ಆರಾಧನಾ ಸ್ಥಳಗಳ ಕಾಯಿದೆಯಲ್ಲಿ ಪೂಜಾ ಸ್ಥಳದ ಧಾರ್ಮಿಕ ಸ್ವರೂಪ ಖಚಿತ ಪಡಿಸಿಕೊಳ್ಳುವುದು ನಿರ್ಬಂಧಿಸಿಲ್ಲ: ಸುಪ್ರೀಂಕೋರ್ಟ್

ನವದೆಹಲಿ:ಆರಾಧನಾ ಸ್ಥಳಗಳ ಕಾಯಿದೆಯಲ್ಲಿ ಪೂಜಾ ಸ್ಥಳದ ಧಾರ್ಮಿಕ ಸ್ವರೂಪವನ್ನು ಖಚಿತ ಪಡಿಸಿಕೊಳ್ಳುವುದನ್ನು ನಿರ್ಬಂಧಿಸಿಲ್ಲ ಎಂದು ಶುಕ್ರವಾರ ಸುಪ್ರೀಂ ಕೋರ್ಟ್‌ ಮೌಖಿಕವಾಗಿ ಹೇಳಿದ್ದು, ದೇಶದಲ್ಲಿನ ಧಾರ್ಮಿಕ ರಚನೆಗಳ ಸ್ವರೂಪ ಮತ್ತು ಗುಣಲಕ್ಷಣಗಳಿಗೆ ಸಂಬಂಧಿಸಿದಂತೆ ಮಹತ್ವದ ಅಭಿಪ್ರಾಯ ಎಂದು ಪರಿಗಣಿಸಲ್ಪಟ್ಟಿದೆ. ಕಾಶಿ ವಿಶ್ವನಾಥ ದೇಗುಲ-ಜ್ಞಾನವಾಪಿ ಮಸೀದಿ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್‌ ಅವರು “1991ರ … Continued

ವೀಸಾ ಹಗರಣ: ಬಂಧಿಸುವ ಮೂರು ದಿನಗಳ ಮುಂಚಿತವಾಗಿ ಕಾರ್ತಿ ಚಿದಂಬರಂಗೆ ನೋಟಿಸ್ ನೀಡಲು ಸಿಬಿಐಗೆ ಕೋರ್ಟ್ ನಿರ್ದೇಶನ

ನವದೆಹಲಿ: ತಲ್ವಾಂಡಿಯಲ್ಲಿ ಪಂಜಾಬ್‌ನಲ್ಲಿ ಸಬೋ ಪವರ್ ಲಿಮಿಟೆಡ್ ಕೆಲಸ ಮಾಡುತ್ತಿರುವ 263 ಚೀನಿ ಪ್ರಜೆಗಳ ವೀಸಾವನ್ನು ತೆರವುಗೊಳಿಸಲು 50 ಲಕ್ಷ ರೂಪಾಯಿ ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರನ್ನು ಬಂಧಿಸಬೇಕಾದರೆ ಮೂರು ದಿನಗಳ ಮುಂಚಿತವಾಗಿ ನೋಟಿಸ್ ನೀಡುವಂತೆ ದೆಹಲಿ ನ್ಯಾಯಾಲಯ ಶುಕ್ರವಾರ ಸಿಬಿಐಗೆ ನಿರ್ದೇಶನ ನೀಡಿದೆ. . ವಿಶೇಷ ನ್ಯಾಯಾಧೀಶ … Continued

ಗುಜರಾತ್, ಹಿಮಾಚಲದಲ್ಲಿ ಕಾಂಗ್ರೆಸ್ ಸೋಲು ಕಾಣುತ್ತದೆ: ಪ್ರಶಾಂತ್ ಕಿಶೋರ್ ಭವಿಷ್ಯ

ನವದೆಹಲಿ: ಈ ವರ್ಷದ ಕೊನೆಯಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಬಿಜೆಪಿ ಆಡಳಿತವಿರುವ ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ “ಸನ್ನಿಹಿತ ಚುನಾವಣಾ ಸೋಲನ್ನು” ಎದುರಿಸುತ್ತಿದೆ ಎಂದು ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಶುಕ್ರವಾರ ಪ್ರತಿಪಾದಿಸಿದ್ದಾರೆ. ಉದಯಪುರದಲ್ಲಿ ನಡೆದ ಕಾಂಗ್ರೆಸ್ ಚಿಂತನ ಶಿಬಿರದ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಪದೇ ಪದೇ ನನ್ನನ್ನು ಕೇಳಲಾಗುತ್ತಿದೆ. ನನ್ನ ದೃಷ್ಟಿಯಲ್ಲಿ, ಯಥಾಸ್ಥಿತಿಯನ್ನು … Continued

34 ವರ್ಷಗಳ ಹಿಂದಿನ ರಸ್ತೆ ಜಗಳಕ್ಕೆ 1 ವರ್ಷ ಶಿಕ್ಷೆ: ಕೋರ್ಟ್‌ಗೆ ಶರಣಾದ ನವಜೋತ್‌ ಸಿಧು

ಪಟಿಯಾಲಾ (ಪಂಜಾಬ್): ಪಂಜಾಬ್ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಪಂಜಾಬ್‌ನ ಪಟಿಯಾಲಾ ಸೆಷನ್ಸ್‌ ಕೋರ್ಟ್‌ಗೆ ಇಂದು, ಶುಕ್ರವಾರ ಶರಣಾಗಿದ್ದಾರೆ. 1988 ರ ರಸ್ತೆ ರಂಪಾಟ ಪ್ರಕರಣದಲ್ಲಿ ವ್ಯಕ್ತಿಯೊಬ್ಬರ ಸಾವಿಗೆ ಕಾರಣರಾದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಗುರುವಾರ ಸಿಧುಗೆ 1 ವರ್ಷಗಳ ಕಾಲ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ. ಶುಕ್ರವಾರ ಬೆಳಗ್ಗೆ … Continued

ಹೈದರಾಬಾದ್ ಪಶುವೈದ್ಯೆ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳ ಎನ್‌ಕೌಂಟರ್ ಉದ್ದೇಶಪೂರ್ವಕವಾಗಿ ಗುಂಡು ಹಾರಿಸಿದ್ದು: ತನಿಖಾ ಆಯೋಗ

ನವದೆಹಲಿ: ದೇಶವನ್ನೇ ಬೆಚ್ಚಿಬೀಳಿಸಿದ್ದ, ತೆಲಂಗಾಣದ ಪಶುವೈದ್ಯೆಯ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಅಮಾನುಷ ಹತ್ಯೆ ಘಟನೆ ಹಾಗೂ ನಂತರ ಆರೋಪಿಗಳ ಎನ್‌ಕೌಂಟರ್‌ಗೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಎನ್‌ಕೌಂಟ್ ಘಟನೆಯ ತನಿಖೆ ನಡೆಸಲು ಸುಪ್ರೀಂಕೋರ್ಟ್ ನೇಮಿಸಿದ ಆಯೋಗವು ತನ್ನ ವರದಿ ಸಲ್ಲಿದ್ದು, ಈ ಎನ್‌ಕೌಂಟರ್ ಪೊಲೀಸರು ಸೃಷ್ಟಿಸಿದ ಕತೆ ಎಂದು ತಿಳಿಸಿದೆ. ಹೈದರಾಬಾದ್ ಸಾಮೂಹಿಕ ಅತ್ಯಾಚಾರ … Continued

ಜ್ಞಾನವಾಪಿ ಮಸೀದಿ ಪ್ರಕರಣ: ವಾರಾಣಸಿ ಜಿಲ್ಲಾ ನ್ಯಾಯಾಧೀಶರಿಗೆ ವರ್ಗಾಯಿಸಿ ಸುಪ್ರೀಕೋರ್ಟ್‌ ಆದೇಶ

ನವದೆಹಲಿ: ವಾರಾಣಸಿ ನ್ಯಾಯಾಲಯವು ಹೊರಡಿಸಿದ ಜ್ಞಾನವಾಪಿ ಮಸೀದಿ ಸಂಕೀರ್ಣದ ಸರ್ವೆ ಆದೇಶವನ್ನು ಪ್ರಶ್ನಿಸಿರುವ ಅರ್ಜಿ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್, “ಆಯ್ದ ಸೋರಿಕೆ” ನಿಲ್ಲಬೇಕು ಎಂದು ಹೇಳಿದೆ ಹಾಗೂ ಪ್ರಕರಣವನ್ನು ಜಿಲ್ಲಾ ನ್ಯಾಯಾಧೀಶರಿಗೆ ಹಸ್ತಾಂತರಿಸಿದೆ. ಸಮೀಕ್ಷಾ ವರದಿಯನ್ನು ಸಾರ್ವಜನಿಕರಿಗೆ ‘ಆಯ್ಕೆಯ ಸೋರಿಕೆ’ ಮಾಡಲಾಗಿದೆ ಎಂದು ಮುಸ್ಲಿಂ ಕಡೆಯವರು ಇಂದು, ಶುಕ್ರವಾರ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಸೋರಿಕೆಯಾದ ಮಾಹಿತಿಯನ್ನು … Continued

ಹೆಲ್ಮೆಟ್ ಧರಿಸದಿದ್ದರೆ ISI ಮಾರ್ಕ್ ಇಲ್ಲದಿದ್ದರೆ ಬೀಳುತ್ತೆ 2,000 ರೂ. ದಂಡ…!

ನವದೆಹಲಿ: ಇನ್ನೂ ಮುಂದೆ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ( Helmet ) ಇಲ್ಲದೆ ಸವಾರಿ ಮಾಡಿದರೆ ಭಾರಿ ದಂಡ ತೆರಬೇಕಾಗುತ್ತದೆ. ಭಾರತ ಸರಕಾರ 1998 ರ ಮೋಟಾರು ವಾಹನ ಕಾಯ್ದೆಯನ್ನು ತಿದ್ದುಪಡಿ ಮಾಡಿದ್ದು, ಅದರ ಪ್ರಕಾರ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೆ ಸವಾರಿ ಮಾಡಿದರೆ 2,000 ರೂ.ವರೆಗಿನ ತ್ವರಿತ ದಂಡವನ್ನು ಭರಿಸಬೇಕಾಗುತ್ತದೆ. ಅಪಘಾತಗಳಲ್ಲಿ … Continued

ಆರೋಗ್ಯದ ಕಾರಣ ನೀಡಿ ರೋಡ್ ರೇಜ್ ಪ್ರಕರಣದಲ್ಲಿ ಶರಣಾಗಲು ಹೆಚ್ಚಿನ ಸಮಯ ಕೋರಿದ ನವಜೋತ್‌ ಸಿಧು

ನವದೆಹಲಿ: ಪಂಜಾಬ್‌ನ ಮಾಜಿ ಕಾಂಗ್ರೆಸ್ ಮುಖ್ಯಸ್ಥ ಹಾಗೂ ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ನವಜೋತ್ ಸಿಂಗ್ ಸಿಧು ಅವರು 1988 ರ ರೋಡ್ ರೇಜ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ಒಂದು ವರ್ಷ ಜೈಲು ಶಿಕ್ಷೆಗೆ ಗುರಿಯಾದ ನಂತರ ವೈದ್ಯಕೀಯ ಕಾರಣಗಳಿಗಾಗಿ ಶರಣಾಗಲು ಹೆಚ್ಚಿನ ಸಮಯ ಕೋರಿದ್ದಾರೆ. ಆದರೆ ನವಜೋತ್ ಸಿಂಗ್ ಸಿಧು ಅವರ ಮನವಿಯನ್ನು … Continued

ಪೆಗಾಸಸ್ ತನಿಖಾ ವರದಿ ಸಲ್ಲಿಸಲು 4 ವಾರಗಳ ಕಾಲಾವಕಾಶ ನೀಡಿದ ಸುಪ್ರೀಂಕೋರ್ಟ್‌

ನವದೆಹಲಿ: ದೇಶಾದ್ಯಂತ ಸಂಚಲನ ಮೂಡಿಸಿದ್ದ ಪೆಗಾಸಸ್ ಹಗರಣದ ತನಿಖಾ ವರದಿ ಸಲ್ಲಿಸಲು ತಾಂತ್ರಿಕ ಮತ್ತು ಮೇಲ್ವಿಚಾರಣಾ ಸಮಿತಿಗೆ ಸುಪ್ರೀಂಕೋರ್ಟ್ ನಾಲ್ವು ವಾರಗಳ ಕಾಲಾವಕಾಶವನ್ನು ವಿಸ್ತರಣೆ ಮಾಡಿದೆ. ಪ್ರಕರಣದ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ವಿಭಾಗೀಯ ಪೀಠ, ತನಿಖೆಯ ವರದಿಯನ್ನು ನಾಲ್ಕು ವಾರಗಳ ಒಳಗಾಗಿ ತನಿಖೆಯ ಮೇಲ್ವಿಚಾರಣಾ ನ್ಯಾಯಮೂರ್ತಿ ಅವರಿಗೆ ನೀಡಬೇಕು ಎಂದು ಸೂಚಿಸಿದೆ. ಕಳೆದ … Continued

‘ಉದ್ಯೋಗ ಪಡೆಯಲು ಭೂಮಿʼ ಹಗರಣದಲ್ಲಿ ಲಾಲು ಪ್ರಸಾದ, ಮಗಳು ಮಿಸಾ ಭಾರತಿಗೆ ಸೇರಿದ 17 ಸ್ಥಳಗಳ ಮೇಲೆ ಸಿಬಿಐ ದಾಳಿ

ನವದೆಹಲಿ: ಉದ್ಯೋಗಕ್ಕಾಗಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಮತ್ತು ಅವರ ಪುತ್ರಿ ಮಿಸಾ ಭಾರ್ತಿ ಅವರಿಗೆ ಸಂಬಂಧಿಸಿದ 17 ಸ್ಥಳಗಳಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಶುಕ್ರವಾರ ದಾಳಿ ನಡೆಸಿದೆ. ಲಾಲು ಪ್ರಸಾದ ಯಾದವ, ಅವರ ಪತ್ನಿ ರಾಬ್ರಿದೇವಿ ಮತ್ತು ಮಗಳು ಮಿಸಾ ಅವರಿಗೆ ಸಂಬಂಧಿಸಿದ ಸ್ಥಳಗಳು … Continued