ರಾಹುಲ್‌ ಗಾಂಧಿ ಸ್ಪರ್ಧಿಸಿರುವ ವಯನಾಡಿನಲ್ಲಿ ಸುಲ್ತಾನ್‌ ಬತ್ತೇರಿ ಸದ್ದು : ಗೆದ್ದು ಬಂದ್ರೆ ಪಟ್ಟಣದ ಹೆಸರು ಬದಲಾಯಿಸ್ತೇವೆ ಎಂದ ಬಿಜೆಪಿ ಅಭ್ಯರ್ಥಿ

ವಯನಾಡು (ಕೇರಳ) : ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸ್ಪರ್ಧಿಸಿರುವ ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಈಗ ಸುಲ್ತಾನ್‌ ಬತ್ತೇರಿ ಹೆಸರು ಈಗ ಚರ್ಚೆಯಲ್ಲಿದೆ. ರಾಹುಲ್‌ ಗಾಂಧಿ ಎದುರು ಕಣಕ್ಕಿಳಿದಿರುವ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್‌ ಅವರು ನಾನು ಗೆದ್ದರೆ ಸುಲ್ತಾನ್‌ ಬತ್ತೇರಿ ಪಟ್ಟಣದ ಹೆಸರನ್ನು ಗಣಪತಿ ವಟ್ಟಂ ಎಂದು ಬದಲಾಯಿಸುತ್ತೇನೆ. ಇದೇ ನನ್ನ ಮೊದಲ … Continued

ತಾಯಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲೂ ನನ್ನನ್ನು ಬಿಡಲಿಲ್ಲ : ಕಾಂಗ್ರೆಸ್ಸಿನ ‘ಸರ್ವಾಧಿಕಾರಿ’ ಆರೋಪಕ್ಕೆ ತುರ್ತು ಪರಿಸ್ಥಿತಿ ಕರಾಳತೆ ನೆನಪಿಸಿದ ರಾಜನಾಥ ಸಿಂಗ್‌

ನವದೆಹಲಿ: ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಗುರುವಾರ ಪ್ರತಿಪಕ್ಷಗಳ ಮೇಲೆ ಭಾವನಾತ್ಮಕ ವಾಗ್ದಾಳಿ ನಡೆಸಿದರು. ಆಡಳಿತಾರೂಢ ಭಾರತೀಯ ಜನತಾ ಪಕ್ಷವು “ಅಘೋಷಿತ ತುರ್ತು ಪರಿಸ್ಥಿತಿ” ಅನ್ನು ಹೇರಿದೆ ಎಂದು ಆಗಾಗ್ಗೆ ಆರೋಪಿಸಿದೆ. ಆದರೆ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ ಸಂದರ್ಭದಲ್ಲಿ ಜೈಲಿನಲ್ಲಿದ್ದಾಗ ತನ್ನ ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸದಂತೆ ತನಗೆ ನಿರ್ಬಂಧಿಸಲಾಗಿತ್ತು ಎಂದು … Continued

ಮಲಸಹೋದರನಿಂದಲೇ ಹಾರ್ದಿಕ್ ಪಾಂಡ್ಯಗೆ 4.3 ಕೋಟಿ ವಂಚನೆ ; ಬಂಧನ

ಭಾರತೀಯ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಮತ್ತು ಅವರ ಸಹೋದರ ಕೃನಾಲ್ ಪಾಂಡ್ಯ ಅವರನ್ನು ವಂಚಿಸಿದ ಆರೋಪದ ಮೇಲೆ ವ್ಯಕ್ತಿಯೋರ್ವನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಸಹೋದರರಿಗೆ 4.3 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಹಾರ್ದಿಕ್ ಪಾಂಡ್ಯ ಅವರ ಮಲ ಸಹೋದರ ವೈಭವ ಪಾಂಡ್ಯ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. 37 ವರ್ಷದ ವೈಭವ … Continued

ದೆಹಲಿ ಮದ್ಯ ನೀತಿ ಪ್ರಕರಣ : ಇ.ಡಿ. ನಂತರ ಕೆ. ಕವಿತಾ ಅವರನ್ನು ಬಂಧಿಸಿದ ಸಿಬಿಐ

ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಶುಕ್ರವಾರ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ ಕವಿತಾ ಅವರನ್ನು ಜೈಲಿನಲ್ಲಿಯೇ ಬಂಧಿಸಿದೆ. ಕವಿತಾ ಪ್ರಸ್ತುತ ದೆಹಲಿಯ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಶನಿವಾರ ಆಕೆಯನ್ನು ಸಿಬಿಐ ಜೈಲಿನೊಳಗೆ ವಿಚಾರಣೆಗೊಳಪಡಿಸಿತ್ತು. ಜಾರಿ ನಿರ್ದೇಶನಾಲಯ (ಇಡಿ) ಅವರನ್ನು ಬಂಧಿಸಿದ ನಂತರ … Continued

ಶಾಲಾ ಬಸ್ ಪಲ್ಟಿಯಾಗಿ 6 ಮಕ್ಕಳು ಸಾವು

ಹರಿಯಾಣದ ನರ್ನಾಲ್ ನಲ್ಲಿ ಗುರುವಾರ ಬೆಳಗ್ಗೆ ಶಾಲಾ ಬಸ್ ಪಲ್ಟಿಯಾದ ಪರಿಣಾಮ ಆರು ಮಕ್ಕಳು ಸಾವಿಗೀಡಾಗಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಜಿಎಲ್ ಪಬ್ಲಿಕ್ ಸ್ಕೂಲ್ ಗೆ ಸೇರಿದ ಬಸ್ ಕನಿನಾದ ಉನ್ಹಾನಿ ಗ್ರಾಮದ ಬಳಿ ಪಲ್ಟಿಯಾಗಿದೆ. ಈದ್-ಉಲ್-ಫಿತರ್ ರಜೆಯ ಹೊರತಾಗಿಯೂ ಶಾಲೆಯು ಕಾರ್ಯನಿರ್ವಹಿಸುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲಾಡಳಿತದ ಪ್ರಕಾರ, ಗಾಯಗೊಂಡ … Continued

ರಾಮನವಮಿಗೂ ಮುನ್ನ ಅಯೋಧ್ಯೆ ರಾಮಮಂದಿರಕ್ಕೆ 7 ಕೆಜಿ ಚಿನ್ನದಿಂದ ತಯಾರಿಸಿದ ರಾಮಾಯಣ ಪುಸ್ತಕ ಸಮರ್ಪಿಸಿದ ನಿವೃತ್ತ ಐಎಎಸ್‌ ಅಧಿಕಾರಿ..

ರಾಮನವಮಿಗೆ ಕೆಲ ದಿನಗಳ ಮುಂಚೆ ಅಯೋಧ್ಯೆಯ ರಾಮಮಂದಿರಕ್ಕೆ ಚಿನ್ನದ ರಾಮಚರಿತಮಾನಸವನ್ನು ಸಮರ್ಪಿಸಲಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾದ ನಂತರ ಇದು ಮೊದಲ ರಾಮನವಮಿ ಆಚರಣೆಯಾಗಿದೆ. ಈ ಶುಭ ಸಂದರ್ಭದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮೀ ನಾರಾಯಣ್ ಅವರು ಬಾಲ ರಾಮನಿಗೆ ಸುವರ್ಣ ರಾಮಾಯಣವನ್ನು ಉಡುಗೊರೆಯಾಗಿ ನೀಡಿದ್ದಾರೆ. ಚಿನ್ನದಲ್ಲಿ ಸ್ಕ್ರಿಪ್ಟ್ ಮಾಡಲಾದ ರಾಮಚರಿತಮಾನಸವನ್ನು ಮಾಜಿ ಐಎಎಸ್ ಅಧಿಕಾರಿ … Continued

ಕೇಜ್ರಿವಾಲ್ ಆಪ್ತ ಕಾರ್ಯದರ್ಶಿಯನ್ನು ಸೇವೆಯಿಂದ ವಜಾ ಮಾಡಿದ ವಿಜಿಲೆನ್ಸ್

ನವದೆಹಲಿ: ಜಾರಿ ನಿರ್ದೇಶನಾಲಯದಿಂದ (ಇ.ಡಿ) ಬಂಧನಕ್ಕೆ ಒಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ ಅವರನ್ನು ಸೇವೆಯಿಂದ ವಜಾಗೊಳಿಸಿ ವಿಜಿಲೆನ್ಸ್ ನಿರ್ದೇಶನಾಲಯ (ಡಿಒವಿ) ಆದೇಶ ಹೊರಡಿಸಿದೆ. 2007ರ ಪ್ರಕರಣವನ್ನು ಉಲ್ಲೇಖಿಸಿ ವಿಜಿಲೆನ್ಸ್‌ನ ವಿಶೇಷ ಕಾರ್ಯದರ್ಶಿ ರಾಜಶೇಖರ ಆದೇಶ ಹೊರಡಿಸಿದ್ದಾರೆ. “ಸಕ್ಷಮ ಪ್ರಾಧಿಕಾರವು 1965 ರ ಕೇಂದ್ರ ನಾಗರಿಕ ಸೇವೆಗಳ (ತಾತ್ಕಾಲಿಕ … Continued

ಹಾಳು ಬಾವಿಗೆ ಬಿದ್ದಿದ್ದ ಬೆಕ್ಕಿನ ಪ್ರಾಣ ಉಳಿಸಲು ಹೋಗಿ ಜೀವ ಕಳೆದುಕೊಂಡ ಐವರು..!

ಅಹ್ಮದ್‌ನಗರ: ಬಾವಿಗೆ ಬಿದ್ದ ಬೆಕ್ಕಿನ ಪ್ರಾಣ ಉಳಿಸುವ ಪ್ರಯತ್ನದಲ್ಲಿ ಒಂದೇ ಕುಟುಂಬದ ಐವರು ಸಾವಿಗೀಡಾದ ಘಟನೆ ಮಹಾರಾಷ್ಟ್ರದ ಅಹ್ಮದ್‌ ನಗರ ಜಿಲ್ಲೆಯಲ್ಲಿ ನಡೆದಿದೆ. ನೆವಾಸ ತಾಲೂಕಿನ ವಾಕಡಿ ಪ್ರದೇಶದಲ್ಲಿ ಏಪ್ರಿಲ್ 9, ಮಂಗಳವಾರ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಬಾವಿಯಲ್ಲಿ ಸಿಲುಕಿದ್ದ ಬೆಕ್ಕನ್ನು ಉಳಿಸುವ ಪ್ರಯತ್ನದಲ್ಲಿ 6 ಮಂದಿ ಒಬ್ಬರ ನಂತರ ಒಬ್ಬರು ಬಾವಿಗೆ … Continued

ಸಚಿವ ಸ್ಥಾನ-ಎಎಪಿಗೆ ದೆಹಲಿ ಸಚಿವ ರಾಜಕುಮಾರ ಆನಂದ ರಾಜೀನಾಮೆ

ನವದೆಹಲಿ: ದೆಹಲಿಯ ಸಮಾಜ ಕಲ್ಯಾಣ ಇಲಾಖೆ ಸಚಿವ ರಾಜಕುಮಾರ ಆನಂದ ಅವರು ಬುಧವಾರ ತಮ್ಮ ಸಚಿವ ಸ್ಥಾನಕ್ಕೆ ಹಾಗೂ ಆಮ್ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಮದ್ಯ ನೀತಿ ಪ್ರಕರಣದ ಸ್ಪಷ್ಟ ಉಲ್ಲೇಖ ನೀಡಿರುವ ದೆಹಲಿ ಸಚಿವ ರಾಜಕುಮಾರ ಆನಂದ ಅವರು ಬುಧವಾರ ಆಮ್ ಆದ್ಮಿ ಪಕ್ಷದ ಭ್ರಷ್ಟಾಚಾರದ ನೀತಿಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿ ಪಕ್ಷದ … Continued

ಹಾದಿ ತಪ್ಪಿಸುವ ಜಾಹೀರಾತು: ‘ನಾವೇನು ಕುರುಡರಲ್ಲ’ ; ಬಾಬಾ ರಾಮದೇವ ‘ಭೇಷರತ್ ಕ್ಷಮೆ’ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಪತಂಜಲಿ ಸಂಸ್ಥೆಯ ಹಾದಿ ತಪ್ಪಿಸುವ ಜಾಹಿರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ಪತಂಜಲಿ ಸಂಸ್ಥಾಪಕರಾದ ಯೋಗ ಗುರು ಬಾಬಾ ರಾಮದೇವ ಮತ್ತು ಆಚಾರ್ಯ ಬಾಲಕೃಷ್ಣ ಅವರು ಸಲ್ಲಿಸಿದ ಮತ್ತೊಂದು ಬೇಷರತ್‌ ಕ್ಷಮೆಯಾಚನೆಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. “ನಾವು ಕುರುಡರಲ್ಲ” ಮತ್ತು ಈ ಪ್ರಕರಣದಲ್ಲಿ “ಉದಾರವಾಗಿರಲು ಬಯಸುವುದಿಲ್ಲ” ಎಂದು ಹೇಳಿ ಅದನ್ನು ತಿರಸ್ಕರಿಸಿದೆ. ಇಷ್ಟು ದಿನ ಪತಂಜಲಿ ವಿರುದ್ಧ … Continued