ಮುಂಬೈ ಸ್ಫೋಟದ ಆರೋಪಿ, ದಾವೂದ್‌ ಬಂಟರೊಂದಿಗೆ ಸಚಿವ ನವಾಬ್​ ಮಲ್ಲಿಕ್​ ಆಸ್ತಿ ವ್ಯವಹಾರ: ಫಡ್ನವೀಸ್‌

ಮುಂಬೈ: ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರು 1993 ರ ಮುಂಬೈ ಬಾಂಬ್ ಸ್ಫೋಟದ ಆರೋಪಿ ಸರ್ದಾರ್ ಶಾವಾಲಿ ಖಾನ್ ಮತ್ತು ದಾವೂದ್ ಇಬ್ರಾಹಿಂ ಅವರ ಸಹೋದರಿ ಹಸೀನಾ ಪಾರ್ಕರ್ ಅವರ ಜೊತೆಯಲ್ಲಿದ್ದ ಮೊಹಮ್ಮದ್ ಸಲೀಂ ಇಶಾಕ್ ಪಟೇಲ್ ಅವರೊಂದಿಗೆ ಆಸ್ತಿ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಮಹಾರಾಷ್ಟ್ರದ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ … Continued

ನಟಿ ಪೂನಂ ಪಾಂಡೆ ಮೇಲೆ ಹಲ್ಲೆ, ಆಸ್ಪತ್ರೆಗೆ ದಾಖಲು; ಪತಿ ಬಂಧನ

ಮುಂಬೈ : ಬಾಲಿವುಡ್‌ ನ ಖ್ಯಾತ ನಟಿ ಪೂನಂ ಪಾಂಡೆ ತನ್ನ ಮೇಲೆ ಪತಿ ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಿದ್ದು, ಈ ಸಂಬಂಧ ಪೂನಂ ಪಾಂಡೆ ಪತಿ ಸ್ಯಾಮ್‌ ಬಾಂಬೆ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಹಲ್ಲೆಯಿಂದಾಗಿ ಪೂನಂ ಪಾಂಡೆ ಅವರ ತಲೆ, ಕಣ್ಣು, ಮುಖಕ್ಕೆ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲು ಮಾಡಲಾಗಿದೆ. ಮಾದಕ … Continued

ಈವರೆಗಿನ ಎಲ್ಲ ದಾಖಲೆ ಪುಡಿ ಮಾಡಿದ ಟಿ 20 ಭಾರತ-ಪಾಕ್ ನಡುವಿನ ಪಂದ್ಯ.. ಇದು ಈವರೆಗಿನ ಅತಿ ಹೆಚ್ಚು ವೀಕ್ಷಣೆ ಕಂಡ ಪಂದ್ಯ…!

ನವದೆಹಲಿ: ಟಿ 20 ವಿಶ್ವಕಪ್​ನಲ್ಲಿ ಅಕ್ಟೋಬರ್ 24 ರಂದು ನಡೆದ ಭಾರತ ಹಾಗೂ ಪಾಕಿಸ್ತಾನ್ (India-Pakistan) ಮಧ್ಯದ ಪಂದ್ಯವು ಹೊಸ ದಾಖಲೆ ಬರೆದಿದೆ. ಈ ಪಂದ್ಯವು ಟಿ20 ಕ್ರಿಕೆಟ್​ ಇತಿಹಾಸದಲ್ಲೇ ಅತೀ ಹೆಚ್ಚು ವೀಕ್ಷಣೆ ಕಂಡ ಪಂದ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸ್ಟಾರ್ ಇಂಡಿಯಾ ಸಂಸ್ಥೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಭಾರತ-ಪಾಕ್ ನಡುವಣ … Continued

ಕ್ಯಾನ್ಸರ್​ ಪೀಡಿತರಿಗಾಗಿ ಎರಡು ವರ್ಷ ಕೂದಲು ಬಿಟ್ಟು ದಾನ ಮಾಡಿದ ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್​ ಪುತ್ರ.. ವಿಡಿಯೊ ಶೇರ್‌ ಮಾಡಿದ ನಟಿ

ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್ ಮತ್ತು ಶ್ರೀರಾಮ್ ನೆನೆ ಅವರ ಕಿರಿಯ ಪುತ್ರ ರಿಯಾನ್ ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನದಂದು (ನವೆಂಬರ್ 7) ತಮ್ಮ ತಲೆ ಕೂದಲನ್ನು ದಾನ ಮಾಡಿದ್ದಾರೆ. ನವೆಂಬರ್ 7, ಭಾನುವಾರ ರಾಷ್ಟ್ರೀಯ ಕ್ಯಾನ್ಸರ್ ದಿನದ ಸಂದರ್ಭದಲ್ಲಿ, ಮಾಧುರಿ ದೀಕ್ಷಿತ್ ಅವರು ತಮ್ಮ ಕಿರಿಯ ಮಗ ರಿಯಾನ್ ಕ್ಯಾನ್ಸರ್ ರೋಗಿಗಳಿಗೆ ತನ್ನ ಕೂದಲನ್ನು … Continued

ಡಬ್ಲ್ಯುಎಚ್‌ಒ ಅನುಮೋದನೆಯ ನಂತರ ನವೆಂಬರ್ 22ರಿಂದ ಬ್ರಿಟನ್ನಿನ ಅನುಮೋದಿತ ಲಸಿಕೆ ಪಟ್ಟಿಗೆ ಸೇರ್ಪಡೆಯಾದ ಕೊವ್ಯಾಕ್ಸಿನ್‌

ಲಂಡನ್: ಭಾರತ್ ಬಯೋಟೆಕ್‌ನ ಕೋವಿಡ್-19 ಲಸಿಕೆ ಕೋವಾಕ್ಸಿನ್‌ಗೆ ವಿಶ್ವ ಆರೋಗ್ಯ ಸಂಸ್ಥೆ (WHO) ತುರ್ತು ಬಳಕೆ ಅನುಮೋದನೆ ನೀಡಿದ ಒಂದು ವಾರದ ನಂತರ, ಬ್ರಿಟನ್‌ ಸರ್ಕಾರವು ಅಂತಿಮವಾಗಿ ಕೋವಾಕ್ಸಿನ್ ಅನ್ನು ತನ್ನ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಅನುಮೋದಿತ ಕೋವಿಡ್ -19 ಲಸಿಕೆಗಳ ಪಟ್ಟಿಗೆ ಸೇರಿಸುವುದಾಗಿ ಹೇಳಿದೆ ಹಾಗೂ ಈ ಬದಲಾವಣೆಗಳು ನವೆಂಬರ್ 22 ರಂದು ಬೆಳಿಗ್ಗೆ 4 … Continued

ಭಾರತದಲ್ಲಿ 10,126 ಹೊಸ ಕೋವಿಡ್ ಪ್ರಕರಣಗಳು ದಾಖಲು, ಇದು 266 ದಿನಗಳಲ್ಲಿ ಕಡಿಮೆ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 10,126 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ, ಇದು 266 ದಿನಗಳಲ್ಲಿ ವರದಿಯಾದ ಕಡಿಮೆ ದೈನಂದಿನ ಪ್ರಕರಣಗಳಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ತಿಳಿಸಿದೆ. ಹೊಸ ಪ್ರಕರಣಗಳು ನಿನ್ನೆ ದಾಖಲಾಗಿದ್ದಕ್ಕಿಂತ ಶೇಕಡಾ 11.6 ರಷ್ಟು ಕಡಿಮೆಯಾಗಿದೆ ಮತ್ತು ಇದು ಒಟ್ಟು ಪ್ರಕರಣಗಳನ್ನು 3,43,77,113 ಕ್ಕೆ ಒಯ್ದಿದೆ. ಸಕ್ರಿಯ … Continued

ಭೋಪಾಲ್​ ಆಸ್ಪತ್ರೆ ಮಕ್ಕಳ ಐಸಿಯುವಿನಲ್ಲಿ ಬೆಂಕಿ ದುರಂತ; ನಾಲ್ವರು ಮಕ್ಕಳ ಸಾವು, 36 ಮಕ್ಕಳ ರಕ್ಷಣೆ

ಭೂಪಾಲ: ಮಧ್ಯಪ್ರದೇಶದ ಭೂಪಾಲದ ಕಮಲಾ ನೆಹರು ಆಸ್ಪತ್ರೆಯ ಮಕ್ಕಳ ವಾರ್ಡ್​​ನಲ್ಲಿ ನಡೆದ ಬೆಂಕಿ ದುರಂತದಲ್ಲಿ ನಾಲ್ವರು ಮಕ್ಕಳು ಮೃತಪಟ್ಟಿದ್ದಾರೆ. ವರದಿಗಳ ಪ್ರಕಾರ, ಮಕ್ಕಳ ಐಸಿಯು ಹೊಂದಿರುವ ಆಸ್ಪತ್ರೆಯ ಕಟ್ಟಡದ ಮೂರನೇ ಮಹಡಿಯಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಅನಾಹುತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಆಸ್ಪತ್ರೆಯ ಮೂರನೇ ಮಹಡಿಯಲ್ಲಿರುವ ಮಕ್ಕಳ ಐಸಿಯುವಿನಲ್ಲಿ ನವಜಾತ … Continued

ತಮಿಳುನಾಡಿನಲ್ಲಿ ಎರಡನೇ ದಿನವೂ ಭಾರೀ ಮಳೆ : ನಾಲ್ವರು ಸಾವು, 1,400ಕ್ಕೂ ಹೆಚ್ಚು ಜನರು ಪರಿಹಾರ ಶಿಬಿರಗಳಿಗೆ ಸ್ಥಳಾಂತರ

ಚೆನ್ನೈ: ತಮಿಳುನಾಡಿನ ಕೆಲವು ಭಾಗಗಳಲ್ಲಿ ಸೋಮವಾರ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಮಳೆ ಸಂಬಂಧಿತ ಘಟನೆಗಳಲ್ಲಿ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಮಂಗಳವಾರದಂದು ನೀಲಗಿರಿ, ಕೊಯಮತ್ತೂರು, ದಿಂಡಿಗಲ್, ಥೇಣಿ, ತೆಂಕಶಿ ಮತ್ತು ತಿರುನಲ್ವೇಲಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕಳೆದ 24 ಗಂಟೆಗಳಲ್ಲಿ ಚೆನ್ನೈ, ಥೇಣಿ ಮತ್ತು ಮಧುರೈ ಜಿಲ್ಲೆಗಳಲ್ಲಿ ಮಳೆ ಸಂಬಂಧಿತ … Continued

ನವಾಬ್ ಮಲಿಕ್ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪೊಲೀಸ್ ದೂರು ದಾಖಲಿಸಿದ ಸಮೀರ್ ವಾಂಖೇಡೆ ತಂದೆ

ಮುಂಬೈ: ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ ವಿರುದ್ಧ ಸಮೀರ್ ವಾಂಖೇಡೆ ಅವರ ತಂದೆ ಧ್ಯಾನ್‌ದೇವ್ ಕಚ್ರುಜಿ ವಾಂಖೆಡೆ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಸೋಮವಾರ ಪೊಲೀಸ್ ದೂರು ದಾಖಲಿಸಿದ್ದಾರೆ. ಮುಂಬೈನ ಓಶಿವಾರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಡ್ರಗ್ಸ್​ ಪ್ರಕರಣದಲ್ಲಿ ಶಾರುಖ್​ ಖಾನ್​ ಪುತ್ರ ಆರ್ಯನ್​ … Continued

ಉಪಹಾರ್ ಚಿತ್ರಮಂದಿರ ದುರಂತ: ಅನ್ಸಲ್ ಸಹೋದರರಿಗೆ 7 ವರ್ಷ ಜೈಲು, 2.25 ಕೋಟಿ ರೂ.ದಂಡ ವಿಧಿಸಿದ ದೆಹಲಿ ಕೋರ್ಟ್‌

ನವದೆಹಲಿ: ಉಪಹಾರ್ ಸಿನಿಮಾ ಅಗ್ನಿ ದುರಂತ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳನ್ನು ತಿರುಚಿದ್ದಕ್ಕಾಗಿ ಕಳೆದ ತಿಂಗಳು ನ್ಯಾಯಾಲಯದಿಂದ ದೋಷಿಗಳೆಂದು ತೀರ್ಮಾನಿಸಲ್ಪಟ್ಟ ಉದ್ಯಮಿ ಸುಶೀಲ್ ಅನ್ಸಲ್ ಮತ್ತು ಗೋಪಾಲ್ ಅನ್ಸಲ್ ಅವರಿಗೆ ದೆಹಲಿ ನ್ಯಾಯಾಲಯ ಸೋಮವಾರ 7 ವರ್ಷಗಳ ಜೈಲು ಶಿಕ್ಷೆ ಮತ್ತು ತಲಾ 2.25 ಕೋಟಿ ರೂ.ಗಳ ದಂಡ ವಿಧಿಸಿದೆ. ಶಿಕ್ಷೆಯನ್ನು ವಿಧಿಸುವ ವೇಳೆ ಮುಖ್ಯ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ … Continued