ಜೆಡಿಯು ತೊರೆದು ಮೂರನೇ ಬಾರಿಗೆ ಸ್ವಂತ ಪಕ್ಷ ಸ್ಥಾಪಿಸಿದ ಉಪೇಂದ್ರ ಕುಶ್ವಾಹ

ಪಾಟ್ನಾ: ಉಪೇಂದ್ರ ಕುಶ್ವಾಹಾ ಸೋಮವಾರ (ಫೆಬ್ರವರಿ 20) ಜನತಾ ದಳ (ಯುನೈಟೆಡ್) ತೊರೆದು ರಾಷ್ಟ್ರೀಯ ಲೋಕ ಜನತಾ ದಳ ಎಂಬ ತಮ್ಮದೇ ಆದ ಪಕ್ಷವನ್ನು ಸ್ಥಾಪಿಸುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ ಅವರೊಂದಿಗಿನ ಸಂಬಂಧ ಹಳಸಿದ ನಂತರ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಕುಶ್ವಾಹಾ ಅವರು ಜೆಡಿಯು ತೊರೆದು ತಮ್ಮದೇ ಆದ ಪಕ್ಷವನ್ನು ಸ್ಥಾಪಿಸುತ್ತಿರುವುದು … Continued

ಸೇನಾ ವ್ಯಾಪ್ತಿ ಮೀರಿ ಭಾರತದೊಂದಿಗೆ ಮಾತುಕತೆ ಪಾಕಿಸ್ತಾನದ ಇಂದಿನ ಅಗತ್ಯ: ಪಾಕ್‌ ಮಾಜಿ ಸೇನಾಧಿಕಾರಿ

ಇಸ್ಲಾಮಾಬಾದ್ : ಭಾರತದೊಂದಿಗೆ ಮಾತುಕತೆ ಪಾಕಿಸ್ತಾನದ ಇಂದಿನ ಅಗತ್ಯ ಎಂದು ಪಾಕಿಸ್ತಾನದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ (ISPR) ಮಾಜಿ ಮುಖ್ಯಸ್ಥ ಅಥರ್ ಅಬ್ಬಾಸ್ ಹೇಳಿದ್ದಾರೆ. “ನೀವು ಮುಂದುವರಿಯುವ ಮಾರ್ಗವನ್ನು [ಕೇವಲ] ಸೇನೆಗೆ ಬಿಟ್ಟರೆ, ಯಾವುದೇ ಮುನ್ನಡೆ ಇರುವುದಿಲ್ಲ. ಅದು ಒಂದು ಹೆಜ್ಜೆ ಮುಂದೆ ಮತ್ತು ಎರಡು ಹೆಜ್ಜೆ ಹಿಂದಕ್ಕೆ ಹೋದಂತೆ ಇರುತ್ತದೆ ಎಂದು ಅವರು ಮಾರ್ಮಿಕವಾಗಿ … Continued

ಶಿವಸೇನೆಯ ಹೆಸರು, ಚಿಹ್ನೆ ಕಳೆದುಕೊಂಡ ನಂತರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಉದ್ಧವ್ ಠಾಕ್ರೆ

ಮುಂಬೈ: ತಮ್ಮ ಪ್ರತಿಸ್ಪರ್ಧಿ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣಕ್ಕೆ ಶಿವಸೇನೆ ಹೆಸರು ಮತ್ತು ಚಿಹ್ನೆಯನ್ನು ನೀಡುವ ಚುನಾವಣಾ ಆಯೋಗದ ನಿರ್ಧಾರವನ್ನು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ನೇತೃತ್ವದ ಪೀಠದ ಮುಂದೆ ಉದ್ಧವ್‌ ಠಾಕ್ರೆ … Continued

ಹೊಸ ಸರ್ವೆ ನಂತರ 7,000ಕ್ಕೂ ಹೆಚ್ಚು ಹೊಸ ಅಜ್ಞಾತ ದ್ವೀಪಗಳನ್ನು ಪತ್ತೆ ಮಾಡಿದ ಜಪಾನ್‌…!

ಕ್ಯೋಡೋ ನ್ಯೂಸ್ ಪ್ರಕಾರ, 1987ರ ನಂತರ ಜಪಾನ್‌ ಸರ್ಕಾರವು ತನ್ನ ಪ್ರಾದೇಶಿಕ ಜಲಪ್ರದೇಶದಲ್ಲಿ ಮೊದಲ ಸಮೀಕ್ಷೆಯನ್ನು ನಡೆಸಿದ ನಂತರ ಜಪಾನ್‌ನಲ್ಲಿನ ಅಧಿಕೃತ ದ್ವೀಪಗಳ ಸಂಖ್ಯೆಯು 6,852 ರಿಂದ 14,125 ಕ್ಕೆ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ. ಅಂದರೆ ಹೊಸದಾಗಿ 7,273 ದ್ವೀಪಗಳನ್ನು ಪತ್ತೆ ಮಾಡಿದೆ. ಜಪಾನ್, ಸುಮಾರು 1,46,000 ಚದರ ಮೈಲುಗಳಷ್ಟು ಭೂಪ್ರದೇಶವನ್ನು ಹೊಂದಿರುವ ಪರ್ವತ ರಾಷ್ಟ್ರವಾಗಿದ್ದು, ಪೆಸಿಫಿಕ್ … Continued

ಎಂಥ ಲೋಕವಯ್ಯಾ…47 ವರ್ಷದ ವ್ಯಕ್ತಿಯ ಮದುವೆಯ ಪ್ರಸ್ತಾಪ ತಿರಸ್ಕರಿಸಿದ್ದಕ್ಕೆ 16 ವರ್ಷದ ಬಾಲಕಿ ಮೇಲೆ ಹಲ್ಲೆ ನಡೆಸಿ, ಕೂದಲು ಹಿಡಿದು ರಸ್ತೆಯಲ್ಲಿ ಎಳೆದೊಯ್ದ ವ್ಯಕ್ತಿ: ದೃಶ್ಯ ವೀಡಿಯೊದಲ್ಲಿ ಸೆರೆ

ರಾಯ್‌ಪುರ: ಛತ್ತೀಸ್‌ಗಢದ ರಾಯ್‌ಪುರದ ಗುಧಿಯಾರಿ ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿ ರಸ್ತೆಯಲ್ಲಿ ಎಳೆದೊಯ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದ ಗುಧಿಯಾರಿ ಪ್ರದೇಶದಲ್ಲಿ ಶನಿವಾರ ಸಂಜೆ ಮಧ್ಯವಯಸ್ಕನೊಬ್ಬ 16 ವರ್ಷದ ಅಪ್ರಾಪ್ತ ಬಾಲಕಿಯನ್ನು ಇರಿತದ ಗಾಯಗಳೊಂದಿಗೆ ಎಳೆದುಕೊಂಡು ಹೋಗುತ್ತಿರುವ ದೃಶ್ಯ ಕಂಡು … Continued

ಕೇರಳದ ದೇಗುಲಕ್ಕೆ ಬಂತು ರೋಬೋಟ್‌ ಆನೆ…! ಫೆಬ್ರವರಿ 26 ರಂದು ದೇವಸ್ಥಾನಕ್ಕೆ ಅರ್ಪಣೆ: ಇದರ ತೂಕ 800 ಕೆ.ಜಿ

ತ್ರಿಶೂರ್ : ಇದೇ ಮೊದಲ ಬಾರಿಗೆ, ಫೆಬ್ರವರಿ 26 ರಂದು ನಾದೈರುತಲ್ (ದೇವಾಲಯಗಳಲ್ಲಿ ದೇವರ ಮುಂದೆ ಆನೆಗಳನ್ನು ಅರ್ಪಿಸುವ ಆಚರಣೆ) ಸಮಾರಂಭಕ್ಕಾಗಿ ಇರಿಂಜಲಕುಡ ಬಳಿಯ ಶ್ರೀಕೃಷ್ಣ ದೇವಸ್ಥಾನದಲ್ಲಿ ರಾಮನ್‌ ಎಂಬ ರೋಬೋಟ್ ಆನೆ ಸಿದ್ಧವಾಗಿದೆ. ದೇವಸ್ಥಾನದ ಭಕ್ತ ಸಮೂಹದಿಂದ ಐದು ಮೋಟಾರುಗಳಲ್ಲಿ ಕಾರ್ಯನಿರ್ವಹಿಸುವ ರೋಬೋಟ್‌ ಆನೆಯನ್ನು ಕೊಡುಗೆಯಾಗಿ ನೀಡಲಾಗಿದೆ. ದೇವಾಲಯದ ಆಚರಣೆಗಳಿಗೆ ಆನೆಗಳನ್ನು ಬಾಡಿಗೆಗೆ ತೆಗೆದುಕೊಳ್ಳುವಲ್ಲಿ … Continued

ಆಸ್ಟ್ರೇಲಿಯಾ ವಿರುದ್ಧದ ಉಳಿದ ಎರಡು ಟೆಸ್ಟ್, ಏಕದಿನ ಸರಣಿಗೆ ಭಾರತದ ತಂಡ ಪ್ರಕಟ

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಆಸ್ಟ್ರೇಲಿಯಾ ವಿರುದ್ಧದ ಉಳಿದ ಎರಡು ಟೆಸ್ಟ್‌ಗಳಿಗೆ ತಂಡವನ್ನು ಭಾನುವಾರ (ಫೆಬ್ರವರಿ 19) ಪ್ರಕಟಿಸಿದೆ. ಅಲ್ಲದೆ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್‌ ಸರಣಿಯ ನಂತರ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೂ ಭಾರತೀಯ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ನಾಗ್ಪುರ ಮತ್ತು ದೆಹಲಿ ಟೆಸ್ಟ್‌ಗಳಲ್ಲಿ ಗೆಲುವು ದಾಖಲಿಸಿರುವ ಭಾರತ ನಾಲ್ಕು ಪಂದ್ಯಗಳ ಟೆಸ್ಟ್ … Continued

ತನ್ನ ಯಕೃತ್ತಿನ ಭಾಗವನ್ನು ಅನಾರೋಗ್ಯ ಪೀಡಿತ ತಂದೆಗೆ ನೀಡಿ ಭಾರತದ ಅತ್ಯಂತ ಕಿರಿಯ ಅಂಗಾಂಗ ದಾನಿಯಾದ ಮಗಳು…!

ತ್ರಿಶೂರ್: ಕೇರಳದ 17 ವರ್ಷದ ಬಾಲಕಿಯೊಬ್ಬಳು ತನ್ನ ಯಕೃತ್ತಿನ(liver) ಭಾಗವನ್ನು ತಂದೆಗೆ ದಾನ ಮಾಡುವ ಮೂಲಕ ದೇಶದ ಅತ್ಯಂತ ಕಿರಿಯ ಅಂಗಾಂಗ ದಾನಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ. ದೇಶದಲ್ಲಿ ಅಪ್ರಾಪ್ತ ವಯಸ್ಕರಿಗೆ ಅಂಗಾಂಗ ದಾನ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಹೀಗಾಗಿ ವಿನಾಯಿತಿ ಕೋರಿ 12ನೇ ತರಗತಿಯ ವಿದ್ಯಾರ್ಥಿನಿಯಾದ ದೇನನಂದಾ ಕೇರಳ ಹೈಕೋರ್ಟ್‌ನ ಮೊರೆ ಹೋಗಿದ್ದಳು. ನ್ಯಾಯಾಲಯದ … Continued

ನಾನು ಗೋಮಾಂಸ ತಿನ್ನುತ್ತೇನೆ, ಬಿಜೆಪಿಯಲ್ಲಿದ್ದೇನೆ : ಬಿಜೆಪಿ ಮುಖಂಡನ ಹೇಳಿಕೆ

ಗುವಾಹಟಿ: ಕೇಸರಿ ಪಕ್ಷವು ಗೋಮಾಂಸ ಸೇವನೆಗೆ ಯಾವುದೇ ನಿರ್ಬಂಧವನ್ನು ವಿಧಿಸಿಲ್ಲ ಮತ್ತು ನಾನು ಗೋಮಾಂಸ ತಿನ್ನುತ್ತೇನೆ ಮತ್ತು ನನಗೆ ಪಕ್ಷದಲ್ಲಿ ಯಾವುದೇ ಸಮಸ್ಯೆಯಾಗಿಲ್ಲ ಎಂದು ಮೇಘಾಲಯದ ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಒಂಬತ್ತು ವರ್ಷಗಳಾಗಿದ್ದು, ದೇಶದಲ್ಲಿ ಯಾವುದೇ ಚರ್ಚ್ ದಾಳಿಗೆ ಒಳಗಾಗಿದ್ದನ್ನು ನೋಡಿಲ್ಲ ಎಂದು ಹೇಳಿದ್ದಾರೆ. ಮೇಘಾಲಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ … Continued

ಕ್ರಿಕೆಟ್‌ : ಸಚಿನ್‌ ತೆಂಡೂಲ್ಕರ್ ದಾಖಲೆ ಮುರಿದ ವಿರಾಟ್ ಕೊಹ್ಲಿ

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿವೇಗದ 25,000 ರನ್ ಗಳಿಸಿದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅವರ ದಾಖಲೆ ಮುರಿದು ವಿರಾಟ್‌ ಕೊಹ್ಲಿ ಭಾನುವಾರ ಇತಿಹಾಸ ಬರೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ದೆಹಲಿಯಲ್ಲಿ ಎರಡನೇ ಟೆಸ್ಟ್‌ನ 3ನೇ ದಿನವಾದ ಭಾನುವಾರ ಈ ಸಾಧನೆ ಮಾಡಿದ್ದಾರೆ. ಸಚಿನ್ 577 ಪಂದ್ಯಗಳಲ್ಲಿ 25,000 ರನ್ ಗಳಿಸಿದ್ದರು, ವಿರಾಟ್ 549 ಪಂದ್ಯಗಳಲ್ಲಿ ಇದನ್ನು … Continued