ಗೋವನ್ನು ಸಂರಕ್ಷಿತ ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ : ಅಲಹಾಬಾದ್ ಹೈಕೋರ್ಟ್‌

ಲಕ್ನೋ: ಗೋಹತ್ಯೆ ನಿಷೇಧಿಸಲು ಮತ್ತು ಅದನ್ನು ‘ರಕ್ಷಿತ ರಾಷ್ಟ್ರೀಯ ಪ್ರಾಣಿ’ ಎಂದು ಘೋಷಿಸಲು ಕೇಂದ್ರವು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠ ಹೇಳಿದೆ. ನಾವು ಜಾತ್ಯತೀತ ದೇಶದಲ್ಲಿ ವಾಸಿಸುತ್ತಿದ್ದೇವೆ ಮತ್ತು ಎಲ್ಲಾ ಧರ್ಮಗಳನ್ನು ಗೌರವಿಸಬೇಕು. ಹಿಂದೂ ಧರ್ಮದಲ್ಲಿ, ಗೋವು ದೈವಿಕ ಮತ್ತು ನೈಸರ್ಗಿಕ ಉಪಕಾರದ ಪ್ರತಿನಿಧಿಯಾಗಿದೆ ಎಂದು ನಂಬಲಾಗಿದೆ. ಆದ್ದರಿಂದ, ಅದನ್ನು … Continued

“ಕೇಂದ್ರೀ ತನಿಖಾ ಸಂಸ್ಥೆಗಳ ದುರ್ಬಳಕೆ” ಕುರಿತು ಪ್ರಧಾನಿ ಮೋದಿಗೆ ಪತ್ರ ಬರೆದ 8 ವಿಪಕ್ಷಗಳು

ನವದೆಹಲಿ: ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮನೀಶ್ ಸಿಸೋಡಿಯಾ ಅವರ ಬಂಧನದ ನಂತರ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿ ಎಂಟು ಪ್ರತಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿವೆ. ಮುಖ್ಯಮಂತ್ರಿಗಳಾದ ಕೆ ಚಂದ್ರಶೇಖರ ರಾವ್, ಮಮತಾ ಬ್ಯಾನರ್ಜಿ, ಭಗವಂತ್ ಮಾನ್ ಮತ್ತು ಅರವಿಂದ ಕೇಜ್ರಿವಾಲ್, ನ್ಯಾಷನಲ್ ಕಾನ್ಫರೆನ್ಸ್‌ನ ಫಾರೂಕ್ ಅಬ್ದುಲ್ಲಾ, … Continued

ವಿಮಾನದಲ್ಲಿ ಸಹಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ ವಿದ್ಯಾರ್ಥಿ: ವರದಿ

ನವದೆಹಲಿ; ನ್ಯೂಯಾರ್ಕ್‌ನಿಂದ ನವದೆಹಲಿಗೆ ತೆರಳುತ್ತಿದ್ದ ಅಮೇರಿಕನ್ ಏರ್‌ಲೈನ್ಸ್ ವಿಮಾನದಲ್ಲಿ ಕುಡಿದ ಅಮಲಿನಲ್ಲಿ ಪ್ರಯಾಣಿಕನೊಬ್ಬ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ ಎಂದು ವರದಿಯಾಗಿದೆ. ವಿಮಾನ ಲ್ಯಾಂಡ್ ಆದ ನಂತರ ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆರೋಪಿಯನ್ನು ಅಮೆರಿಕ ವಿಶ್ವವಿದ್ಯಾಲಯದ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ ಎಂದು ಐಜಿಐ ವಿಮಾನ ನಿಲ್ದಾಣದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ತಿಳಿಸಿದ್ದಾರೆ. … Continued

ಲೈವ್ ಕಾರ್ಯಕ್ರಮದ ವೇಳೆ ಡ್ರೋನ್‌ ಬಡಿದು ಗಾಯಗೊಂಡ ಬಾಲಿವುಡ್‌ ಗಾಯಕ ಬೆನ್ನಿ ದಯಾಳ : ವೀಕ್ಷಿಸಿ

ಶುಕ್ರವಾರ ಚೆನ್ನೈನಲ್ಲಿ ನಡೆದ ಲೈವ್ ಕನ್ಸರ್ಟ್ ವೇಳೆ ಬಾಲಿವುಡ್ ಗಾಯಕ ಬೆನ್ನಿ ದಯಾಳ ಅವರ ತಲೆಯ ಹಿಂಭಾಗಕ್ಕೆ ಡ್ರೋನ್ ಬಡಿದು ಗಾಯಗೊಂಡ ಘಟನೆ ನಡೆದಿದೆ. ಘಟನೆ ನಡೆದಾಗ ಗಾಯಕ ವೆಲ್ಲೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಾಂಸ್ಕೃತಿಕ ಉತ್ಸವದಲ್ಲಿ ಪ್ರದರ್ಶನ ನೀಡುತ್ತಿದ್ದರು. ಆನ್‌ಲೈನ್‌ನಲ್ಲಿ ಪ್ರಸಾರವಾಗುವ ವೀಡಿಯೊಗಳಲ್ಲಿ, ಗಾಯಕ “ಊರ್ವಶಿ ಊರ್ವಶಿ” ಹಾಡನ್ನು ಹಾಡುತ್ತಿರುವುದನ್ನು ಕೇಳಬಹುದು. ಕೆಲವೇ ಸೆಕೆಂಡುಗಳಲ್ಲಿ, … Continued

ಗುಟ್ಖಾ ನಿಷೇಧ: ಮದ್ರಾಸ್ ಹೈಕೋರ್ಟ್ ಆದೇಶದ ವಿರುದ್ಧ ತಮಿಳುನಾಡು ಸರ್ಕಾರದ ಮನವಿಗೆ ನೋಟಿಸ್ ಜಾರಿ ಮಾಡಿದ ಸುಪ್ರೀಂ ಕೋರ್ಟ್‌

ನವದೆಹಲಿ: ಗುಟ್ಕಾ ಮತ್ತು ಇತರ ತಂಬಾಕು ಆಧಾರಿತ ಉತ್ಪನ್ನಗಳ ಮಾರಾಟ, ತಯಾರಿಕೆ ಮತ್ತು ಸಾಗಣೆಯನ್ನು ನಿಷೇಧಿಸುವ ಮೇ 2018 ರ ಅಧಿಸೂಚನೆಯನ್ನು ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿದ ತಮಿಳುನಾಡು ಸರ್ಕಾರದ ಮನವಿಗೆ ಆಹಾರ ಸುರಕ್ಷತಾ ಆಯುಕ್ತರು ಹಾಗೂ ಇತರರಿಂದ ಸುಪ್ರೀಂ ಕೋರ್ಟ್ ಪ್ರತಿಕ್ರಿಯೆ ಕೇಳಿದೆ. ನ್ಯಾಯಮೂರ್ತಿಗಳಾದ ಕೆ.ಎಂ. ಜೋಸೆಫ್ ಮತ್ತು ಬಿ.ವಿ. ನಾಗರತ್ನ ಅವರಿದ್ದ … Continued

ದೇಶಾದ್ಯಂತ ತೀವ್ರ ತರಹದ ಜ್ವರ-ಕೆಮ್ಮಿನ ಪ್ರಕರಣಗಳು ಏರಿಕೆ: ಆರೋಗ್ಯ ಸಲಹೆ ಬಿಡುಗಡೆ ಮಾಡಿದ ಕೇಂದ್ರ

ನವದೆಹಲಿ : ಭಾರತದ ಹಲವು ಭಾಗಗಳಲ್ಲಿ ಕಳೆದ ಎರಡು ತಿಂಗಳುಗಳಲ್ಲಿ ದೀರ್ಘಕಾಲದ ಅನಾರೋಗ್ಯ ಮತ್ತು ದೀರ್ಘಕಾಲದ ಕೆಮ್ಮಿನಿಂದ ಕೂಡಿದ ಹೆಚ್ಚಿನ ಸಂಖ್ಯೆಯ ಜ್ವರದ ಪ್ರಕರಣಗಳು ವರದಿಯಾಗುತ್ತಿವೆ. ಎರಡು ವರ್ಷಗಳ ಕೋವಿಡ್ ಸಾಂಕ್ರಾಮಿಕ ರೋಗದ ನಂತರ, ಜ್ವರ ಪ್ರಕರಣಗಳ ಹೆಚ್ಚಳವು ಸಾರ್ವಜನಿಕರಲ್ಲಿ ಭಯವನ್ನು ಉಂಟುಮಾಡಿದೆ. ಭಾರತದ ಹಲವಾರು ರಾಜ್ಯಗಳಲ್ಲಿ ನಿರಂತರ ಕೆಮ್ಮು, ಜ್ವರ ಬಾಧಿಸುತ್ತಿದ್ದು, ಈ ಬಗ್ಗೆ … Continued

ದೆಹಲಿ ಸಾರಾಯಿ ನೀತಿ ಪ್ರಕರಣ: ಮನೀಶ್ ಸಿಸೋಡಿಯಾ ಸಿಬಿಐ ಕಸ್ಟಡಿ 2 ದಿನ ವಿಸ್ತರಣೆ

ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಸಿಬಿಐ ಕಸ್ಟಡಿಯನ್ನು ಸಿಟಿ ಕೋರ್ಟ್ ಶನಿವಾರ ಎರಡು ದಿನಗಳ ಕಾಲ ವಿಸ್ತರಿಸಿದೆ. ವಿಶೇಷ ನ್ಯಾಯಾಧೀಶ ಎಂ.ಕೆ. ನಾಗಪಾಲ್ ಅವರು ಆಮ್ ಆದ್ಮಿ ಪಕ್ಷದ ನಾಯಕನನ್ನು ಸೋಮವಾರ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಸಿಬಿಐಗೆ ಸೂಚಿಸಿದರು. ಈ … Continued

ಸುಳ್ಳು ಸುದ್ದಿಗಳ ಯುಗದಲ್ಲಿ ಸತ್ಯವು ಬಲಿಪಶುವಾಗಿದೆ: ಸಿಜೆಐ ಚಂದ್ರಚೂಡ

ನವದೆಹಲಿ: ಸುಳ್ಳು ಸುದ್ದಿಗಳ ಯುಗದಲ್ಲಿ ಸತ್ಯವು ‘ಬಲಿಪಶು’ವಾಗಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ ಶುಕ್ರವಾರ ಹೇಳಿದ್ದಾರೆ. ತಾಳ್ಮೆ ಮತ್ತು ಸಹಿಷ್ಣುತೆಯ ಕೊರತೆಯಿರುವ ಯುಗದಲ್ಲಿ ನಾವು ಇಂದು ಬದುಕುತ್ತಿದ್ದೇವೆ. ಏಕೆಂದರೆ ಜನರು ತಮ್ಮದೇ ಆದ ದೃಷ್ಟಿಕೋನದಿಂದ ಭಿನ್ನವಾಗಿರುವ ದೃಷ್ಟಿಕೋನಗಳನ್ನು ಸ್ವೀಕರಿಸಲು ಸಿದ್ಧರಿಲ್ಲ ಎಂದು ಅವರು ಹೇಳಿದರು. ಅವರು ಅಮೆರಿಕನ್ ಬಾರ್ ಅಸೋಸಿಯೇಷನ್ ​​ಇಂಡಿಯಾ … Continued

ವಿವಾದಾತ್ಮಕ ಆಧ್ಯಾತ್ಮಿಕ ಗುರು ನಿತ್ಯಾನಂದ-‘ಕೈಲಾಸ’ ಕುರಿತ ಪ್ರಶ್ನೆಗಳಿಗೆ ʼಚಾಟ್‌ಜಿಪಿಟಿʼ ಕೊಟ್ಟ ಕುತೂಹಲಕಾರಿ ಉತ್ತರಗಳು ಇಲ್ಲಿವೆ…

‘ಕೈಲಾಸ’ ಎಂಬ ಹೆಸರಿನ ದೇಶ ಸ್ಥಾಪಿಸುವುದಾಗಿ ಘೋಷಿಸುವ ಮೂಲಕ ವಿಶ್ವದಾದ್ಯಂತ ಸುದ್ದಿಯ ಅಲೆಗಳನ್ನು ಸೃಷ್ಟಿಸಿದ ವಿವಾದಾತ್ಮಕ ದೇವಮಾನವ ನಿತ್ಯಾನಂದನ ಕೆಲವು ಪ್ರತಿನಿಧಿಗಳು ಇತ್ತೀಚಿಗೆ ವಿಶ್ವಸಂಸ್ಥೆ ಸಭೆಯೊಂದರಲ್ಲಿ ಭಾಗವಹಿಸಿದ ನಂತರ ಆತ ಮತ್ತೆ ಸುದ್ದಿಯಲ್ಲಿದ್ದಾನೆ ಮತ್ತು ಅದರ ವೀಡಿಯೊ ವೈರಲ್ ಆಗಿದೆ. ನಿತ್ಯಾನಂದ ಅತ್ಯಾಚಾರದ ಆರೋಪ ಸೇರಿದಂತೆ ಹಲವಾರು ಪ್ರಕರಣಗಳನ್ನು ಎದುರಿಸುತ್ತಿದ್ದಾನೆ. ಆದರೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಭಾರತದಿಂದ … Continued

ಹಿಜಾಬ್ ನಿಷೇಧ : ಅರ್ಜಿ ವಿಚಾರಣೆಗೆ ಪೀಠ ರಚಿಸುವುದಾಗಿ ತಿಳಿಸಿದ ಸಿಜೆಐ ಚಂದ್ರಚೂಡ

ನವದೆಹಲಿ: ಕಾಲೇಜು ಅವರಣದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸುವುದಕ್ಕೆ ನಿಷೇಧ ವಿಧಿಸಿರುವುದನ್ನು ಪ್ರಶ್ನಿಸಿ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಲು ಪೀಠ ರಚಿಸುವುದಾಗಿ ಸುಪ್ರೀಂ ಕೋರ್ಟ್‌ ಶುಕ್ರವಾರ ಹೇಳಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ, ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಪಿ.ಎಸ್‌. ನರಸಿಂಹ ಅವರ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ಅರ್ಜಿದಾರರ ಪರ ವಕೀಲರು … Continued