ಜೈಪುರ-ಮುಂಬೈ ರೈಲಿನಲ್ಲಿ ನಾಲ್ವರನ್ನು ಗುಂಡಿಕ್ಕಿ ಕೊಂದ ರೈಲ್ವೇ ರಕ್ಷಣಾ ಪಡೆ ಜವಾನ

ಮುಂಬೈ: ಮಹಾರಾಷ್ಟ್ರದ ಪಾಲ್ಘರ್ ರೈಲು ನಿಲ್ದಾಣದ ಬಳಿ ಚಲಿಸುತ್ತಿದ್ದ  ಜೈಪುರ-ಮುಂಬೈ ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲಿನಲ್ಲಿ ರೈಲ್ವೇ ರಕ್ಷಣಾ ಪಡೆ (ಆರ್‌ಪಿಎಫ್) ಕಾನ್ಸ್ಟೇಬಲ್ ಸೋಮವಾರ ಮುಂಜಾನೆ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಸೇರಿದಂತೆ ನಾಲ್ವರನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೆಳಗಿನ ಜಾವ 5 ಗಂಟೆಯ ಸುಮಾರಿಗೆ ಕಾನ್ಸ್‌ಟೇಬಲ್ ತನ್ನ ಸ್ವಯಂಚಾಲಿತ ಗನ್‌ ನಿಂದ ಗುಂಡು ಹಾರಿಸಿ  … Continued

ಮೊಹರಂ ಮೆರವಣಿಗೆ ವೇಳೆ ತ್ರಿವರ್ಣ ಧ್ವಜ ವಿರೂಪಗೊಳಿಸಿದ ಆರೋಪದ ಮೇಲೆ 18 ಮಂದಿ ವಿರುದ್ಧ ಪ್ರಕರಣ ದಾಖಲು

ರಾಂಚಿ: ಜಾರ್ಖಂಡ್‌ನ ಪಲಮು ಜಿಲ್ಲೆಯಲ್ಲಿ ಮೊಹರಂ ಮೆರವಣಿಗೆ ವೇಳೆ ರಾಷ್ಟ್ರಧ್ವಜವನ್ನು ವಿರೂಪ ಮಾಡಿದ ಆರೋಪದ ಮೇಲೆ 18 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ರಾಜ್ಯ ರಾಜಧಾನಿ ರಾಂಚಿಯಿಂದ ಸುಮಾರು 175 ಕಿಲೋಮೀಟರ್ ದೂರದಲ್ಲಿರುವ ಚೈನ್‌ಪುರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ ಮೊಹರಂ ಹಬ್ಬದ ಅಂಗವಾಗಿ ಶಹಪುರ್, ಕಲ್ಯಾಣಪುರ … Continued

ಮದ್ಯವ್ಯಸನಿಯಾಗಿದ್ದು ನನ್ನ ಜೀವನದಲ್ಲಿ ಮಾಡಿದ ದೊಡ್ಡ ತಪ್ಪು : ಸೂಪರ್‌ ಸ್ಟಾರ್‌ ರಜನಿಕಾಂತ

ರಜನಿಕಾಂತ್ ಅಭಿನಯದ ಜೈಲರ್ ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಆಕ್ಷನ್ ಥ್ರಿಲ್ಲರ್ ಆಗಸ್ಟ್ 10 ರಂದು ತೆರೆಗೆ ಬರಲು ಸಿದ್ಧವಾಗಿದೆ. ಚಿತ್ರ ಬಿಡುಗಡೆಗೆ ಮುಂಚಿತವಾಗಿ, ತಯಾರಕರು ಚೆನ್ನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಡಿಯೊ ಬಿಡುಗಡೆ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಕಾರ್ಯಕ್ರಮಕ್ಕೆ ನೆರೆದಿದ್ದ ಸಾವಿರಾರು ಅಭಿಮಾನಿಗಳು ಕೇಕೆ … Continued

ಮೂರು ವರ್ಷದಲ್ಲಿ 13 ಲಕ್ಷಕ್ಕೂ ಹೆಚ್ಚು ಹುಡುಗಿಯರು, ಮಹಿಳೆಯರು ನಾಪತ್ತೆ : ಸರ್ಕಾರಿ ಅಂಕಿಅಂಶ

ನವದೆಹಲಿ: 2019 ಮತ್ತು 2021 ರ ನಡುವಿನ ಮೂರು ವರ್ಷಗಳಲ್ಲಿ ದೇಶದಲ್ಲಿ 13.13 ಲಕ್ಷಕ್ಕೂ ಹೆಚ್ಚು ಹುಡುಗಿಯರು ಮತ್ತು ಮಹಿಳೆಯರು ನಾಪತ್ತೆಯಾಗಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯದ ಅಂಕಿ ಅಂಶವು ತಿಳಿಸಿದೆ. ಮಧ್ಯಪ್ರದೇಶದಲ್ಲಿ ಸುಮಾರು ಎರಡು ಲಕ್ಷದಷ್ಟು ಹುಡುಗಿಯರು ಮತ್ತು ಮಹಿಳೆಯರು ನಾಪತ್ತೆಗಾಗಿದ್ದು ಪ್ರಥಮ ಸ್ಥಾನದಲ್ಲಿದೆ. ಪಶ್ಚಿಮ ಬಂಗಾಳವು ನಂತರದ ಸ್ಥಾನದಲ್ಲಿದೆ. ಅಂಕಿಅಂಶಗಳನ್ನು ಕಳೆದ ವಾರ … Continued

ಅಫ್ಘಾನಿಸ್ತಾನದಲ್ಲಿ ಸಂಗೀತ ‘ಅನೈತಿಕ’ : ಸಂಗೀತ ವಾದ್ಯ-ಪರಿಕರಗಳಿಗೆ ಬೆಂಕಿ ಹಚ್ಚಿದ ತಾಲಿಬಾನಿಗಳು…!

ಹೆರಾತ್ : ಅಫ್ಘಾನಿಸ್ತಾನದ ಉಪ ಸಚಿವಾಲಯದ ಅಧಿಕಾರಿಗಳು ವಾರಾಂತ್ಯದಲ್ಲಿ ಹೆರಾತ್ ಪ್ರಾಂತ್ಯದಲ್ಲಿ ಸಂಗೀತವನ್ನು ಅನೈತಿಕವೆಂದು ಪರಿಗಣಿಸಿ ವಶಪಡಿಸಿಕೊಂಡ ಸಂಗೀತ ಉಪಕರಣಗಳು ಮತ್ತು ಸಲಕರಣೆಗಳ ಬೆಂಕಿ ಹಚ್ಚಿದ್ದಾರೆ. ಸಂಗೀತವನ್ನು ಪ್ರಚಾರ ಮಾಡುವುದು ನೈತಿಕ ಭ್ರಷ್ಟಾಚಾರಕ್ಕೆ ಕಾರಣವಾಗುತ್ತದೆ ಮತ್ತು ಅದನ್ನು ನುಡಿಸುವುದರಿಂದ ಯುವಕರು ದಾರಿ ತಪ್ಪುತ್ತಾರೆ” ಎಂದು ಸದ್ಗುಣ ಪ್ರಚಾರದ ಸಚಿವಾಲಯದ ಹೆರಾತ್ ವಿಭಾಗದ ಮುಖ್ಯಸ್ಥ ಅಜೀಜ್ ಅಲ್-ರಹಮಾನ್ … Continued

‘ಕ್ಷಮಿಸು ಮಗಳೇ’: 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಕೊಂದ ನಂತರ ಕೇರಳ ಪೊಲೀಸರ ಕ್ಷಮೆಯಾಚನೆ

ಎರ್ನಾಕುಲಂ : ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಐದು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಕತ್ತು ಹಿಸುಕಿ ಕೊಂದ ನಂತರ ಕೇರಳ ಪೊಲೀಸರು ಶನಿವಾರ ಎಕ್ಸ್‌ (ಹಳೆಯ ಟ್ವಿಟರ್‌)ನಲ್ಲಿ ಕ್ಷಮೆಯಾಚಿಸಿದ್ದಾರೆ. ಶುಕ್ರವಾರ ಬಾಲಕಿ ನಾಪತ್ತೆಯಾಗಿದ್ದು, ರಾತ್ರಿ ನಡೆದ ಶೋಧ ಕಾರ್ಯಾಚರಣೆಯಲ್ಲಿ ಸಮೀಪದ ಆಲುವಾದಲ್ಲಿನ ಸ್ಥಳೀಯ ಮಾರುಕಟ್ಟೆಯ ಹಿಂಭಾಗದ ಜವುಗು ಪ್ರದೇಶದಲ್ಲಿ ಗೋಣಿಚೀಲದಲ್ಲಿ ಎಸೆದಿದ್ದ ಐದು … Continued

ಕೊಲೆ ಸಾಕ್ಷಿ ಹತ್ಯೆ ಪ್ರಕರಣದಲ್ಲಿ ಗ್ಯಾಂಗ್‌ಸ್ಟರ್‌ ಅತೀಕ್ ಅಹ್ಮದ್ ವಕೀಲನನ್ನು ಬಂಧಿಸಿದ ಪೊಲೀಸರು

ನವದೆಹಲಿ : ದೇಶಾದ್ಯಂತ ಬಿಎಸ್‌ಪಿ ಮಾಜಿ ಶಾಸಕ ರಾಜು ಪಾಲ್‌ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿ ಉಮೇಶ ಪಾಲ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಗೀಡಾದ ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ನ ವಕೀಲರನ್ನು ಉತ್ತರ ಪ್ರದೇಶ ಪೊಲೀಸರು ಇಂದು, ಭಾನುವಾರ ಬಂಧಿಸಿದ್ದಾರೆ. ಶೂಟರ್ ಉಮೇಶ್ ಪಾಲ್ ಇರುವ ಸ್ಥಳದ ಮಾಹಿತಿಯನ್ನು ವಕೀಲ ವಿಜಯ ಮಿಶ್ರಾ ನೀಡಿದ್ದರು ಎಂದು ಪೊಲೀಸ್ … Continued

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ನಾಳೆ (ಜುಲೈ 31) ಕೊನೆ ದಿನ

ಬೆಂಗಳೂರು : 2023-24ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ನಾಳೆ (ಜುಲೈ 31) ಆಗಿದೆ. ಈ ವರ್ಷ ಗಡುವನ್ನು ವಿಸ್ತರಿಸಲಾಗುವುದಿಲ್ಲ ಎಂದು ಸರ್ಕಾರ ಈಗಾಗಲೇ ಸೂಚಿಸಿದೆ. ಹೀಗಾಗಿ ನಾಳೆಯೊಳಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಬೇಕಿದೆ. ಈ ಬಾರಿ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ನ ಲ್ಲಿ ಯಾವುದೇ ಪ್ರಮುಖ ದೋಷಗಳು ಕಂಡುಬಂದಿಲ್ಲ, ಜುಲೈ 27 ರವರೆಗೆ … Continued

ಸಿಂಗಾಪುರದ 7 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋ

ಶ್ರೀಹರಿಕೋಟಾ : ಇತ್ತೀಚಿಗಷ್ಟೆ ಚಂದ್ರಯಾನ-3 ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿರುವ ಇಸ್ರೋ, ಸಿಂಗಾಪುರದ ಏಳು ಉಪಗ್ರಹಗಳನ್ನು ಪಿಎಸ್​ಎಲ್‌ವಿ- ಸಿ56 ರಾಕೆಟ್ ಮೂಲಕ ಇಂದು, ಭಾನುವಾರ ಬೆಳಿಗ್ಗೆ 6:30ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಿದೆ. ಗಗನಕ್ಕೆ ಹಾರಿದ ಏಳು ಉಪಗ್ರಹಗಳಲ್ಲಿ ಇಸ್ರೇಲ್​​ ವಿಜ್ಞಾನಿಗಳು ಸಿದ್ಧಪಡಿಸಿರುವ ಡಿಎಸ್​​-ಸಿಂಥೆಟಿಕ್​ ಅಪೆರ್ಚರ್​ ಏರೋಸ್ಪೇಸ್​​ ಎಂಬ ಉಪಗ್ರಹ … Continued

ಥಾಯ್ಲೆಂಡ್‌ನಿಂದ ಕಳ್ಳಸಾಗಣೆಯಾಗುತ್ತಿದ್ದ 306 ಜೀವಂತ ವಿದೇಶಿ ಪ್ರಾಣಿಗಳನ್ನು ವಶಪಡಿಸಿಕೊಂಡ ಡಿಆರ್‌ಐ

ಮುಂಬೈ : ಮುಂಬೈ ವಲಯ ಘಟಕದ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್‌ಐ) ಥಾಯ್ಲೆಂಡ್‌ನಿಂದ ಮುಂಬೈನ ಏರ್ ಕಾರ್ಗೋ ಕಾಂಪ್ಲೆಕ್ಸ್ ಮೂಲಕ ಭಾರತಕ್ಕೆ ಕಳ್ಳಸಾಗಣೆಯಾಗುತ್ತಿದ್ದ 306 ಜೀವಂತ ವಿದೇಶಿ ಪ್ರಾಣಿಗಳನ್ನು ಯಶಸ್ವಿಯಾಗಿ ರಕ್ಷಿಸಿದೆ. ಇದರಲ್ಲಿ ಅಳಿವಿನಂಚಿನಲ್ಲಿರುವ ಕಾಡು ಪ್ರಾಣಿಗಳು ಸೇರಿದ್ದು, ಇದು ಅಂತಾರಾಷ್ಟ್ರೀಯ ವ್ಯಾಪಾರದ ಒಪ್ಪಂದವನ್ನು ಉಲ್ಲಂಘಿಸಿದೆ. ಜುಲೈ 28 ರಂದು ಮುಂಜಾನೆ 4 ಗಂಟೆಗೆ … Continued