ಮದುವೆ ಮಂಟಪದಿಂದ ನಾಪತ್ತೆಯಾಗಿದ್ದ ವಧುವಿಗಾಗಿ ಮಂಟಪದಲ್ಲೇ 13 ದಿನ ಕಾದು ಕುಳಿತು ಅವಳನ್ನೇ ವಿವಾಹವಾದ ವರ…!!

ಪಾಲಿ : ಒಂದು ಅಸಾಮಾನ್ಯ ಪ್ರಕರಣವೊಂದರಲ್ಲಿ ವರನು ಮದುವೆ ಮಂಟಪದಿಂದ ಓಡಿ ಹೋದ ತನ್ನ ವಧುವಿಗಾಗಿ 13 ದಿನಗಳವರೆಗೆ ಮಂಟಪದಲ್ಲೇ ಕಾದು ಕುಳಿತು ನಂತರ ಅವಳನ್ನೇ ಮದುವೆಯಾಗಿದ್ದಾನೆ…! ವಧು ತನ್ನ ಮದುವೆಗಿಂತ ಸ್ವಲ್ಪ ಮೊದಲು ತನ್ನ ಪ್ರೇಮಿಯೊಂದಿಗೆ ಓಡಿಹೋಗಿದ್ದಳು ಮತ್ತು ಅಂತಿಮವಾಗಿ 13 ದಿನಗಳ ನಂತರ ತನಗೆ ನಿಶ್ಚಯವಾಗಿದ್ದ ಅದೇ ವರನನ್ನು ಅದೇ ಮದುವೆ ಮಂಟಪದಲ್ಲಿ … Continued

ಈವರೆಗೆ 14,000 ಕೋಟಿ ರೂಪಾಯಿ ಮೌಲ್ಯದ 2,000 ರೂ. ನೋಟುಗಳನ್ನು ಠೇವಣಿಯಾಗಿ ಸ್ವೀಕರಿಸಿದ ಎಸ್‌ಬಿಐ

ನವದೆಹಲಿ: ಹೆಚ್ಚಿನ ಮೌಲ್ಯದ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ತೆಗೆದುಹಾಕುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿರ್ಧಾರದ ನಂತರ, ಭಾರತದ ಅತಿದೊಡ್ಡ ಬ್ಯಾಂಕ್‌ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ 14,000 ಕೋಟಿ ರೂಪಾಯಿ ಠೇವಣಿ ಮಾಡಲಾಗಿದೆ ಎಂದು ಬ್ಯಾಂಕ್‌ ಅಧ್ಯಕ್ಷ ದಿನೇಶಕುಮಾರ ಖಾರಾ ಪ್ರಕಟಿಸಿದ್ದಾರೆ. “ಸುಮಾರು 14,000 ಕೋಟಿ ರೂಪಾಯಿ ಮೌಲ್ಯದ 2,000 ರೂ.ಗಳ ನೋಟುಗಳನ್ನು ಖಾತೆಗಳಿಗೆ … Continued

ಮಹಾರಾಷ್ಟ್ರದ ಕಾಂಗ್ರೆಸ್‌ನ ಏಕೈಕ ಲೋಕಸಭಾ ಸದಸ್ಯ ಬಾಲು ಧನೋರ್ಕರ್ ನಿಧನ

ಮುಂಬೈ: ಮಹಾರಾಷ್ಟ್ರದ ಕಾಂಗ್ರೆಸ್‌ನ ಏಕೈಕ ಲೋಕಸಭಾ ಸದಸ್ಯ ಬಾಲು (ಸುರೇಶ) ಧನೋರ್ಕರ್ ಅವರು ಮಂಗಳವಾರ ಮುಂಜಾನೆ ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ. ಬಾಲು ಧನೋರ್ಕರ್ ಅವರಿಗೆ 47 ವರ್ಷ ವಯಸ್ಸಾಗಿತ್ತು ಮತ್ತು ಅವರು ಪತ್ನಿ ಪ್ರತಿಭಾ, ಶಾಸಕರು ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ. “ಕಳೆದ ವಾರ ಅವರನ್ನು ಮೂತ್ರಪಿಂಡದ ಕಲ್ಲುಗಳ … Continued

ಮಧ್ಯಪ್ರದೇಶ ಉದ್ಯಾನವನದಲ್ಲಿ 6 ಚಿರತೆಗಳು ಸತ್ತ ನಂತರ ನಮೀಬಿಯಾಕ್ಕೆ ಅಧಿಕಾರಿಗಳ ಅಧ್ಯಯನ ಪ್ರವಾಸ

ಭೋಪಾಲ್: ಚಿರತೆಯ ಪುನರುಜ್ಜೀವನ ಯೋಜನೆಯಲ್ಲಿ ತೊಡಗಿರುವ ಅಧಿಕಾರಿಗಳನ್ನು ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾಕ್ಕೆ ಅಧ್ಯಯನ ಪ್ರವಾಸಕ್ಕೆ ಕಳುಹಿಸಲಾಗುವುದು, ಅಲ್ಲಿಂದ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಚಿರತೆಗಳನ್ನು ತರಲಾಗುವುದು ಎಂದು ಕೇಂದ್ರ ಅರಣ್ಯ ಸಚಿವ ಭೂಪೇಂದರ ಯಾದವ್ ಹೇಳಿದ್ದಾರೆ. ಸೋಮವಾರ ಭೋಪಾಲ್‌ನಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ, ಯಾದವ್ ಅವರು ಜೂನ್ … Continued

ಬಸ್ ಕಮರಿಗೆ ಉರುಳಿ 10 ಮಂದಿ ಸಾವು, 20 ಮಂದಿಗೆ ಗಾಯ

ಶ್ರೀನಗರ: ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಜ್ಜರ್ ಕೋಟ್ಲಿ ಬಳಿ ಮಂಗಳವಾರ ಬಸ್ ಕಮರಿಗೆ ಬಿದ್ದ ಪರಿಣಾಮ 10 ಮಂದಿ ಸಾವಿಗೀಡಾಗಿದ್ದು, 20 ಮಂದಿ ಗಾಯಗೊಂಡಿದ್ದಾರೆ. ಅಪಘಾತದ ಸಮಯದಲ್ಲಿ 75 ಪ್ರಯಾಣಿಕರನ್ನು ಹೊತ್ತ ಬಸ್ ಅಮೃತಸರದಿಂದ ಕತ್ರಾಕ್ಕೆ ತೆರಳುವವರಾಗಿದ್ದರು. ಅವರೆಲ್ಲ ಮಾತಾ ವೈಶ್ನವೋದೇವಿ ಮಂದಿರಕ್ಕೆ ತೆರಳುತ್ತಿದ್ದರು. ಸ್ಥಳೀಯರು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. … Continued

1 ಲಕ್ಷ ಬೆಲೆಯ ಮೊಬೈಲ್ ಅಣೆಕಟ್ಟೆ ನೀರಿನಲ್ಲಿ ಬಿತ್ತು: 21 ಲಕ್ಷ ಲೀಟರ್ ನೀರು ಹೊರಬಿಟ್ಟು ತನ್ನ ಮೊಬೈಲ್ ಹುಡುಕಿಸಿದ ಅಧಿಕಾರಿ…!

ಯಾವುದು ಹೆಚ್ಚು ಅಮೂಲ್ಯ ..? ಮೊಬೈಲ್ ಫೋನ್ ಅಥವಾ ಒಣಗಿದ ಹೊಲಗಳಿಗೆ ಸಂಗ್ರಹಿಸಿಟ್ಟ ಲಕ್ಷಾಂತರ ಗ್ಯಾಲನ್ ನೀರು? ಛತ್ತೀಸ್‌ಗಢದ ವಿಲಕ್ಷಣ ಘಟನೆಯೊಂದರಲ್ಲಿ, ಅಣೆಕಟ್ಟಿನ ನೀರಿನಲ್ಲಿ ಬಿದ್ದ ಸರ್ಕಾರಿ ಅಧಿಕಾರಿಯ ದುಬಾರಿ ಫೋನ್ ಅನ್ನು ಮರಳಿ ಪಡೆಯಲು ಜಲಾಶಯದಿಂದ 21 ಲಕ್ಷ ಲೀಟರ್ ನೀರನ್ನು ಹೊರಕ್ಕೆ ಬಿಡಲಾಗಿದೆ …! ಹೇಳಿಕೆಯಲ್ಲಿ, ಅಧಿಕಾರಿಯು ನೀರು ‘ಬಳಕೆಗೆ ಯೋಗ್ಯವಾಗಿಲ್ಲ’ ಮತ್ತು … Continued

ಅಮಿತ್ ಶಾ ಭೇಟಿಗೂ ಮುನ್ನ ಮಣಿಪುರದಲ್ಲಿ ಬಂದೂಕು ಸಮೇತ 25 ಮಂದಿ ಬಂಧನ

ಇಂಫಾಲ: ಮಣಿಪುರದ ಇಂಫಾಲದ ಪೂರ್ವ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಯೋಜಿಸುತ್ತಿದ್ದ 25 ಶಸ್ತ್ರಸಜ್ಜಿತ ವ್ಯಕ್ತಿಗಳನ್ನು ಸೇನೆಯ ಬಹು ಮೊಬೈಲ್ ವೆಹಿಕಲ್ ಚೆಕ್ ಪೋಸ್ಟ್‌ಗಳು (MVCP) ವಶಪಡಿಸಿಕೊಂಡಿವೆ ಮತ್ತು ಅವರಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಭಾರತೀಯ ಸೇನೆಯ ಅಧಿಕೃತ ಹೇಳಿಕೆ ತಿಳಿಸಿದೆ. .”ಇಂಫಾಲದ ಪೂರ್ವ ಜಿಲ್ಲೆಯ ಗುಡ್ಡಗಾಡು ಪ್ರದೇಶದ ಸನಾಸಾಬಿ, ಗ್ವಾಲ್ಟಾಬಿ ಮತ್ತು … Continued

ಜೆಡಿಯು ಸಂಸತ್ ಉದ್ಘಾಟನಾ ಕಾರ್ಯಕ್ರಮ ಬಹಿಷ್ಕರಿಸಿದ್ದರೂ ಹಾಜರಾದ ರಾಜ್ಯಸಭೆಯ ಉಪಸಭಾಪತಿ : ಜೆಡಿಯು ತೀವ್ರ ಅಸಮಾಧಾನ

ಪಾಟ್ನಾ: ಪಕ್ಷವು ನೂತನ ಸಂಸತ್ ಭವನದ ಉದ್ಘಾಟನಾ ಕಾರ್ಯಕ್ರಮವನ್ನು ಬಹಿಷ್ಕರಿಸಿದರೂ ಸಮಾರಂಭದಲ್ಲಿ ಪಾಲ್ಗೊಂಡಿದ್ದಕ್ಕಾಗಿ ರಾಜ್ಯಸಭೆ ಉಪ ಸಭಾಪತಿ ಹರಿವಂಶ್ ವಿರುದ್ಧ ಜೆಡಿಯು ಮುಖ್ಯ ವಕ್ತಾರ ನೀರಜಕುಮಾರ ಅವರು ಸೋಮವಾರ ವಾಗ್ದಾಳಿ ನಡೆಸಿದ್ದಾರೆ. “ಪತ್ರಿಕೋದ್ಯಮಕ್ಕೆ ನಿಮ್ಮ ಕೊಡುಗೆಯನ್ನು ಗುರುತಿಸಿ ಪಕ್ಷವು ನಿಮ್ಮನ್ನು ರಾಜ್ಯಸಭೆಗೆ ಕಳುಹಿಸಿದೆ. ಆದರೆ ದೇಶದ ಸಂಸದೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಕರಾಳ ಅಧ್ಯಾಯವಾದಾಗ, ನಿಮ್ಮ ಉನ್ನತ … Continued

ಮೈಸೂರು: ಭೀಕರ ರಸ್ತೆ ಅಪಘಾತದಲ್ಲಿ ಮಗು ಸೇರಿ 10 ಮಂದಿ ಸಾವು

ಮೈಸೂರು: ಮೈಸೂರಿನ ಟಿ ನರಸಿಪುರ ಸಮೀಪ ಖಾಸಗಿ ಬಸ್‌ ಮತ್ತು ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಹತ್ತು ಜನರು ಹತ್ತು ಮಂದಿ ಮೃತಪಟ್ಟ ಘಟನೆ ವರದಿಯಾಗಿದ್ದು, ಅಪಘಾತದ ತೀವ್ರತೆಗೆ ಕಾರು ನಜ್ಜುಗುಜ್ಜಾಗಿದೆ. ಇನ್ನೋವಾ ಕಾರಿನಲ್ಲಿ ಒಂದೇ ಕುಟುಂಬದ ಪ್ರಯಾಣಿಕರು ಮೈಸೂರು ಪ್ರವಾಸಕ್ಕೆ ಆಗಮಿಸಿದ್ದರು. ಟಿ ನರಸಿಪುರ ಸಮೀಪದಕುರುಬೂರು ಗ್ರಾಮದ ಪಿಂಜರ ಪೋಳ … Continued

ಮುಂದಿನ ಪೀಳಿಗೆಯ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಇಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಜಿಎಸ್‌ಎಲ್‌ವಿ ರಾಕೆಟ್‌ನಲ್ಲಿ ನ್ಯಾವಿಗೇಷನ್ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಹಾರಾಟದ ಸುಮಾರು 20 ನಿಮಿಷಗಳ ನಂತರ, ರಾಕೆಟ್ ಸುಮಾರು 251 ಕಿಮೀ ಎತ್ತರದಲ್ಲಿ ಜಿಯೋಸಿಂಕ್ರೋನಸ್ ವರ್ಗಾವಣೆ ಕಕ್ಷೆಯಲ್ಲಿ (ಜಿಟಿಒ) ಉಪಗ್ರಹವನ್ನು ನಿಯೋಜಿಸಿತು ಎಂದು ಇಸ್ರೋ ಹೇಳಿದೆ. ನ್ಯಾವಿಗೇಷನ್ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಯಲ್ಲಿ ಇರಿಸಲಾಗಿದೆ.”ನಾವು ಈಗ … Continued