ಇಂದು ಸಪ್ತಪದಿ ತುಳಿದ ಖ್ಯಾತ ನಟಿ ನಯನತಾರಾ-ವಿಘ್ನೇಶ್ ಶಿವನ್‌

ಚೆನ್ನೈ: ಕಾಲಿವುಡ್‌ ನಟಿ ನಯನತಾರಾ ತಮ್ಮ ಬಹುಕಾಲದ ಗೆಳೆಯ ಚಿತ್ರ ನಿರ್ಮಾಪಕ, ನಿರ್ದೇಶಕ ವಿಘ್ನೇಶ್ ಶಿವನ್ ಅವರೊಂದಿಗೆ ಇಂದು, ಗುರುವಾರ ಸಪ್ತಪದಿ ತುಳಿದಿದ್ದಾರೆ. ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರ ವಿವಾಹ ಮಹಾಬಲಿಪುರಂ ಖಾಸಗಿ ರೆಸಾರ್ಟ್‌ನಲ್ಲಿ ಅದ್ದೂರಿಯಾಗಿ ನಡೆದಿದ್ದು, ಮದುವೆ ಕಾರ್ಯಕ್ರಮಕ್ಕೆ ಸಿನಿಮಾರಂಗದ ಗಣ್ಯರು ಆಗಮಿಸಿ ವಧುವರರನ್ನು ಹರಸಿದ್ದಾರೆ. ಸೂಪರ್‌ಸ್ಟಾರ್ ರಜನಿಕಾಂತ್, ಬಾಲಿವುಡ್ ಸ್ಟಾರ್ ಶಾರುಖ್ … Continued

ರಾಜ್ಯಸಭಾ ಚುನಾವಣೆ: ಮತ ಚಲಾಯಿಸಲು ನವಾಬ್ ಮಲಿಕ್, ಅನಿಲ್ ದೇಶಮುಖ್‌ ಮನವಿ ತಿರಸ್ಕರಿಸಿದ ಮುಂಬೈ ಕೋರ್ಟ್

ಮುಂಬೈ: ಮುಂಬರುವ ರಾಜ್ಯಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಅನುಮತಿ ಕೋರಿ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಮತ್ತು ರಾಜ್ಯದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಸಲ್ಲಿಸಿದ್ದ ಅರ್ಜಿಯನ್ನು ಮುಂಬೈ ನ್ಯಾಯಾಲಯ ತಿರಸ್ಕರಿಸಿದೆ. ಕಳೆದ ವರ್ಷ ಅವರ ವಿರುದ್ಧದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಿಲ್ ದೇಶಮುಖ್ ಅವರನ್ನು ಬಂಧಿಸಲಾಗಿತ್ತು, ಪರಾರಿಯಾಗಿರುವ ಗ್ಯಾಂಗ್‌ಸ್ಟರ್ ದಾವೂದ್ ಇಬ್ರಾಹಿಂಗೆ ಸಂಬಂಧಿಸಿದ … Continued

ನೂತನ ರಾಷ್ಟ್ರಪತಿ ಚುನಾವಣೆಗೆ ದಿನಾಂಕ ಪ್ರಕಟಿಸಿದ ಚುನಾವಣಾ ಆಯೋಗ

ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್​ ಅವರ ಅಧಿಕಾರವಧಿ ಜುಲೈ 24ರಂದು ಅಂತ್ಯಗೊಳ್ಳಲಿದ್ದು ನೂತನ ರಾಷ್ಟ್ರಪತಿ ಆಯ್ಕೆಗೆ ಕೇಂದ್ರ ಚುನಾವಣಾ ಆಯೋಗ ಇಂದು, ಗುರುವಾರ ವೇಳಾಪಟ್ಟಿ ಪ್ರಕಟಿಸಿದೆ. ಜುಲೈ 18ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಜುಲೈ 21ರಂದು ಮತಗಳ ಎಣಿಕೆ ನಡೆಯಲಿದೆ. ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವಕುಮಾರ್‌ ತಿಳಿಸಿದ್ದಾರೆ. ಸಂವಿಧಾನದ 62ನೇ ವಿಧಿ ಪ್ರಕಾರ, ಮುಂದಿನ … Continued

ಆಳವಾದ ಬೋರ್‌ವೆಲ್‌ನಲ್ಲಿ ಬಿದ್ದಿದ್ದ 2 ವರ್ಷದ ಮಗುವನ್ನು ರಕ್ಷಿಸಲು ಸಹಾಯ ಮಾಡಿದ ಸೇನೆ; ವೀಕ್ಷಿಸಿ

ಸುರೇಂದ್ರನಗರ (ಗುಜರಾತ್): ಗುಜರಾತ್‌ನ ಸುರೇಂದ್ರನಗರ ಜಿಲ್ಲೆಯ ಜಮೀನಿನಲ್ಲಿ ಆಳವಾದ ಕೊಳವೆಬಾವಿಯಲ್ಲಿಎರಡು ವರ್ಷದ ಬಾಲಕ ಬಿದ್ದಿದ್ದು, ನಂತರ ಸೇನೆ, ಅಗ್ನಿಶಾಮಕ ದಳ, ಪೊಲೀಸರು ಮತ್ತು ಆರೋಗ್ಯಾಧಿಕಾರಿಗಳ ತಂಡ ಸ್ಥಳಕ್ಕೆ ಧಾವಿಸಿ ಆತನನ್ನು ರಕ್ಷಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಬಾಲಕ ಶಿವಂ ಎಂದು ಗುರುತಿಸಲಾಗಿದೆ. ಆತನ ಪೋಷಕರು ಕೂಲಿ … Continued

ಪ್ರವಾದಿ ವಿವಾದ: ನೂಪುರ್ ಶರ್ಮಾ, ನವೀನ್ ಜಿಂದಾಲ್, ಸಬಾ ನಖ್ವಿ, ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿದ ದೆಹಲಿ ಪೊಲೀಸರು

ನವದೆಹಲಿ: ಪ್ರವಾದಿ ಕುರಿತು ಮಾಡಿದ ವಿವಾದಾತ್ಮಕ ನಡುವೆ ದ್ವೇಷದ ಸಂದೇಶಗಳನ್ನು ಹರಡಿದ ಆರೋಪದಲ್ಲಿ ಅಮಾನತುಗೊಂಡ ಬಿಜೆಪಿ ವಕ್ತಾರರಾದ ನೂಪುರ್ ಶರ್ಮಾ, ಉಚ್ಛಾಟಿತ ಬಿಜೆಪಿ ನಾಯಕ ನವೀನ್ ಜಿಂದಾಲ್ ಮತ್ತು ಪತ್ರಕರ್ತ ಸಾಬಾ ನಖ್ವಿ ಹಾಗೂ ಇತರರ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ದೆಹಲಿ ಪೊಲೀಸರು ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ – ಒಂದು ನೂಪುರ್ ಶರ್ಮಾ … Continued

4ನೇ ಅಲೆ ಮುನ್ಸೂಚನೆ..?: ಒಂದೇ ದಿನದಲ್ಲಿ ಭಾರತದ ದೈನಂದಿನ ಕೋವಿಡ್ ಸೋಂಕಿನಲ್ಲಿ 40% ಏರಿಕೆ; ಹೊಸದಾಗಿ 7,240 ಪ್ರಕರಣಗಳು ದಾಖಲು

ನವದೆಹಲಿ : ದೇಶದಲ್ಲಿ ಕೊರೊನಾ ದೈನಂದಿನ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 7,240 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದಾಖಲಾಗಿದೆ. ದೈನಂದಿನ ಪ್ರಕರಣಗಳು ಸುಮಾರು 40% ಹೆಚ್ಚಳ ದಾಖಲಿಸಿವೆ. 24 ಗಂಟೆಗಳ ಅವಧಿಯಲ್ಲಿ ಸಕ್ರಿಯ ಕೋವಿಡ್‌-19 ಕ್ಯಾಸೆಲೋಡ್‌ನಲ್ಲಿ 3,641 ಪ್ರಕರಣಗಳ ಹೆಚ್ಚಳ ದಾಖಲಾಗಿದೆ. ಸಕ್ರಿಯ ಪ್ರಕರಣಗಳು ಒಟ್ಟು ಸೋಂಕುಗಳಲ್ಲಿ 0.08 ಪ್ರತಿಶತವನ್ನು … Continued

ತನ್ನ ಗಾಯಕ್ಕೆ ಚಿಕಿತ್ಸೆ ಪಡೆಯಲು ತಾನೇ ಕ್ಲಿನಿಕ್‌ಗೆ ಮರಿ ಸಮೇತ ಬಂದ ಗಾಯಗೊಂಡ ಮಂಗ: ಕೋತಿಯ ಬುದ್ಧಿಶಕ್ತಿಗೆ ಬೆರಗಾದ ಇಂಟರ್ನೆಟ್‌ | ವೀಕ್ಷಿಸಿ

ಪಾಟ್ನಾ: ಅಚ್ಚರಿಯ ನಿದರ್ಶನವೊಂದರಲ್ಲಿ, ಕೋತಿಯೊಂದು ತನ್ನ ಗಾಯಗಳಿಗೆ ಚಿಕಿತ್ಸೆ ಪಡೆಯಲು ಬಿಹಾರದ ಸಸಾರಾಮ್‌ನಲ್ಲಿರುವ ಕ್ಲಿನಿಕ್‌ಗೆ ಭೇಟಿ ನೀಡಿರುವುದು ಕಂಡುಬಂದಿದೆ. ವೈರಲ್ ಆಗಿರುವ ಘಟನೆಯ ವೀಡಿಯೊದಲ್ಲಿ ಕೋತಿ ತನ್ನ ಮರಿಯೊಂದಿಗೆ ಕ್ಲಿನಿಕ್‌ಗೆ ಬಂದಿದೆ. ವೈದ್ಯರಿಗಾಗಿ ತಾಳ್ಮೆಯಿಂದ ಕಾಯುತ್ತಿರುವ ಕೋತಿಯನ್ನು ನೋಡಲು ಜನಸಾಗರವೇ ನೆರೆದಿತ್ತು. ಜನರು ಅಪನಂಬಿಕೆಯಿಂದ ತಮ್ಮ ಕಣ್ಣುಗಳನ್ನು ತಾವೇ ಉಜ್ಜಿಕೊಂಡು ಮತ್ತೆ ಮತ್ತೆ ಈ ದೃಶ್ಯವನ್ನು … Continued

ಮಗನ ಶವ ಪಡೆಯಲು ಆಸ್ಪತ್ರೆ ಸಿಬ್ಬಂದಿಗೆ ₹ 50,000 “ಲಂಚ” ನೀಡಲು ಹಣಕ್ಕಾಗಿ ಭಿಕ್ಷೆ ಬೇಡಿದ ದಂಪತಿ…!

ಸಮಸ್ಟಿಪುರ(ಬಿಹಾರ): ತಮ್ಮ ಮಗನ ಶವವನ್ನು ಸರ್ಕಾರಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲು ಹಣಕ್ಕಾಗಿ ವೃದ್ಧ ದಂಪತಿ ಬಿಹಾರದ ಸಮಸ್ಟಿಪುರದಲ್ಲಿ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದಾರೆ. ಆಸ್ಪತ್ರೆಯ ಉದ್ಯೋಗಿಯೊಬ್ಬರು ತಮ್ಮ ಮಗನ ಶವವನ್ನು ಬಿಡುಗಡೆ ಮಾಡಲು ದಂಪತಿಗೆ ₹ 50,000 ಹಣ ಕೇಳಿದ್ದಾರೆ ಎನ್ನಲಾಗಿದೆ. ದಂಪತಿ ಬಳಿ ಹಣ ಇಲ್ಲದ ಕಾರಣ ‘ಹಣಕ್ಕಾಗಿ ಭಿಕ್ಷೆ ಬೇಡುತ್ತಾ’ ಅವರು ಊರೂರು ಅಲೆಯುತ್ತಿದ್ದಾರೆ … Continued

ಮಾಸ್ಕ್ ಧರಿಸದ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಬಹುದು

ನವದೆಹಲಿ: ವಿಮಾನ ನಿಲ್ದಾಣಗಳು ಮತ್ತು ವಿಮಾನಗಳಲ್ಲಿ ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸಲು ನಿರಾಕರಿಸುವ ಪ್ರಯಾಣಿಕರನ್ನು ನಿರ್ಗಮನದ ಮೊದಲು ಡಿ-ಬೋರ್ಡಿಂಗ್ ಮಾಡಲಾಗುತ್ತದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಬುಧವಾರ ತಿಳಿಸಿದೆ. ವಿಮಾನ ನಿಲ್ದಾಣಗಳು ಮತ್ತು ವಿಮಾನಗಳಲ್ಲಿ ಮಾಸ್ಕ್ ಧರಿಸದ ಪ್ರಯಾಣಿಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೆಹಲಿ ಹೈಕೋರ್ಟ್ ನಿಯಂತ್ರಣ ಸಂಸ್ಥೆಗೆ ಸೂಚಿಸಿದ ನಂತರ ಈ ಆದೇಶ … Continued

ಹೋಂ ವರ್ಕ್‌ ಮಾಡದ್ದಕ್ಕೆ ಐದು ವರ್ಷ ಮಗಳನ್ನು ಸುಡುವ ಬಿಸಿಲಿನಲ್ಲಿ ಮನೆ ಛಾವಣಿ ಮೇಲೆ ಕೈ-ಕಾಲು ಕಟ್ಟಿ ಹಾಕಿ ಶಿಕ್ಷಿಸಿದ ದೆಹಲಿ ಮಹಿಳೆ, ಪ್ರಕರಣ ದಾಖಲು

ನವದೆಹಲಿ: ಆಕೆಯ ಕೈ ಕಾಲುಗಳನ್ನು ಹಗ್ಗದಿಂದ ಕಟ್ಟಲಾಗಿದೆ. ಸುಡುವ ಬಿಸಿಲಿನ ಕೆಳಗೆ ಮನೆಯ ಛಾವಣಿಯ ಮೇಲೆ ಮಲಗಿದ ಸ್ಥಿಯಲ್ಲಿದ್ದ ಐದು ವರ್ಷದ ಮಗು ತನ್ನನ್ನು ಬಿಡಿಸಿಕೊಳ್ಳಲು ಹೆಣಗಾಡುತ್ತದೆ. ತದನಂತರ ಬಿಸಿಲಿಗೆ ಮೇಲ್ಛಾವಣಿಯ ತಾಪವು ಅವಳ ಚರ್ಮವನ್ನು ಸುಡುತ್ತಿದ್ದುದರಿಂದ ಮಗು ನೋವಿನಿಂದ ಕಿರುಚಲು ಪ್ರಾರಂಭಿಸುತ್ತಾಳೆ. ದೆಹಲಿಯ ಮಗುವಿನ ಈ ವೀಡಿಯೊ ಬುಧವಾರ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಆಕೆಯ … Continued