ವೀಡಿಯೊ..| ಇನ್ಸ್ಟಾಗ್ರಾಂ ರೀಲ್‌ಗಾಗಿ ಕಾರು ರಿವರ್ಸ್‌ ಮಾಡಲು ಹೋಗಿ 300 ಅಡಿ ಪ್ರಪಾತಕ್ಕೆ ಬಿದ್ದು ಪ್ರಾಣ ಕಳೆದುಕೊಂಡ ಯುವತಿ…

ರೀಲ್ಸ್​ ಮಾಡಲು ಹೋಗಿ 23 ವರ್ಷದ ಯುವತಿ ಪ್ರಾಣವನ್ನೇ ಕಳೆದುಕೊಂಡ ಘಟನೆ ನಡೆದಿದೆ. ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರದ 23 ವರ್ಷದ ಯುವತಿಯೊಬ್ಬಳು ದತ್ತ ಧಾಮ ದೇವಸ್ಥಾನ ಇರುವ ಬೆಟ್ಟದ ಬಳಿ ಸಾಮಾಜಿಕ ಮಾಧ್ಯಮಕ್ಕಾಗಿ ಕಾರಿನಲ್ಲಿ ಕುಳಿತು ರೀಲ್ ಮಾಡಲು ಪ್ರಯತ್ನಿಸುತ್ತಿದ್ದಾಗ ಕಾರು 300 ಅಡಿ ಆಳದ ಕಮರಿಗೆ ಬಿದ್ದು, ಅದರಲ್ಲಿದ್ದ ಯುವತಿ ಮೃತಪಟ್ಟಿದ್ದಾಳೆ ಎಂದು … Continued

ಅಜಿತ್ ಪವಾರ್ ಬಣದ 19 ಶಾಸಕರು ಪಕ್ಷ ಬದಲಿಸ್ತಾರೆ : ಶರದ್ ಪವಾರ್ ಮೊಮ್ಮಗ

ಮುಂಬೈ: ಮುಂಬರುವ ಮಹಾರಾಷ್ಟ್ರ ರಾಜ್ಯದ ವಿಧಾನಮಂಡಲದ ಮುಂಗಾರು ಅಧಿವೇಶನದ ನಂತರ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಆಡಳಿತಾರೂಢ ಎನ್‌ಸಿಪಿಯ 18 ​​ರಿಂದ 19 ಶಾಸಕರು ತಮ್ಮ ಪಕ್ಷವನ್ನು ಸೇರಲಿದ್ದಾರೆ ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಶರದ್‌ ಪವಾರ್‌ ಬಣ) ನಾಯಕ ರೋಹಿತ್ ಪವಾರ್ ಸೋಮವಾರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜುಲೈ 2023 ರಲ್ಲಿ … Continued

4 ಓವರ್‌ಗಳು, 4 ಮೇಡನ್‌ಗಳು, 3 ವಿಕೆಟ್‌ಗಳು…: T20 ವಿಶ್ವಕಪ್‌ ನಲ್ಲಿ ನೂತನ ದಾಖಲೆ ಸ್ಥಾಪಿಸಿದ ನ್ಯೂಜಿಲೆಂಡ್ ವೇಗದ ಬೌಲರ್‌…!

ನ್ಯೂಜಿಲೆಂಡ್ ವೇಗದ ಬೌಲರ್ ಲಾಕ್ ಫರ್ಗುಸನ್ ಪುರುಷರ T20 ವಿಶ್ವಕಪ್‌ನಲ್ಲಿ ನಾಲ್ಕಕ್ಕೆ ನಾಲ್ಕು ಮೇಡನ್ ಓವರ್‌ಗಳನ್ನು ಬೌಲ್ ಮಾಡಿದ ಮೊದಲ ಬೌಲರ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ… ಸೋಮವಾರ, T20 ವಿಶ್ವಕಪ್‌ 2024 ರ ತನ್ನ ಕೊನೆಯ ಗುಂಪು-ಹಂತದ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡದ ಪರವಾಗಿ ಬೌಲಿಂಗ್‌ ದಾಳಿಗೆ ಇಳಿದ ಲಾಕ್ ಫರ್ಗುಸನ್ ಅವರು ಪಪುವಾ ನ್ಯೂಗಿನಿ ವಿರುದ್ಧ … Continued

ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ : ಉಸ್ತುವಾರಿಗಳ ನೇಮಕ ಮಾಡಿದ ಬಿಜೆಪಿ

ನವದೆಹಲಿ : ವಿಧಾನಸಭೆ ಚುನಾವಣೆ ನಡೆಯಲಿರುವ ಮಹಾರಾಷ್ಟ್ರ, ಹರಿಯಾಣ, ಜಾರ್ಖಂಡ್ ಮತ್ತು ಜಮ್ಮು ಮತ್ತು ಕಾಶ್ಮೀರಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಸೋಮವಾರ ಪಕ್ಷದ ಚುನಾವಣಾ ಉಸ್ತುವಾರಿಗಳು ಮತ್ತು ಸಹ-ಪ್ರಭಾರಿಗಳನ್ನು ನೇಮಿಸಿದ್ದಾರೆ. ಬಿಜೆಪಿಯ ಹಿರಿಯ ನಾಯಕ ಮತ್ತು ಕೇಂದ್ರ ಸಚಿವ ಭೂಪೇಂದರ ಯಾದವ್ ಅವರನ್ನು ಮಹಾರಾಷ್ಟ್ರದ ಉಸ್ತುವಾರಿಯಾಗಿ ನೇಮಿಸಲಾಗಿದೆ ಮತ್ತು ಕೇಂದ್ರ ಸಚಿವ ಅಶ್ವಿನಿ … Continued

ವಿಪಕ್ಷ ನಾಯಕನಾಗಲು ಒಪ್ಪದ ರಾಹುಲ್ ಗಾಂಧಿ : ಕಾಂಗ್ರೆಸ್ಸಿನಲ್ಲಿ ಮುನ್ನೆಲೆಗೆ ಮೂವರ ಹೆಸರುಗಳು…!?

ನವದೆಹಲಿ : 18ನೇ ಲೋಕಸಭೆಯಲ್ಲಿ ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕರಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ ಎಂಬ ಬಲವಾದ ನಿರೀಕ್ಷೆಗಳ ಮಧ್ಯೆಯೇ ವಿರೋಧ ಪಕ್ಷದ ನಾಯಕನ ಜವಾಬ್ದಾರಿ ತೆಗೆದುಕೊಳ್ಳಲು ರಾಹುಲ್ ನಿರಾಕರಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಈ ಹಿನ್ನೆಲೆಯಲ್ಲಿ ಪಕ್ಷದ ನಾಯಕತ್ವ ಮೂರು ಹೆಸರುಗಳನ್ನು ಪರಿಗಣನೆಗೆ ತೆಗೆದುಕೊಂಡಿದೆ ಎನ್ನಲಾಗಿದೆ. … Continued

ರಾಯ್ಬರೇಲಿ ಲೋಕಸಭಾ ಕ್ಷೇತ್ರ ಉಳಿಸಿಕೊಂಡ ರಾಹುಲ್‌ ಗಾಂಧಿ : ವಯನಾಡಿನಿಂದ ತಂಗಿ ಪ್ರಿಯಾಂಕಾ ಗಾಂಧಿ ಸ್ಪರ್ಧೆ…!

ನವದೆಹಲಿ: ಎರಡು ಕ್ಷೇತ್ರಗಳಲ್ಲಿ ರಾಹುಲ್‌ ಗಾಂಧಿ ಯಾವ ಕ್ಷೇತ್ರವನ್ನು ಉಳಿಸಿಕೊಳ್ಳುತ್ತಾರೆ ಎಂಬ ಊಹಾಪೋಹಗಳಿಗೆ ಸೋಮವಾರ (ಜೂನ್‌ 17) ತೆರೆಬಿದ್ದಿದೆ. ರಾಹುಲ್ ಗಾಂಧಿ ತಮ್ಮ ಕುಟುಂಬದ ಭದ್ರಕೋಟೆಯಾದ ರಾಯ್‌ಬರೇಲಿ ಲೋಕಸಭಾ ಕ್ಷೇತ್ರವನ್ನು ಉಳಿಸಿಕೊಳ್ಳಲು ನಿರ್ಧರಿಸಿದ್ದು, ವಯನಾಡ ಕ್ಷೇತ್ರವನ್ನು ತೊರೆಯಲಿದ್ದಾರೆ. ಆದರೆ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಅವರು ವಯನಾಡಿನಿಂದ ಉಪ ಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದಾರೆ. ವಯಾನಾಡಿನಿಂದ ಪ್ರಿಯಾಂಕಾ ಗಾಂಧಿ … Continued

ಮನಕಲಕುವ ವೀಡಿಯೊ..| ಯು ಪಿ ಎಸ್ ಇ ಪರೀಕ್ಷೆಗೆ ತಡವಾಗಿ ಬಂದ ಯುವತಿ ; ಪ್ರವೇಶ ನಿರಾಕರಣೆ : ಪ್ರಜ್ಞೆ ತಪ್ಪಿದ ತಾಯಿ, ತಂದೆಯ ಗೋಳಾಟ

ನವದೆಹಲಿ : 2024 ನೇ ಸಾಲಿನ ಯುಪಿಎಸ್ಇ ಪರೀಕ್ಷೆ ನಿನ್ನೆ (ಜೂನ್ 16) ರಂದು ನಡೆದಿದ್ದು, ಅದೆಷ್ಟೋ ಅಭ್ಯರ್ಥಿಗಳು ಸಾವಿರಾರು ಕನಸುಗಳನ್ನು ಹೊತ್ತು ಪರೀಕ್ಷೆ ಬರೆದಿದ್ದಾರೆ. ಆದರೆ ಅಭ್ಯರ್ಥಿಯೊಬ್ಬರು ಪರೀಕ್ಷಾ ಕೇಂದ್ರಕ್ಕೆ ತಡವಾಗಿ ಬಂದ ಕಾರಣಕ್ಕೆ ಆಕೆಗೆ ಪರೀಕ್ಷೆ ಬರೆಯಲು ನಿರಾಕರಿಸಲಾಗಿದ್ದು, ಮಗಳ ಕನಸು ನುಚ್ಚು ನೂರಾಯಿತೆಂದು ಆಕೆಯ ಪೋಷಕರು ಆಘಾತಕ್ಕೊಳಗಾಗಿದ್ದಾರೆ. ಹೆತ್ತವರ ಗೋಳಾಟದ ಈ … Continued

ಕಾಂಚನಜುಂಗಾ ಎಕ್ಸ್‌ಪ್ರೆಸ್‌ ಗೆ ಗೂಡ್ಸ್ ರೈಲು ಡಿಕ್ಕಿ ; 15 ಮಂದಿ ಸಾವು, 60 ಜನರಿಗೆ ಗಾಯ

ಸಿಲಿಗುರಿ (ಪಶ್ಚಿಮ ಬಂಗಾಳ) : ಗೂಡ್ಸ್ ರೈಲೊಂದು ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 15 ಜನರು ಮೃತಪಟ್ಟಿದ್ದಾರೆ ಮತ್ತು 60 ಜನರು ಗಾಯಗೊಂಡಿದ್ದಾರೆ. ಈಶಾನ್ಯ ಫ್ರಂಟಿಯರ್ ರೈಲ್ವೆ ವ್ಯಾಪ್ತಿಗೆ ಒಳಪಡುವ ನಿಜಬರಿ ಮತ್ತು ರಂಗಪಾಣಿ ರೈಲು ನಿಲ್ದಾಣಗಳ ನಡುವೆ ಈ ಘಟನೆ ಸಂಭವಿಸಿದ್ದು, ಎಕ್ಸ್‌ಪ್ರೆಸ್ ರೈಲಿನ ಮೂರು ಕೋಚ್‌ಗಳು (ಎರಡು ಪಾರ್ಸೆಲ್ … Continued

ಕ್ರೈಸ್ತ ಧರ್ಮ ಗುರು ಪೋಪ್ ಫ್ರಾನ್ಸಿಸ್ ಜೊತೆಗಿನ ಮೋದಿ ಭೇಟಿ ಅಣಕಿಸಿದ ಕಾಂಗ್ರೆಸ್; ಭಾರೀ ಆಕ್ರೋಶದ ನಂತರ ಕ್ರೈಸ್ತರ ಕ್ಷಮೆಯಾಚನೆ

ನವದೆಹಲಿ : ಇಟಲಿಯಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕ್ರೈಸ್ತ ಧರ್ಮ ಗುರು ಪೋಪ್ ಫ್ರಾನ್ಸಿಸ್ ಅವರ ಭೇಟಿಯನ್ನು ಅಣಕಿಸಿ ಕಾಂಗ್ರೆಸ್ ಪಕ್ಷದ ಕೇರಳ ಘಟಕವು ಸಾಮಾಜಿಕ ಮಾಧ್ಯಮದಲ್ಲಿ ವ್ಯಂಗ್ಯಾತ್ಮಕ ಪೋಸ್ಟ್ ಮಾಡಿದ ನಂತರ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಈಗ ಕೇರಳ ಕಾಂಗ್ರೆಸ್‌ ಘಟಕವು ಕ್ರೈಸ್ತ ಸಮುದಾಯದ ಕ್ಷಮೆಯಾಚಿಸಿದೆ. ಅಳಿಸಲಾದ … Continued

ಈಗ ಕಾಲ ಪಕ್ವವಾಗಿದೆ..ರಾಜಕೀಯಕ್ಕೆ ಮರಳುವೆ ಎಂದು ಘೋಷಿಸಿದ ಮಾಜಿ ಸಿಎಂ ಜಯಲಲಿತಾ ಆಪ್ತೆ…

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ಅವರ ಆಪ್ತರಾದ ವಿ.ಕೆ. ಶಶಿಕಲಾ ಅವರು ತಮ್ಮ ರಾಜಕೀಯ ಪ್ರವೇಶದ ಘೋಷಣೆ ಮಾಡಿದ್ದಾರೆ. ಹಾಗೂ 2026ರ ಚುನಾವಣೆಯಲ್ಲಿ ಎಐಎಡಿಎಂಕೆಯನ್ನು ಮತ್ತೆ ಅಧಿಕಾರಕ್ಕೆ ತರುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ಎಐಎಡಿಎಂಕೆ ತನ್ನ ಇತ್ತೀಚಿನ ಚುನಾವಣಾ ಸೋಲಿನ ದೃಷ್ಟಿಯಲ್ಲಿ ಅದನ್ನು ಕ್ಷೀಣಿಸಿದೆ ಎಂದು … Continued