ಇದೆಂಥ ನಿರ್ಲಕ್ಷ್ಯ.. ಜೀವಂತ ವ್ಯಕ್ತಿಯನ್ನು ಮೃತನೆಂದು ಘೋಷಿಸಿ ಬೇರೊಂದು ಶವ ನೀಡಿದ ಆಸ್ಪತ್ರೆ ಸಿಬ್ಬಂದಿ..!!

ಪಟ್ನಾ: ಜೀವಂತ ಕೋವಿಡ್‌ ರೋಗಿ ಮೃತಪಟ್ಟಿದ್ದಾರೆಂದು ಘೋಷಿಸಿ, ಮತ್ತೊಬ್ಬ ವ್ಯಕ್ತಿಯ ಶವವನ್ನು ಸಂಬಂಧಿಕರಿಗೆ ನೀಡಿದ ಘಟನೆ ಪಟ್ನಾದಲ್ಲಿ ನಡೆದಿದೆ. ಕೊರೊನಾ ಸೋಂಕಿನಿಂದಾಗಿ ಪಟ್ನಾ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಮಹ್ಮದಪುರ ಗ್ರಾಮದ ಚುನ್ನುಕುಮಾರ ದಾಖಲಾಗಿದ್ದಾರೆ. ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಮೃತಪಟ್ಟಿದ್ದಾರೆಂದು ಘೋಷಿಸಿದ ಆಸ್ಪತ್ರೆ ಸಿಬ್ಬಂದಿ ಬೇರೊಬ್ಬ ವ್ಯಕ್ತಿಯ ಶವ ನೀಡಿದರು. ವಿಷಯ ಗೊತ್ತಾಗುತ್ತಿದ್ದಂತೆಯೇ ಪಟ್ನಾ ಜಿಲ್ಲಾ … Continued

ಕೊರಾನಕ್ಕೆ ಭಾರತದಲ್ಲಿ ಬರಲಿದೆ ಮೂರನೇ ಲಸಿಕೆ..! ಸ್ಪುಟ್ನಿಕ್-ವಿ ತುರ್ತು ಬಳಕೆಗೆ ತಜ್ಞರ ಸಮಿತಿ ಅನುಮತಿ..!!

ಕೇಂದ್ರ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್‌ನ ವಿಷಯ ತಜ್ಞರ ಸಮಿತಿಯು ಸ್ಪುಟ್ನಿಕ್-ವಿ ಲಸಿಕೆಯನ್ನು ಭಾರತದಲ್ಲಿ ಬಳಸಲು ಶಿಫಾರಸು ಮಾಡಿದೆ. ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಶಿಫಾರಸು ಅನುಮೋದಿಸಿದರೆ ಸ್ಪುಟ್ನಿಕ್-ವಿ ಭಾರತದ ಮೂರನೇ ಅನುಮೋದಿತ ಕೋವಿಡ್ -19 ಲಸಿಕೆಯಾಗಲಿದೆ. ಲಸಿಕೆಯನ್ನು ಭಾರತದಲ್ಲಿ ಡಾ. ರೆಡ್ಡಿ ಕಂಪನಿ ತಯಾರಿಸಲಿದೆ. ಡಾ. ರೆಡ್ಡಿಗಳು ತೆಲಂಗಾಣದ ಹೈದರಾಬಾದ್ ಮೂಲದ ಬಹುರಾಷ್ಟ್ರೀಯ … Continued

ಕುರಾನ್‌ನ 26 ವಚನ (verses)ಅಳಿಸುವ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್, ಅರ್ಜಿದಾರ ರಿಜ್ವಿಗೆ 50ಸಾವಿರ ರೂ.ದಂಡ

ನವ ದೆಹಲಿ:  ಕುರಾನ್‌ನಿಂದ 26 ವಚನಗಳನ್ನು (verses/suras) ತೆಗೆದು ಹಾಕಲು ಕೋರಿ ಅರ್ಜಿ ಸಲ್ಲಿಸಿದ್ದ ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ಸೈಯದ್ ವಸೀಮ್ ರಿಜ್ವಿ ಅವರ ಅರ್ಜಿಯನ್ನು ಸೋಮವಾರ  ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ ಹಾಗೂ ಅರ್ಜಿದಾರ ರಿಜ್ವಿಗೆ 50,000 ರೂ. ದಂಡ ವಿಧಿಸಿದೆ. ಇದು ಸಂಪೂರ್ಣವಾಗಿ ಕ್ಷುಲ್ಲಕ ಅರ್ಜಿಯಾಗಿದೆ” ಎಂದು ನ್ಯಾಯಮೂರ್ತಿ ರೋಹಿಂಟನ್ ಎಫ್. … Continued

ಮಹತ್ವದ್ದ ಸುದ್ದಿ.. ಇರುಮುಡಿ ಹೊತ್ತು ಚಾರಣ ಮಾಡಿ ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನ ಪಡೆದ ಅರಿಫ್‌ ಮೊಹಮ್ಮದ ಖಾನ್‌

ತಿರುವನಂತಪುರ: ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಎಲ್ಲ ಭಕ್ತರಂತೆ, ವ್ರತಧಾರಿಯಾಗಿ ಸಾಂಪ್ರದಾಯಿಕ “ಮಣಿ ಮಾಲಾ” ಧರಿಸಿ “ಇರುಮುಡಿ” ತಲೆಯ ಮೇಲೆ ಹೊತ್ತುಕೊಂಡು 5 ಕಿ.ಮೀ ಚಾರಣ ಮಾಡಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ. ಈ ಬಗ್ಗೆ ಕೇರಳ ರಾಜಭವನ ಟ್ವೀಟ್‌ ಮಾಡಿದ್ದು, ಗೌರವಾನ್ವಿತ ರಾಜ್ಯಪಾಲ … Continued

ಕೊರೊನಾ ಉಲ್ಬಣ: ಮುಂಬೈಯಲ್ಲಿ ಮೂರು ಜಂಬೊ ಫೀಲ್ಡ್‌ ಆಸ್ಪತ್ರೆಗಳ ಸ್ಥಾಪನೆಗೆ ನಿರ್ಧಾರ

ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಸೋಂಕಿನ ಉಲ್ಬಣ ಮುಂದುವರಿದಿದ್ದು, ಮುಂದಿನ ಐದು-ಆರು ವಾರಗಳಲ್ಲಿ ಮುಂಬಯಿಯಲ್ಲಿ ಮೂರು ಜಂಬೊ ಫೀಲ್ಡ್ ಆಸ್ಪತ್ರೆಗಳನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ ಎಂದು ನಗರ ನಾಗರಿಕ ಮುಖ್ಯಸ್ಥ ಇಕ್ಬಾಲ್ ಸಿಂಗ್ ಚಾಹಲ್ ಸೋಮವಾರ ತಿಳಿಸಿದ್ದಾರೆ. ಈ ಜಂಬೋ ಫೀಲ್ಡ್‌ ಆಸ್ಪತ್ರೆಗಳ ವೈದ್ಯಕೀಯ ಸೌಲಭ್ಯವು 200 ಐಸಿಯು ಹಾಸಿಗೆಗಳು ಮತ್ತು 70% ಆಮ್ಲಜನಕ ಹಾಸಿಗೆಗಳು ಸೇರಿದಂತೆ … Continued

ಕುಂಭ ಮೇಳ:ಮಾಸ್ಕ್‌ ಇಲ್ಲದವರ ಮೇಲೆ ಝೂಮ್ ಮಾಡಲು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಯಾಮೆರಾಗಳು..!

ಕೋವಿಡ್ ಪ್ರಕರಣಗಳ ಉಲ್ಬಣದ ಮಧ್ಯೆ ಹರಿದ್ವಾರದಲ್ಲಿ ಕುಂಭ ಮೇಳ ಆರಂಭವಾಗಿದ್ದು, ಉತ್ತರಾಖಂಡ ಪೊಲೀಸರು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಅನ್ನು ಮಾಸ್ಕ್‌ ಧರಿಸದವರ ಮೇಲೆ ಝೂಮ್‌ ಮಾಡಲು ಬಳಸುತ್ತಿದ್ದಾರೆ. 350ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಮೇಳ ಪ್ರದೇಶದ ವಿವಿಧ ಸ್ಥಳಗಳಲ್ಲಿ ಅಳವಡಿಸಲಾಗಿದ್ದು, ಇವುಗಳಲ್ಲಿ ಸುಮಾರು 100 ಸಂವೇದಕಗಳನ್ನು ಹೊಂದಿವೆ. ಇವು ಮಾಸ್ಕ್‌ ಇಲ್ಲದ ವ್ಯಕ್ತಿಯ ಚಿತ್ರವನ್ನು ಕ್ಯಾಮೆರಾ … Continued

ಸುಪ್ರೀಂಕೋರ್ಟಿನ 44 ಸಿಬ್ಬಂದಿಗೆ ಕೊರೊನಾ ಸೋಂಕು.. ಒಂದು ತಾಸು ತಡವಾಗಿ ವಿಚಾರಣೆ ಆರಂಭ..!!

ನವ ದೆಹಲಿ: ಸುಪ್ರೀಂಕೋರ್ಟ್‍ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅನೇಕ ಸಿಬ್ಬಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ನ್ಯಾಯಮೂರ್ತಿಗಳಿಗೂ ಆತಂಕ ಎದುರಾಗಿದೆ. ಶನಿವಾರ ಸುಪ್ರೀಂ ಕೋರ್ಟಿನ 44 ಸಿಬ್ಬಂದಿಗೆ ಕೋವಿಡ್ ದೃಢಪಟ್ಟಿತ್ತು. ಹೀಗಾಗಿ ನ್ಯಾಯಮೂರ್ತಿಗಳು ಅವರ ನಿವಾಸದಿಂದಲೇ ವಿಚಾರಣೆ ನಡೆಸಲಿದ್ದು, ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಪ್ರಕರಣಗಳ ವಿಚಾರಣೆ ಆರಂಭವಾಗಲಿದೆ.10:30ಕ್ಕೆ ನಿಗದಿಯಾಗಿದ್ದ ನ್ಯಾಯಪೀಠವು 11:30ಕ್ಕೆ ಕಾರ್ಯಾರಂಭಿಸಲಿದೆ, 11ಕ್ಕೆ ನಿಗದಿಯಾಗಿದ್ದ … Continued

ಒಟ್ಟು ಕೊವಿಡ್‌ ಪ್ರಕರಣಗಳಲ್ಲಿ ಬ್ರೇಜಿಲ್‌ ಹಿಂದಿಕ್ಕಿ 2ನೇ ಸ್ಥಾನಕ್ಕೆ ಜಿಗಿದ ಭಾರತ..1.70 ಲಕ್ಷದ ಸಮೀಪಕ್ಕೆ ಬಂದ ದೈನಂದಿನ ಸೋಂಕು..!

.ನವ ದೆಹಲಿ: ಭಾರತವು 168,912 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ. ಇದರೊಂದಿಗೆ ಭಾರತವು ಬ್ರೆಜಿಲ್ ಅನ್ನು ಹಿಂದಿಕ್ಕಿ ಕೊರೊನಾ ವೈರಸ್ ಸೋಂಕಿನಲ್ಲಿ ಜಾಗತಿಕವಾಗಿ ಎರಡನೇ ಸ್ಥಾನದಲ್ಲಿದೆ. ರಾಯಿಟರ್ಸ್ ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ, ಭಾರತದ ಒಟ್ಟಾರೆ ಮೊತ್ತವು 1.35 ಕೋಟಿ ತಲುಪಿದೆ, ಬ್ರೆಜಿಲ್ಲಿನ 1.34 ಕೋಟಿ … Continued

ಗಾಯಗೊಂಡ ನಕ್ಸಲೈಟ್ ಕಾವ್ಡೊ ಬಂಧನ: ಆತನ ಸೆರೆಗೆ 16 ಲಕ್ಷ ರೂ. ಬಹುಮಾನ ಘೋಷಿಸಿದ್ದ ಸರ್ಕಾರ..!

ನಾಗ್ಪುರ: ಮಾರ್ಚ್ 29 ರಂದು ನಡೆದ ಎನ್‌ಕೌಂಟರ್‌ನಲ್ಲಿ ಗಾಯಗೊಂಡು ಹಳ್ಳಿಯಲ್ಲಿ ತಲೆಮರೆಸಿಕೊಂಡಿದ್ದ ನಕ್ಸಲೈಟ್ ಕಿಶೋರ್ ಕಾವ್ಡೊ ಅವರನ್ನು ಗಡ್ಚಿರೋಲಿ ಪೊಲೀಸರು ದೃಢಪಡಿಸಿದ್ದಾರೆ. ಆತನ ಸೆರೆಹಿಡಿಯಲು 16 ಲಕ್ಷ ರೂ.ಗಳ ಬಹುಮಾನ ಘೋಷಿಸಲಾಗಿತ್ತು. ಜಿಲ್ಲೆಯ ಧನೋರಾ ತಹಸಿಲ್‌ನ ಕಟೇಜರಿ ಗ್ರಾಮದಿಂದ ಕಾವ್ಡೊ (38) ಅವರನ್ನು ಸೆರೆ ಹಿಡಿಯಲಾಗಿದೆ. ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ, ನಂತರ ಪೊಲೀಸರು ಆತನ … Continued

ಕೊರೊನಾ ಸೋಂಕು ಮಹಾರಾಷ್ಟ್ರದಲ್ಲಿ ಹೆಚ್ಚಳ ಯಾಕೆ ? ಚುನಾವಣಾ ರಾಜ್ಯಗಳಲ್ಲಿ ಹೆಚ್ಚಳವಿಲ್ಲ ಏಕೆ?: ಅಧ್ಯಯನಕ್ಕೆ ಮಹಾರಾಷ್ಟ್ರ ಸರ್ಕಾರ ಸೂಚನೆ

ಮಹಾರಾಷ್ಟ್ರವು ಪ್ರತಿದಿನ ಅತಿ ಹೆಚ್ಚು ಹೊಸ ಕೊವಿಡ್‌ -19 ಪ್ರಕರಣಗಳನ್ನು ವರದಿ ಮಾಡುತ್ತಲೇ ಇದ್ದರೂ, ಇತರ ರಾಜ್ಯಗಳು ಇಂತಹ ಪರಿಸ್ಥಿತಿಗೆ ಏಕೆ ಸಾಕ್ಷಿಯಾಗಿಲ್ಲ ಎಂದು ತಿಳಿಯಲು ರಾಜ್ಯ ಸರ್ಕಾರ ಬಯಸಿದೆ. ವಿಶೇಷವಾಗಿ ವಿಧಾನಸಭೆ ಚುನಾವಣೆ ನಡೆಯುತ್ತಿರುವ ರಾಜ್ಯಗಳಲ್ಲಿ ಏಕೆ ಹೆಚ್ಚಳವಾಗಿಲ್ಲ. ಮಹಾರಾಷ್ಟ್ರದಲ್ಲಿ ಮಾತ್ರ ಏಕೆ ಇಷ್ಟೊಂದು ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂಬುದರ ಬಗ್ಗೆ ಅಧ್ಯಯನ ನಡೆಸಬೇಕು ಎಂದು … Continued