೈ: ಟೆಸ್ಟ್‌ ಕ್ರಿಕೆಟ್‌ನ ಇತಿಹಾಸದಲ್ಲಿ ೨೦೦ ಎಡಗೈ ಬ್ಯಾಟ್ಸ್‌ಮನ್‌ಗಳ ವಿಕೆಟ್‌ ಪಡೆದ ಮೊದಲ ಬೌಲರ್‌ ಎಂಬ ವಿಶೇಷ ದಾಖಲೆಯನ್ನು ಭಾರತ ತಂಡದ ಆಫ್‌ ಸ್ಪಿನ್ನರ್‌ ಆರ್.‌ ಅಶ್ವಿನ್‌ ಸೋಮವಾರ ತಮ್ಮದಾಗಿಸಿಕೊಂಡರು. ಇಲ್ಲಿನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್‌ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ದ್ವಿತೀಯ ಇನಿಂಗ್ಸ್‌ನಲ್ಲಿ ಅಶ್ವಿನ್‌ ಈ ನೂತನ ವಿಶ್ವ ದಾಖಲೆ … Continued

ಗುಜರಾತ ಸಿಎಂ ವಿಜಯ ರೂಪಾಣಿಗೆ ಕೊರೊನಾ ದೃಢ

ಗುಜರಾತ ಮುಖ್ಯಮಂತ್ರಿ ವಿಜಯ ರೂಪಾಣಿ ಅವರಿಗೆ ಕೊರೊನಾ ತಗುಲಿರುವುದು ದೃಢಪಟ್ಟಿದೆ. ಭಾನುವಾರ ರೂಪಾಣಿ ಅವರ ಮಾದರಿ ಪಡೆದು ಪರೀಕ್ಷೆಗೆ ಕಳಿಸಲಾಗಿತ್ತು. ಅವರಿಗೆ ಕೋವಿಡ್‌-೧೯ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಯು.ಎನ್‌.ಮೆಹ್ತಾ ಆಸ್ಪತ್ರೆ ತಿಳಿಸಿದೆ. ವಡೋದರಾದ ನಿಜಾಮ್‌ಪುರ ಪ್ರದೇಶದಲ್ಲಿ ಸ್ಥಳಿಯ ಸಂಸ್ಥೆಗಳ ಚುನಾವಣೆ ಪ್ರಚಾರಸಭೆಯಲ್ಲಿ ಭಾಷಣ ಮಾಡುವ ಸಂದರ್ಭದಲ್ಲಿ ವಿಜಯ ರೂಪಾಣಿ ಕುಸಿದು ಬಿದ್ದಿದ್ದರು. ಅವರನ್ನು ತಕ್ಷಣ … Continued

ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಗೆ ಸಿಎಂ ಯಡಿಯೂರಪ್ಪ ಚಾಲನೆ

ವಿಜಯಪುರ ಸಮೀಪದ ಮದಬಾವಿಯಲ್ಲಿ ವಿಮಾನ ನಿಲ್ದಾಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನಡೆಯಿತು. ಸಿಎಂ ಯಡಿಯೂರಪ್ಪ ವರ್ಚುವಲ್‌ ತಂತ್ರಜ್ಞಾನದ ಮೂಲಕ ವಿಮಾನ ನಿಲ್ದಾಣ ಕಾಮಗಾರಿಗೆ ಚಾಲನೆ ನೀಡಿದರು. ಅವರು ಮಾತನಾಡಿ, ಐತಿಹಾಸಿಕ ಕೇಂದ್ರ, ತೋಟಗಾರಿಕೆ ಉತ್ಪನ್ನಗಳಿಗೆ ಪ್ರಸಿದ್ಧಿಗಳಿಸಿದ ವಿಜಯಪುರದಲ್ಲಿ ವಿಮಾನ ನಿಲ್ದಾಣದಿಂದ ಪ್ರವಾಸೋದ್ಯಮ ಬೆಳವಣಿಗೆ ಹಾಗೂ ರಫ್ತು ಉತ್ತೇಜನಕ್ಕೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು. ಮದಬಾವಿಯಲ್ಲಿ ೭೨೭ ಎಕರೆ … Continued

ಹೊಸ ಕೃಷಿ ಕಾನುನು ಅಸ್ತವ್ಯಸ್ತತೆಗೆ ಕೇಂದ್ರದ ಮೊಂಡುತನದ ಧೋರಣೆ ಕಾರಣ

ಹೊಸ ಕೃಷಿ ಕಾನೂನುಗಳ ಅಸ್ತವ್ಯಸ್ತತೆಗೆ ಕೇಂದ್ರದ “ಮೊಂಡುತನದ ಮನೋಭಾವ” ಕಾರಣ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಸಮನ್ವಯ ಸಮಿತಿ ಸದಸ್ಯ ಶಿವ ಕುಮಾರ್ ಶರ್ಮಾ ಹೇಳಿದ್ದಾರೆ. ರೈತರೊಂದಿಗೆ ಮಾತುಕತೆ ನಡೆಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಸಂಸತ್ತಿನಲ್ಲಿ ಭರವಸೆ ನೀಡಿದ್ದರೂ, ಮುಂದಿನ ಸುತ್ತಿನ ಮಾತುಕತೆಗಾಗಿ ಯಾವುದೇ ದಿನಾಂಕವನ್ನು ಸರ್ಕಾರ ತಿಳಿಸಿಲ್ಲ. 40 ರೈತ ಸಂಘಟನೆಗಳ ಮೈತ್ರಿ … Continued

ಫೆ.೧೫ರ ಮಧ್ಯರಾತ್ರಿಯಿಂದ ಫಾಸ್ಟ್ಯಾಗ್ ಬಳಕೆ ಕಡ್ಡಾಯ

ನವದೆಹಲಿ: ವಾಹನಗಳ ಚಾಲಕರು, ಮಾಲೀಕರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವಾಗ ಟೋಲ್‌ ಪ್ಲಾಜಾಗಳಲ್ಲಿ ಶುಲ್ಕ ಪಾವತಿಸಲು ಸೋಮವಾರ (ಫೆ.೧೫ರ ಮಧ್ಯರಾತ್ರಿ)ಮಧ್ಯರಾ‌ತ್ರಿಯಿಂದ ಜಾರಿಗೆ ಬರುವಂತೆ ಫಾಸ್ಟ್ಯಾಗ್ ಬಳಸುವುದು ಕಡ್ಡಾಯವಾಗಲಿದೆ. ಫಾಸ್ಟ್ಯಾಗ್ ಇಲ್ಲದಿದ್ದರೆ ಅಂಥ ವಾಹನಗಳ ಮಾಲೀಕರು, ಚಾಲಕರು ನಿಗದಿತ ಶುಲ್ಕದ ದುಪ್ಪಟ್ಟು ಮೊತ್ತವನ್ನು ಪಾವತಿಸಬೇಕಾಗುತ್ತದೆ ಎಂದು ಕೇಂದ್ರ ಭೂ ಸಾರಿಗೆ ಸಚಿವಾಲಯವು ತಿಳಿಸಿದೆ. ಶುಲ್ಕ ಸಂಗ್ರಹದ ವ್ಯಾಪ‍್ತಿಗೆ ಬರುವ … Continued

ರೈತರ ಬೇಡಿಕೆ ಈಡೇರುವ ವರೆಗೂ ಸರ್ಕಾರಕ್ಕೆ ಶಾಂತಿಯಿಂದಿರಲು ಬಿಡಲ್ಲ

ರೈತರ ಬೇಡಿಕೆಗಳನ್ನು ಈಡೇರಿಸುವವರೆಗೂ ಶಾಂತಿಯಿಂದ ಕುಳಿತುಕೊಳ್ಳಲು ಬಿಡುವುದಿಲ್ಲ ಎಂದು ಸರ್ಕಾರದ ವಿರುದ್ಧ ಮುಂಚೂಣಿಯಲ್ಲಿರುವ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯಿತ್‌ ಹೇಳಿದ್ದಾರೆ. ರೈತರ “ಮಹಾಪಂಚಾಯತ್” ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರದ ಕೃಷಿ ಕಾನೂನುಗಳ ವಿರುದ್ಧದ ಆಂದೋಲನಕ್ಕೆ ಮುಂದಾಗಿರುವ 40 ನಾಯಕರು ಇಡೀ ದೇಶದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ. ಸರ್ಕಾರವು ನಮ್ಮ ಪರವಾಗಿ ತೀರ್ಮಾನಿಸುವ … Continued