ಮತ ಚಲಾಯಿಸಲು ಮದುವೆ ಉಡುಪಿನಲ್ಲಿ ಮತಗಟ್ಟೆಗೆ ಆಗಮಿಸಿದ ಮದುಮಗಳು…

ಚಿಕ್ಕಮಗಳೂರು: ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಮಾಕೋನಹಳ್ಳಿ ಗ್ರಾಮದಲ್ಲಿ ಮದುಮಗಳೊಬ್ಬಳು ಬುಧವಾರ ಬೆಳಿಗ್ಗೆ ತನ್ನ ಮದುವೆಯ ಉಡುಪಿನಲ್ಲಿಯೇ ಬಂದು ಮತ ಚಲಾಯಿಸಿದ್ದಾರೆ. ಇಂದು ನಡೆಯಲಿರುವ ಮದುವೆಗೂ ಮುನ್ನ ಚಿಕ್ಕಮಗಳೂರು ಜಿಲ್ಲೆಯ ಮತಗಟ್ಟೆ ಸಂಖ್ಯೆ 165ರಲ್ಲಿ ಕುಟುಂಬ ಸಮೇತರಾಗಿ ಬಂದ ಮದುಮಗಳು ಮತ ಚಲಾಯಿಸಿ ಮತದಾನವನ್ನು ಸಂಭ್ರಮಿಸಿದ್ದಾರೆ. ಕರ್ನಾಟಕ ವಿಧಾನಸಭೆ … Continued

ಐನ್‌ಸ್ಟೈನ್‌ ಗಿಂತ ಹೆಚ್ಚಿನ ಐಕ್ಯೂ ಹೊಂದಿರುವ ʼಆಟಿಸಂʼ ಇರುವ 11 ವರ್ಷದ ಈ ಹುಡುಗಿಗೆ ಸಿಗಲಿದೆ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ…!

ಮೆಕ್ಸಿಕೋ ಸಿಟಿಯ 11 ವರ್ಷದ ಬಾಲಕಿ ಅಧಾರಾ ಪೆರೇಜ್ ಸ್ಯಾಂಚೇಜ್ ಚಿಕ್ಕ ವಯಸ್ಸಿನಲ್ಲೇ ಸ್ನಾತಕೋತ್ತರ ಪದವಿ ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಲು ಹೊರಟಿದ್ದಾಳೆ…! ಇಬ್ಬರು ಶ್ರೇಷ್ಠ ಭೌತವಿಜ್ಞಾನಿಗಳಾದ ಆಲ್ಬರ್ಟ್ ಐನ್‌ಸ್ಟೈನ್ ಮತ್ತು ಸ್ಟೀಫನ್ ಹಾಕಿಂಗ್‌ ಅವರಿಗಿಂತ ಹೆಚ್ಚಿನ ಐಕ್ಯೂ ಹೊಂದಿರುವುದು ಪರೀಕ್ಷೆಯ ನಂತರ ದೃಢಪಟ್ಟಿದೆ. ಐಕ್ಯೂ ಪರೀಕ್ಷೆಯಲ್ಲಿ ಅಧಾರಾಳಿಗೆ 162 ಐಕ್ಯೂ ಇರುವುದು ಗೊತ್ತಾಗಿದೆ. … Continued

ಪಾಕಿಸ್ತಾನ ಜೈಲಿನಲ್ಲಿರುವ 199 ಭಾರತೀಯ ಮೀನುಗಾರರ ಬಿಡುಗಡೆಗೆ ನಿರ್ಧಾರ

ಕರಾಚಿ: ಪಾಕಿಸ್ತಾನದ ಸಾಗರ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಬಂಧಿಸಲಾಗಿದ್ದ 199 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಲು ಪಾಕಿಸ್ತಾನ ನಿರ್ಧರಿಸಿದೆ. ಕರಾಚಿಯ ಲಾಂಧಿ ಸೆರೆಮನೆಯಲ್ಲಿ 199 ಭಾರತೀಯ ಮೀನುಗಾರರನ್ನು ಬಂಧಿಸಿ ಇರಿಸಲಾಗಿದೆ. ಈ ಮೀನುಗಾರರನ್ನು ಬಿಡುಗಡೆ ಮಾಡಿ ಶುಕ್ರವಾರ(ಮೇ 12)ರಂದು ವಾಘಾ ಗಡಿಯ ಮೂಲಕ ಭಾರತಕ್ಕೆ ಹಸ್ತಾಂತರಿಸಲು ಪಾಕಿಸ್ತಾನ ನಿರ್ಧರಿಸಿದೆ ಎಂದು ವರದಿಯಾಗಿದೆ. … Continued

ವೀಡಿಯೊಗಳು…: ಇಮ್ರಾನ್ ಖಾನ್ ಬಂಧನದ ನಂತರ ಪಾಕಿಸ್ತಾನದಲ್ಲಿ ಭುಗಿಲೆದ್ದ ಪ್ರತಿಭಟನೆ: ಬೆಂಬಲಿಗರಿಂದ ಪಾಕಿಸ್ತಾನ ಸೇನೆ ಪ್ರಧಾನ ಕಚೇರಿ, ಲಾಹೋರ್ ಕಾರ್ಪ್ಸ್ ಕಮಾಂಡರ್ ಮನೆ ಮೇಲೆ ದಾಳಿ

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಪಾಕಿಸ್ತಾನ ರೇಂಜರ್‌ಗಳು ಬಂಧಿಸಿದ ಕೆಲವೇ ಗಂಟೆಗಳ ನಂತರ, ಅವರ ಬೆಂಬಲಿಗರು ಲಾಹೋರ್ ಕ್ಯಾಂಟ್‌ನಲ್ಲಿರುವ ಕಾರ್ಪ್ಸ್ ಕಮಾಂಡರ್ಸ್ ಹೌಸ್‌ನಲ್ಲಿರುವ ಮನೆಗೆ ನುಗ್ಗಿದ್ದಾರೆ. “ಕಹಾ ಥಾ ಇಮ್ರಾನ್ ಖಾನ್ ಕೋ ನಾ ಛೇಡನಾ (ಇಮ್ರಾನ್ ಖಾನ್‌ಗೆ ಕಿರುಕುಳ ನೀಡಬೇಡಿ ಎಚ್ಚರಿಕೆ ನೀಡಿದ್ದೆವು ) ಎಂದು ವ್ಯಕ್ತಿಯೊಬ್ಬರು ಹೇಳುತ್ತಿರುವುದು ವೀಡಿಯೊದಲ್ಲಿ ಕೇಳುತ್ತದೆ. … Continued

ಜಮ್ಮು-ಕಾಶ್ಮೀರದ ನಂತರ ಈಗ ರಾಜಸ್ಥಾನದಲ್ಲಿ ಅತಿ ದೊಡ್ಡ ಲೀಥಿಯಂ ನಿಕ್ಷೇಪ ಪತ್ತೆ : ಭಾರತದ ಬೇಡಿಕೆಯ 80% ಪೂರೈಸುವ ನಿರೀಕ್ಷೆ..!

ನವದೆಹಲಿ : ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚಗೆ ದೇಶದ ಮೊದಲ ಬೃಹತ್ ಲೀಥಿಯಂ ನಿಕ್ಷೇಪಗಳು ಪತ್ತೆಯಾದ ಬೆನ್ನಲ್ಲೇ ಈಗ ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ ಕೂಡ ಲೀಥಿಯಂ ನಿಕ್ಷೇಪಗಳು ಕಂಡುಬಂದಿವೆ. ಇವು ಜಮ್ಮು ಕಾಶ್ಮೀರದಲ್ಲಿ ದೊರೆತ ನಿಕ್ಷೇಪಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಇದೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮೂರು ತಿಂಗಳ ಹಿಂದೆ ಜಮ್ಮು ಮತ್ತು ಕಾಶ್ಮೀರದ … Continued

ಬಹುಪತ್ನಿತ್ವ ನಿಷೇಧಕ್ಕೆ ಅಸ್ಸಾಂ ಸರ್ಕಾರ ಚಿಂತನೆ, ಪರಶೀಲನೆಗೆ ತಜ್ಞರ ಸಮಿತಿ ರಚನೆ : ಸಿಎಂ ಹಿಮಂತ ಬಿಸ್ವಾ ಶರ್ಮಾ

ಗುವಾಹತಿ : ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ತಮ್ಮ ಸರ್ಕಾರ ಬಹುಪತ್ನಿತ್ವವನ್ನು ನಿಷೇಧಿಸಲು ಬಯಸಿದೆ ಮತ್ತು ಇದನ್ನು ಪರಿಶೀಲಿಸಲು ತಜ್ಞರ ಸಮಿತಿಯನ್ನು ರಚಿಸಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ. ತಮ್ಮ ಸರ್ಕಾರವು ಏಕರೂಪ ನಾಗರಿಕ ಸಂಹಿತೆಯ (ಯುಸಿಸಿ) ಮೂಲಕ ಅಲ್ಲ, ರಾಜ್ಯ ಕಾಯಿದೆಯಡಿ ಬಹುಪತ್ನಿತ್ವವನ್ನು ನಿಷೇಧಿಸಲು ಬಯಸುತ್ತದೆ ಎಂದು ಶರ್ಮಾ ಮಂಗಳವಾರ ಹೇಳಿದ್ದಾರೆ. “ಈ … Continued

ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ಚೀತಾ ಸಾವು : 3 ತಿಂಗಳಲ್ಲಿ 3ನೇ ಚೀತಾ ಸಾವು

ಕುನೋ : ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ದಕ್ಷಿಣ ಆಫ್ರಿಕಾದಿಂದ ತಂದಿದ್ದ ಹೆಣ್ಣು ಚೀತಾವೊಂದು ಮೃತಪಟ್ಟಿದೆ ಎಂದು ವರದಿಯಾಗಿದೆ. ದಕ್ಷಾ ಹೆಸರಿನ ಹೆಣ್ಣು ಚಿರತೆ ಉಳಿದ ಚೀತಾಗಳ ಜೊತೆ ನಡೆದ ಕಾದಾಟದಲ್ಲಿ ಮೃತಪಟ್ಟಿದೆ ಎಂದು ವರದಿಯಾಗಿದೆ. ಗಂಡು ಚೀತಾಗಳ ಜೊತೆ ನಡೆದ ಕಾದಾಟದಲ್ಲಿ ಈ ಹೆಣ್ಣು ಚೀತಾ ಸಾವಿಗೀಡಾಗಿದ್ದು, ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದಿಂದ ಚೀತಾಗಳನ್ನು … Continued

ಎಚ್ಚರ…! : ಈ ನಂಬರ್‌ಗಳಿಂದ ವಾಟ್ಸ್‌ ಆ್ಯಪ್‌ ಕರೆ, ಸಂದೇಶಗಳು ಬರುತ್ತಿವೆ, ಸ್ವೀಕರಿಸಬೇಡಿ…!!

ದೇಶದಲ್ಲಿ ಇತ್ತೀಚಿಗೆ ಕೆಲ ದೇಶಗಳ ಕೋಡ್‌ಗಳಿಂದ ಬರುವ ಸಂಖ್ಯೆಗಳಿಂದ ವಾಟ್ಸ್‌ಆ್ಯಪ್‌ ಕರೆ ಹಾಗೂ ಸಂದೇಶದ ಮೂಲಕ ವಂಚನೆ ಬಗ್ಗೆ ನೂರಾರು ದೂರುಗಳು ದಾಖಲಾಗುತ್ತಿವೆ. ಉದ್ಯೋಗಿಗಳು ಹಾಗೂ ವ್ಯಾಪಾರ-ವ್ಯವಹಾರ ಮಾಡುತ್ತಿರುವವರನ್ನೇ ಹೆಚ್ಚಾಗಿ ಗುರಿಯಾಗಿಸಿಕೊಂಡು ವಂಚನೆ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ವಾಟ್ಸ್‌ಆ್ಯಪ್‌ ಕರೆ ಅಥವಾ ಸಂದೇಶದ ಮೂಲಕ ಜನರನ್ನು ವಂಚಿಸುತ್ತಿರುವವರು ಇಥಿಯೋಪಿಯಾ (+ 251), ಮಲೇಷ್ಯಾ (+ 60), … Continued

ಸೇತುವೆಯಿಂದ ಬಸ್ ಬಿದ್ದು 22 ಮಂದಿ ಸಾವು, ಹಲವರಿಗೆ ಗಾಯ

ಭೋಪಾಲ್: ಮಧ್ಯಪ್ರದೇಶದ ಖಾರ್ಗೋನೆಯಲ್ಲಿ ಇಂದು, ಮಂಗಳವಾರ ಬಸ್ ಸೇತುವೆಯಿಂದ ಕೆಳಗೆ ಬಿದ್ದು ಕನಿಷ್ಠ 22 ಜನರು ಸಾವಿಗೀಡಾಗಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ರಾಜ್ಯ ಗೃಹ ಸಚಿವ ನರೋತ್ತಮ ಮಿಶ್ರಾ ಹೇಳಿದ್ದಾರೆ. 50 ಜನರಿದ್ದ ಬಸ್ ಇಂದೋರ್‌ಗೆ ತೆರಳುತ್ತಿದ್ದಾಗ ಖಾರ್ಗೋನ್‌ನ ದಸಂಗ ಗ್ರಾಮದಲ್ಲಿ ಸೇತುವೆಯಿಂದ ಕೆಳಗೆ ಬಿದ್ದಿದೆ. ಸ್ಥಳೀಯ ಗ್ರಾಮಸ್ಥರ ಸಹಾಯದಿಂದ ತುರ್ತು ಸೇವೆಗಳು ರಕ್ಷಣಾ … Continued

ಉತ್ತರ ಪ್ರದೇಶದಲ್ಲಿ ‘ದಿ ಕೇರಳ ಸ್ಟೋರಿ’ ಸಿನಿಮಾಗೆ ತೆರಿಗೆ ವಿನಾಯಿತಿ ಘೋಷಿಸಿದ ಸಿಎಂ ಯೋಗಿ ಆದಿತ್ಯನಾಥ

ನವದೆಹಲಿ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿವಾದಿತ ಚಲನಚಿತ್ರ ‘ದಿ ಕೇರಳ ಸ್ಟೋರಿ’ ಪ್ರದರ್ಶನಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ. ಈ ಕುರಿತು ಯೋಗಿ ಆದಿತ್ಯನಾಥ್ ಟ್ವೀಟ್ ಮಾಡಿದ್ದಾರೆ. ಇತ್ತೀಚೆಗಷ್ಟೇ ಮಧ್ಯಪ್ರದೇಶ ಸರ್ಕಾರ ದಿ ಕೇರಳ ಸ್ಟೋರಿ ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಿಸಿತ್ತು. ಮತ್ತೊಂದೆಡೆ ವಿವಾದಿತ ಚಿತ್ರ ಪ್ರದರ್ಶನಕ್ಕೆ ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ನಿಷೇಧ … Continued