ಭಾರಿ ಮಳೆ ; ಚೆನ್ನೈ, ಪುದುಚೇರಿಯಲ್ಲಿ ಶಾಲೆಗಳಿಗೆ ರಜೆ ಘೋಷಣೆ

ಚೆನ್ನೈ: ತಮಿಳುನಾಡಿನಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂದು, ಮಂಗಳವಾರ (ನವೆಂಬರ್‌ 12) ಚೆನ್ನೈನಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಪಕ್ಕದ ತಿರುವಳ್ಳೂರು ಜಿಲ್ಲೆ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿಯೂ ಶಾಲೆಗಳಿಗೆ ಮಳೆ ರಜೆ ಘೋಷಿಸಲಾಗಿದೆ. ಕಡಲೂರು, ಮೈಲಾಡುತುರೈ, ನಾಗಪಟ್ಟಣಂ, ತಿರುವರೂರ್, ತಂಜಾವೂರು ಮತ್ತು ವಿಲ್ಲುಪುರಂ ಸೇರಿದಂತೆ ಆರು ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ … Continued

ಮಣಿಪುರದ ಜಿರಿಬಾಂನಲ್ಲಿ ಗುಂಡಿನ ಚಕಮಕಿ; 10 ಶಂಕಿತ ಕುಕಿ ಬಂಡುಕೋರರ ಸಾವು

ನವದೆಹಲಿ/ಇಂಫಾಲ್ : ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ಸೋಮವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಕನಿಷ್ಠ 10 ಶಂಕಿತ ಕುಕಿ ಬಂಡುಕೋರರನ್ನು ಹೊಡೆದುರುಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಸ್ಸಾಂ ಗಡಿ ಜಿಲ್ಲೆಯಲ್ಲಿ ಶಂಕಿತ ಕುಕಿ ಉಗ್ರರು ನಡೆಸಿದ ದಾಳಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಯೋಧ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಯೋಧನನ್ನು ಅಸ್ಸಾಂನ ಸಿಲ್ಚಾರ್ … Continued

ಸುಪ್ರೀಂ ಕೋರ್ಟ್ 51ನೇ ಮುಖ್ಯ ನ್ಯಾಯಮೂರ್ತಿಯಾಗಿ ಸಂಜೀವ ಖನ್ನಾ ಪ್ರಮಾಣ ವಚನ

ನವದೆಹಲಿ: ಸುಪ್ರೀಂ ಕೋರ್ಟ್ 51ನೇ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ನ್ಯಾಯಮೂರ್ತಿ ಸಂಜೀವ ಖನ್ನಾ ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನ್ಯಾಯಮೂರ್ತಿ ಖನ್ನಾ ಅವರಿಗೆ ಪ್ರಮಾಣ ವಚನ ಬೋಧಿಸಿದರು. ನ್ಯಾಯಮೂರ್ತಿ ಖನ್ನಾ ಅವರು ಸಿಜೆಐ ಆಗಿ 183 ದಿನಗಳ ಕಾಲ (ಸುಮಾರು … Continued

ವೀಡಿಯೊ..| ಸ್ಮಶಾನದ ಅಡಿಯಲ್ಲಿ ಹೆಜ್ಬೊಲ್ಲಾಗಳ ಬೃಹತ್‌ ಭೂಗತ ಸುರಂಗ ಪತ್ತೆ ; ಅದರಲ್ಲಿದ್ದವು ಬೃಹತ್‌ ಪ್ರಮಾಣದ ಶಸ್ತ್ರಾಸ್ತ್ರಗಳು, ರಾಕೆಟ್‌ಗಳು, ದ್ವಿಚಕ್ರವಾಹನಗಳು

ಲೆಬನಾನ್‌ನಲ್ಲಿ ಹೆಜ್ಬೊಲ್ಲಾ ಸದಸ್ಯರು ಬಳಸುತ್ತಿದ್ದ ಅನೇಕ ಭೂಗತ ಸುರಂಗಗಳನ್ನು “ಕಿತ್ತುಹಾಕಲಾಗಿದೆ” ಎಂದು ಇಸ್ರೇಲಿ ಮಿಲಿಟರಿ ಭಾನುವಾರ ಹೇಳಿದೆ. ಇದರಲ್ಲಿ ಸ್ಮಶಾನದ ಅಡಿಯಲ್ಲಿ ಇರುವ ಭೂಗತ ಸುರಂಗವೂ ಸೇರಿದೆ ಎಂದು ಹೇಳಲಾಗಿದೆ. X ನಲ್ಲಿನ ಪೋಸ್ಟ್‌ನಲ್ಲಿ, ಇಸ್ರೇಲಿ ರಕ್ಷಣಾ ಪಡೆಗಳು (IDF) ಹಂಚಿಕೊಂಡ ವೀಡಿಯೊದಲ್ಲಿ ಕಿಲೋಮೀಟರ್ ಗಟ್ಟಲೆ ಉದ್ದದ ಸುರಂಗವು ಕಮಾಂಡ್ ಮತ್ತು ಕಂಟ್ರೋಲ್ ರೂಂಗಳು, ಮಲಗುವ … Continued

ಮುಂಬರುವ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡಲು ಪಾಕಿಸ್ತಾನಕ್ಕೆ ಹೋಗಲ್ಲ ಎಂದ ಭಾರತ : ಪಿಸಿಬಿಗೆ ಮಾಹಿತಿ ನೀಡಿದ ಐಸಿಸಿ

ನವದೆಹಲಿ: ಮುಂದಿನ ವರ್ಷ ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆಡಲು ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದು ಭಾರತದ ಕ್ರಿಕೆಟ್‌ ಮಂಡಳಿಯು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ತಿಳಿಸಿದೆ ಎಂಬುದನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಭಾನುವಾರ ದೃಢಪಡಿಸಿದೆ. “ಐಸಿಸಿ 2025 ರ ಚಾಂಪಿಯನ್ಸ್ ಟ್ರೋಫಿಗಾಗಿ ತಮ್ಮ ತಂಡವು ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಬಿಸಿಸಿಐ ತಿಳಿಸಿದೆ ಎಂದು … Continued

ಭಾರತದ ಘೋಷಿತ ಭಯೋತ್ಪಾದಕ, ಉಗ್ರಗಾಮಿ ನಿಜ್ಜರನ ನಂಬಿಗಸ್ಥ ಬಂಟ ಅರ್ಶ್‌ ‘ದಲ್ಲಾ’ ಕೆನಡಾದಲ್ಲಿ ಬಂಧನ..?

ನವದೆಹಲಿ : ಭಾರತವು ಭಯೋತ್ಪಾದಕ ಎಂದು ಘೋಷಿಸಿರುವ ಖಲಿಸ್ತಾನಿ ಉಗ್ರ ಅರ್ಶದೀಪ್ ಸಿಂಗ್ ಗಿಲ್ ಅಲಿಯಾಸ್ ಅರ್ಶ್ ದಲ್ಲಾನನ್ನು ಕೆನಡಾದ ಒಂಟಾರಿಯೊ ಪ್ರಾಂತ್ಯದಲ್ಲಿ ಗುಂಡಿನ ದಾಳಿಯ ನಂತರ ಬಂಧಿಸಿರುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ. ಅಕ್ಟೋಬರ್ 28 ರಂದು ಮಿಲ್ಟನ್‌ನಲ್ಲಿ ಈ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ. ದಲ್ಲಾ, ನಿಷೇಧಿತ ಖಾಲಿಸ್ತಾನ ಟೈಗರ್‌ ಫೋರ್ಸ್‌ನೊಂದಿಗೆ (ಕೆಟಿಎಫ್‌) … Continued

ವೀಡಿಯೊ…| ಅಪಾಯಕಾರಿ ಹೈ-ವೋಲ್ಟೇಜ್ ಎಲೆಕ್ಟ್ರಿಕ್ ಟವರ್ ಏರಿದ ವ್ಯಕ್ತಿ ; ಅದರ ಮೇಲೆಯೇ ನೃತ್ಯ…!

ಆಘಾತಕಾರಿ ಮತ್ತು ವಿಲಕ್ಷಣ ಘಟನೆಯೊಂದರಲ್ಲಿ, ಉತ್ತರ ಪ್ರದೇಶದ ನೋಯ್ಡಾದಲ್ಲಿ ವ್ಯಕ್ತಿಯೊಬ್ಬ ಹೈವೋಲ್ಟೇಜ್ ಎಲೆಕ್ಟ್ರಿಕ್ ಟವರ್ ಅನ್ನು ಏರಿ ಹಲವರ ಆತಂಕಕ್ಕೆ ಕಾಣವಾದ ಘಟನೆ ಭಾನುವಾರ ನಡೆದಿದೆ. ದೆಹಲಿ ಸಮೀಪದ ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್ 113 ರಲ್ಲಿ ಈ ಘಟನೆ ನಡೆದಿದ್ದು, ಕುಡಿದ ಮತ್ತಿನಲ್ಲಿದ್ದ ವ್ಯಕ್ತಿ ಹೈಟೆನ್ಷನ್ ಟವರ್‌ ಅನ್ನು ಹತ್ತಿ ಅದರ ಮೇಲೆ ಡ್ಯಾನ್ಸ್‌ … Continued

ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಬಂಧನ

ನವದೆಹಲಿ : ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹಾಗೂ ಮೂವರು ಶೂಟರ್‌ಗಳ ಪೈಕಿ ಒಬ್ಬನಾದ ಶಿವಕುಮಾರ ಗೌತಮ ಎಂಬಾತನನ್ನು ಭಾನುವಾರ ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ಬಂಧಿಸಲಾಗಿದೆ. ಈತ ನೇಪಾಳಕ್ಕೆ ಪಲಾಯನ ಮಾಡಲು ಯತ್ನಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಶಿವಕುಮಾರಗೆ ಆಶ್ರಯ ನೀಡಿ ನೇಪಾಳಕ್ಕೆ ಪರಾರಿಯಾಗಲು ಸಹಾಯ ಮಾಡಿದ್ದಕ್ಕಾಗಿ ಇತರ … Continued

ಮುಸ್ಲಿಂ ಕುಟುಂಬದ ಮಗಳ ಮದುವೆ ಕಾರ್ಡ್‌ನಲ್ಲಿ ಗಣೇಶ, ಕೃಷ್ಣನ ಚಿತ್ರ ; ಈ ಮದುವೆ ಆಮಂತ್ರಣ ಪತ್ರ ಭಾರೀ ವೈರಲ್‌…!

ಲಕ್ನೋ : ಉತ್ತರ ಪ್ರದೇಶದ ಅಮೇಥಿ ಜಿಲ್ಲೆಯಲ್ಲಿ, ತಿಲೋಯ್ ತೆಹ್ಸಿಲ್‌ನ ಪುರೆ ಅಲ್ಲಾದೀನ್ ಗ್ರಾಮದ ಮುಸ್ಲಿಂ ಕುಟುಂಬವೊಂದು ತಮ್ಮ ಮಗಳ ಮದುವೆಗೆ ಹಿಂದೂ ಸಂಪ್ರದಾಯಗಳಿಗೆ ಅನುಗುಣವಾಗಿ ವಿಶಿಷ್ಟವಾದ ವಿವಾಹ ಆಮಂತ್ರಣ ಪತ್ರವನ್ನು ಮುದ್ರಿಸಿದೆ. ವಧು, ವರ ಮತ್ತು ಕುಟುಂಬದ ಸದಸ್ಯರ ಹೆಸರುಗಳೊಂದಿಗೆ ಹಿಂದೂ ದೇವರುಗಳಾದ ಗಣೇಶ ಮತ್ತು ಕೃಷ್ಣನ ಚಿತ್ರಗಳನ್ನು ಒಳಗೊಂಡಿರುವ ಮದುವೆ ಕಾರ್ಡ್ ಮುದ್ರಿಸಿರುವುದು … Continued

ಪೆರೋಲ್‌ ಮೇಲೆ ಜೈಲಿನಿಂದ ಹೊರಬಂದಿದ್ದ ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದ ಇಬ್ಬರು ವ್ಯಕ್ತಿಗಳು : ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಗ್ವಾಲಿಯರ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ಕೆನಡಾ ಮೂಲದ ಗ್ಯಾಂಗ್‌ಸ್ಟರ್‌ ಅರ್ಷದೀಪ್ ಸಿಂಗ್ ದಲ್ಲಾನ ಇಬ್ಬರು ಸಹಾಯಕರು 45 ವರ್ಷದ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದಿದ್ದಾರೆ. ಕಳೆದ ತಿಂಗಳು ಪಂಜಾಬಿನ ಫರೀದ್‌ಕೋಟ್‌ನಲ್ಲಿ ಸಿಖ್ ಕಾರ್ಯಕರ್ತ ಗುರುಪ್ರೀತ್ ಸಿಂಗ್ ಹರಿ ನೌ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಗ್ವಾಲಿಯರ್ ಗುಂಡಿನ ದಾಳಿಯಲ್ಲಿ ಮೃತಪಟ್ಟವನನ್ನು ಜಸ್ವಂತ್ ಸಿಂಗ್ … Continued