ಮತ್ತೆ ಕಾಂಗ್ರೆಸ್‌ಗೆ ಮರಳುವುದಿಲ್ಲ : ಊಹಾಪೋಹಕ್ಕೆ ಸ್ಪಷ್ಟನೆ ನೀಡಿದ ಗುಲಾಂ ನಬಿ ಆಜಾದ್‌

ನವದೆಹಲಿ : ಹಿರಿಯ ರಾಜಕಾರಣಿ ಮತ್ತು ಹೊಸದಾಗಿ ರೂಪುಗೊಂಡ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಕ್ಷದ ಮುಖ್ಯಸ್ಥ ಗುಲಾಂ ನಬಿ ಆಜಾದ್ ಅವರು ಈ ವರ್ಷದ ಆರಂಭದಲ್ಲಿ ತಮ್ಮ 52 ವರ್ಷಗಳ ಕಾಂಗ್ರೆಸ್‌ ಸಂಬಂಧ ಮುರಿದುಕೊಂಡು ಬಂದಿದ್ದು, ಮತ್ತೆ ಕಾಂಗ್ರೆಸ್‌ಗೆ ಮರಳುವ ಯಾವುದೇ ಇರಾದೆಯಿಲ್ಲ ಎಂದು ಹೇಳಿದ್ದಾರೆ. ಮಾಜಿ ಕೇಂದ್ರ ಸಚಿವ ಮತ್ತು ಜಮ್ಮು ಮತ್ತು ಕಾಶ್ಮೀರದ … Continued

ಭೀಕರ ಕಾರು ಅಪಘಾತದ ನಂತರ ರಿಷಬ್ ಪಂತ್ ತಾಯಿಗೆ ದೂರವಾಣಿ ಕರೆ ಮಾಡಿ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ

ನವದೆಹಲಿ: ಭೀಕರ ಕಾರು ಅಪಘಾತದ ನಂತರ ಗಂಭೀರವಾಗಿ ಗಾಯಗೊಂಡಿರುವ ಭಾರತದ ಕ್ರಿಕೆಟ್‌ ಆಟಗಾರ ರಿಷಬ್‌ ಪಂತ್‌ ರಿಷಬ್ ಪಂತ್ ಅವರ ತಾಯಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಮಾತನಾಡಿದ್ದು, ಅವರ ಆರೋಗ್ಯ ಮತ್ತು ಚೇತರಿಕೆಯ ಬಗ್ಗೆ ವಿಚಾರಿಸಿದ್ದಾರೆ. ಭಾರತೀಯ ಕ್ರಿಕೆಟಿಗ ರಿಷಬ್ ಪಂತ್ ದೆಹಲಿಯಿಂದ ರೂರ್ಕಿಯಲ್ಲಿರುವ ತಮ್ಮ ಮನೆಗೆ ಬರುತ್ತಿದ್ದಾಗ ಭೀಕರ ಅಪಘಾತದಲ್ಲಿ ಗಾಯಗೊಂಡರು. ಹಮ್ಮದ್‌ಪುರ … Continued

ಭಗವಾನ್‌ ರಾಮ, ಹನುಮಂತ ಬಿಜೆಪಿಗೆ ಮಾತ್ರ ಕಾಪಿರೈಟ್‌ ಅಲ್ಲ : ಪಕ್ಷದ ವಿರುದ್ಧವೇ ವಾಗ್ದಾಳಿ ನಡೆಸಿದ ಉಮಾಭಾರತಿ

ಭೋಪಾಲ: ತಮ್ಮ ಹೊರತುಪಡಿಸಿ ಇತರರು ಭಗವಾನ್ ರಾಮ ಅಥವಾ ಹನುಮಂತನ ಭಕ್ತರಾಗಲು ಸಾಧ್ಯವಿಲ್ಲ ಎಂಬ ತಪ್ಪು ಕಲ್ಪನೆಯನ್ನು ಬಿಜೆಪಿ ಹೊಂದಿರಬಾರದು ಎಂದು ಬಿಜೆಪಿ ನಾಯಕಿ ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ ಹೇಳಿದ್ದಾರೆ. ದೇವತೆಗಳು ಯಾವುದೇ ಜಾತಿ ಅಥವಾ ಧರ್ಮಕ್ಕೆ ಬದ್ಧವಾಗಿಲ್ಲ.ಬಿಜೆಪಿ ; ಜನಸಂಘದ ಅಸ್ತಿತ್ವಕ್ಕೂ ಮುನ್ನ ಅಥವಾ ಮೊಘಲರು ಮತ್ತು ಬ್ರಿಟಿಷರ ಆಳ್ವಿಕೆಗೂ … Continued

ನಾನು ರಿಷಬ್ ಪಂತ್, ಕ್ರಿಕೆಟ್‌ ಆಟಗಾರ : ರಕ್ಷಿಸಲು ಬಂದ ವ್ಯಕ್ತಿಗೆ ಹೇಳಿದ ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡ ರಿಷಬ್‌ ಪಂತ್

ಡಿಸೆಂಬರ್ 30 ರಂದು ಮುಂಜಾನೆ ಭೀಕರ ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಭಾರತದ ಸ್ಟಾರ್ ವಿಕೆಟ್ ಕೀಪರ್ ರಿಷಬ್ ಪಂತ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತದ ಸ್ಥಳಕ್ಕೆ ತಲುಪಿ ರಿಶಬ್‌ ಪಂತ್‌ ಅವರನ್ನು ನೋಡಿದ ಹಾಗೂ ಅವರನ್ನು ಬೆಂಕಿ ಹೊತ್ತಿದ್ದ ಕಾರಿನಿಂದ ಪಾರು ಮಾಡಿದ ಮೊದಲ ವ್ಯಕ್ತಿ ಬಸ್ ಚಾಲಕ ಸುಶೀಲ ಅವರು ಘಟನೆ ಬಗ್ಗೆ ಪ್ರತಿಕ್ರಿಯೆ … Continued

ತಾಯಿ ಅಂತ್ಯಕ್ರಿಯೆ ನಂತರ ಕೆಲಸಕ್ಕೆ ಹಾಜರಾದ ಪ್ರಧಾನಿ ಮೋದಿ: ಕೋಲ್ಕತ್ತಾ ವಂದೇ ಭಾರತ ಎಕ್ಸ್‌ಪ್ರೆಸ್​ ರೈಲು-ವಿವಿಧ ರೈಲ್ವೆ ಯೋಜನೆಗಳಿಗೆ ಚಾಲನೆ

ಮೃತ ತಾಯಿಯ ಅಂತ್ಯಕ್ರಿಯೆ ನೆರವೇರಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಕೋಲ್ಕತ್ತಾ ಮೆಟ್ರೋದ ಪರ್ಪಲ್ ಲೈನ್‌ನ ಜೋಕಾ-ತಾರಾಟಾಲಾ ವಿಭಾಗವನ್ನು ಉದ್ಘಾಟಿಸಿದರು. ಶುಕ್ರವಾರ ತಾಯಿ ಹೀರಾಬೆನ್‌ ಅವರ ಅಂತ್ಯಸಂಸ್ಕಾರ ನೆರವೇರಿಸಿದ ಬಳಿಕ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಉಪಸ್ಥಿತರಿದ್ದರು. ಇದರೊಂದಿಗೆ ಪ್ರಧಾನಮಂತ್ರಿಯವರು … Continued

ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದು ಭಾರತದ ವಿಕೆಟ್‌ ಕೀಪರ್‌-ಬ್ಯಾಟರ್‌ ರಿಷಬ್ ಪಂತಗೆ ಗಂಭೀರ ಗಾಯ

ನವದೆಹಲಿ: ಭಾರತದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್‌ ರಿಷಬ್ ಪಂತ್ ದೆಹಲಿಯಿಂದ ಉತ್ತರಾಖಂಡಕ್ಕೆ ಹಿಂತಿರುಗುತ್ತಿದ್ದಾಗ ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಮ್ಮ ಬಿಎಂಡಬ್ಲ್ಯು ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ನರ್ಸನ್ ಗಡಿಯಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದ ನಂತರ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗಿದೆ. ದೆಹಲಿ ನರ್ಸನ್ ಗಡಿಯಲ್ಲಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಾಗ … Continued

ಮೃತ ತಾಯಿ ಹೀರಾಬೆನ್ ಪಾರ್ಥಿವ ಶರೀರಕ್ಕೆ ಹೆಗಲುಕೊಟ್ಟ ಪ್ರಧಾನಿ ಮೋದಿ: ಕೈ ಮುಗಿದು ತಾಯಿಗೆ ಅಂತಿಮ ವಿದಾಯ

ಗಾಂಧಿನಗರ : ಇಂದು, ಶುಕ್ರವಾರ ಮುಂಜಾನೆ ನಿಧನರಾದ ತಮ್ಮ ತಾಯಿ ಹೀರಾಬೆನ್ ಮೋದಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಗಾಂಧಿನಗರದಲ್ಲಿ ಪುಷ್ಪ ನಮನ ಸಲ್ಲಿಸಿದರು. ಶುಕ್ರವಾರ ಬೆಳಿಗ್ಗೆ ಗುಜರಾತ್ ತಲುಪಿದ ಪ್ರಧಾನಿ ಮೋದಿ ಮೊದಲು ಅವರ ರೇಸನ್ ನಿವಾಸದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು ಮತ್ತು ನಂತರ ಪಾರ್ಥಿವ ಶರೀರಕ್ಕೆ ಹೆಗಲುಕೊಟ್ಟು ಅಂತಿಮ ಸಂಸ್ಕಾರಕ್ಕಾಗಿ ಚಿತಾಗಾರಕ್ಕೆ ಕೊಂಡೊಯ್ದರು. … Continued

ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾಬೆನ್‌ ಮೋದಿ ನಿಧನ

ಅಹಮದಾಬಾದ್‌: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್‌ ಮೋದಿ (100) ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಹೀರಾಬೆನ್‌ ಅವರನ್ನು ಅಹಮದಾಬಾದ್‌ನ ಯು.ಎನ್.ಮೆಹ್ತಾ ಇನ್‌ಸ್ಟಿಟ್ಯೂಟ್‌ ಆಫ್‌ ಕಾರ್ಡಿಯಾಲಜಿ ಆ್ಯಂಡ್‌ ರೀಸರ್ಚ್‌ ಸೆಂಟರ್‌ ಆಸ್ಪತ್ರೆಗೆ ಬುಧವಾರ ದಾಖಲಿಸಲಾಗಿತ್ತು. ‘ಶ್ರೀಮತಿ ಹೀರಾಬೆನ್‌ ಮೋದಿ ಅವರು 2022ರ ಡಿಸೆಂಬರ್‌ 30ರಂದು ಬೆಳಗಿನ ಜಾವ 3.30ಕ್ಕೆ ನಿಧನರಾಗಿದ್ದಾರೆ’ ಎಂದು ಆಸ್ಪತ್ರೆಯು ಪ್ರಕಟಣೆಯಲ್ಲಿ … Continued

ವೇಷಭೂಷಣ-ಬಣ್ಣಗಳಿಗೆ ಸಮಿತಿಯು ನಿಷ್ಪಕ್ಷಪಾತವಾಗಿದೆ: ಪಠಾಣ್‌ ಸಿನೆಮಾದ ಬೇಷರಂ ಹಾಡಿನ ವಿವಾದಕ್ಕೆ ಪ್ರತಿಕ್ರಿಯಿಸಿದ ಚಲನಚಿತ್ರ ಮಂಡಳಿ

ನವದೆಹಲಿ: ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪಠಾಣ್‌ ಚಿತ್ರದ ಪ್ರಮಾಣೀಕರಣಕ್ಕಾಗಿ CBFC ಪರೀಕ್ಷಾ ಸಮಿತಿಗೆ ಕಳುಹಿಸಲಾಗಿದೆ. ಸಮಿತಿಯು ಚಿತ್ರ ಮತ್ತು ಅದರ ಹಾಡುಗಳಿಗೆ ಕೆಲವು ಬದಲಾವಣೆಗಳನ್ನು ಮಾಡಲು ನಿರ್ಮಾಪಕರಿಗೆ ಸೂಚಿಸಿದೆ. ಸಿಬಿಎಫ್‌ಸಿ ಇದೀಗ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಈ ವಿಷಯದ ಬಗ್ಗೆ ತನ್ನ ನಿಲುವನ್ನು ವಿವರಿಸಿದೆ. ಪಠಾಣ್‌ ಒಂದು ಸ್ಪೈ-ಥ್ರಿಲ್ಲರ್, ಇದನ್ನು ಸಿದ್ಧಾರ್ಥ್ … Continued

ದಲೈಲಾಮಾ ಮೇಲೆ ಬೇಹುಗಾರಿಕೆ ನಡೆಸುತ್ತಿದ್ದ ಶಂಕೆ ಮೇಲೆ ಚೀನಾ ಮಹಿಳೆ ಬಂಧನ

ಪಾಟ್ನಾ: ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಅವರ ಮೇಲೆ ಬೇಹುಗಾರಿಕೆ ನಡೆಸುತ್ತಿದ್ದ ಶಂಕಿತ ಚೀನಾ ಮಹಿಳೆಯನ್ನು ಬಿಹಾರ ಪೊಲೀಸರು ಗುರುವಾರ ಬಂಧಿಸಿದ್ದಾರೆ. ದಲೈ ಲಾಮಾ ಅವರ ಭೇಟಿಯ ನಡುವೆ ಗುರುವಾರ ಬೆಳಿಗ್ಗೆ ಬಿಹಾರದ ಬೋಧಗಯಾದಲ್ಲಿ ಭದ್ರತಾ ಎಚ್ಚರಿಕೆಯನ್ನು ನೀಡಲಾಗಿತ್ತು, ಪೊಲೀಸರು ಚೀನಾ ಮಹಿಳೆಗಾಗಿ ಹುಡುಕಾಟ ನಡೆಸುತ್ತಿದ್ದರು. ದಲೈ ಲಾಮಾ ಆಧ್ಯಾತ್ಮಿಕ ಪ್ರವಚನಗಳನ್ನು ನೀಡುವ ಕಾಲಚಕ್ರ … Continued