ಮಹಾರಾಷ್ಟ್ರದ ಮಾಜಿ ಗೃಹ ಸಚಿವ ದೇಶ್ಮುಖ್ ಅವರನ್ನು ವಿಚಾರಣೆಗೆ ಕರೆದ ಸಿಬಿಐ

ಮುಂಬೈ: ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರು ಮಾಡಿರುವ ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಬುಧವಾರ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ಅವರನ್ನು ವಿಚಾರಣೆಗೆ ಕರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ಮುಂಬೈನ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ನಿವಾಸದ ಹೊರಗೆ ಪತ್ತೆಯಾದ ಸ್ಫೋಟಕ ತುಂಬಿದ ಎಸ್‌ಯುವಿ ಪ್ರಕರಣದಲ್ಲಿ … Continued

ಕೊವಿಡ್‌-19 ಪರಿಸ್ಥಿತಿ ಬಗ್ಗೆ ಪ್ರಧಾನಿ ಮೋದಿಗೆ ಸೋನಿಯಾ ಪತ್ರ : ಮೂರು ವಿಷಯಕ್ಕೆ ಒತ್ತು ನೀಡಲು ಸಲಹೆ

ನವ ದೆಹಲಿ: ದೇಶದಲ್ಲಿ ಕೊವಿಡ್‌ -19 ಪ್ರಕರಣಗಳು ಭಾರಿ ಏರಿಕೆಯ ಮಧ್ಯೆ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಸಾಂಕ್ರಾಮಿಕ ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಹಿರಿಯ ಕಾಂಗ್ರೆಸ್ ಮುಖಂಡರು ಕೆಲವು ವಿಷಯಗಳಬಗ್ಗೆ ಹೇಳಿದ್ದು, ವೈರಸ್ ಹರಡುವುದನ್ನು ತಡೆಯಲು ಕೆಲವು ಅಂಶಗಳನ್ನು ಪರಿಗಣಿಸಬೇಕು ಎಂದು ಸೂಚಿಸಿದ್ದಾರೆ. ಅತ್ಯಂತ ಗೊಂದಲದ ಕೋವಿಡ್ … Continued

ಚಿಲ್ಲರೆ ಕ್ಷೇತ್ರದ ಹಣದುಬ್ಬರ ಮಾರ್ಚಿನಲ್ಲಿ ಶೇ.5.52ಕ್ಕೆ ಏರಿಕೆ

ಚಿಲ್ಲರೆ ಕ್ಷೇತ್ರದ (Retail) ಹಣದುಬ್ಬರವು ಮಾರ್ಚಿನಲ್ಲಿ ಶೇಕಡಾ 5.52 ಕ್ಕೆ ಏರಿದೆ, ಮುಖ್ಯವಾಗಿ ಹೆಚ್ಚಿನ ಆಹಾರ ಬೆಲೆಗಳ ಕಾರಣದಿಂದಾಗಿ ಏರಿದೆ ಎಂದು ಸರ್ಕಾರದ ಅಂಕಿ ಅಂಶಗಳು ಸೋಮವಾರ ಹೇಳಿದೆ. ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಕ್ಷೇತ್ರದ ಹಣದುಬ್ಬರವು ಫೆಬ್ರವರಿಯಲ್ಲಿ ಶೇಕಡಾ 5.03 ರಷ್ಟಿತ್ತು.ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, … Continued

ಕೊಯಮತ್ತೂರು: ಸಮಯದ ಮೊದಲೇ ರೆಸ್ಟೋರೆಂಟ್‌ನ ಗ್ರಾಹಕರು,ಸಿಬ್ಬಂದಿಯನ್ನು ಲಾಠಿಯಿಂದ ಬಡಿದ ಎಸ್‌ಐ ವಿಡಿಯೋ ವೈರಲ್..!

ಕೊಯಮತ್ತೂರು: ನಗರದ ಕತ್ತೂರು ಪೊಲೀಸ್ ಠಾಣೆಗೆ ಲಗತ್ತಿಸಲಾದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಭಾನುವಾರ ರಾತ್ರಿ 10.20ರ ಸುಮಾರಿಗೆ ಗ್ರಾಹಕರು ಮತ್ತು ರೆಸ್ಟೊರೆಂಟ್‌ನ ನೌಕರರನ್ನು ಹೊಡೆಯುವ ದೃಶ್ಯ ಕ್ಯಾಮೆರಾದಲ್ಲಿ ಸೆರೆ ಸಿಕ್ಕಿದೆ. ಕೋವಿಡ್ ಹರಡುವುದನ್ನು ತಡೆಗಟ್ಟಲು ಅದನ್ನು ಮುಚ್ಚುವಂತೆ ಕೇಳಿಕೊಂಡಿದ್ದಾರೆ . ಅಂಗಡಿಗಳು ಮತ್ತು ರೆಸ್ಟೋರೆಂಟ್‌ಗಳನ್ನು ರಾತ್ರಿ 11ರ ವರೆಗೆ ತೆರೆದಿಡಲು ರಾಜ್ಯ ಸರ್ಕಾರ ಅನುಮತಿ ನೀಡಿದ್ದರೂ … Continued

ಮಮತಾ ಬ್ಯಾನರ್ಜಿಗೆ ಶಾಕ್‌ ನೀಡಿದ ಚುನಾವಣಾ ಆಯೋಗ..!

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿಗೆ 24 ಗಂಟೆಗಳ ಕಾಲ ಪ್ರಚಾರದಿಂದ ನಿಷೇಧಿಸಿ ಕೇಂದ್ರ ಚುನಾವಣಾ ಆಯೋಗ ಆದೇಶಿಸಿದೆ. ಸಿಆರ್ ಪಿಎಫ್ ಯೋಧರನ್ನು ಸುತ್ತುಗಟ್ಟಿ ಎಂದು ಮಮತಾ ಬ್ಯಾನರ್ಜಿ ಹೇಳಿಕೆಯನ್ನು ಆಧರಿಸಿ ಕೇಂದ್ರ ಚುನಾವಣಾ ಆಯೋಗ ಭಾನುವಾರ ಈ ಆದೇಶ ಹೊರಡಿಸಿದ್ದು, ಸೋಮವಾರ ರಾತ್ರಿ 8 ಗಂಟೆಯಿಂದ ಈ … Continued

ಮುಖ್ಯ ಚುನಾವಣಾ ಆಯುಕ್ತರಾಗಿ ಸುಶೀಲ್ ಚಂದ್ರ ನೇಮಕ

ನವ ದೆಹಲಿ: ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಾಗಿ ಸುಶೀಲ್ ಚಂದ್ರ ಅವರನ್ನು ನೇಮಕ ಮಾಡಲಾಗಿದ್ದು, ಅವರು ಏಪ್ರಿಲ್ 14 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಏಪ್ರಿಲ್ 13ರಿಂದ ಜಾರಿಗೆ ಬರುವಂತೆ ಸುಶಿಲ್ ಚಂದ್ರ ಅವರನ್ನು ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಿಸಲಾಗಿದೆ. ಲೋಕಸಭೆ ಚುನಾವಣೆಗೆ ಮೊದಲು ಫೆಬ್ರವರಿ 14, 2019 ರಂದು ಚುನಾವಣೆ ಆಯುಕ್ತರನ್ನಾಗಿ ಅವರನ್ನು … Continued

ಈ ದಿನ 14 ಗಂಟೆ ಆರ್‌ಟಿಜಿಎಸ್ ಸೇವೆ ಇರುವುದಿಲ್ಲ, ನೆಫ್ಟ್ ಕಾರ್ಯನಿರ್ವಹಣೆ

ಆರ್‌ಟಿಜಿಎಸ್ ಭಾನುವಾರ (ಏಪ್ರಿಲ್ 18, 2021), ರಾತ್ರಿ12 ರಿಂದ ಮಧ್ಯಾಹ್ನ 2ರ ವರೆಗೆ (12 am to 2 pm)  ಲಭ್ಯವಿರುವುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತಿಳಿಸಿದೆ. ಕೆಲವು ನವೀಕರಣ ಚಟುವಟಿಕೆಗಳನ್ನು ಕೈಗೊಂಡ ಕಾರಣ, ಸೇವೆಗೆ ತೊಂದರೆಯಾಗಲಿದೆ ಎಂದು ಆರ್‌ಬಿಐ ಹೇಳಿದೆ. ಆರ್‌ಟಿಜಿಎಸ್‌ನ ತಾಂತ್ರಿಕ ಅಪ್‌ಗ್ರೇಡ್, ಸ್ಥಿತಿ ಸ್ಥಾಪಕತ್ವವನ್ನು ಹೆಚ್ಚಿಸಲು ಮತ್ತು ಆರ್‌ಟಿಜಿಎಸ್ … Continued

ಭಾರತದಲ್ಲಿ ಈವರೆಗೆ 948 ರೂಪಾಂತರಿ ವೈರಸ್‌ ಸೋಂಕು ಪತ್ತೆ

ನವ ದೆಹಲಿ: ಭಾರತದಲ್ಲಿ ಇದುವರೆಗೆ ಬ್ರಿಟನ್‌, ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್ ದೇಶಗಳ ಕೋವಿಡ್ -19 ವೈರಸ್ಸಿನ ರೂಪಾಂತರಿ ಒಟ್ಟು 948 ಪತ್ತೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೋಮವಾರ ಹೇಳಿದೆ. ಮೂರು ಕೋವಿಡ್ -19 ರೂಪಾಂತರಗಳು ಹೆಚ್ಚು ಸಾಂಕ್ರಾಮಿಕಕ್ಕೆ ಕಾರಣ ಎಂದು ಹೇಳಲಾಗುತ್ತದೆ. ಈ ಮೂರು ರೂಪಾಂತರಿತ ವೈರಸ್ ರೂಪಾಂತರಗಳು ಈ … Continued

ವರ್ಗಾವಣೆಗೊಂಡ ಸಾರಿಗೆ ಸಂಸ್ಥೆ ನೌಕರರಿಗೆ ಕೆಲಸಕ್ಕೆ ಹಾಜರಾಗಲು ಸೂಚನೆ

ಬೆಂಗಳೂರು: ಸಾರಿಗೆ ನೌಕರರಿಗೆ ಅನುಕೂಲತೆ ಕಲ್ಪಿಸಲು ವರ್ಗಾವಣೆ ಮಾಡಿದ್ದರೂ ಕೆಲಸಕ್ಕೆ ಹಾಜರಾಗದ ನೌಕರರ ವರ್ಗಾವಣೆ ರದ್ದುಪಡಿಸಲಾಗುವುದಲ್ಲದೇ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಾ ಬಾಜಪೇಯಿ ಸೂಚಿಸಿದ್ದಾರೆ. ೨೦೧೯-೨೦ ಹಾಗೂ ೨೦೨೦-೨೧ ಸಾಲಿನಲ್ಲಿ ಸಿಬ್ಬಂದಿಗಳ ಕೋರಿಕೆಯಂತೆ ದೂರದ ಘಟಕಗಳಿಗೆ ಅಲೆದಾಟ ತಪ್ಪಿಸಲು, ಆರ್ಥಿಕ ನಷ್ಟ ತಪ್ಪಿಸುವ ಉದ್ದೇಶದಿಂದ … Continued

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ:ಸೋನಿಯಾ, ರಾಹುಲ್‌ಗೆ ಪ್ರತಿಕ್ರಿಯೆ ದಾಖಲಿಸಲು ಇನ್ನಷ್ಟು ಕಾಲಾವಕಾಶ ನೀಡಿದ ಹೈಕೋರ್ಟ್‌

ನವದೆಹಲಿ: ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಅವರ ಪುತ್ರ ರಾಹುಲ್‌ ಗಾಂಧಿ ಹಾಗೂ ಇತರ ಆರೋಪಿಗಳಿಗೆ ಪ್ರತಿಕ್ರಿಯೆ ದಾಖಲಿಸಲು ದೆಹಲಿ ಉಚ್ಚ ನ್ಯಾಯಾಲಯ ಇನ್ನಷ್ಟು ಕಾಲಾವಕಾಶ ನೀಡಿದೆ. ಬಿಜೆಪಿ ಸಂಸದ ಸುಬ್ರಮಣಿಯನ್‌ಸ್ವಾಮಿ ಈ ಕುರಿತು ಪ್ರಕರಣ ದಾಖಲಿಸಿದ್ದರು. ನ್ಯಾಯಮೂರ್ತಿ ಸುರೇಶಕುಮಾರ ಅವರು ಪ್ರಕರಣದ ವಿಚಾರಣೆಯನ್ನು ಮೇ ೧೮ರಂದು ನಿಗದಿಪಡಿಸಿದರು. ಹಿರಿಯ … Continued