ಮಹಿಳಾ ದಿಚರಣೆ : ನಾಳೆ ಬಿಎಂಟಿಸಿ ಬಸ್‌ನಲ್ಲಿ ಮಹಿಳೆಯರಿಗೆ ಪ್ರಯಾಣ ಉಚಿತ

ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಬುಧವಾರ (ಮಾರ್ಚ್‌ 8) ಬಿಎಂಟಿಸಿ ಬಸ್‌ನಲ್ಲಿ ಮಹಿಳೆಯರ ಉಚಿತವಾಗಿ ಪ್ರಯಾಣಿಸಬಹುದು. ಇಂದು ಮಂಗಳವಾರ (ಮಾರ್ಚ್‌ 7) ಮಧ್ಯರಾತ್ರಿ 12 ಗಂಟೆಯಿಂದ ಬುಧವಾರ (ಮಾರ್ಚ್‌ 8) ಮಧ್ಯರಾತ್ರಿ 12 ಗಂಟೆ ರವರೆಗೆ ಮಹಿಳಾ ಪ್ರಯಾಣಿಕರು ಉಚಿತವಾಗಿ ಬಿಬಿಎಂಟಿಸಿ ಬಸ್‌ಗಳಲ್ಲಿ ಸಂಚರಿಸಲು ಸರ್ಕಾರ ಅವಕಾಶ ಕಲ್ಪಿಸಿದೆ.ವಜ್ರ, ವಾಯುವಜ್ರ ಸೇರಿ ಎಲ್ಲ ಬಸ್‌’ಗಳಲ್ಲೂ … Continued

ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಭೂಕುಸಿತ : 1 ಸಾವು, 6 ಮಂದಿಗೆ ಗಾಯ | ದೃಶ್ಯ ವೀಡಿಯೊದಲ್ಲಿ ಸೆರೆ

ಬನಿಹಾಲ್/ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಾಮಬಾನ್ ಜಿಲ್ಲೆಯಲ್ಲಿ ಮಂಗಳವಾರ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು, ಘಟನೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಆಯಕಟ್ಟಿನ ಹೆದ್ದಾರಿಯಲ್ಲಿ ದ್ವಿಮುಖ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಹಿರಿಯ ಪೊಲೀಸ್ ಅಧೀಕ್ಷಕ (ರಾಂಬನ್) ಮೋಹಿತಾ ಶರ್ಮಾ … Continued

ಉದ್ಯೋಗಕ್ಕಾಗಿ ಭೂ ಹಗರಣ: ಪತ್ನಿ ರಾಬ್ರಿ ದೇವಿ ವಿಚಾರಣೆ ಮರುದಿನ ಆರ್‌ಜೆಡಿ ಮುಖ್ಯಸ್ಥ ಲಾಲು ಅವರನ್ನು ಪ್ರಶ್ನಿಸಿದ ಸಿಬಿಐ

ನವದೆಹಲಿ: ರೈಲ್ವೆ ಉದ್ಯೋಗಕ್ಕಾಗಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಮಂಗಳವಾರ ಮಾಜಿ ರೈಲ್ವೆ ಸಚಿವ ಲಾಲುಪ್ರಸಾದ ಯಾದವ್ ಅವರ ವಿಚಾರಣೆ ಆರಂಭಿಸಿದೆ. ಇದೇ ಪ್ರಕರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರನ್ನು ತನಿಖಾ ಸಂಸ್ಥೆ ಪ್ರಶ್ನಿಸಿದ ಒಂದು ದಿನದ ನಂತರ ಸಿಬಿಐ ಲಾಲು ಅವರನ್ನು ವಿಚಾರಣೆ ನಡೆಸುತ್ತಿದೆ. ಯಾದವ ದಂಪತಿ … Continued

ಅಕ್ರಮವಾಗಿ ಹಾಕಿದ್ದ ವಿದ್ಯುತ್ ಬೇಲಿ ಸ್ಪರ್ಶಿಸಿ 3 ಆನೆಗಳು ಸಾವು

ಕೊಯಮತ್ತೂರು: ಸೋಮವಾರ ರಾತ್ರಿ ಧರ್ಮಪುರಿಯ ಮಾರಂಡಹಳ್ಳಿ ಸಮೀಪದ ಜಮೀನೊಂದರಲ್ಲಿ ಅಕ್ರಮವಾಗಿ ಹಾಕಲಾಗಿದ್ದ ವಿದ್ಯುತ್ ಬೇಲಿ ತಗುಲಿ ಮೂರು ಆನೆಗಳು ಮೃತಪಟ್ಟ ದಾರುಣ ಘಟನೆ ನಡೆದಿದೆ. ಮೀಸಲು ಅರಣ್ಯ ಪ್ರದೇಶದ ಸಮೀಪದ ಕೆಂದನಹಳ್ಳಿಯ ಕಾಳಿ ಕವುಂದರ್ ಕೊಟ್ಟೈ ಗ್ರಾಮದಲ್ಲಿ ಮೂರು ಹೆಣ್ಣು ಆನೆಗಳು ಸತ್ತಿರುವುದು ಅರಣ್ಯ ನಿಗ್ರಹ ದಳದ ತಂಡಕ್ಕೆ ಕಂಡುಬಂದಿದೆ. ಅರಣ್ಯ ತಂಡವು ಆನೆ ಹಿಂಡಿನ … Continued

ಉತ್ತರಾಧಿಕಾರ ಕಾನೂನಿನ ಲಿಂಗ ತಾರತಮ್ಯದ ವಿರುದ್ಧ ಹೋರಾಡಲು ವಿಶೇಷ ವಿವಾಹ ಕಾಯ್ದೆಯಡಿ ‘ಮರುಮದುವೆ’ಯಾಗುತ್ತಿರುವ ಮುಸ್ಲಿಂ ದಂಪತಿ

ಕಾಸರಗೋಡು (ಕೇರಳ) : ಕೇರಳದ ಕಾಸರಗೋಡು ಜಿಲ್ಲೆಯ ಮುಸ್ಲಿಂ ದಂಪತಿ ತಮ್ಮ ಹೆಣ್ಣುಮಕ್ಕಳ ಆರ್ಥಿಕ ಭದ್ರತೆಗಾಗಿ ಮತ್ತು ಮುಸ್ಲಿಂ ಉತ್ತರಾಧಿಕಾರ ಕಾನೂನುಗಳಲ್ಲಿ ಲಿಂಗ ಸಮಾನತೆಗಾಗಿ ಬಲವಾದ ಸಂದೇಶ ಕಳುಹಿಸಲು ವಿಶೇಷ ವಿವಾಹ ಕಾಯ್ದೆಯ ಅಡಿಯಲ್ಲಿ ಮರುಮದುವೆ ಮಾಡಲು ಯೋಜಿಸಿದ್ದಕ್ಕಾಗಿ ಈಗ ಸುದ್ದಿಯಲ್ಲಿದ್ದಾರೆ. ಶುಕ್ಕೂರ್‌ ದಂಪತಿ ಮುಸ್ಲಿಂ ಪಿತ್ರಾರ್ಜಿತ ಕಾನೂನುಗಳಲ್ಲಿ ಹೇರಲಾದ ಕೆಲವು ಷರತ್ತುಗಳಿಂದಾಗಿ ತಮ್ಮ ಮದುವೆಯನ್ನು … Continued

ಅದಾನಿ ಗ್ರೂಪ್‌ನ ಚಟುವಟಿಕೆಗಳಲ್ಲಿ ಚೀನಾದ ಪ್ರಜೆ ‘ಸಂಶಯಾಸ್ಪದ ಪಾತ್ರ’ ವಹಿಸಿದ್ದಾನೆ : ಕಾಂಗ್ರೆಸ್ ಆರೋಪ

ನವದೆಹಲಿ : ಅದಾನಿ ಗ್ರೂಪ್‌ನ ಚಟುವಟಿಕೆಗಳಲ್ಲಿ ಚೀನಾದ ಪ್ರಜೆಯೊಬ್ಬರು “ಸಂಶಯಾಸ್ಪದ ಪಾತ್ರ” ವಹಿಸಿದ್ದಾರೆ ಎಂದು ಕಾಂಗ್ರೆಸ್ ಸೋಮವಾರ ಆಪಾದಿಸಿದೆ. ಮತ್ತು ಪ್ರಮುಖ ರಕ್ಷಣಾ ಒಪ್ಪಂದಗಳಲ್ಲಿ ಆ ವ್ಯಕ್ತಿಯನ್ನು ತೊಡಗಿಸಿಕೊಳ್ಳಬಹುದು ಎಂಬ ಬಗ್ಗೆ ಕಾಳಜಿ ಇಲ್ಲವೇ ಎಂದು ಸರ್ಕಾರವನ್ನು ಪ್ರಶ್ನಿಸಿದೆ. ಭ್ರಷ್ಟಾಚಾರದ ಆರೋಪಗಳು ಕಾಣಿಸಿಕೊಂಡ ಸ್ವಲ್ಪ ಸಮಯದ ನಂತರ, ಯುಪಿಎ ಸರ್ಕಾರವು ಅಗಸ್ಟಾ ವೆಸ್ಟ್‌ಲ್ಯಾಂಡ್‌ನ ಮೂಲ ಕಂಪನಿ … Continued

ಬಿಜೆಪಿ ಶಾಸಕಾಂಗ ಸಭೆಯಲ್ಲಿ ತ್ರಿಪುರಾ ಮುಖ್ಯಮಂತ್ರಿ ಹುದ್ದೆಗೆ ಮಾಣಿಕ್‌ ಸಹಾ ಪುನರಾಯ್ಕೆ

ತ್ರಿಪುರಾ: ಮಾಣಿಕ್ ಸಹಾ ತ್ರಿಪುರಾ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಇಂದು, ಸೋಮವಾರ ಸಂಜೆ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಅವರನ್ನು ಎರಡನೇ ಅವಧಿಗೆ ಆಯ್ಕೆ ಮಾಡಲಾಯಿತು. 60 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿ ಮತ್ತು ಅದರ ಮಿತ್ರ ಪಕ್ಷವಾದ ಐಪಿಎಫ್ಟಿ (IPFT) 33 ಸ್ಥಾನಗಳನ್ನು ಗೆಲ್ಲುವ ಮೂಲಕ ತ್ರಿಪುರಾದಲ್ಲಿ ಅಧಿಕಾರಕ್ಕೆ ಮರಳಿತು. ಮುಖ್ಯಮಂತ್ರಿ ಮತ್ತು ನೂತನ ಸಚಿವ ಸಂಪುಟದ ಪ್ರಮಾಣ … Continued

ಐವರು ಮಕ್ಕಳಿದ್ದರೂ ತನ್ನ 1.5 ಕೋಟಿ ರೂ.ಮೌಲ್ಯದ ಆಸ್ತಿಯನ್ನು ಸರ್ಕಾರಕ್ಕೆ ದಾನ ಮಾಡಿದ ವಯೋವೃದ್ಧ…!

ಲಕ್ನೋ: ಉತ್ತರ ಪ್ರದೇಶದ ಯೋಗಿ ಸರ್ಕಾರಕ್ಕೆ 85 ವರ್ಷದ ವ್ಯಕ್ತಿಯೊಬ್ಬರು 1.5 ಕೋಟಿ ರೂ.ಗಳ ಮೌಲ್ಯದ ಆಸ್ತಿಯನ್ನು ದಾನವಾಗಿ ನೀಡಿದ್ದಾರೆ. ತಮ್ಮ ಮಕ್ಕಳು ತಮ್ಮನ್ನು ನೋಡಿಕೊಳ್ಳುವುದಿಲ್ಲ ಎಂಬ ಕಾರಣಕ್ಕೆ ಉತ್ತರ ಪ್ರದೇಶದ ಮುಜಾಫರ್‌ನಗರದ ನಾಥು ಸಿಂಗ್ ಎಂಬವರು ಮನನೊಂದು ಮನೆ ಮತ್ತು ಜಮೀನನ್ನು ಸರ್ಕಾರಕ್ಕೆ ವಿಲ್‌ ಮಾಡಿದ್ದಾರೆ. ಅಧ್ಯಯನಕ್ಕಾಗಿ ವೈದ್ಯಕೀಯ ಕಾಲೇಜಿಗೆ ದೇಹವನ್ನು ದಾನ ಮಾಡಿದ್ದಾರೆ. … Continued

ಮಂಗಗಳ ದಾಳಿಗೆ 70 ವರ್ಷದ ಮಹಿಳೆ ಸಾವು

ಹೈದರಾಬಾದ್: ತೆಲಂಗಾಣದಲ್ಲಿ 20ಕ್ಕೂ ಹೆಚ್ಚು ಕೋತಿಗಳ ಪಡೆ ದಾಳಿಗೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಮಂಗಗಳ ದಾಳಿಗೆ ಒಳಗಾಗಿ ಮೃತಪಟ್ಟ ವೃದ್ಧೆಯನ್ನು ಕಾಮರೆಡ್ಡಿ ಜಿಲ್ಲೆಯ ರಾಮರೆಡ್ಡಿ ಗ್ರಾಮದ 70 ವರ್ಷದ ಚಟರಬೋಯಿನಾ ನರಸವ್ವ ಎಂದು ಗುರುತಿಸಲಾಗಿದೆ. ವೃದ್ಧೆ ಶುಕ್ರವಾರ ತನ್ನ ಮನೆಯಲ್ಲಿ ಪಾತ್ರೆಗಳನ್ನು ಸ್ವಚ್ಛಗೊಳಿಸುತ್ತಿದ್ದಾಗ ಈ ಘಟನೆ ನಡೆದಿದೆ. ಈ ವೇಳೆ ಕಿರಿಯ ಮಗಳು … Continued

ಮನೀಶ್ ಸಿಸೋಡಿಯಾಗೆ 14 ದಿನಗಳ ನ್ಯಾಯಾಂಗ ಬಂಧನ, ತಿಹಾರ್ ಜೈಲಿಗೆ

ನವದೆಹಲಿ: ಮದ್ಯ ನೀತಿ ಪ್ರಕರಣದಲ್ಲಿ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸೋಮವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಬಂಧನದ ನಂತರ ಒಂದು ವಾರದಿಂದ ಸಿಬಿಐ ಕಸ್ಟಡಿಯಲ್ಲಿದ್ದರು. ನ್ಯಾಐಾಂಗ ಬಂಧನದ ಹಿನ್ನೆಲೆಯಲ್ಲಿ ಮಾರ್ಚ್ 20 ರವರೆಗೆ ಸಿಸೋಡಿಯಾ ಅವರನ್ನು ತಿಹಾರ್ ಜೈಲಿನಲ್ಲಿ ಇರಿಸಲಾಗುತ್ತದೆ. ಈಗ ರದ್ದಾದ … Continued