ಮಹಾರಾಷ್ಟ್ರದಲ್ಲಿ ಭಾನುವಾರ 63 ಸಾವಿರ ದಾಟಿದ ದೈನಂದಿನ ಕೊರೊನಾ ಸ್ಟ್ರೈಕ್‌..!

ಮುಂಬೈ:ಕೊರೊನಾ ವೈರಸ್ ಕಾಯಿಲೆ (ಕೋವಿಡ್ -19) ಪ್ರಕರಣಗಳಲ್ಲಿ ಉಲ್ಬಣಗೊಳ್ಳುತ್ತಿರುವ ಮಹಾರಾಷ್ಟ್ರದಲ್ಲಿ ಭಾನುವಾರ 63,294 ಸೋಂಕುಗಳನ್ನು ದಾಖಲಿಸಿದೆ. ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 3,407,245 ಕ್ಕೆ ತಲುಪಿದೆ ಎಂದು ರಾಜ್ಯದ ಆರೋಗ್ಯ ಇಲಾಖೆ ಬುಲೆಟಿನ್ ತೋರಿಸಿದೆ. ರಾಜ್ಯದಲ್ಲಿ 394 ಸಾವುನೋವುಗಳು ದಾಖಲಾಗಿದ್ದು, ಸಾವಿನ ಸಂಖ್ಯೆ 57,987 ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ ಮಾಡಿದ 2,63,137 ಪರೀಕ್ಷೆಗಳ … Continued

ಉತ್ತರ ಪ್ರದೇಶದಲ್ಲಿ ಭಾನುವಾರ 15 ಸಾವಿರ ದಾಟಿದ ಏಕದಿನದ ಸೋಂಕು..!

ಕಳೆದ ಕೆಲವು ದಿನಗಳಲ್ಲಿ ಕೊರೊನಾ ವೈರಸ್ (ಕೋವಿಡ್ -19) ದೈನಂದಿನ ಹೊಸ ಪ್ರಕರಣಗಳು ಹೆಚ್ಚಾಗುತ್ತಿರುವ ಉತ್ತರ ಪ್ರದೇಶ, ಭಾನುವಾರ ಮತ್ತೊಂದು ದಾಖಲೆಯ ಹೆಚ್ಚಳಕ್ಕೆ ಸಾಕ್ಷಿಯಾಗಿದೆ. ಉತ್ತರ ಪ್ರದೇಶದಲ್ಲಿ ಕೊರೊನಾ ದೈನಂದಿನ ಸೋಂಕು ಮೊದಲ ಬಾರಿಗೆ 15,000ಕ್ಕಿಂತ ಹೆಚ್ಚಾಗಿದೆ..! . ಕಳೆದ 24 ಗಂಟೆಗಳಲ್ಲಿ ಉತ್ತರ ಪ್ರದೇಶದಲ್ಲಿ 15,353 ಹೊಸ ಪ್ರಕರಣಗಳು ದಾಖಲಾಗಿವೆ ಮತ್ತು ಸಕ್ರಿಯ ಪ್ರಕರಣ … Continued

ಕೊರೊನಾ ಹರಡಿದ ನಂತರದ ಅತಿಹೆಚ್ಚು ಒಂದು ದಿನದ ಸೋಂಕಿಗೆ ದೆಹಲಿ ಸಾಕ್ಷಿ.. ಬಹಳ ಗಂಭೀರ ಎಂದ ದೆಹಲಿ ಸಿಎಂ..!

ನವ ದೆಹಲಿ: ದೆಹಲಿಯ ಕೊವಿಡ್‌-19 ಪರಿಸ್ಥಿತಿ “ತುಂಬಾ ಗಂಭೀರವಾಗಿದೆ”, ಕಳೆದ 24 ಗಂಟೆಗಳಲ್ಲಿ 10,732 ಕೊರೊನಾ ಸೋಂಕುಗಳು ವರದಿಯಾಗಿವೆ ಹಾಗೂ 48 ಸಾವುಗಳು ವರದಿಯಾಗಿವೆ.  ಇದು ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದಲೂ ಅತಿ ಹೆಚ್ಚು ದೈನಂದಿನ ಸೋಂಕು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ಹೇಳಿದ್ದಾರೆ. ನಾಲ್ಕನೆಯ ಕೊವಿಡ್‌ ಅಲೆಯು ಹಿಂದಿನದಕ್ಕಿಂತ ಅಪಾಯಕಾರಿ. ಸರ್ಕಾರವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ … Continued

ಮಹತ್ವದ ನಿರ್ಧಾರ..ಭಾರತದಲ್ಲಿ ಕೋವಿಡ್ ಪರಿಸ್ಥಿತಿ ಸುಧಾರಿಸುವ ವರೆಗೆ ರೆಮ್ಡೆಸಿವಿರ್ ಔಷಧ-ಚುಚ್ಚುಮದ್ದು ರಫ್ತು ನಿಷೇಧ..!

ದೇಶದಲ್ಲಿ ಕೋವಿಡ್ -19 ಪ್ರಕರಣಗಳು ಉಲ್ಬಣಗೊಳ್ಳುತ್ತಿದ್ದಂತೆ, “ದೇಶದಲ್ಲಿ ಕೊವಿಡ್‌-19 ಪರಿಸ್ಥಿತಿ ಸುಧಾರಿಸುವವರೆಗೆ” ರೆಮ್ಡೆಸಿವಿರ್ ಔಷಧ ಮತ್ತು ಚುಚ್ಚುಮದ್ದುಗಳ ರಫ್ತನ್ನು ಕೇಂದ್ರ ಸರ್ಕಾರ  ನಿಷೇಧಿಸಿ ಭಾನುವಾರ ಆದೇಶಿಸಿದೆ. ದೇಶದ ಕೊವಿಡ್‌-19 ಪರಿಸ್ಥಿತಿ ಸುಧಾರಿಸುವ ವರೆಗೆ ಇಂಜೆಕ್ಷನ್ ರೆಮ್ಡೆಸಿವಿರ್ ಮತ್ತು ರೆಮ್ಡೆಸಿವಿರ್ ಆಕ್ಟಿವ್ ಫಾರ್ಮಾಸ್ಯುಟಿಕಲ್ ಪದಾರ್ಥಗಳ (ಎಪಿಐ) ರಫ್ತು ಮಾಡುವುದನ್ನು ನಿಷೇಧಿಸಲಾಗಿದೆ” ಎಂದು ಕೇಂದ್ರವು ಹೇಳಿಕೆಯಲ್ಲಿ ತಿಳಿಸಿದೆ. ಮುಂದಿನ … Continued

ಮನಕಲಕುವ ಘಟನೆ..ಗುಂಪಿನಿಂದ ಹತ್ಯೆಗೀಡಾದ ಪೊಲೀಸ್ ಅಧಿಕಾರಿ ಶವ ನೋಡಿ ತಾಯಿಯೂ ಆಘಾತದಿಂದ ಸಾವು..!

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯಲ್ಲಿ ಶನಿವಾರ ಮುಂಜಾನೆ ದಾಳಿ ನಡೆಸುತ್ತಿದ್ದಾಗ ಬಿಹಾರದ 50 ವರ್ಷದ ಪೊಲೀಸ್ ಅಧಿಕಾರಿಯನ್ನು ಗುಂಪೊಂದು ಹತ್ಯೆ ಮಾಡಿದೆ. ಅದರೆ ಹೃದಯ ವಿದ್ರಾವಕ ಘಟನೆಯಲ್ಲಿ ಹತ್ಯೆಯಾದ ಎಸ್‌ಎಚ್‌ಒ ಅಶ್ವಿನಿ ಕುಮಾರ್ ಅವರ ತಾಯಿ ತನ್ನ ಮಗನ ಶವವನ್ನು ನೋಡಿ ಆಘಾತದಿಂದ ಮೃತಪಟ್ಟಿದ್ದಾರೆ. ಹೃದಯ ಕದಡುವ ಘಟನೆಯಲ್ಲಿ, ತಾಯಿ ಮತ್ತು … Continued

ಸತ್ಯಮಂಗಲಂ ಕಾಡಿನಲ್ಲಿ ನಮ್ಮಪ್ಪ ಭಾರಿ ನಿಧಿ ಹುದುಗಿಸಿಟ್ಟಿದ್ದಾನೆ; ಸಂಚಲನ ತಂದ ಕಾಡುಗಳ್ಳ ವೀರಪ್ಪನ್ ಪುತ್ರಿ ಹೇಳಿಕೆ..!

ಚೆನ್ನೈ: ಸತ್ಯಮಂಗಲಂ ಅರಣ್ಯದಲ್ಲಿ ನಮ್ಮ ತಂದೆ ವೀರಪ್ಪನ್ ಭಾರಿ ಪ್ರಮಾಣದ ನಿಧಿ ಹುದುಗಿಸಿಟ್ಟಿದ್ದಾನೆ ಎಂದು ಕಾಡುಗಳ್ಳ ವೀರಪ್ಪನ್ ಪುತ್ರಿ ವಿಜಯಲಕ್ಷ್ಮೀ ನೀಡಿದ ಹೇಳಿಕೆ ಈಗ ಭಾರೀ ಸಂಚಲನಕ್ಕೆ ಕಾರಣವಾಗಿದೆ. ಪ್ರಸ್ತುತ ವಾಲ್ಮುರಿಮಾಯಿ ಕಚ್ಚಿಯಲ್ಲಿ ವಾಸಿಸುತ್ತಿರುವ ವೀರಪ್ಪನ್ ಪುತ್ರಿ ವಿಜಯಲಕ್ಷ್ಮಿ ಅವರು ರನ್ ಪಿಳ್ಳೈ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದು, ಇದೇ ಚಲನಚಿತ್ರದ ತಂಡ ಚೆನ್ನೈನಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ … Continued

ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಷ, ಉದ್ಯಮಿ ಕುಟುಂಬ ಪಾರು

ಕೊಚ್ಚಿ: ಅನಿವಾಸಿ ಭಾರತೀಯ ಉದ್ಯಮಿ ಸಂಚರಿಸುತ್ತಿದ್ದ ಹೆಲಿಕಾಫ್ಟರಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಹೆಲಿಕಾಫ್ಟರ್‌ ತುರ್ತು ಭೂಸ್ಪರ್ಷ ಮಾಡಿದ್ದು, ಏಳು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಕೊಚ್ಚಿಯಲ್ಲಿ ವರದಿಯಾಗಿದೆ. ಎನ್‍ ಆರ್ ಐ ಉದ್ಯಮಿ ಎಂ.ಎ.ಯೂಸಫ್ ಆಲಿ, ಅವರ ಪತ್ನಿ, ಮೂವರು ಸಿಬ್ಬಂದಿ ಹಾಗೂ ಇಬ್ಬರು ಕ್ರೂ ಮೆಂಬರುಗಳು ಪ್ರಾಣಾಪಾಯದಿಂದ ಪಾರಾಗಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. … Continued

ಅಂಬಾನಿ ನಿವಾಸದ ಬಳಿ ಸ್ಫೋಟಕ ತುಂಬಿದ್ದ ವಾಹನ ಪತ್ತೆ ಪ್ರಕರಣ: ಪೊಲೀಸ್‌ ಅಧಿಕಾರಿ ರಿಯಾಜ್‌ ಬಂಧಿಸಿದ ಎನ್‌ಐಎ

ಮುಂಬೈ: ಮುಕೇಶ್ ಅಂಬಾನಿ ನಿವಾಸದ ಬಳಿ ಸ್ಫೋಟಕ ತುಂಬಿದ ವಾಹನ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಪೊಲೀಸ್‌ ಅಧಿಕಾರಿ ರಿಯಾಜ್‌ ಖಾಜಿ ಅವರನ್ನು ರಾಷ್ಟ್ರೀಯ ತನಿಖಾ ತಂಡ (ಎನ್‌ಐಎ) ಭಾನುವಾರ ಬಂಧಿಸಿದೆ. ಅಮಾನತುಗೊಂಡ ಪೊಲೀಸ್ ಅಧಿಕಾರಿ ಸಚಿನ್‌ ವಾಜೆ ಅವರಿಗೆ ರಿಯಾಜ್‌ ಸಹಕಾರ ನೀಡಿದ್ದರುಎಂಬ ಕಾರಣಕ್ಕೆ ಬಂಧಿಸಲಾಗಿದೆ ಎಂದು ಎನ್‌ಐಎ ಹೇಳಿದೆ. ಉದ್ಯಮಿ ಮುಕೇಶ್ ಅಂಬಾನಿ … Continued

ಕೋವಿಡ್ -19: ಭಾರತದಲ್ಲಿ ಬ್ರಿಟನ್‌, ಜರ್ಮನಿ, ಅಮೆರಿಕದ ಡಬಲ್ ರೂಪಾಂತರಿತ ತಳಿ ಪತ್ತೆ..!

ನವ ದೆಹಲಿ: ಬ್ರಿಟನ್‌, ಅಮೆರಿಕ, ಜರ್ಮನಿ, ಆಸ್ಟ್ರೇಲಿಯಾ ಮತ್ತು ಸಿಂಗಾಪುರಗಳಲ್ಲಿ ಈಗ ‘ಬಿ .1.617’ ಎಂದು ಕರೆಯಲ್ಪಡುವ ಎರಡು ಪ್ರಮುಖ ರೂಪಾಂತರಗಳನ್ನು ಹೊಂದಿರುವ ಕೊರೊನಾ ವೈರಸ್ಸಿನ ಭಾರತೀಯ ರೂಪಾಂತರ ಪತ್ತೆ ಹಚ್ಚಲಾಗಿದೆ ಮತ್ತು ಇದು ಪುನರಾವರ್ತನೆ ಹೆಚ್ಚಿಸುತ್ತದೆ ಎಂದು ಹೇಳಲಾಗಿದೆ. ತಜ್ಞರ ವಿಶ್ಲೇಷಣೆಯು ಆರು ಸ್ಪೈಕ್ ಪ್ರೋಟೀನ್ ರೂಪಾಂತರಗಳು (ಆತಿಥೇಯ ಕೋಶಗಳಿಗೆ ಕೋವಿಡ್ -19 ಪ್ರವೇಶದ … Continued

ದೇಶದ ಜನ 4 ವಿಷಯಗಳಿಗೆ ಬದ್ಧರಾಗಿ, ಕೊರೋನಾ ಲಸಿಕೆ ಉತ್ಸವದಲ್ಲಿ ಭಾಗಿಯಾಗಿ: ಪ್ರಧಾನಿ ಮೋದಿ

ನವದೆಹಲಿ: ದೇಶಾದ್ಯಂತ ಭಾನುವಾರದಿಂದ ಕೊರೋನಾ ಲಸಿಕೆ ಉತ್ಸವ ಆರಂಭವಾಗಿದ್ದು,. ಹಲವು ರಾಜ್ಯಗಳಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ 4 ದಿನಗಳ ಈ ಲಸಿಕಾ ಉತ್ಸವ ಆರಂಭಿಸಿದ್ದಾರೆ. ಈ ಮೂಲಕ ಎಲ್ಲಾ ರಾಜ್ಯಗಳಲ್ಲಿ ಲಸಿಕೆ ನೀಡುವ ಅಭಿಯಾನವನ್ನು ತೀವ್ರಗೊಳಿಸಲು ಅವರು ಕರೆ ಕೊಟ್ಟಿದ್ದಾರೆ. ದೇಶಾದ್ಯಂತ ನಾವು ‘ಟಿಕಾ ಉತ್ಸವವನ್ನು ಆರಂಭಿಸುತ್ತಿದ್ದೇವೆ. ದೇಶದ ಜನರು … Continued