ಚೆಕ್-ಇನ್ ಬ್ಯಾಗೇಜ್‌ನಲ್ಲಿ ಅಡಗಿಸಿಟ್ಟಿದ್ದ 5 ಪ್ರಾಣಿಗಳನ್ನು ವಶಪಡಿಸಿಕೊಂಡ ಚೆನ್ನೈ ಕಸ್ಟಮ್ಸ್ ಅಧಿಕಾರಿಗಳು | ವೀಕ್ಷಿಸಿ

ಚೆನ್ನೈ: ಕಸ್ಟಮ್ಸ್ ಅಧಿಕಾರಿಗಳು ಬ್ಯಾಂಕಾಕ್‌ನಿಂದ ಬಂದ ಪ್ರಯಾಣಿಕರಿಂದ ಐದು ವಿದೇಶಿ ಪ್ರಾಣಿಗಳನ್ನು ವಶಪಡಿಸಿಕೊಂಡಿದ್ದಾರೆ. ಚೆಕ್-ಇನ್ ಬ್ಯಾಗೇಜ್‌ನೊಳಗೆ ಪ್ರಾಣಿಗಳನ್ನು ಕಳ್ಳಸಾಗಣೆ ಮಾಡಲಾಗಿದ್ದು, ಚೆನ್ನೈ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾಗಿದೆ. ಅಕ್ಟೋಬರ್ 23 ರಂದು ಐದು ಡ್ವಾರ್ಫ್ ಮತ್ತು ಕಾಮನ್ ಸ್ಪಾಟೆಡ್ ಕಸ್ಕಸ್ ಅನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ಚೆನ್ನೈ ಕಸ್ಟಮ್ಸ್ ಟ್ವೀಟ್‌ನಲ್ಲಿ ತಿಳಿಸಿದೆ. ವೀಡಿಯೊದಲ್ಲಿ, ಹಲವಾರು ಸಾಮಾನ್ಯ … Continued

ಮುಂಬೈ ಉದ್ಯಮಿಯಿಂದ 230 ಕೆಜಿ ಚಿನ್ನ ಸಮರ್ಪಣೆ: ಕೇದಾರನಾಥ ದೇಗುಲದ ಗೋಡೆಗಳಿಗೆ ಚಿನ್ನದ ಹಾಳೆಗಳ ಲೇಪನ

ಉತ್ತರಾಖಂಡದ ವಿಶ್ವವಿಖ್ಯಾತ ಶ್ರೀ ಕೇದಾರನಾಥ ದೇವಾಲಯದ ಗರ್ಭಗುಡಿಯ ಒಳಗಿನ ಗೋಡೆಗೆ ಈಗ ಚಿನ್ನದ ಹಾಳೆಗಳನ್ನು ಅಳವಡಿಸಲಾಗಿದೆ.. ದೀಪಾವಳಿಯ ಶುಭ ಸಮಯದಲ್ಲಿ ಕೇದಾರನಾಥನ ಗರ್ಭಗುಡಿಯ ಗೋಡೆಯನ್ನು ಚಿನ್ನದಿಂದ ಮಾಡಿದ ಹಾಳೆಗಳನ್ನು ಅಳವಡಿಸಲಾಗಿದ್ದು, ನಂತರ ಇದು ಭಕ್ತರ ಆಕರ್ಷಣೆಯ ಕೇಂದ್ರವಾಗಲಿದೆ. ಮುಂಬೈನ ಉದ್ಯಮಿಯೊಬ್ಬರು ಈ ಚಿನ್ನದ ಗೋಡೆಯನ್ನು ಮಾಡಲು ಸುಮಾರು 230 ಕೆಜಿ ಚಿನ್ನವನ್ನು ಸಮಪರ್ಣೆ ಮಾಡಿದ್ದಾರೆ. ಈ … Continued

ಕಳ್ಳನನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ದರೋಡೆ ನಿಲ್ಲಿಸಿದ ಮಹಾರಾಷ್ಟ್ರ ಸಚಿವ…!

ನವದೆಹಲಿ: ನಾಸಿಕ್ ಜಿಲ್ಲೆಯ ಮಾಲೆಗಾಂವ್‌ನಲ್ಲಿ ಬಂಗಲೆಗೆ ನುಗ್ಗಲು ಯತ್ನಿಸಿದ ದರೋಡೆಕೋರನನ್ನು ಬಂಧಿಸಲು ಮಹಾರಾಷ್ಟ್ರ ಸಚಿವ ದಾದಾ ಭೂಸೆ ಪೊಲೀಸರಿಗೆ ಸಹಾಯ ಮಾಡಿದ್ದಾರೆ. ಹಲವಾರು ವರದಿಗಳ ಪ್ರಕಾರ, ದರೋಡೆಕೋರನು ಬಂಗಲೆಗೆ ಪ್ರವೇಶಿಸಿ ನಕಲಿ ಗನ್ ತೋರಿಸಿ ಮಹಿಳೆಯನ್ನು ಬೆದರಿಸಿ ನಗದು, ಚಿನ್ನ ಮತ್ತು ಆಭರಣಗಳನ್ನು ಕದಿಯಲು ಪ್ರಯತ್ನಿಸಿದ್ದಾನೆ. ಆದಾಗ್ಯೂ, ಮಹಿಳೆಯ ಕಿರುಚಾಟವನ್ನು ಕೇಳಿದ ನಂತರ, ಸಚಿವ ಭೂಸೆ … Continued

ಒಂದು ವಾರಕ್ಕಿಂತ ಕಡಿಮೆ ಅವಧಿಯಲ್ಲಿ ಭಾರತದಲ್ಲಿ ಗೂಗಲ್‌ಗೆ ₹ 936 ಕೋಟಿ ರೂ.ಗಳ ಎರಡನೇ ದಂಡ ವಿಧಿಸಿದ ಸಿಸಿಐ

ನವದೆಹಲಿ: Play Store ನೀತಿಯ ಬಗ್ಗೆ ತನ್ನ ಪ್ರಬಲ ಸ್ಥಾನ ದುರುಪಯೋಗಪಡಿಸಿಕೊಂಡ ಕಾರಣಕ್ಕಾಗಿ ಗೂಗಲ್‌(Google)ಗೆ ಮಂಗಳವಾರ ವಾರದಲ್ಲಿ ಎರಡನೇ ಬಾರಿಗೆ ಭಾರತೀಯ ಸ್ಪರ್ಧಾತ್ಮಕ ಆಯೋಗ (CCI) ₹ 936.44 ಕೋಟಿ ದಂಡ ವಿಧಿಸಿದೆ. ಇದು ಒಟ್ಟು ದಂಡವನ್ನು ₹ 2,274 ಕೋಟಿಗೆ ಒಯ್ದಿದೆ. ಅಲ್ಲದೆ ಟೆಕ್‌ ದೈತ್ಯನಿಗೆ ಅನ್ಯಾಯದ ವಾಣಿಜ್ಯ ಅಭ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದನ್ನು ನಿಲ್ಲಿಸಿ ಎಂದು … Continued

ರಿಷಿ ಸುನಕ್ ಬ್ರಿಟನ್‌ನಲ್ಲಿ ಎತ್ತರ ಏರಿದ್ದರ ಕುರಿತು ಚಿದಂಬರಂ, ತರೂರ್ ಹೇಳಿಕೆಗಳನ್ನು ತಿರಸ್ಕರಿಸಿದ ಕಾಂಗ್ರೆಸ್‌

ನವದೆಹಲಿ: ಈ ಹಿಂದೆ ಹಲವು ಅಲ್ಪಸಂಖ್ಯಾತರು ರಾಷ್ಟ್ರಪತಿ ಮತ್ತು ಮುಖ್ಯಮಂತ್ರಿಗಳಾಗಿರುವುದರಿಂದ ಭಾರತವು ಬೇರೆ ದೇಶದಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಕಾಂಗ್ರೆಸ್ ಪಕ್ಷ ಮಂಗಳವಾರ ಹೇಳುವ ಮೂಲಕ ಪಕ್ಷದ ನಾಯಕರಾದ ಪಿ ಚಿದಂಬರಂ ಮತ್ತು ಶಶಿ ತರೂರ್‌ಗೆ ತಿರುಗೇಟು ನೀಡಿದೆ. ಅಲ್ಪಸಂಖ್ಯಾತರಿಂದ ಒಬ್ಬ ವ್ಯಕ್ತಿಯನ್ನು ಉನ್ನತ ಹುದ್ದೆಗೆ ಆಯ್ಕೆ ಮಾಡುವ ರಿಷಿ ಸುನಕ್ ಅವರ ಉದಾಹರಣೆಯನ್ನು … Continued

ಎಂಥಾ ಲೋಕವಯ್ಯಾ..: ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕಿ ಸಹಾಯಕ್ಕಾಗಿ ಅಂಗಲಾಚುತ್ತಿದ್ದರೆ, ವೀಡಿಯೊ ಮಾಡುವುದರಲ್ಲಿ ನಿರತರಾದ ಜನ…!

ಲಕ್ನೋ: ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕಿಯೊಬ್ಬಳು ಸಹಾಯಕ್ಕಾಗಿ ಯಾಚಿಸುತ್ತಿದ್ದರೆ, ಮಾನವೀಯತೆ ಮರೆತ ಜನರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಆಕೆಯ ದಾರುಣ ಸ್ಥಿತಿಯನ್ನು ಚಿತ್ರೀಕರಿಸುತ್ತಿದ್ದ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಕನೌಜ್‌ನ 13 ವರ್ಷದ ಬಾಲಕಿ ಅಕ್ಟೋಬರ್ 23 ರಂದು ಭಾನುವಾರ ತನ್ನ ಮನೆಯಿಂದ ನಾಪತ್ತೆಯಾದ ಗಂಟೆಗಳ ನಂತರ ಬಹು … Continued

ಮುಂಬೈ: ಬಾಟಲಿಯಲ್ಲಿ ಪಟಾಕಿ ಸಿಡಿಸಲು ಆಕ್ಷೇಪಿಸಿದ್ದಕ್ಕೆ ವ್ಯಕ್ತಿಯನ್ನು ಇರಿದು ಕೊಂದ 15 ವರ್ಷದ ಬಾಲಕ …!

ಮುಂಬೈ: ಗಾಜಿನ ಬಾಟಲಿಯಲ್ಲಿ ಪಟಾಕಿ ಸಿಡಿಸುವುದು ಬೇಡ ಎಂದು  ಆಕ್ಷೇಪಿಸಿದ ವ್ಯಕ್ತಿಯೊಬ್ಬನನ್ನು ಬಾಲಕ ಚಾಕುವಿನಿಂದ  ಇರಿದು ಕೊಂದಿರುವ ಘಟನೆ ಮುಂಬೈನಲ್ಲಿ ವರದಿಯಾಗಿದೆ. ಆರೋಪಿಗಳಲ್ಲಿ 14 ಮತ್ತು 15 ವರ್ಷದ ಇಬ್ಬರನ್ನು ಬಂಧಿಸಲಾಗಿದ್ದು, 12 ವರ್ಷದ ಮೂರನೇ ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಪಟ್ಟವರನ್ನು 21 ವರ್ಷದ ಸುನಿಲ್ ನಾಯ್ಡು ಎಂದು ಗುರುತಿಸಲಾಗಿದೆ. ಪೊಲೀಸರ … Continued

ಕೇರಳ: ಕುಲಪತಿಗಳು ಅಂತಿಮ ನಿರ್ಧಾರ ಕೈಗೊಳ್ಳುವವರೆಗೆ 9 ಉಪಕುಲಪತಿಗಳು ಮುಂದುವರಿಯಬಹುದು: ಕೇರಳ ಹೈಕೋರ್ಟ್‌ ತೀರ್ಪು

ತಿರುವನಂತಪುರಂ: ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ರಾಜೀನಾಮೆ ಕೋರಿ ಒಂಬತ್ತು ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳಿಗೆ ಶೋಕಾಸ್ ನೋಟಿಸ್ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್ ಸೋಮವಾರ ಕುಲಪತಿಗಳು ಅಂತಿಮ ಆದೇಶ ಹೊರಡಿಸುವವರೆಗೆ ತಮ್ಮ ಹುದ್ದೆಯಲ್ಲಿ ಮುಂದುವರಿಯಬಹುದು ಎಂದು ಹೇಳಿದೆ. ಅಂತಿಮ ಆದೇಶ ಹೊರಬೀಳುವವರೆಗೆ ಕಾನೂನು ಬದ್ಧವಾಗಿ ಹುದ್ದೆ ಮುಂದುವರಿಸಬಹುದು ಎಂದೂ ಹೈಕೋರ್ಟ್ ಹೇಳಿದೆ. ಭಾನುವಾರ ಸಂಜೆ … Continued

ಶಿಂಧೆ ಬಣದ 22 ಶಾಸಕರು ಬಿಜೆಪಿ ಸೇರಲಿದ್ದಾರೆ: ಸಾಮ್ನಾದಲ್ಲಿ ಹೇಳಿಕೊಂಡ ಉದ್ಧವ್ ನೇತೃತ್ವದ ಶಿವಸೇನೆ

ಮುಂಬೈ: ಏಕನಾಥ್ ಶಿಂಧೆ ನೇತೃತ್ವದ ಸೇನೆಯ 40 ಶಾಸಕರ ಪೈಕಿ 22 ಶಾಸಕರು ಶೀಘ್ರದಲ್ಲೇ ಬಿಜೆಪಿ ಸೇರಲಿದ್ದಾರೆ ಎಂದು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣವು ತನ್ನ ಮುಖವಾಣಿ ಸಾಮ್ನಾದಲ್ಲಿ ಹೇಳಿದೆ. ತನ್ನ ಸಾಪ್ತಾಹಿಕ ಅಂಕಣದಲ್ಲಿ, ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ ಅವರು ಬಿಜೆಪಿ ಮಾಡಿದ “ತಾತ್ಕಾಲಿಕ ವ್ಯವಸ್ಥೆ” ಎಂದು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ … Continued

ತಿರುಪತಿಯ ಎಸ್‌ವಿ ಪುರಂ ಟೋಲ್ ಪ್ಲಾಜಾದಲ್ಲಿ ವಿದ್ಯಾರ್ಥಿಗಳಿಂದ ಸಿಬ್ಬಂದಿ ಮೇಲೆ ಹಲ್ಲೆ : ಪರಿಸ್ಥಿತಿ ಉದ್ವಿಗ್ನ | ವೀಕ್ಷಿಸಿ

ಹೈದರಾಬಾದ್‌: ಆಂಧ್ರಪ್ರದೇಶದ ತಿರುಪತಿಯ ಟೋಲ್ ಪ್ಲಾಜಾದಲ್ಲಿ ಭಾನುವಾರ ತಮಿಳುನಾಡಿನ ಕಾನೂನು ಕಾಲೇಜಿನ ವಿದ್ಯಾರ್ಥಿಗಳನ್ನು ಪಾವತಿ ಸಂಬಂಧಿತ ಸಮಸ್ಯೆಯಿಂದಾಗಿ ನಿಲ್ಲಿಸಿದ ನಂತರ ಘರ್ಷಣೆ ಸಂಭವಿಸಿದೆ. ವಿದ್ಯಾರ್ಥಿಗಳು ಟೋಲ್ ಬೂತ್ ಸಿಬ್ಬಂದಿಯ ಮೇಲೆ ಹೆಲ್ಮೆಟ್‌ನಿಂದ ಹಲ್ಲೆ ನಡೆಸಿ, ಅಲ್ಲಿದ್ದ ಕೆಲವು ವಾಹನಗಳಿಗೆ ಹಾನಿ ಮಾಡಿದ್ದಾರೆ ಎಂದು ವರದಿಯಾಗಿದೆ. ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿ ಕಾನೂನು ವಿದ್ಯಾರ್ಥಿಗಳನ್ನು ಎದುರಿಸಿ, ಟೋಲ್ … Continued