ಕೃಷಿ ಕಾನೂನು ವಿರೋಧಿ ಹೋರಾಟದ ಮಂಚೂಣಿಯಲ್ಲಿದ್ದ ಭಾರತೀಯ ಕಿಸಾನ್ ಯೂನಿಯನ್ ಎರಡು ಹೋಳು; ಬಿಕೆಯು (ಎ) ಎಂಬ ಹೊಸ ಸಂಘಟನೆ ರಚನೆ

ನವದೆಹಲಿ: ಸುಮಾರು ಒಂದು ವರ್ಷಗಳ ಕಾಲ ಮೂರು ಕೃಷಿ ಕಾನೂನುಗಳ ವಿರುದ್ಧ ಹೋರಾಡುವ ಜವಾಬ್ದಾರಿಯನ್ನು ಹೊತ್ತಿದ್ದ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು)  ಈಗ ಎರಡು ಹೋಳಾಗಿದೆ. ರಾಕೇಶ ಟಿಕಾಯತ್‌ ಅವರು ಸಂಘಟನೆಯನ್ನು ರಾಜಕೀಯ ಪಕ್ಷಗಳ ಜೊತೆ ಗುರುತಿಸಿಕೊಳ್ಳುವಂತೆ ಮಾಡಿದ್ದಾರೆ ಎಂದು ಆರೋಪಿಸಿ ಬಿಕೆಯು (ಎ) ಎಂಬ ಹೊಸ ರೈತ ಸಂಘಟನೆ ರಚನೆ ಮಾಡಲಾಗಿದ್ದು, ರೈತ ನಾಯಕ … Continued

ರಷ್ಯಾ ಅಧ್ಯಕ್ಷ ಪುತಿನ್‌ಗೆ “ಗಂಭೀರ ಆರೋಗ್ಯ ಸಮಸ್ಯೆ ಎಂದ ಮಾಜಿ ಸ್ಪೈ, ಬ್ಲಡ್ ಕ್ಯಾನ್ಸರ್ ಎನ್ನುತ್ತವೆ ಕೆಲ ವರದಿಗಳು

ಉಕ್ರೇನ್-ರಷ್ಯಾ ಯುದ್ಧ ಮುಂದುವರಿದ ಬೆನ್ನಿಗೇ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ( Vladimir Putin) ಅವರ ಆರೋಗ್ಯದ ಬಗ್ಗೆ ವದಂತಿಗಳು ಹೊರಬರುತ್ತಲೇ ಇವೆ. ಈಗ ಪುತಿನ್​​ ಕ್ಯಾನ್ಸರ್ ಸೇರಿದಂತೆ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಉಕ್ರೇನ್‌ನ ಮಿಲಿಟರಿ ಗುಪ್ತಚರ ಮುಖ್ಯಸ್ಥರು ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ಶೀಘ್ರದಲ್ಲೇ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ವರದಿಗಳ … Continued

ಕೇರಳದ ಟ್ವೆಂಟಿ-20 ಪಾರ್ಟಿಯೊಂದಿಗೆ ಎಎಪಿ ಮೈತ್ರಿ ಘೋಷಿಸಿದ ಕೇಜ್ರಿವಾಲ್, ಅಧಿಕಾರಕ್ಕೆ ಬಂದರೆ ಉಚಿತ ವಿದ್ಯುತ್ ಭರವಸೆ

ಕೊಚ್ಚಿ: ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕೇರಳದ ಟ್ವೆಂಟಿ-20 ಪಾರ್ಟಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಾಗಿ ಭಾನುವಾರ ಘೋಷಿಸಿದ್ದಾರೆ. ಈ ಮೈತ್ರಿಗೆ ಜನ ಕಲ್ಯಾಣ ಮೈತ್ರಿ ಎಂದು ಹೆಸರಿಡಲಾಗುವುದು ಎಂದು ಅವರು ಹೇಳಿದ್ದಾರೆ. ಕೇರಳ ಇಲ್ಲಿಯವರೆಗೆ ಕಾಂಗ್ರೆಸ್ ಮತ್ತು ಎಡಪಕ್ಷಗಳ ನಡುವಿನ ದ್ವಿಧ್ರುವಿ ಸ್ಪರ್ಧೆಗೆ ಸಾಕ್ಷಿಯಾಗಿದೆ. ಭಾರತೀಯ … Continued

ನೂತನ ಮುಖ್ಯ ಚುನಾವಣಾ ಆಯುಕ್ತ ರಾಜೀವಕುಮಾರ್ ಅಧಿಕಾರ ಸ್ವೀಕಾರ

ನವದೆಹಲಿ: ಭಾರತದ 25ನೇ ಮುಖ್ಯ ಚುನಾವಣಾ  ಆಯುಕ್ತರಾಗಿ ರಾಜೀವಕುಮಾರ್‌  ಅವರು ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಸುಶೀಲಚಂದ್ರ ನಿವೃತ್ತರಾದ ನಂತರ ಅವರ ಸ್ಥಾನಕ್ಕೆ ರಾಜೀವಕುಮಾರ್‌ ಅವರನ್ನು ನೇಮಕ ಮಾಡಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಮಾಹಿತಿ ನೀಡಿದ್ದಾರೆ. ಮುಖ್ಯ ಚುನಾವಣಾ ಆಯಕ್ತರಾಗಿ ರಾಜೀವಕುಮಾರ್‌ ತಮ್ಮ ಅಧಿಕಾರವಧಿಯಲ್ಲಿ ಹಿಮಾಚಲ ಪ್ರದೇಶ, … Continued

ಜನರೊಂದಿಗೆ ಸಂಪರ್ಕ ತಪ್ಪಿಹೋಗಿದೆ ಎಂದು ಒಪ್ಪಿಕೊಂಡ ರಾಹುಲ್‌ ಗಾಂಧಿ”: ಸಂಪರ್ಕ ಪುನರ್‌ ಸ್ಥಾಪನೆಗೆ ಅಕ್ಟೋಬರ್‌ನಿಂದ ಯಾತ್ರೆ ಘೋಷಣೆ

ಉದಯಪುರ (ರಾಜಸ್ತಾನ): ಕಾಂಗ್ರೆಸ್‌ ಪಕ್ಷಕ್ಕೆ ಜನರೊಂದಿಗಿನ ಸಂಪರ್ಕವು ತಪ್ಪಿಹೋಗಿದೆ ಎಂದು ಒಪ್ಪಿಕೊಂಡಿರುವ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಅದನ್ನು ಪುನಃ ಸ್ಥಾಪಿಸಲು ಮತ್ತು ಬಲಪಡಿಸಲು ಅಕ್ಟೋಬರ್‌ನಲ್ಲಿ ಯಾತ್ರೆಯನ್ನು ಕೈಗೊಳ್ಳುವುದಾಗಿ ಭಾನುವಾರ ಘೋಷಿಸಿದ್ದಾರೆ. ಪಕ್ಷವು ವಾಸ್ತವವನ್ನು ಒಪ್ಪಿಕೊಳ್ಳಬೇಕು ಮತ್ತು ಜನರ ನಡುವೆ ಮತ್ತೆ ಸಂಪರ್ಕ ಸಾಧಿಸಲು ಶ್ರಮಿಸಬೇಕು ಎಂದು ರಾಹುಲ್‌ ಗಾಂಧಿ ಹೇಳಿದರು. ” ಜನಸಾಮಾನ್ಯರೊಂದಿಗೆ … Continued

ಶರದ್ ಪವಾರ್ ವಿರುದ್ಧ ಪೋಸ್ಟ್ ಮಾಡಿದ್ದಕ್ಕೆ ಮಹಾರಾಷ್ಟ್ರ ಬಿಜೆಪಿ ನಾಯಕನಿಗೆ ಕಪಾಳಮೋಕ್ಷ ಮಾಡಿದ ಎನ್‌ಸಿಪಿ ಕಾರ್ಯಕರ್ತ: ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಮುಂಬೈ: ಪಕ್ಷದ ಮುಖ್ಯಸ್ಥ ಶರದ್ ಪವಾರ್ ವಿರುದ್ಧ ಸಾಮಾಜಿಕ ಮಾಧ್ಯಮ ಪೋಸ್ಟ್ ಮಾಡಿದ್ದಕ್ಕಾಗಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಕಾರ್ಯಕರ್ತರು ಭಾನುವಾರ ಮಹಾರಾಷ್ಟ್ರ ಬಿಜೆಪಿ ನಾಯಕ ವಿನಾಯಕ ಅಂಬೇಕರ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ಮಾಡಿದ ವೀಡಿಯೊವನ್ನು ರಾಜ್ಯ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ ಪೋಸ್ಟ್ ಮಾಡಿದ್ದು, ವೀಡಿಯೊದಲ್ಲಿ, ಕೆಲವು ಎನ್‌ಸಿಪಿ ಕಾರ್ಯಕರ್ತರು ಅಂಬೇಕರ … Continued

ಬ್ಯಾಡ್ಮಿಂಟನ್‌ನಲ್ಲಿ ಭಾರತದಿಂದ ಇತಿಹಾಸ ಸೃಷ್ಟಿ: 14 ಬಾರಿಯ ಚಾಂಪಿಯನ್ಸ್ ಇಂಡೋನೇಷ್ಯಾ ಸೋಲಿಸಿ ಚೊಚ್ಚಲ ಥಾಮಸ್ ಕಪ್ ಪ್ರಶಸ್ತಿ ಗೆದ್ದ ಭಾರತ

ಬ್ಯಾಂಕಾಕ್: ಮೇ 15 ರಂದು ಬ್ಯಾಂಕಾಕ್‌ನಲ್ಲಿ ನಡೆದ ಥಾಮಸ್ ಉಬರ್ ಕಪ್ 2022 ರಲ್ಲಿ ಭಾರತವು 14 ಬಾರಿಯ ಚಾಂಪಿಯನ್ಸ್ ಇಂಡೋನೇಷ್ಯಾವನ್ನು ಸೋಲಿಸಿ ಇತಿಹಾಸವನ್ನು ಬರೆದಿದೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಇಂಡೋನೇಷ್ಯಾ ವಿರುದ್ಧ 3-0 ಜಯಗಳಿಸುವ ಮೂಲಕ ಭಾರತೀಯ ಪುರುಷರ ಬ್ಯಾಡ್ಮಿಂಟನ್‌ ತಂಡವು ಇದೇ ಮೊದಲ ಬಾರಿಗೆ ಪ್ರತಿಷ್ಠಿತ ಥಾಮಸ್ ಕಪ್ ಪ್ರಶಸ್ತಿಯನ್ನು ಗೆದ್ದಿದೆ. … Continued

ಸತ್ಯ ಬಹಿರಂಗಪಡಿಸಿದ 36 ವರ್ಷಗಳಿಂದ ಪುರುಷ ವೇಷದಲ್ಲಿದ್ದ ಈ ಮಹಿಳೆ…!

ತೂತುಕುಡಿ: ತಮಿಳುನಾಡಿನ ತೂತುಕುಡಿ ಜಿಲ್ಲೆಯ ವಿಧವೆ ಮಹಿಳೆಯೊಬ್ಬರು ತಮ್ಮ ಮಗಳನ್ನು ಬೆಳೆಸಲು 30 ವರ್ಷಗಳ ಕಾಲ ಪುರುಷ ವೇಷ ಧರಿಸಿ ಜೀವನ ಮಾಡಿದರು ಎಂಬ ಅಂಶ ಬೆಳಕಿಗೆ ಬಂದಿದೆ. ತೂತುಕುಡಿ ಪಟ್ಟಣದಿಂದ 30 ಕಿಮೀ ದೂರದಲ್ಲಿರುವ ಕಟ್ಟುನಾಯಕನಪಟ್ಟಿ ಗ್ರಾಮದ ಎಸ್ ಪೇಚಿಯಮ್ಮಾಳ್, ತನ್ನ ಪತಿಯ ಹಠಾತ್ ನಿಧನದ ನಂತರ ತಾನು ‘ಮುತ್ತು’ ಆಗಬೇಕಾಯಿತು ಎಂದು ಹೇಳಿದ್ದಾರೆ. … Continued

ಶರದ್‌ ಪವಾರ ಕುರಿತು ಆಕ್ಷೇಪಾರ್ಹ ಪೋಸ್ಟ್‌; ಮರಾಠಿ ನಟಿ ಬಂಧನ

ಮುಂಬೈ: ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ ಶೇರ್ ಮಾಡಿದ ಆರೋಪದ ಮೇಲೆ ಮರಾಠಿ ನಟಿ ಕೇತಕಿ ಚಿತಳೆ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಥಾಣೆ ಪೊಲೀಸರು ಶನಿವಾರ ಅವರನ್ನು ಬಂಧಿಸಿದ್ದಾರೆ. ಅವರು ಶುಕ್ರವಾರ ಹಂಚಿಕೊಂಡ ಮರಾಠಿ ಪೋಸ್ಟ್ ಅನ್ನು ಬೇರೊಬ್ಬರು ಬರೆದಿದ್ದಾರೆ. ಅದರಲ್ಲಿ ಪವಾರ್ ಎಂಬ ಉಪನಾಮ ಮತ್ತು 80ರ … Continued

ಅತ್ಯಾಚಾರ ಪ್ರಕರಣ: ರಾಜಸ್ಥಾನ ಸಚಿವರ ಪುತ್ರನನ್ನು ಬಂಧಿಸಲು ಜೈಪುರಕ್ಕೆ ಬಂದ ದೆಹಲಿ ಪೊಲೀಸರು

ಜೈಪುರ: 23 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ ರಾಜಸ್ಥಾನ ಸಚಿವ ಮಹೇಶ್ ಜೋಶಿ ಪುತ್ರ ರೋಹಿತ್ ನನ್ನು ಬಂಧಿಸಲು ದೆಹಲಿ ಪೊಲೀಸರ 15 ಅಧಿಕಾರಿಗಳ ತಂಡ ಇಂದು, ಭಾನುವಾರ ಬೆಳಗ್ಗೆ ಜೈಪುರಕ್ಕೆ ಆಗಮಿಸಿದೆ. ನಗರದಲ್ಲಿರುವ ಸಚಿವರ ಎರಡು ನಿವಾಸಗಳಿಗೆ ಪೊಲೀಸ್ ತಂಡ ಭೇಟಿ ನೀಡಿದ್ದು, ಆರೋಪಿ ಅಲ್ಲಿ ಸಿಗಲಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ … Continued