ಮೂರು 3 ತಿಂಗಳಲ್ಲಿ ಕೋವಿಡ್ ಪ್ರಕರಣಗಳಲ್ಲಿ ಅತಿದೊಡ್ಡ ಜಿಗಿತ ವರದಿ ಮಾಡಿದ ಭಾರತ

ನವದೆಹಲಿ: ಭಾರತವು ಇಂದು 4,041 ಹೊಸ ಕೋವಿಡ್ ಸೋಂಕನ್ನು ವರದಿ ಮಾಡಿದೆ – ಮಾರ್ಚ್ 11ರ ನಂತರ ಇದು ಅತಿ ಹೆಚ್ಚು ಏಕದಿನ ಉಲ್ಬಣವಾಗಿದೆ. ದೇಶದ ಕೆಲವು ಭಾಗಗಳಲ್ಲಿ ಮತ್ತೊಂದು ಅಲೆಯ ಭಯಕ್ಕೆ ಕಾರಣವಾಗಿದೆ. ಸಾಂಕ್ರಾಮಿಕ ರೋಗದ ಪ್ರಾರಂಭದಿಂದಲೂ ಭಾರತದಲ್ಲಿ 4.317 ಕೋಟಿ ಕೋವಿಡ್ ಸೋಂಕುಗಳು ಮತ್ತು 5,24,651 ಸಾವುನೋವುಗಳು ದಾಖಲಾಗಿವೆ ಎಂದು ಆರೋಗ್ಯ ಸಚಿವಾಲಯದ … Continued

ಭಾರತ-ಚೀನಾ ಗಡಿಯಲ್ಲಿ ತಾನು ಪಾರ್ವತಿ ದೇವಿ ಅವತಾರ ಎಂದ ಮಹಿಳೆ, ಕೈಲಾಸ ಪರ್ವತದಲ್ಲಿರುವ ಶಿವನ ಮದುವೆಯಾಗ್ತಾಳಂತೆ…!

ಪಿಹೋರಗಢ: ಭಾರತ-ಚೀನಾ ಗಡಿಗೆ ಸಮೀಪವಿರುವ ನಾಭಿಧಾಂಗ್‌ನ ನಿರ್ಬಂಧಿತ ಪ್ರದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ಲಕ್ನೋದ ಮಹಿಳೆಯೊಬ್ಬರು ತಾನು ಪಾರ್ವತಿ ದೇವಿಯ ಅವತಾರವೆಂದು ಹೇಳಿಕೊಂಡಿದ್ದು, ಪ್ರದೇಶವನ್ನು ತೊರೆಯಲು ನಿರಾಕರಿಸಿದ್ದಾರೆ ಮತ್ತು ಕೈಲಾಸ ಪರ್ವತದಲ್ಲಿ ನೆಲೆಸಿರುವ ಶಿವನನ್ನು ಮದುವೆಯಾಗುವುದಾಗಿ ಹೇಳಿದ್ದಾರೆ. ನಿರ್ಬಂಧಿತ ಪ್ರದೇಶದಿಂದ ಹರ್ಮಿಂದರ್ ಕೌರ್ ಎಂಬ ಮಹಿಳೆಯನ್ನು ಅಲ್ಲಿಮದ ತೆರವು ಮಾಡಲು ಹೋಗಿದ್ದ ಪೊಲೀಸ್ ತಂಡವು ನಿರಾಶೆಯಿಂದ ಹಿಂತಿರುಗಬೇಕಾಯಿತು, … Continued

ವೀಸಾ ಹಗರಣದಲ್ಲಿ ಕಾಂಗ್ರೆಸ್‌ ಸಂಸದ ಕಾರ್ತಿ ಚಿದಂಬರಂಗೆ ಬಂಧನ ಪೂರ್ವ ಜಾಮೀನು ನಿರಾಕರಿಸಿದ ಕೋರ್ಟ್‌

ನವದೆಹಲಿ: ವೀಸಾ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರು ನಿರೀಕ್ಷಣಾ ಜಾಮೀನು ಕೋರಿಕೆಯನ್ನು ಸಿಬಿಐ ನ್ಯಾಯಾಲಯ ಶುಕ್ರವಾರ ತಿರಸ್ಕರಿಸಿದೆ. ಕಳೆದ ವಾರ ವಾದ ಆಲಿಸಿದ ನ್ಯಾಯಾಲಯ ತನ್ನ ಆದೇಶವನ್ನು ಕಾಯ್ದಿರಿಸಿತ್ತು. ಕಾರ್ತಿ ಚಿದಂಬರಂ ಅವರ ತಂದೆ ಪಿ ಚಿದಂಬರಂ ಅವರು ಕೇಂದ್ರ ಗೃಹ ಸಚಿವರಾಗಿದ್ದಾಗ 2011ರಲ್ಲಿ … Continued

ಸಿಧು ಮೂಸೆವಾಲಾ ಹತ್ಯೆಯಲ್ಲಿ ತನ್ನ ಪಾತ್ರ ಒಪ್ಪಿಕೊಂಡ ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್ : ವರದಿ

ನವದೆಹಲಿ: ದೆಹಲಿ ಪೊಲೀಸರ ವಶದಲ್ಲಿರುವ ಅರೋಪಿ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಕೊಲ್ಲಲು ಆದೇಶಿಸಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ಆದರೆ, ಸಿಧು ಮೂಸೆವಾಲಾ ಜೊತೆಗೆ ದ್ವೇಷವಿತ್ತು ಎಂದು ಒಪ್ಪಿಕೊಂಡಿರುವ ಬಿಷ್ಣೋಯ್‌ ಹತ್ಯೆಯಲ್ಲಿ ತನ್ನ ಪಾತ್ರವನ್ನು ಒಪ್ಪಿಕೊಂಡಿಲ್ಲ ಎಂದು ದೆಹಲಿ ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಈ ಬಗ್ಗೆ … Continued

ಕಾರಿನಲ್ಲಿ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ; ಶಾಸಕರ ಪುತ್ರ ಸೇರಿದಂತೆ ಐವರು ಆರೋಪಿಗಳು ಅಪ್ರಾಪ್ತರು…

ಹೈದರಾಬಾದ್‌: ಹೈದರಾಬಾದ್‌ನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಮರ್ಸಿಡಿಸ್ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಹೈದರಾಬಾದ್‌ನ ಜುಬಿಲಿ ಹಿಲ್ಸ್ ಪ್ರದೇಶದಲ್ಲಿ 17 ವರ್ಷದ ಯುವತಿಯೊಬ್ಬಳು ಪಬ್‌ನಲ್ಲಿ ಗೆಟ್‌ಟುಗೆದರ್‌ನಲ್ಲಿ ಭಾಗವಹಿಸಿ ಮನೆಗೆ ಮರಳುತ್ತಿದ್ದಾಗ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಘಟನೆಯಲ್ಲಿ ಶಾಸಕರೊಬ್ಬರ ಪುತ್ರನ ಕೈವಾಡವಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದು, ಪ್ರಕರಣದ ಐವರು ಆರೋಪಿಗಳು ಅಪ್ರಾಪ್ತರು ಎಂದು ತಿಳಿಸಿದ್ದಾರೆ. ಜೂನ್ 1, ಬುಧವಾರದಂದು … Continued

ನ್ಯಾಷನಲ್ ಹೆರಾಲ್ಡ್ ಪ್ರಕರಣ: ಜೂನ್ 13ರಂದು ಇಡಿ ಮುಂದೆ ಹಾಜರಾಗುವಂತೆ ರಾಹುಲ್ ಗಾಂಧಿಗೆ ಹೊಸ ಸಮನ್ಸ್ ಜಾರಿ

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಮುಂದೆ ಹಾಜರಾಗಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೆಚ್ಚಿನ ಸಮಯ ಕೋರಿದ್ದರಿಂದ, ಜೂನ್ 13 ಕ್ಕೆ ಹಾಜರಾಗುವಂತೆ ಹೊಸದಾಗಿ ನೋಟಿಸ್ ಜಾರಿ ಮಾಡಲಾಗಿದೆ. ಇದಕ್ಕೂ ಮೊದಲು ಜೂನ್ 2 ರಂದು ಹಾಜರಾಗುವಂತೆ ತಿಳಿಸಲಾಗಿತ್ತು. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು … Continued

ಸೋನಿಯಾ ಗಾಂಧಿ ನಂತರ ಮಗಳು ಪ್ರಿಯಾಂಕಾ ಗಾಂಧಿಗೆ ಕೋವಿಡ್ ಸೋಂಕು

ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಕೋವಿಡ್‌-19 ಸೋಂಕು ದೃಡಪಟ್ಟಿದೆ. ತನ್ನ ತಾಯಿ ಮತ್ತು ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿಯವರ ಒಂದು ದಿನದ ನಂತರ ತನಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಪ್ರಿಯಾಂಕಾ ಗಾಂಧಿ ಶುಕ್ರವಾರ ಹೇಳಿದ್ದಾರೆ. “ನಾನು ಸೌಮ್ಯ ರೋಗಲಕ್ಷಣಗಳೊಂದಿಗೆ ಕೋವಿಡ್‌-19 ಗೆ ಧನಾತ್ಮಕ ಪರೀಕ್ಷೆ ಮಾಡಿದ್ದೇನೆ. ಎಲ್ಲಾ ಪ್ರೋಟೋಕಾಲ್‌ಗಳನ್ನು ಅನುಸರಿಸಿ, … Continued

ಪ್ರತಿ ಮಸೀದಿಯಲ್ಲಿ ಶಿವಲಿಂಗವನ್ನು ಹುಡುಕಬೇಡಿ : ಜ್ಞಾನವಾಪಿ ವಿವಾದದ ನಡುವೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ

ನವದೆಹಲಿ: ಉತ್ತರ ಪ್ರದೇಶದ ವಾರಾಣಸಿಯ ಜ್ಞಾನವಾಪಿ ಮಸೀದಿಯ ಚಿತ್ರೀಕರಣದ ವಿವಾದದ ಕುರಿತು ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರು ಗುರುವಾರ ಪರಸ್ಪರ ಮಾತುಕತೆ ಮತ್ತು ಸಹಮತದ ಒಪ್ಪಂದಗಳ ಮೂಲಕ ಪರಿಹರಿಸಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ. ನಾಗ್ಪುರದಲ್ಲಿ ಸಂಘಟನೆಯ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಆರ್‌ಎಸ್‌ಎಸ್ ಮುಖ್ಯಸ್ಥರು, “ಜ್ಞಾನವಾಪಿ ಪ್ರಕರಣ ನಡೆಯುತ್ತಿದೆ. ಇತಿಹಾಸವನ್ನು ಬದಲಾಯಿಸಲು ಸಾಧ್ಯವಿಲ್ಲ. … Continued

ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿದ್ದೇನೆ, ನಾಲ್ಕು ವರ್ಷಗಳಿಂದ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿಲ್ಲ: ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವ್ಹಾಣ್

ಮುಂಬೈ: ಕಳೆದ ನಾಲ್ಕು ವರ್ಷಗಳಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಪಕ್ಷದಲ್ಲಿನ ಭಿನ್ನಮತೀಯರ ಗುಂಪಿನ ಸದಸ್ಯ ಪೃಥ್ವಿರಾಜ್ ಚವ್ಹಾಣ್ ಹೇಳಿದ್ದಾರೆ. ಉದಯಪುರದಲ್ಲಿ ಇತ್ತೀಚೆಗೆ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಯಾವುದೇ ‘ಚಿಂತನೆ’ ಅಥವಾ ಆತ್ಮಾವಲೋಕನ ಇರಲಿಲ್ಲ ಎಂದು ಅವರು ಗುರುವಾರ ಬಿಡುಗಡೆ ಮಾಡಿದ ಟೈಮ್ಸ್ … Continued

ಈ ಹಳ್ಳಿಗರು ನೀರಿಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದಾರೆ | ವೀಕ್ಷಿಸಿ

ಬೇಸಿಗೆಯ ಕಾರಣ ಹಳ್ಳಿಗಳು ನೀರಿಗಾಗಿ ಪರದಾಡುವಾಗ ಮಧ್ಯಪ್ರದೇಶದ ಘುಸಿಯಾ ಗ್ರಾಮದ ನಿವಾಸಿಗಳು ನೀರಿಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದಾರೆ…! ವೀಡಿಯೊದಲ್ಲಿ, ಗ್ರಾಮದ ನಿವಾಸಿಗಳು ಕೇವಲ ನೀರಿಲ್ಲದ ಬಾವಿಯಿಂದ ಇರುವ ಅಲ್ಪಸ್ವಲ್ಪ ನೀರನ್ನು ತರಲು ಬಹಳ ದೂರ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು.ಸೀರೆಯುಟ್ಟ ಮಹಿಳೆಯೊಬ್ಬರು ಆಳವಾದ ಬಾವಿಯ ಗೋಡೆಯನ್ನು ಹಗ್ಗ ಅಥವಾ ಇನ್ಯಾವುದೇ ಸರಂಜಾಮಿಲ್ಲದೆ ಏರುವುದನ್ನುಕಾಣಬಹುದು. ಹಳದಿ ಕುರ್ತಾದಲ್ಲಿ ಎರಡನೇ … Continued