ಕಾಶ್ಮೀರದ ಬುದ್ಗಾಮ್‌ನಲ್ಲಿ ಇಬ್ಬರು ಎಲ್‌ಇಟಿ ಭಯೋತ್ಪಾದಕರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

ಶ್ರೀನಗರ: “ಕಾಶ್ಮೀರದ ಬುದ್ಗಾಮ್‌ನಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದ್ದು, ಅವರು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕರೊಂದಿಗೆ ಸಂಬಂಧ ಹೊಂದಿದ್ದರು” ಎಂದು ಕಾಶ್ಮೀರದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ವಿಜಯಕುಮಾರ ಮಂಗಳವಾರ ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಭಯೋತ್ಪಾದಕರ ಚಲನವಲನದ ಬಗ್ಗೆ ಮಾಹಿತಿ ಪಡೆದ ನಂತರ ಸೈನಿಕರು ಬುದ್ಗಾಮ್‌ನಲ್ಲಿ ಮೊಬೈಲ್ ವಾಹನ ತಪಾಸಣಾ ಕೇಂದ್ರವನ್ನು ಸ್ಥಾಪಿಸಿದ್ದಾರೆ ಎಂದು ಸೇನಾ … Continued

‘ಭಾರತದ ಜೊತೆಗಿನ ಮೂರು ಯುದ್ಧಗಳಿಂದ ಪಾಕಿಸ್ತಾನ ಪಾಠ ಕಲಿತಿದೆ, ಈಗ ಶಾಂತಿ ಬೇಕು’: ‘ಮಾತುಕತೆ’ಗೆ ಪ್ರಧಾನಿ ಮೋದಿಗೆ ಪಾಕ್ ಪ್ರಧಾನಿ ಸಂದೇಶ

ನವದೆಹಲಿ: ಭಾರತದೊಂದಿಗೆ ಮೂರು ಯುದ್ಧಗಳ ನಂತರ ದೇಶವು ತನ್ನ ಪಾಠವನ್ನು ಕಲಿತಿದೆ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಒಪ್ಪಿಕೊಂಡಿದ್ದಾರೆ ಮತ್ತು ಪಾಕಿಸ್ತಾನವು ಶಾಂತಿಯನ್ನು ಬಯಸುತ್ತದೆ ಎಂದು ಒತ್ತಿ ಹೇಳಿದ್ದಾರೆ. ಆಹಾರದ ಬೆಲೆಗಳು ಗಗನಕ್ಕೇರಿದ್ದು, ಆರ್ಥಿಕ ಬಿಕ್ಕಟ್ಟಿನೊಂದಿಗೆ ಹೆಣಗಾಡುತ್ತಿರುವ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಸಂದರ್ಶನವೊಂದರಲ್ಲಿ ಪಾಕಿಸ್ತಾನವು ಹಿಂದಿನ ಯುದ್ಧಗಳಿಂದ ಪಾಠಗಳನ್ನು ಕಲಿತಿದೆ ಮತ್ತು ಭಾರತದೊಂದಿಗೆ … Continued

ಪಕ್ಷದ ಸಹೋದ್ಯೋಗಿಯನ್ನು ನೆನೆಸಿಕೊಂಡು ಪತ್ರಿಕಾಗೋಷ್ಠಿಯಲ್ಲೇ ಗಳಗಳನೆ ಅತ್ತ ಕೇಂದ್ರ ಸಚಿವ

ಪಾಟ್ನಾ: ಬಕ್ಸರ್‌ನಲ್ಲಿ ಸೋಮವಾರ ನಿಧನರಾದ ಭಾರತೀಯ ಜನತಾ ಪಕ್ಷದ ಕಿಸಾನ್ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಪರಶುರಾಮ ಚತುರ್ವೇದಿ ಅವರನ್ನು ಸ್ಮರಿಸುವಾಗ ಕೇಂದ್ರ ರಾಜ್ಯ ಸಚಿವ (MoS) ಅಶ್ವಿನಿ ಚೌಬೆ ಅವರು ಸೋಮವಾರ ಕ್ಯಾಮರಾ ಮುಂದೆಯೇ ಗಳಗಳನೆ ಅತ್ತರು. “ಕಳೆದ ಮೂರು ದಿನಗಳಿಂದ ಕೊರೆಯುವ ಚಳಿಯಲ್ಲಿ ರೈತ ಸಂಬಂಧಿ ಸಮಸ್ಯೆಗಳನ್ನು ಬೆಂಬಲಿಸಿ ಉಪವಾಸ ಸತ್ಯಾಗ್ರಹದಲ್ಲಿ … Continued

ಭಾರತಕ್ಕೆ ದೊಡ್ಡ ಯಶಸ್ಸು…: ಚೀನಾ ತಾಂತ್ರಿಕ ತಡೆ ಹಿಂಪಡೆದ ನಂತರ ಪಾಕ್ ಮೂಲದ ಅಬ್ದುಲ್ ರೆಹಮಾನ್ ಮಕ್ಕಿಯನ್ನು ಜಾಗತಿಕ ಭಯೋತ್ಪಾದಕ ಎಂದು ಪಟ್ಟಿ ಮಾಡಿದ ವಿಶ್ವಸಂಸ್ಥೆ

ವಿಶ್ವಸಂಸ್ಥೆ: ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟದಲ್ಲಿ ಯಶಸ್ಸು ಎಂದು ವಿವರಿಸಬಹುದಾದ ಬೆಳವಣಿಗೆಯೊಂದರಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC) ಸೋಮವಾರ ರಾತ್ರಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಅಬ್ದುಲ್ ರೆಹಮಾನ್ ಮಕ್ಕಿಯನ್ನು ಜಾಗತಿಕ ಭಯೋತ್ಪಾದಕ ಎಂದು ಪಟ್ಟಿ ಮಾಡಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 1267 ಸಮಿತಿ ಎಂದೂ ಕರೆಯಲ್ಪಡುವ ನಿರ್ಬಂಧಗಳ ಸಮಿತಿಯ ಅಡಿಯಲ್ಲಿ ಮಕ್ಕಿಯನ್ನು ಪಟ್ಟಿ ಮಾಡುವ ಪ್ರಸ್ತಾಪವನ್ನು … Continued

2023ರಲ್ಲಿ ನಡೆಯುವ 9 ರಾಜ್ಯಗಳ ಚುನಾವಣೆಯಲ್ಲಿ ಯಾವುದರಲ್ಲೂ ಪಕ್ಷ ಸೋಲಬಾರದು : ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಅಧ್ಯಕ್ಷ ನಡ್ಡಾ

ನವದೆಹಲಿ: ಸೋಮವಾರ ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷವು ಈ ವರ್ಷ ಒಂಬತ್ತು ವಿಧಾನಸಭಾ ಚುನಾವಣೆಗಳನ್ನು ಎದುರಿಸಬೇಕಾಗಿದೆ ಮತ್ತು ಅದರಲ್ಲಿ ಒಂದನ್ನು ಸಹ ಕಳೆದುಕೊಳ್ಳಬಾರದು ಎಂದು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಕರೆ ನೀಡಿದ್ದಾರೆ ಎಂದು ಬಿಜೆಪಿಯ ಹಿರಿಯ ನಾಯಕ ರವಿಶಂಕರ ಪ್ರಸಾದ ಹೇಳಿದ್ದಾರೆ. ಸಭೆಯಲ್ಲಿ ಚರ್ಚೆ ನಡೆದ ವಿಷಯಗಳ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ … Continued

ಕೋವಿಡ್-19 : ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ ಮಾಡಿದ ಕೇರಳ

ತಿರುವನಂತಪುರಂ: ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಿ ಕೇರಳ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯವು ಕೋವಿಡ್ ಪುನರುತ್ಥಾನದ ಅಪಾಯದಲ್ಲಿರುವುದರಿಂದ ಮಾರ್ಗಸೂಚಿಗಳನ್ನು ನೀಡಲಾಗಿದೆ. ಎಲ್ಲ ಸಾರ್ವಜನಿಕ ಸ್ಥಳಗಳು, ಕೆಲಸದ ಸ್ಥಳಗಳು ಮತ್ತು ಸಭೆ ಸಮಾರಂಭಗಳಲ್ಲಿ ಜನರಿಗೆ ಮಾಸ್ಕ್ ಅನ್ನು ಕಡ್ಡಾಯಗೊಳಿಸಲಾಗಿದೆ. ಕೋವಿಡ್ ಸೋಂಕು ಹರಡುವುದನ್ನು ತಡೆಯಲು ಸಾಮಾಜಿಕ ಅಂತರವನ್ನು ಅನುಸರಿಸುವಂತೆ ರಾಜ್ಯ ಸರ್ಕಾರ ತನ್ನ ಆದೇಶದಲ್ಲಿ ಜನರಿಗೆ … Continued

ವೈವಾಹಿಕ ಅತ್ಯಾಚಾರದ ಮೇಲಿನ ಅರ್ಜಿಗಳಿಗೆ ಕೇಂದ್ರದ ಉತ್ತರ ಕೇಳಿದ ಸುಪ್ರೀಂ ಕೋರ್ಟ್‌

ನವದೆಹಲಿ: ವೈವಾಹಿಕ ಅತ್ಯಾಚಾರ ವಿಷಯಕ್ಕೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 375 ರ ವಿನಾಯಿತಿ 2 ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿಗಳಿಗೆ ಉತ್ತರವನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರಕ್ಕೆ ಸೂಚಿಸಿದೆ. ಅತ್ಯಾಚಾರವನ್ನು ವ್ಯಾಖ್ಯಾನಿಸುವ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 375 ರ ವಿನಾಯಿತಿ 2, ಪತ್ನಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರದ … Continued

ಭಾರತದ 1%ರಷ್ಟು ಶ್ರೀಮಂತರ ಬಳಿ ದೇಶದ ಒಟ್ಟು ಸಂಪತ್ತಿನ 40%ಕ್ಕಿಂತ ಹೆಚ್ಚು ಸಂಪತ್ತಿದೆ : ಆಕ್ಸ್‌ಫ್ಯಾಮ್‌ ವರದಿ

ನವದೆಹಲಿ: ಭಾರತದ ಒಟ್ಟು ಸಂಪತ್ತಿನ 40%ಕ್ಕೂ ಹೆಚ್ಚು ಸಂಪತ್ತು ಈಗ ಭಾರತದ ಶೇ.1ರಷ್ಟು ಶ್ರೀಮಂತರ ಒಡೆತನದಲ್ಲಿದೆ ಎಂದು ಹೊಸ ಅಧ್ಯಯನವೊಂದು ಸೋಮವಾರ ಬಹಿರಂಗಪಡಿಸಿದೆ. ಕೇವಲ 3 ಶೇಕಡಾ ಸಂಪತ್ತನ್ನು ಮಾತ್ರ ಜನಸಂಖ್ಯೆಯ ಕೆಳಸ್ತರದ ಅರ್ಧದಷ್ಟು ಜನರು ಹಂಚಿಕೊಂಡಿದ್ದಾರೆ ಎಂದು ಅಧ್ಯಯನವು ತೋರಿಸಿದೆ. ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯ ಮೊದಲ ದಿನದಂದು ಹಕ್ಕುಗಳ … Continued

ಇಂದಿನಿಂದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ; ದೆಹಲಿಯಲ್ಲಿ ಪ್ರಧಾನಿ ಮೋದಿ ರೋಡ್ ಶೋ

ನವದೆಹಲಿ: ಭಾರತೀಯ ಜನತಾ ಪಕ್ಷದ (ಬಿಜೆಪಿ) ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯು ಇಂದು, ಸೋಮವಾರದಿಂದ ದೆಹಲಿಯಲ್ಲಿ ಆರಂಭವಾಗಿದ್ದು, ವಿವಿಧ ರಾಜ್ಯಗಳ ವಿಧಾನಸಭೆ ಮತ್ತು ಸಾರ್ವತ್ರಿಕ ಚುನಾವಣೆಗೆ ಪಕ್ಷದ ಕಾರ್ಯತಂತ್ರದ ಕುರಿತು ಚರ್ಚಿಸಲಿದೆ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಅಧಿಕಾರಾವಧಿಯ ವಿಸ್ತರಣೆ ಅನುಮೋದಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಕಾರ್ಯಕ್ರಮಕ್ಕೂ ಮುನ್ನ ನಡ್ಡಾ ಅವರು … Continued

ದೆಹಲಿಯಲ್ಲಿ ಸೋಮವಾರ ಬೆಳಿಗ್ಗೆ 1.4° ಸೆಲ್ಸಿಯಸ್‌ ತಾಪಮಾನ ದಾಖಲು : ಇದು ರಾಷ್ಟ್ರ ರಾಜಧಾನಿಯ ಈ ಋತುವಿನ ಕನಿಷ್ಠ ತಾಪಮಾನ

ನವದೆಹಲಿ: ಸೋಮವಾರ ನಸುಕಿನ ವೇಳೆಯಲ್ಲಿ ದೆಹಲಿಯ ತಾಪಮಾನದ ಮಟ್ಟವು 1.4 ° ಸೆಲ್ಸಿಯಸ್‌ ಗೆ ಇಳಿಯುವುದರೊಂದಿಗೆ ದೆಹಲಿಯು ಈ ಋತುವಿನ ಅತ್ಯಂತ ಕಡಿಮೆ ತಾಪಮಾನವನ್ನು ದಾಖಲಿಸಿದೆ. ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಮುಂಬರುವ ತೀವ್ರ ಶೀತಗಾಳಿಯಿಂದಾಗಿ ಭಾರತ ಹವಾಮಾನ ಇಲಾಖೆ (IMD) ಇಂದು ಸೋಮವಾರದಿಂದ ಮುಂದಿನ ಆರು ದಿನಗಳವರೆಗೆ ದೆಹಲಿಯಲ್ಲಿ ಹಳದಿ ಎಚ್ಚರಿಕೆಯನ್ನು ನೀಡಿದೆ. ಮೊದಲ ಮೂರು … Continued