ಮೋದಿ ರಾಜೀನಾಮೆಗೆ ಕರೆ ನೀಡಿದ ಹ್ಯಾಶ್‌ಟ್ಯಾಗ್ ತಪ್ಪಾಗಿ ತಾತ್ಕಾಲಿಕ ನಿರ್ಬಂಧ: ಫೇಸ್‌ಬುಕ್ ಸ್ಪಷ್ಟನೆ

ಸಾಮಾಜಿಕ ಮಾಧ್ಯಮ ದೈತ್ಯ ಫೇಸ್‌ಬುಕ್ ಗುರುವಾರ, ಪ್ರಧಾನಮಂತ್ರಿಯ ರಾಜೀನಾಮೆಗೆ ಒತ್ತಾಯಿಸಿದ ಹ್ಯಾಶ್‌ಟ್ಯಾಗ್ ತಪ್ಪಾಗಿ ತಾತ್ಕಾಲಿಕವಾಗಿ ನಿರ್ಬಂಧಿಸಿಸಲಾಗಿದೆ ಮತ್ತು ಇದು ಸರ್ಕಾರದ ಆದೇಶದ ಮೇರೆಗೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ. ಕೊರೊನಾ ವೈರಸ್‌ ಸಾಂಕ್ರಾಮಿಕ ರೋಗವನ್ನು ಸರ್ಕಾರ ನಿರ್ವಹಿಸುತ್ತಿರುವುದನ್ನು ಟೀಕಿಸುವ ಪೋಸ್ಟ್‌ಗಳನ್ನು ತೆಗೆದುಹಾಕಲು ಸಾಮಾಜಿಕ ಮಾಧ್ಯಮ ಕಂಪನಿಗಳನ್ನು ಕೇಳಲಾಗುತ್ತಿದೆ ಎಂಬ ವರದಿಗಳ ಮಧ್ಯೆ ಕಂಪನಿ ಸ್ಪಷ್ಟನೆ ನೀಡಿದೆ. ನಾವು … Continued

ರಾಜ್ಯ ಸರ್ಕಾರಗಳಿಗೆ ಕೋವಾಕ್ಸಿನ್ ಬೆಲೆ ಕಡಿಮೆ ಮಾಡಿದ ಭಾರತ್ ಬಯೋಟೆಕ್

ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ತನ್ನ ಕೋವಿಡ್ -19 ಲಸಿಕೆ ಕೋವಾಕ್ಸಿನ್ ಬೆಲೆಯನ್ನು ರಾಜ್ಯ ಸರ್ಕಾರಗಳಿಗೆ 200 ರೂ. ಕಡಿಮೆ ಮಾಡಿದೆ. ಈ ಮೊದಲು ರಾಜ್ಯ ಸರ್ಕಾರಗಳಿಗೆ ಪ್ರತಿ ಡೋಸ್‌ಗೆ 600 ರೂ. ಬಲೆ ನಿಗದಿ ಪಡಿಸಲಾಗಿತ್ತು. ಈಗ ಪ್ರತಿ ಡೋಸಿಗೆ 400 ರೂ. ಬೆಲೆ ನಿಗದಿ ಮಾಡಿದೆ. ಭಾರತದ ಬಯೋಟೆಕ್ ಹೇಳಿಕೆ ನೀಡಿದ್ದು, ದೇಶದ … Continued

ರಿಲಯನ್ಸ್‌ ಉಪಾಧ್ಯಕ್ಷ ಈಗ ಜೈನ ಸನ್ಯಾಸಿ..ನಿವೃತ್ತಿ ನಂತರ ದೀಕ್ಷೆ ಸ್ವೀಕರಿಸಿದ ಪ್ರಕಾಶ ಷಾ..!

ಮುಂಬೈ; ರಿಲಯನ್ಸ್ ಇಂಡಸ್ಟ್ರೀಸ್ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ರಿಲಯನ್ಸ್ ಇಂಡಸ್ಟ್ರಿಯ ಉಪಾಧ್ಯಕ್ಷರಾಗಿ ನಿವೃತ್ತರಾದ ಪ್ರಕಾಶ್ ಷಾ ಜೈನ ಸನ್ಯಾಸತ್ವ ಸ್ವೀಕರಿಸಿದ್ದಾರೆ. ಕಳೆದ ವಾರ ಮಹಾವೀರ್ ಜಯಂತಿ ಅವರ ಶುಭ ಸಂದರ್ಭದಲ್ಲಿ ಪ್ರಕಾಶ್ ಷಾ ಮತ್ತು ಅವರ ಪತ್ನಿ ನೈನಾ ಷಾ ಸನ್ಯಾಸ ‘ದೀಕ್ಷೆ’ ಸ್ವೀಕಾರ ಮಾಡಿದ್ದಾರೆ. 40 ವರ್ಷಗಳ ಹಿಂದೆ ಕೆಮಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ … Continued

2020ರಲ್ಲಿ ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಿದ್ದು ಹೆಂಗಸರನ್ನು ಕಂಟ್ರೋಲ್ ಮಾಡುವುದು ಹೇಗೆ..?!

ಯಾವುದರ ಬಗ್ಗೆಯಾದರೂ ತಿಳಿದುಕೊಳ್ಳಬೇಕಾದರೆ ಗೂಗಲ್‌ ಸರ್ಚ್‌ ಮಾಡುತ್ತೇವೆ. ಗೂಗಲ್‌ನಲ್ಲಿ ಇಲ್ಲದ ವಿಷಯಗಲೇ ಇಲ್ಲ. ಎಲ್ಲ ಭಾಷೆಯ ವಿಷಯಗಳೂ ಇಲ್ಲಿ ಸಿಗುತ್ತವೆ. ಇದು ಮಾಹಿತಿಯ ಕಣಜ. ಆದರೆ ಇಲ್ಲಿ ನಾವು-ನೀವು ಊಹಿಸದೇ ಇರುವ ವಿಷಯಕ್ಕೂ ಗೂಗಲ್‌ನಲ್ಲಿ ಸರ್ಚ್‌ ಮಾಡುತ್ತಾರೆ. ಯಾಕೆಂದರೆ ಮಾಹಿತಿ ಕ್ಷಣಾರ್ಧದಲ್ಲಿ ಸಿಗುತ್ತದೆ. ಬೆರಳ ತುದಿಯಲ್ಲಿ ಉಚಿತವಾಗಿ ಸಿಗುತ್ತದೆ. ಹೀಗಾಗಿ ಮಾಹಿತಿಗಾಗಿ ಇದನ್ನೇ ಈಗ ಬಹುತೇಕ … Continued

ದೆಹಲಿಯಲ್ಲಿ ಅಗ್ನಿ ದುರಂತ: ಒಂದೇ ಕುಟುಂಬದ ಆರು ಮಂದಿ ದಹನ

ನವ ದೆಹಲಿ : ದೆಹಲಿ ಬಿಜ್ವಾಸನ್ ನಗರದಲ್ಲಿರುವ ಕೊಳಗೇರಿ ಪ್ರದೇಶದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಒಂದೇ ಕುಟುಂಬದ ಆರು ಮಂದಿ ದಹನವಾಗಿರುವ ಘಟನೆ ನಡೆದಿದೆ. ಟ್ರಾನ್ಸ್ ಫಾರ್ಮರ್ ಬಳಿಯ ಎರಡು ಕೊಳಗೇರಿ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯಿಂದಾಗಿ ಕೊಳಗೇರಿ ಪ್ರದೇಶ ಸುಟ್ಟು ಹೋಗಿದೆ. ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಅಗಮಿಸಿ ಬೆಂಕಿ ನಂದಿಸುವ … Continued

8,250 ಕೋಟಿ ರೂ.ಗಳ ಐಪಿಒಗೆ ಝೊಮಾಟೊದಿಂದ ಸೆಬಿಗೆ ಕರಡು ಪತ್ರ ಸಲ್ಲಿಕೆ

ಆನ್‌ಲೈನ್ ಫುಡ್ ಆರ್ಡರ್ ಪ್ಲಾಟ್‌ಫಾರ್ಮ್‌ ಝೊಮಾಟೊ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಗೆ 8,250 ಕೋಟಿ ರೂ. ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಗೆ ಕರಡು ಪತ್ರಗಳನ್ನು ಸಲ್ಲಿಸಿದೆ. ಷೇರು ಫ್ಲೋಟ್ 7,500 ಕೋಟಿ ರೂ.ಗಳ ಈಕ್ವಿಟಿ ಷೇರುಗಳ ಹೊಸ ಸಂಚಿಕೆ ಮತ್ತು ಇನ್ಫೋ ಎಡ್ಜ್ (ಇಂಡಿಯಾ) ಲಿಮಿಟೆಡ್ 750 ಕೋಟಿ … Continued

ಭಾರತಕ್ಕೆ 100 ಮಿಲಿಯನ್ ಮೌಲ್ಯದ ಕೋವಿಡ್‌ ಪರಿಹಾರ ಸಾಮಗ್ರಿ ನೀಡಲಿರುವ ಅಮೆರಿಕ

ನವ ದೆಹಲಿ: ಮುಂದಿನ ದಿನಗಳಲ್ಲಿ ಅಮೆರಕವು 100 ಮಿಲಿಯನ್ ಡಾಲರ್‌ ಮೌಲ್ಯದ ಕೋವಿಡ್ -19 ಪರಿಹಾರ ಸಾಮಗ್ರಿಗಳನ್ನು ಭಾರತಕ್ಕೆ ತಲುಪಿಸಲಿದೆ ಎಂದು ಶ್ವೇತಭವನವು ಹೇಳಿದೆ. ವಿಶ್ವದ ಅತಿದೊಡ್ಡ ಮಿಲಿಟರಿ ವಿಮಾನದ ಟ್ರಾವಿಸ್ ವಾಯುಪಡೆಯ ನೆಲೆಯಿಂದ ಬುಧವಾರ ರಾತ್ರಿ ವಿಮಾನ ಹಾರಾಟ ನಡೆಸಿದೆ ಎಂದು ಅಮೆರಿಕದ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ ತಿಳಿಸಿದೆ. ಸಾಗಣೆಯಲ್ಲಿ 440 ಆಮ್ಲಜನಕ … Continued

ಅಸ್ಸಾಂನಲ್ಲಿ ಭಾರೀ ಭೂ ಕಂಪನ, 200ಕ್ಕೂ ಹೆಚ್ಚು ಕಟ್ಟಡಗಳಿಗೆ ಹಾನಿ

ಗುವಾಹಟಿ: ಬುಧವಾರ ಬೆಳಿಗ್ಗೆ ಅಸ್ಸಾಂನಲ್ಲಿ ಭೂಕಂಪನ ಸಂಭವಿಸಿದ್ದು, 200 ಕ್ಕೂ ಹೆಚ್ಚು ಕಟ್ಟಡಗಳಿಗೆ ಹಾನಿಯಾಗಿದೆ ಮತ್ತು 10 ಜನರು ಗಾಯಗೊಂಡಿದ್ದಾರೆ, ಬೆಳಿಗ್ಗೆ 7.51 ಕ್ಕೆ ರಾಜ್ಯಕ್ಕೆ ಅಪ್ಪಳಿಸಿದ ಭೂಕಂಪದ ಕೇಂದ್ರಬಿಂದು ಸೋನಿತ್‌ಪುರ ಜಿಲ್ಲೆಯ ಧೇಕಿಯಾಜುಲಿಯಲ್ಲಿ 17 ಕಿ.ಮೀ. ಅಧಿಕೇಂದ್ರವು ಪ್ಲೇಟ್ ಗಡಿಗೆ ಹತ್ತಿರದಲ್ಲಿದೆ ಮತ್ತು ಗುವಾಹಟಿಯಿಂದ ಈಶಾನ್ಯಕ್ಕೆ 80 ಕಿ.ಮೀ ದೂರದಲ್ಲಿದೆ; ಶಿಲ್ಲಾಂಗ್‌ನಿಂದ ಉತ್ತರಕ್ಕೆ 132 … Continued

ಕೋವಿಡ್‌ ಆಸ್ಪತ್ರೆಯಲ್ಲೂ ವ್ಯಾಸಂಗ ನಿಲ್ಲಿಸದ ಸೋಂಕಿತ…!

ಕೊರೊನಾ ವೈರಸ್​ನಿಂದಾಗಿ ಜನರ ಜೀವನವೇ ಸಂಪೂರ್ಣ ಬದಲಾಗಿದೆ. ಆದರೆ ಕೊರೊನಾ ಸೋಂಕು ಇಲ್ಲೊಬ್ಬರ ಓದಿಗೆ ಅಡ್ಡಿಯಾಗಿಲ್ಲ. ಅವರು ಅಸ್ಪತ್ರೆಯ ಬೆಡ್‌ ಮೇಲೆಯೇ ಓದುತ್ತಿದ್ದಾರೆ. ಚಾರ್ಟಡ್​ ಅಕೌಟೆಂಟ್​ ವ್ಯಾಸಂಗ ಮಾಡುತ್ತಿದ್ದ ಯುವಕ ಆಸ್ಪತ್ರೆಯ ಬೆಡ್‌ ಮೇಲೆಯೇ ತನ್ನ ಓದು ಮುಂದುವರಿಸಿದ್ದಾನೆ. ಒಡಿಶಾದ ಐಸೋಲೇಷನ್​ ಕೇಂದ್ರದಲ್ಲಿ ಇದ್ದುಕೊಂಡೇ ಪರೀಕ್ಷೆಗೆ ತಯಾರಾಗುತ್ತಿದ್ದಾರೆ. ಒಡಿಶಾ ಕೇಡರ್​ ಐಎಎಸ್​ ಅಧಿಕಾರಿ ವಿಜಯ್​ ಕುಲಂಗೆ, … Continued

ಭಾರತದಲ್ಲಿ ಎರಡನೇ ಕೋವಿಡ್ ತರಂಗವು 20 ದಿನಗಳಲ್ಲಿ ಗರಿಷ್ಠ ಸಾಧ್ಯತೆ: ಎಸ್‌ಬಿಐ ವರದಿ

ಭಾರತದ ಎರಡನೇ ಅಲೆಯ ಕೊರೊನಾ ವೈರಸ್ ಮೇ ಮಧ್ಯಭಾಗದಲ್ಲಿ ಏರಿಕೆಯಾಗಬಹುದು ಎಂದು ಭಾರತದ ಅತಿದೊಡ್ಡ ಬ್ಯಾಂಕ್ ಎಸ್‌ಬಿಐನ ಅರ್ಥಶಾಸ್ತ್ರಜ್ಞರು ವರದಿಯಲ್ಲಿ ತಿಳಿಸಿದ್ದಾರೆ. ಭಾರತವು ಅಭೂತಪೂರ್ವ ಎರಡನೇ ಕೋವಿಡ್ ಅಲೆ ಎದುರಿಸುತ್ತಿದೆ, ಅಲ್ಲಿ ಹೊಸ ಪ್ರಕರಣಗಳು ಮತ್ತು ಕೊರೊನಾ ವೈರಸ್ ಸಂಬಂಧಿತ ಸಾವುಗಳು ಹೊಸ ಗರಿಷ್ಠ ಮಟ್ಟ ಮುಟ್ಟುತ್ತಿವೆ. ಕಳೆದ 24 ಗಂಟೆಗಳಲ್ಲಿ ಭಾರತವು ಹೊಸ ಕರೋನವೈರಸ್ … Continued