ಇದು ಎಂಥ ಲೋಕವಯ್ಯಾ…: ಇರಾನ್‌ನಲ್ಲಿ ಹುಡುಗಿಯರು ಶಾಲೆಗೆ ಹೋಗುವುದನ್ನು ತಡೆಯಲು ನೂರಾರು ಹೆಣ್ಣುಮಕ್ಕಳಿಗೆ ವಿಷಪ್ರಾಶನ..!

ಟೆಹ್ರಾನ್: ಹೆಣ್ಣುಮಕ್ಕಳ ಶಿಕ್ಷಣವನ್ನು ಸ್ಥಗಿತಗೊಳಿಸುವ ಉದ್ದೇಶದಿಂದ ಪವಿತ್ರ ನಗರವಾದ ಕೋಮ್‌ ನಗರದಲ್ಲಿ “ಕೆಲವರು” ಶಾಲಾ ಬಾಲಕಿಯರಿಗೆ ವಿಷ ಉಣಿಸುತ್ತಿದ್ದಾರೆ ಎಂದು ಇರಾನ್ ಉಪಮಂತ್ರಿಯೊಬ್ಬರು ಭಾನುವಾರ ಹೇಳಿದ್ದಾರೆ ಎಂದು ಸರ್ಕಾರಿ ಮಾಧ್ಯಮ ವರದಿ ಮಾಡಿದೆ. ನವೆಂಬರ್ ಅಂತ್ಯದಿಂದ, ಟೆಹ್ರಾನ್‌ನ ದಕ್ಷಿಣದ ಕೋಮ್‌ನಲ್ಲಿ ಶಾಲಾಮಕ್ಕಳಲ್ಲಿ ನೂರಾರು ಉಸಿರಾಟದ ತೊಂದರೆ ಕಂಡುಬಂದ ವಿಷ ಪ್ರಾಷನದ ಪ್ರಕರಣಗಳು ವರದಿಯಾಗಿವೆ. ಕೆಲವರಿಗೆ ಆಸ್ಪತ್ರೆಯ … Continued

8 ತಾಸುಗಳ ವಿಚಾರಣೆಯ ನಂತರ ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಅವರನ್ನು ಯಾಕೆ ಬಂಧಿಸಲಾಯಿತು ಎಂದು ಹೇಳಿದ ಸಿಬಿಐ

ನವದೆಹಲಿ: ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಎಂಟು ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಭಾನುವಾರ ಸಂಜೆ ಬಂಧಿಸಿದೆ. ಇವರು ಬಂಧನಕ್ಕೊಳಗಾದ ಎರಡನೇ ದೆಹಲಿ ಸಚಿವರಾಗಿದ್ದಾರೆ. ವಿಚಾರಣೆ ವೇಳೆ ಮನೀಶ್ ಸಿಸೋಡಿಯಾ ಅವರ ಉತ್ತರಗಳು ತೃಪ್ತಿಕರವಾಗಿಲ್ಲ ಎಂದು ಕೇಂದ್ರ ತನಿಖಾ ದಳ (ಸಿಬಿಐ) ತಿಳಿಸಿದೆ. 2021-22ರ ಅಬಕಾರಿ … Continued

ದೆಹಲಿ ಸಾರಾಯಿ ನೀತಿ ಹಗರಣ: 8 ಗಂಟೆಗಳ ವಿಚಾರಣೆ ಬಳಿಕ ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಬಂಧಿಸಿದ ಸಿಬಿಐ

ನವದೆಹಲಿ: ಪ್ರಮುಖ ಬೆಳವಣಿಗೆಯೊಂದರಲ್ಲಿ, ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಭಾನುವಾರ ಬಂಧಿಸಿದೆ. ಉಪಮುಖ್ಯಮಂತ್ರಿ ಸದ್ಯಕ್ಕೆ ಸಿಬಿಐ ಕೇಂದ್ರ ಕಚೇರಿಯಲ್ಲಿ ಇರಲಿದ್ದಾರೆ. ರಾಷ್ಟ್ರ ರಾಜಧಾನಿಯ ಹೊಸ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿನ ಅಕ್ರಮಗಳು ಮತ್ತು ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಭಾನುವಾರ ಅವರಿಗೆ … Continued

ಜೈಲಿನಲ್ಲಿ ಕೈದಿಗಳ ಹೊಡೆದಾಟ : ಗಾಯಕ ಸಿಧು ಮೂಸೆವಾಲಾ ಕೊಲೆ ಆರೋಪಿಗಳಾದ ಮನದೀಪ್ ತೂಫಾನ್, ಮನಮೋಹನ್ ಹತ್ಯೆ

ನವದೆಹಲಿ : ಪಂಜಾಬ್‌ನ ಗೋಯಿಂಡ್ವಾಲ್ ಜೈಲಿನಲ್ಲಿದ್ದ ಕೈದಿಗಳ ನಡುವಿನ ಹೊಡೆದಾಟದಲ್ಲಿ ಗಾಯಕ ಸಿಧು ಮೂಸೆವಾಲಾ ಹತ್ಯೆಯ ಆರೋಪಿಗಳಿಬ್ಬರು ಭಾನುವಾರ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮೃತರನ್ನು ಬಟಾಲದ ಮನದೀಪ್ ಸಿಂಗ್ ಅಲಿಯಾಸ್ ತೂಫಾನ್ ಮತ್ತು ಬುದ್ಲಾನಾದ ಮನಮೋಹನ್ ಸಿಂಗ್ ಅಲಿಯಾಸ್ ಮೊಹ್ನಾ ಎಂದು ಗುರುತಿಸಲಾಗಿದೆ. ಮತ್ತೋರ್ವ ಕೈದಿಯನ್ನು ಬಟಿಂಡಾದ ಕೇಶವ ಎಂದು ಗುರುತಿಸಲಾಗಿದ್ದು, ಆತನಿಗೆ ಗಾಯಗಳಾಗಿದ್ದು, ಆತನನ್ನು … Continued

ಡಿಕ್ಕಿ ಹೊಡೆದ ನಂತರ ಕೆಳಗೆ ಸಿಲುಕಿದ ಸ್ಕೂಟರ್‌ ಅನ್ನು 2 ಕಿಮೀಗೂ ದೂರ ಎಳೆದೊಯ್ದ ಡಂಪರ್ ಟ್ರಕ್ : ಬಾಲಕ ಸೇರಿ ಇಬ್ಬರು ಸಾವು- ರಸ್ತೆಗೆ ಕಲ್ಲು ಹಾಕಿ ಲಾರಿ ತಡೆದ ಸ್ಥಳೀಯರು..!

ಮತ್ತೊಂದು ಹಿಟ್ ಅಂಡ್ ಡ್ರ್ಯಾಗ್ ಪ್ರಕರಣದಲ್ಲಿ, ಉತ್ತರ ಪ್ರದೇಶದ ಮಹೋಬಾದಲ್ಲಿ ಟ್ರಕ್ ಅಡಿ ಸಿಲುಕಿದ ಆರು ವರ್ಷದ ಮಗುವನ್ನು ಬೈಕ್‌ ಸಮೇತ ಟ್ರಕ್‌ ಎರಡು ಕಿಲೋಮೀಟರ್‌ಗೂ ಹೆಚ್ಚು ದೂರ ಟ್ರಕ್‌ ಎಳೆದೊಯ್ದ ನಂತರ ಬಾಲಕ ಮೃತಪಟ್ಟಿದ್ದಾನೆ. ಈ ದುರ್ಘಟನೆಯಲ್ಲಿ ಸಾತ್ವಿಕ್ ಹಾಗೂ ಆತನ ಅಜ್ಜ ಇಬ್ಬರು ಮೃತಪಟ್ಟಿದ್ದಾರೆ. ಉದಿತ್ ನಾರಾಯಣ ಚಾನ್ಸೋರಿಯಾ (67) ಮತ್ತು ಅವರ … Continued

ಸಫಾರಿ ಜೀಪ್‌ ಮೇಲೆ ದಾಳಿ ಮಾಡಿದ ಘೇಂಡಾಮೃಗಗಳು…ತಗ್ಗಿಗೆ ಬಿದ್ದ ಜೀಪ್, ಏಳು ಮಂದಿಗೆ ಗಾಯ : ಮೈ ಜುಂ ಎನ್ನುವ ದೃಶ್ಯ ವೀಡಿಯೊದಲ್ಲಿ ಸೆರೆ

ಪಶ್ಚಿಮ ಬಂಗಾಳದ ಜಲ್ದಪಾರಾ ರಾಷ್ಟ್ರೀಯ ಉದ್ಯಾನವನದಲ್ಲಿ ಎರಡು ಘೇಂಡಾಮೃಗಗಳು ಸಫಾರಿ ವಾಹನದ ಮೇಲೆ ದಾಳಿ ಮಾಡಲು ಬರುತ್ತಿರುವ ಹಾಗೂ ವಾಹನದಲ್ಲಿದ್ದವರು ಪ್ರಾಣಾಪಾಯದ ಭಯದಿಂದ ವಾಹನವನ್ನು ರಿವರ್ಸ್‌ನ್ಲಿ ಓಡಿಸುವಾಗ ವಾಹನ ಪಲ್ಟಿಯಾಗುವ ಭಯಾನಕ ದೃಶ್ಯಾವಳಿ ವೀಡಿಯೊದಲ್ಲಿ ಸೆರೆಯಾಗಿದೆ. ವನ್ಯಜೀವಿ ಸಫಾರಿ ವೇಳೆ ಈ ಘಟನೆ ನಡೆದಿದ್ದು, ಪ್ರವಾಸಿಗರು ಘೇಂಡಾಮೃಗಗಳ ಛಾಯಾಚಿತ್ರಗಳನ್ನು ಕ್ಲಿಕ್ಕಿಸುತ್ತಿರುವಾಗ ಅದು ದಾಳಿ ಮಾಡಲು ಮುಂದಾಗಿದೆ. … Continued

ಕಾಶ್ಮೀರದಲ್ಲಿ ಟಾರ್ಗೆಟೆಡ್‌ ಹತ್ಯೆ: ಪುಲ್ವಾಮಾದಲ್ಲಿ ಹಿಂದೂ ವ್ಯಕ್ತಿಯನ್ನು ಕೊಂದ ಭಯೋತ್ಪಾದಕರು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರು ಟಾರ್ಗೆಟ್ಟೆಡ್‌ ದಾಳಿಯಲ್ಲಿ ಹಿಂದೂ ಸಮುದಾಯದ ನಾಗರಿಕರೊಬ್ಬರನ್ನು ಹೊಡೆದುರುಳಿಸಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಮೃತಪಟ್ಟವರನ್ನು ಅಚನ್‌ನ ಕಾಶ್ಮೀರಿ ಹಿಂದೂ ನಿವಾಸಿ ಸಂಜಯ್ ಶರ್ಮಾ ಎಂದು ಗುರುತಿಸಲಾಗಿದೆ, ಅವರು ಸ್ಥಳೀಯ ಮಾರುಕಟ್ಟೆಗೆ ಹೋಗುತ್ತಿದ್ದಾಗ ಭಯೋತ್ಪಾದಕರು ಗುಂಡು ಹಾರಿಸಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, … Continued

ಎಂಥ ಲೋಕವಯ್ಯಾ..: ಬದುಕಿದ್ದಾಗ ಎಷ್ಟೇ ಪ್ರಯತ್ನಿಸಿದ್ರೂ ವರ್ಗಾವಣೆ ಆಗಲಿಲ್ಲ, ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡ 66 ದಿನಗಳ ನಂತರ ವರ್ಗಾವಣೆಗೆ ಆದೇಶ…!

ಶಿವಪುರಿ: ಮಧ್ಯಪ್ರದೇಶ ಆರೋಗ್ಯ ಇಲಾಖೆಯ ವಿಚಿತ್ರ ವಿದ್ಯಮಾನವೊಂದು ಬೆಳಕಿಗೆ ಬಂದಿದೆ. ಶಿವಪುರಿಯಲ್ಲಿ ಮಹಿಳಾ ನರ್ಸ್‌ ಒಬ್ಬರು ಮೃತಪಟ್ಟ 66 ದಿನಗಳ ಬಳಿಕ ಆರೋಗ್ಯ ಇಲಾಖೆಯು ನರ್ಸ್ ಅನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ….! ಬದುಕಿರುವಾಗ ಈ ಮಹಿಳಾ ಶುಶ್ರೂಷಕಿ ತನ್ನನ್ನು ವರ್ಗಾವಣೆ ಮಾಡುವಂತೆ ಇಲಾಖೆಯ ಹಲವು ಅಧಿಕಾರಿಗಳಿಗೆ ಹಲವು ಬಾರಿ ಮನವಿ ಅರ್ಜಿ ಸಲ್ಲಿಸಿದ್ದರು. ಆದರೆ … Continued

ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆ: ಗೋದ್ರೇಜ್ ಮನವಿ ತಿರಸ್ಕಾರ, ಕೊನೆಯ ಅಡೆತಡೆ ತೆರವುಗೊಳಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ: ಮುಂಬೈ-ಅಹಮದಾಬಾದ್ ಬುಲೆಟ್ ಟ್ರೈನ್ ಯೋಜನೆಯಲ್ಲಿನ ಅಂತಿಮ ಅಡೆತಡೆಯನ್ನು ಸುಪ್ರೀಂ ಕೋರ್ಟ್‌ ಮುಕ್ತ ಮಾಡಿದೆ. ಮಹಾರಾಷ್ಟ್ರ ಸರ್ಕಾರಕ್ಕೆ 9.69 ಎಕರೆ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲು ಅವಕಾಶ ನೀಡಿದ ಬಾಂಬೆ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಗೋದ್ರೇಜ್ ಮತ್ತು ಬಾಯ್ಸ್ ಮ್ಯಾನುಫ್ಯಾಕ್ಚರಿಂಗ್ ಕಂ ಲಿಮಿಟೆಡ್ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸುವುದರೊಂದಿಗೆ ಇದು ಕೊನೆಗೊಂಡಿದೆ. ಸಿಜೆಐ ಡಿ.ವೈ. ಚಂದ್ರಚೂಡ, … Continued

ಈ ವ್ಯಕ್ತಿಯೊಂದಿಗೆ ಕೊಕ್ಕರೆಯ ಸ್ನೇಹಕ್ಕೆ ಸರಿಸಾಟಿಯೇ ಇಲ್ಲ…ನೀನೆಲ್ಲೋ ನಾನೂ ಅಲ್ಲೇ ಅನ್ನುತ್ತದೆ ಈ ಪಕ್ಷಿ | ವೀಕ್ಷಿಸಿ

ಸ್ನೇಹ ಎಂಬುದು ಕೇವಲ ಮಾನವನಿಗೆ ಮಾತ್ರ ಸೀಮಿತವಾಗಿಲ್ಲ, ಇದು ಇತರ ಪ್ರಾಣಿಗಳಲ್ಲಿಯೂ ಇದು ಕಂಡುಬರುತ್ತದೆ. ಅವುಗಳು ಸ್ಬೇಹಕ್ಕೆ ಬಹಳ ಮಹತ್ವ ಕೊಡುತ್ತವೆ. ಇದು ಜಗತ್ತಿನ ಎಲ್ಲ ಜೀವಿಗಳಿಗೂ ಬೆಲೆ ಕಟ್ಟಲಾಗದ ನಿಧಿ. ಸೋಶಿಯಲ್ ಮೀಡಿಯಾದಲ್ಲಿ ಇಂತಹ ಮಧುರ ಬಾಂಧವ್ಯವನ್ನು ಸಾರುವ ವೀಡಿಯೊವೊಂದು ವೈರಲ್‌ ಆಗಿದೆ. ಇದರಲ್ಲಿ ಕೊಕ್ಕರೆ ಮತ್ತು ವ್ಯಕ್ತಿಯೊಬ್ಬರ ನಡುವಿನ ಮಧುರ ಬಾಂಧವ್ಯವನ್ನು ಕಾಣಬಹುದಾಗಿದೆ. … Continued