ಜಮೀನು ಒತ್ತುವರಿ ಆರೋಪ ; ರೋಹಿಣಿ ಸಿಂಧೂರಿ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ ಖ್ಯಾತ ಬಾಲಿವುಡ್ ಗಾಯಕ

ಬೆಂಗಳೂರು: ಭೂಮಿ ಒತ್ತುವರಿ ಮಾಡಿದ ಆರೋಪದಡಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಅವರ ಪತಿ ವಿರುದ್ಧ ಬಾಲಿವುಡ್ ಗಾಯಕ ಲಕ್ಕಿ ಅಲಿ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಯಲಹಂಕ ನ್ಯೂಟೌನ್​ ಕೆಂಚೇನಹಳ್ಳಿ ಬಳಿ ಇರುವ ತಮ್ಮ ಜಮೀನು ಕಬಳಿಸಲು ರೋಹಿಣಿ ಸಿಂಧೂರಿ ಹಾಗು ಪತಿ ಸುಧೀರ ರೆಡ್ಡಿ ಸೇರಿದಂತೆ ಯಲಹಂಕ ಉಪವಿಭಾಗದ ಎಸಿಪಿ ಮಂಜುನಾಥ, ಸರ್ವೇಯರ್ … Continued

ಪವನ ಕಲ್ಯಾಣ ಅವರನ್ನು ಸೋಲಿಸಲು ಸಾಧ್ಯವಾಗದ ಕಾರಣಕ್ಕೆ ತಮ್ಮ ಹೆಸರನ್ನೇ ಬದಲಾಯಿಸಿಕೊಂಡ ಜಗನ್ಮೋಹನ ರೆಡ್ಡಿ ಪಕ್ಷದ ನಾಯಕ…!

ಅಮರಾವತಿ : ಪೀತಾಪುರ ವಿಧಾನಸಭಾ ಕ್ಷೇತ್ರದಲ್ಲಿ ಜನಸೇನಾ ಪಕ್ಷದ ನಾಯಕ ಹಾಗೂ ನಟ ಕೆ.ಪವನ ಕಲ್ಯಾಣ ಅವರನ್ನು ಸೋಲಿಸಲು ಸಾಧ್ಯವಾಗದಿದ್ದರೆ ತನ್ನ ಹೆಸರನ್ನು ಬದಲಾಯಿಸಿಕೊಳ್ಳುವುದಾಗಿ ವಾಗ್ದಾನ ಮಾಡಿದ್ದ ವೈಎಸ್‌ಆರ್ ಕಾಂಗ್ರೆಸ್  ಹಿರಿಯ ನಾಯಕ ಮುದ್ರಗಡ ಪದ್ಮನಾಭಂ ಈಗ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ…! ಅವರು ತಮ್ಮ ಹೆಸರನ್ನು ಮುದ್ರಗಡ ಪದ್ಮನಾಭ ರೆಡ್ಡಿ ಎಂದು ಬದಲಾಯಿಸಿಕೊಂಡಿದ್ದು ಈ ಸಂಬಂಧ … Continued

ಅರವಿಂದ ಕೇಜ್ರಿವಾಲ್‌ ಬಿಡುಗಡೆ ತಡೆಹಿಡಿದ ದೆಹಲಿ ಹೈಕೋರ್ಟ್‌

ನವದೆಹಲಿ: ದೆಹಲಿ ಮದ್ಯ ನೀತಿಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಹಿನ್ನಡೆಯಾಗಿದ್ದು, ಜಾರಿ ನಿರ್ದೇಶನಾಲಯದ ಅರ್ಜಿಯ ವಿಚಾರಣೆಯ ತನಕ ದೆಹಲಿ ಹೈಕೋರ್ಟ್ ಅವರ ಬಿಡುಗಡೆ ಆದೇಶ ಜಾರಿಗೊಳಿಸುವುದನ್ನು ತಡೆ ಹಿಡಿದಿದೆ. ಕೇಜ್ರಿವಾಲ್ ಅವರಿಗೆ ನೀಡಿರುವ ಜಾಮೀನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಅರ್ಜಿ ವಿಚಾರಣೆ ಮುಗಿಯುವವರೆಗೂ ವಿಚಾರಣಾ ನ್ಯಾಯಾಲಯದ ಜಾಮೀನು … Continued

ನೇಣು ಬಿಗಿದುಕೊಂಡು ಕಾಂಗ್ರೆಸ್‌ ಶಾಸಕನ ಪತ್ನಿ ಆತ್ಮಹತ್ಯೆ…!?

ಕರೀಂನಗರ: ಕಾಂಗ್ರೆಸ್ ಶಾಸಕ ಮೇಡಿಪಲ್ಲಿ ಸತ್ಯಂ ಅವರ ಪತ್ನಿ ರೂಪಾ ದೇವಿ ಅವರು ಜೂನ್ 20 ಶುಕ್ರವಾರ ತಡರಾತ್ರಿ ಅಲ್ವಾಲ್‌ನ ಪಂಚಶೀಲ ಕಾಲೋನಿಯಲ್ಲಿರುವ ಅವರ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದಾಗ ಸತ್ಯಂ ಅವರು ಹಿಂದಿನ ಕರೀಂನಗರ ಜಿಲ್ಲೆಯ ಚೊಪ್ಪದಂಡಿ ಕ್ಷೇತ್ರದಲ್ಲಿದ್ದರು. ಮೂಲಗಳ ಪ್ರಕಾರ ರೂಪಾ ದೇವಿ … Continued

10ನೇ ಅಂತಾರಾಷ್ಟ್ರೀಯ ಯೋಗ ದಿನ: ಶ್ರೀನಗರದ ದಾಲ್‌ ಸರೋವರ ದಡದಲ್ಲಿ ಪ್ರಧಾನಿ ಮೋದಿ ಯೋಗ

ಶ್ರೀನಗರ: 10ನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಂದು ‌ಜಮ್ಮು ಮತ್ತು ಕಾಶ್ಮೀರದ ದಾಲ್‌ ಸರೋವರ ತೀರದಲ್ಲಿ ಸಾವಿರಾರು ಜನರೊಂದಿಗೆ ಪಾಲ್ಗೊಂಡು ಯೋಗ ಪ್ರದರ್ಶಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಇಂದು, ಶುಕ್ರವಾರ (ಜೂನ್‌ 21) ಬೆಳಿಗ್ಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ನೇತೃತ್ವ ವಹಿಸಿದ್ದರು. … Continued

ಬಿಜೆಪಿಯ ಭರ್ತೃಹರಿ ಮಹತಾಬ್ ಲೋಕಸಭೆಯ ಹಂಗಾಮಿ ಸ್ಪೀಕರ್

ನವದೆಹಲಿ: ಏಳು ಅವಧಿಯ ಲೋಕಸಭಾ ಸದಸ್ಯ ಭರ್ತೃಹರಿ ಮಹತಾಬ್ ಅವರನ್ನು ಗುರುವಾರ ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ನೇಮಿಸಲಾಗಿದೆ. ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಈ ವಿಷಯ ತಿಳಿಸಿದ್ದಾರೆ. ಹಂಗಾಮಿ ಸ್ಪೀಕರ್ ಲೋಕಸಭೆ ಚುನಾವಣೆಯ ನಂತರ ಸಂಸತ್ತಿನ ಕೆಳಮನೆಯ ಮೊದಲ ಸಭೆಯ ಅಧ್ಯಕ್ಷತೆ ವಹಿಸುತ್ತಾರೆ, ಜೊತೆಗೆ ಅದು ಹೊಸದಾಗಿ ರಚಿತವಾದ ಸದನವಾಗಿದ್ದರೆ ಸ್ಪೀಕರ್ ಮತ್ತು … Continued

ಅಬಕಾರಿ ನೀತಿ ಹಗರಣ: ದೆಹಲಿ ಸಿಎಂ ಅರವಿಂದ ಕೇಜ್ರಿವಾಲಗೆ ಜಾಮೀನು

ನವದೆಹಲಿ: 2021-22ರ ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾರ್ಚ್‌ನಲ್ಲಿ ಬಂಧಿಸಲ್ಪಟ್ಟ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ಗೆ ದೆಹಲಿ ನ್ಯಾಯಾಲಯವು ಗುರುವಾರ ಜಾಮೀನು ಮಂಜೂರು ಮಾಡಿದೆ. ಎರಡು ದಿನಗಳ ಕಾಲ ಕೇಜ್ರಿವಾಲ ಮತ್ತು ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆ ನಡೆಸಿದ ನಂತರ ರಜಾಕಾಲದ ನ್ಯಾಯಾಧೀಶರಾದ ನಿಯಾಯ್ ಬಿಂದು ಅವರು ಜಾಮೀನು ನೀಡಿ … Continued

ತಮಿಳುನಾಡು ಸಾರಾಯಿ ದುರಂತ: ಅಕ್ರಮ ಮದ್ಯ ಸೇವಿಸಿ 33 ಮಂದಿ ಸಾವು

ಚೆನ್ನೈ: ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ ಅಕ್ರಮ ಮದ್ಯ ಸೇವಿಸಿ 33 ಮಂದಿ ಸಾವಿಗೀಡಾಗಿದ್ದು, ಇತರ 15 ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ ಹಾಗೂ 109 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಸಂತ್ರಸ್ತರು ಕಲ್ಲಕುರಿಚಿ ಸರ್ಕಾರಿ ವೈದ್ಯಕೀಯ ಕಾಲೇಜು, ಜಿಪ್ಮರ್ ಪುದುಚೇರಿ ಮತ್ತು ಸೇಲಂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಮಿಳುನಾಡು ಸರ್ಕಾರ ಪ್ರಕರಣದ ತನಿಖೆಯನ್ನು ಸಿಬಿ-ಸಿಐಡಿಗೆ … Continued

ʼಹಮಾರೆ ಬಾರಹ’ ಸಿನೆಮಾ ಬಿಡುಗಡೆಗೆ ಬಾಂಬೆ ಹೈಕೋರ್ಟ್ ಅನುಮತಿ

ಮುಂಬೈ: ‘ಹಮಾರೆ ಬಾರಹ’ ಸಿನಿಮಾ ಬಿಡುಗಡೆಗೆ ಬಾಂಬೆ ಹೈಕೋರ್ಟ್‌ ಬುಧವಾರ ಅನುಮತಿ ನೀಡಿದೆ. ಸಿನೆಮಾದಲ್ಲಿನ ಕೆಲವು ಆಕ್ಷೇಪಾರ್ಹ ಭಾಗಗಳಿಗೆ ಕತ್ತರಿ ಹಾಕಲು ಚಿತ್ರತಂಡವು ಒಪ್ಪಿದ ನಂತರ ಬಾಂಬೆ ಹೈಕೋರ್ಟ್‌ ಬಿಡುಗಡೆಗೆ ಅನುಮತಿ ನೀಡಿದೆ. ಹಮಾರೆ ಬಾರಹ ಸಿನಿಮಾ ಜೂನ್‌ 7ಕ್ಕೆ ಬಿಡುಗಡೆ ಆಗಬೇಕಿತ್ತು. ನಂತರ ಇದರ ಬಿಡುಗಡೆ ದಿನಾಂಕವನ್ನು ಜೂನ್ 14ಕ್ಕೆ ಮುಂದೂಡಲಾಗಿತ್ತು. ಈ ಚಿತ್ರವು … Continued

ಸಂಗಾತಿಗಳಲ್ಲಿ ಒಬ್ಬರು ವಿವಾಹಿತರಾಗಿದ್ದರೆ ಲಿವ್-ಇನ್ ಸಂಬಂಧ ಮಾನ್ಯವಾಗುವುದಿಲ್ಲ : ಮದ್ರಾಸ್ ಹೈಕೋರ್ಟ್

ಚೆನ್ನೈ : ಸಂಗಾತಿಗಳಲ್ಲಿ ಒಬ್ಬರು ವಿವಾಹ ಸಂಬಂಧದಲ್ಲಿದ್ದರೆ ಆಗ ಅವರ ಸಹಜೀವನ (ಲಿವ್-ಇನ್) ಸಂಬಂಧ ಕಾನೂನುಬದ್ಧ ಆಗುವುದಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ. ಸಹಜೀವನ (ಲಿವ್-ಇನ್) ನಡೆಸುತ್ತಿರುವವರಲ್ಲಿ ಒಬ್ಬರಿಗೆ ಈಗಾಗಲೇ ವಿವಾಹವಾಗಿದ್ದರೆ ಅವರು ಲಿವ್‌- ಇನ್‌ ಸಂಗಾತಿಯ ಆಸ್ತಿಯ ಉತ್ತರಾಧಿಕಾರ ಅಥವಾ ಪಿತ್ರಾರ್ಜಿತ ಹಕ್ಕುಗಳನ್ನು ಪಡೆಯಲು ಆಗುವುದಿಲ್ಲ ಎಂದು ಜೂನ್ 7ರಂದು ಹೊರಡಿಸಿದ ಆದೇಶದಲ್ಲಿ, ನ್ಯಾಯಮೂರ್ತಿ … Continued