ಜಮ್ಮು-ಕಾಶ್ಮೀರ : ಎನ್‌ಕೌಂಟರ್‌ನಲ್ಲಿ 3 ಎಲ್‌ಇಟಿ ಭಯೋತ್ಪಾದಕರನ್ನು ಹೊಡೆದುರುಳಿಸಿದ ಭದ್ರತಾ ಪಡೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಗುರುವಾರ ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಿದ್ದು, ಮೂವರು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕರನ್ನು ಹತ್ಯೆ ಮಾಡಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಕುಪ್ವಾರದ ಜುಮಗುಂಡ್ ಗ್ರಾಮದಲ್ಲಿ ಭಯೋತ್ಪಾದಕರ ಒಳನುಸುಳುವಿಕೆ ಯತ್ನದ ಬಗ್ಗೆ ಪೊಲೀಸರು ಪಡೆದ ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ, ಸೇನೆ ಮತ್ತು ಪೊಲೀಸರು ಭಯೋತ್ಪಾದಕರನ್ನು ತಡೆದಿದ್ದಾರೆ” ಎಂದು … Continued

ಪಟಿಯಾಲ ಜೈಲಿನಲ್ಲಿ ಗುಮಾಸ್ತನಾಗಿ ನವಜೋತ್ ಸಿಧು ಕೆಲಸ, ದಿನಕ್ಕೆ 90 ರೂ. ಸಂಬಳ

ನವದೆಹಲಿ: 1988ರ ರಸ್ತೆ ಗಲಾಟೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಪಂಜಾಬ್ ಕಾಂಗ್ರೆಸ್ ಮಾಜಿ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರು ಪಟಿಯಾಲ ಸೆಂಟ್ರಲ್ ಜೈಲಿನಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಾರೆ. ಸಿಧುಗೆ ಮೂರು ತಿಂಗಳ ಕಾಲ ತರಬೇತಿ ನೀಡಲಾಗುತ್ತದೆ ಮತ್ತು ಸುದೀರ್ಘ ನ್ಯಾಯಾಲಯದ ತೀರ್ಪುಗಳನ್ನು ಸಂಕ್ಷಿಪ್ತಗೊಳಿಸುವುದು ಮತ್ತು ಜೈಲು ದಾಖಲೆಗಳನ್ನು ಹೇಗೆ ಸಂಗ್ರಹಿಸುವುದು ಎಂಬುದನ್ನು ಕಲಿಸಲಾಗುತ್ತದೆ. ನವಜೋತ್‌ ಸಿಧು, … Continued

ಅಕ್ರಮ ಹಣ ವರ್ಗಾವಣೆ ಪ್ರಕರಣ: ಮಹಾರಾಷ್ಟ್ರ ಸಚಿವ ಅನಿಲ್ ಪರಬ್ ಮನೆ ಸೇರಿ ಏಳು ಸ್ಥಳಗಳ ಮೇಲೆ ಮೇಲೆ ಇಡಿ ದಾಳಿ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಹಾರಾಷ್ಟ್ರ ಸಾರಿಗೆ ಸಚಿವ ಮತ್ತು ಶಿವಸೇನೆ ನಾಯಕ ಅನಿಲ್ ಪರಬ್ ಅವರ ಏಳು ಸ್ಥಳಗಳ ಮೇಲೆ ಗುರುವಾರ, ಮೇ 26 ರಂದು ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದೆ. ಇಡಿ ಅಧಿಕಾರಿಗಳು ಇಂದು, ಗುರುವಾರ ಬೆಳಿಗ್ಗೆ ಮುಂಬೈನಲ್ಲಿರುವ ಅನಿಲ್ ಪರಬ್ ಅವರ ಕುಟುಂಬ ಮತ್ತು ಅಧಿಕೃತ ನಿವಾಸಕ್ಕೆ ಆಗಮಿಸಿದ್ದಾರೆ. … Continued

ರಾಹುಲ್ ಗಾಂಧಿ ಬ್ರಿಟನ್ ಪ್ರವಾಸಕ್ಕೆ ಕ್ಲಿಯರೆನ್ಸ್ ಬೇಕಿತ್ತಾ? ಸರ್ಕಾರ ವರ್ಸಸ್‌ ಕಾಂಗ್ರೆಸ್

ನವದೆಹಲಿ: ರಾಹುಲ್ ಗಾಂಧಿ ಅವರು ಲಂಡನ್‌ಗೆ ಹೋಗುವ ಮೊದಲು ಸರ್ಕಾರದಿಂದ “ರಾಜಕೀಯ ಕ್ಲಿಯರೆನ್ಸ್” ತೆಗೆದುಕೊಂಡಿಲ್ಲ, ಇದನ್ನು ಎಲ್ಲ ಸಂಸದರು ಮಾಡಬೇಕಾಗಿದೆ ಎಂದು ಮೂಲಗಳು ಹೇಳಿವೆ. ಎಲ್ಲಾ ಸಂಸದರು ಯಾವುದೇ ವಿದೇಶಿ ಪ್ರವಾಸಕ್ಕೆ ಮೂರು ವಾರಗಳ ಮೊದಲು ವಿದೇಶಾಂಗ ಸಚಿವಾಲಯಕ್ಕೆ ತಿಳಿಸಬೇಕು ಮತ್ತು ರಾಜಕೀಯ ಅನುಮತಿ ಪಡೆಯಬೇಕು ಎಂದು ಸರ್ಕಾರದ ಮೂಲಗಳು ತಿಳಿಸಿವೆ, ಅವರು ವಿದೇಶಾಂಗ ಸಚಿವಾಲಯದ … Continued

ಭಾರತೀಯ ಸೇನೆಯ ಮೊದಲ ಮಹಿಳಾ ಯುದ್ಧ ವಿಮಾನ ಚಾಲಕಿ ಕ್ಯಾಪ್ಟನ್ ಅಭಿಲಾಶಾ ಬರಾಕ್

ನವದೆಹಲಿ: ಕ್ಯಾಪ್ಟನ್ ಅಭಿಲಾಶಾ ಬರಾಕ್ ಅವರು ಯುದ್ಧ ಸೇನಾ ಏವಿಯೇಷನ್ ಕೋರ್ಸ್ ಮುಗಿಸಿದ ನಂತರ ಆರ್ಮಿ ಏವಿಯೇಷನ್ ಕಾರ್ಪ್ಸ್‌ಗೆ ಯುದ್ಧ ವಿಮಾನ ಚಾಲಕರಾಗಿ ಸೇರಿದ ಮೊದಲ ಮಹಿಳಾ ಅಧಿಕಾರಿಯಾಗಿದ್ದಾರೆ. ನಾಸಿಕ್‌ನ ಯುದ್ಧ ಸೇನಾ ವಾಯುಯಾನ ತರಬೇತಿ ಶಾಲೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಆರ್ಮಿ ಏವಿಯೇಷನ್‌ನ ಡೈರೆಕ್ಟರ್-ಜನರಲ್ ಮತ್ತು ಕರ್ನಲ್ ಕಮಾಂಡೆಂಟ್ ಅಭಿಲಾಶಾ ಅವರು 36 ಇತರ … Continued

ಕಿರುತೆರೆ ನಟಿಯನ್ನು ಗುಂಡಿಕ್ಕಿ ಕೊಂದ ಭಯೋತ್ಪಾದಕರು, 10 ವರ್ಷದ ಸೋದರಳಿಯನಿಗೆ ಗಾಯ

ಕಾಶ್ಮೀರ: ಬುಧವಾರ (ಮೇ 25) ಮಧ್ಯ ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ಭಯೋತ್ಪಾದಕರ ಗುಂಡಿಗೆ ಕಿರುತೆರೆ ನಟಿ ಮೃತಪಟ್ಟಿದ್ದಾರೆ. ದಾಳಿಯಲ್ಲಿ ಅವರ ಸೋದರಳಿಯ ಕೂಡ ಗಾಯಗೊಂಡಿದ್ದಾನೆ. ಹಿಸ್ರೂ ಚದೂರದಲ್ಲಿರುವ ಅವರ ನಿವಾಸದ ಹೊರಗೆ ಭಯೋತ್ಪಾದಕರು ನಟಿ ಅಮ್ರೀನ್ ಭಟ್ ಮತ್ತು ಅವರ 10 ವರ್ಷದ ಸೋದರಳಿಯನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು … Continued

ಜೂನ್ 21ರಿಂದ 18 ದಿನಗಳ ‘ಶ್ರೀ ರಾಮಾಯಣ ಯಾತ್ರೆ’ ವಿಶೇಷ ಪ್ರವಾಸಿ ರೈಲು ಆರಂಭ

ಲಕ್ನೋ: ಪವಿತ್ರ ಸ್ಥಳಗಳಿಗೆ ಯಾತ್ರಾರ್ಥಿಗಳನ್ನು ಕರೆದೊಯ್ಯಲು ಭಾರತೀಯ ರೈಲ್ವೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ಜೂನ್ 21 ರಂದು ವಿಶೇಷ ಪ್ರವಾಸಿ ರೈಲಿನ ಮೂಲಕ 18 ದಿನಗಳ ‘ಶ್ರೀ ರಾಮಾಯಣ ಯಾತ್ರೆ’ ಪ್ರಾರಂಭಿಸಲು ಸಜ್ಜಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಜೂನ್ 21 ರಂದು ದೆಹಲಿಯ ಸಫ್ದರ್‌ಜಂಗ್ ರೈಲು ನಿಲ್ದಾಣದಿಂದ ಪ್ರಾರಂಭವಾಗುವ ‘ಭಾರತ್ ಗೌರವ್ ಟೂರಿಸ್ಟ್ … Continued

ಕರಾಚಿಯಲ್ಲಿರುವ ದಾವೂದ್‌ ಇಬ್ರಾಹಿಂ ತನ್ನ ಸಂಬಂಧಿಗಳಿಗೆ ಪ್ರತಿತಿಂಗಳು 10 ಲಕ್ಷ ರೂ. ಕಳುಹಿಸ್ತಾನೆ: ಇಡಿ ಮುಂದೆ ಹೊರಬಿತ್ತು ಸ್ಫೋಟಕ ಮಾಹಿತಿ

ಮುಂಬೈ: ದೇಶದಿಂದ ಪರಾರಿಯಾಗಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಕರಾಚಿಯಲ್ಲಿ ನೆಲೆಸಿದ್ದು, ಭಾರತದಲ್ಲಿರುವ ತಮ್ಮ ಸಂಬಂಧಿಕರಿಗೆ ತಿಂಗಳಿಗೆ 10 ಲಕ್ಷ ರೂಪಾಯಿ ಕಳುಹಿಸುತ್ತಿದ್ದಾನೆ ಎಂದು ಜಾರಿ ನಿರ್ದೇಶನಾಲಯದ ಮುಂದೆ ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣದ ಸಾಕ್ಷಿದಾರರು ಸ್ಫೋಟಕ ಮಾಹಿತಿ ನೀಡಿದ್ದಾರೆ. ದಾವೂದ್ ಇಬ್ರಾಹಿಂ ಆಸ್ತಿಗೆ ಸಂಬಂಧಿಸಿದ ಅಕ್ರಮ … Continued

34 ವರ್ಷಗಳಿಂದ ಜೈಲಿನಲ್ಲಿದ್ದ ವೀರಪ್ಪನ್‌ನ ಸಹೋದರನ ಸಾವು

ಸೇಲಂ: ಹತ್ಯೆ ಪ್ರಕರಣದಲ್ಲಿ ಸೇಲಂ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಆನೆ ದಂತದ ಚೋರ ವೀರಪ್ಪನ್ ಸಹೋದರ ಮಾಥೇಯನ್ (76) ಹೃದಯಾಘಾತದಿಂದ ಬುಧವಾರ ಮುಂಜಾನೆ ಸರ್ಕಾರಿ ಮೋಹನ್ ಕುಮಾರಮಂಗಲಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಿಧನವಾಗಿದ್ದಾನೆ. 1997ರಲ್ಲಿ ಬಾಂಗ್ಲಾಪುದೂರು ಪೊಲೀಸ್ ಠಾಣೆಯಲ್ಲಿ ಮಾಥೇಯನ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಎದೆನೋವು ಎಂದು … Continued

ಕಾಶ್ಮೀರ ಪ್ರತ್ಯೇಕತಾವಾದಿ ಯಾಸಿನ್ ಮಲಿಕ್ ಪರ ಬ್ಯಾಟ್ ಬೀಸಿದ ಶಾಹಿದ್ ಅಫ್ರಿದಿ: ಪಾಕಿಸ್ತಾನಿ ಕ್ರಿಕೆಟಿಗನ ವಿರುದ್ಧ ಹರಿಹಾಯ್ದ ಅಮಿತ್ ಮಿಶ್ರಾ

ನವದೆಹಲಿ: ಕಾಶ್ಮೀರಿ ಪ್ರತ್ಯೇಕತಾವಾದಿ ಯಾಸಿನ್ ಮಲಿಕ್ ಅವರ ಭವಿಷ್ಯವನ್ನು ದೆಹಲಿ ನ್ಯಾಯಾಲಯ ನಿರ್ಧರಿಸುವ ನಿಮಿಷಗಳ ಮೊದಲು, ಭಯೋತ್ಪಾದಕ ಮಾಸ್ಟರ್ ಮೈಂಡ್ ಬಗ್ಗೆ ಸಹಾನುಭೂತಿ ಮತ್ತು ಭಾರತೀಯ ನ್ಯಾಯ ವ್ಯವಸ್ಥೆಯ ವಿರುದ್ಧ ಮಾತನಾಡಿದ್ದಕ್ಕಾಗಿ ಪಾಕಿಸ್ತಾನಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ವಿರುದ್ಧ ಭಾರತೀಯ ಕ್ರಿಕೆಟಿಗ ಅಮಿತ್ ಮಿಶ್ರಾ ಕಿಡಿಕಾರಿದ್ದಾರೆ. ಕಾಶ್ಮೀರಿ ಪ್ರತ್ಯೇಕತಾವಾದಿ ಮತ್ತು ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ … Continued