ಜಾರ್ಖಂಡ್‌ ಸಿಎಂ ಹೆಸರಿಗೆ ಗಣಿಗಾರಿಕೆ ಗುತ್ತಿಗೆ : ಹೇಮಂತ್ ಸೊರೇನ್‌ಗೆ ಚುನಾವಣಾ ಆಯೋಗದಿಂದ ನೋಟಿಸ್

ರಾಂಚಿ: ಜನತಾ ಪ್ರಾತಿನಿಧ್ಯ ಕಾಯಿದೆ 1951ರ ಸೆಕ್ಷನ್ 9ಎ ಉಲ್ಲಂಘನೆ ಆರೋಪದಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಹೆಸರಿಗೆ ಗಣಿ ಗುತ್ತಿಗೆ ನೀಡಿರುವ ಕುರಿತು ಚುನಾವಣಾ ಆಯೋಗ ಅವರಿಗೆ ನೋಟಿಸ್ ಕಳುಹಿಸಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ಗಣಿ ಗುತ್ತಿಗೆಯನ್ನು ಅವರ ಪರವಾಗಿ ನೀಡಿದ್ದಕ್ಕಾಗಿ ಅವರ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದು ಎಂದು ಚುನಾವಣಾ … Continued

ನವಜೋತ್ ಸಿಧು ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯಿಸಿ ಸೋನಿಯಾ ಗಾಂಧಿಗೆ ಪತ್ರ ಬರೆದ ಪಂಜಾಬ್ ಕಾಂಗ್ರೆಸ್ ಉಸ್ತುವಾರಿ…!

ನವದೆಹಲಿ: ಪಂಜಾಬ್ ಮತ್ತು ಚಂಡೀಗಢದ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಉಸ್ತುವಾರಿ ಹರೀಶ್ ಚೌಧರಿ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದ ಲಿಖಿತ ಪತ್ರದಲ್ಲಿ ಪಂಜಾಬ್ ಕಾಂಗ್ರೆಸ್ ಮಾಜಿ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯಿಸಿದ್ದಾರೆ. ಏಪ್ರಿಲ್ 23ರ ಪತ್ರದಲ್ಲಿ, “ನವೆಂಬರ್‌ನಿಂದ ಇಲ್ಲಿಯವರೆಗೆ ಪಂಜಾಬ್‌ನಲ್ಲಿ ಪಕ್ಷದ ವ್ಯವಹಾರಗಳ … Continued

ಐಎಫ್‌ಸಿಐನಿಂದ ₹ 25 ಕೋಟಿ ಸಾಲ ಪಡೆಯಲು ವಜ್ರಾಭರಣ ಮೌಲ್ಯ ಹೆಚ್ಚಿಸಿದ ಆರೋಪ: ಚೋಕ್ಸಿ ವಿರುದ್ಧ ಹೊಸ ಪ್ರಕರಣ ದಾಖಲಿಸಿದ ಸಿಬಿಐ

ನವದೆಹಲಿ:13,500 ಕೋಟಿ ರೂ.ಗಳ ಸಾಲ ವಂಚನೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಮತ್ತು ಅವರ ಸೋದರಳಿಯ ನೀರವ್ ಮೋದಿ ವಿರುದ್ಧ ಸಿಬಿಐ ಹೊಸ ಮೊಕದ್ದಮೆ ದಾಖಲಿಸಿದೆ. ಇಂಡಸ್ಟ್ರಿಯಲ್ ಫೈನಾನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದಿಂದ 25 ಕೋಟಿ ರೂ.ಗಳ ಸಾಲ ಪಡೆಯಲು ವಜ್ರ ಮತ್ತು ಆಭರಣಗಳ ಮೌಲ್ಯವನ್ನು ಹೆಚ್ಚಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ … Continued

ಸಚಿವ ನವಾಬ್ ಮಲಿಕ್ ಆಸ್ಪತ್ರೆಗೆ ದಾಖಲು, ಅವರ ಆರೋಗ್ಯ ಸ್ಥಿತಿ ಗಂಭೀರ: ನ್ಯಾಯಾಲಯಕ್ಕೆ ತಿಳಿಸಿದ ವಕೀಲರು

ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ(ED)ದಿಂದ ಬಂಧಿತರಾಗಿರುವ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರು ಜ್ವರ ಮತ್ತು ಅತಿಸಾರದಿಂದ ಬಳಲುತ್ತಿದ್ದು, ಸೋಮವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅವರ ವಕೀಲರು ಇಲ್ಲಿನ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದ್ದಾರೆ ಮತ್ತು ಮಲಿಕ್ ಅವರ ಆರೋಗ್ಯವು ಹದಗೆಟ್ಟಿದೆ ಮತ್ತು ಅವರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಹೇಳಿದ್ದಾರೆ. ಕಳೆದ ವಾರ, … Continued

ಕುಡಿದ ಅಮಲಿನಲ್ಲಿ ಪೊಲೀಸರ ಜೊತೆ ಮಹಿಳಾ ಅಧಿಕಾರಿ ಅನುಚಿತ ವರ್ತನೆ, ವೀಡಿಯೋ ವೈರಲ್ ನಂತರ ತನಿಖೆಗೆ ಆದೇಶ….ವೀಕ್ಷಿಸಿ

ಬಹ್ರೈಚ್: ಕುಡಿದ ಅಮಲಿನಲ್ಲಿ ಪೊಲೀಸರ ಜೊತೆ ಅನುಚಿತವಾಗಿ ವರ್ತಿಸಿದ ಮಹಿಳಾ ಅಧಿಕಾರಿಯ ವಿರುದ್ಧ ಉತ್ತರ ಪ್ರದೇಶದ ಆಡಳಿತವು ತನಿಖೆಗೆ ಆದೇಶಿಸಿದೆ. ದೇವಿಪತನ್ ಮಂಡಲದ ಉಪ ಕಾರ್ಮಿಕ ಆಯುಕ್ತೆ ರಚನಾ ಕೇಸರ್ವಾನಿ ಎಂದು ಗುರುತಿಸಲಾದ ಅಧಿಕಾರಿಯು ಕುಡಿದು ಬಹ್ರೈಚ್ ಪೊಲೀಸರಿಗೆ ‘ಬೆದರಿಕೆ’ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಹ್ರೈಚ್ ಜಿಲ್ಲೆಯ … Continued

ಭಾರೀ ಗಾಳಿ ಹೊಡೆತಕ್ಕೆ ಸಿಲುಕಿದ ಸ್ಪೈಸ್​ಜೆಟ್​​​ ವಿಮಾನದೊಳಗೆ ಜನ ಭಯಭೀತ, ಚೆಲ್ಲಾಪಿಲ್ಲಿಯಾದ ವಸ್ತುಗಳು | ದೃಶ್ಯ ವೀಡಿಯೊದಲ್ಲಿ ಸೆರೆ

ಕೋಲ್ಕತ್ತಾ: ಮುಂಬೈ ನಿಂದ, ಪಶ್ಚಿಮಬಂಗಾಳದ ದುರ್ಗಾಪುರಕ್ಕೆ ಹೊರಟಿದ್ದ ಸ್ಪೈಸ್​ ಜೆಟ್ವಿಮಾನ ಭಾನುವಾರ ಸಂಜೆ ಬಹುದೊಡ್ಡ ದುರಂತದಿಂದ ಸ್ವಲ್ಪದರಲ್ಲೇ ಪಾರಾಗಿದೆ. ಪೈಲಟ್​​ಗಳ ಸಮಯಪ್ರಜ್ಞೆಯಿಂದ 188 ಮಂದಿಯ ಪ್ರಾಣ ಉಳಿದಿದ್ದು, ದುರ್ಗಾಪುರ ಏರ್​​​ಪೋರ್ಟ್​ನಲ್ಲಿ ಲ್ಯಾಂಡ್​ ಆಗುವಾಗ ಸುಂಟರಗಾಳಿಯ ಪ್ರಭಾವಕ್ಕೆ ಸಿಲುಕಿದ ಕೆಲಕಾಲ ವಿಮಾನ ತೀವ್ರ ಅಲುಗಾಟಕ್ಕೆ ತುತ್ತಾಯಿತು. ಗಾಳಿಗೆ ಸಿಲುಕಿದ ಅಲುಗಾಡಿದ ವಿಮಾನದ ಒಳಗಿನ ದೃಶ್ಯದ ವೀಡಿಯೊ ಈಗ … Continued

ಮೂರು ದೇಶಗಳ ಯುರೋಪ್‌ ಪ್ರವಾಸ ಆರಂಭಿಸಿದ ಪ್ರಧಾನಿ ಮೋದಿ

ನವದೆಹಲಿ: ಈ ವರ್ಷದ ಮೊದಲ ವಿದೇಶ ಪ್ರವಾಸವನ್ನು ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ್ದು, ಭಾನುವಾರ ರಾತ್ರಿ ಜರ್ಮನಿಯ ಬರ್ಲಿನ್‌ಗೆ ತೆರಳಿದ್ದಾರೆ. ಯುರೋಪಿನ ದೇಶಗಳೊಂದಿಗೆ ಶಾಂತಿ, ಸಹಕಾರ ಹಾಗೂ ವ್ಯಾಪಾರವನ್ನು ಮತ್ತಷ್ಟು ಬಲಪಡಿಸಲು ಅವರು ಮುಂದಾಗಿದ್ದಾರೆ. ಈ ಕುರಿತು ಟ್ವೀಟ್​ ಮಾಡಿರುವ ಪ್ರಧಾನ ಮಂತ್ರಿ ಕಚೇರಿ (ಪಿಎಂಒ), ಮೂರು ದಿನಗಳ ಪ್ರವಾಸದಲ್ಲಿ ಪ್ರಧಾನಿ ಮೋದಿ ಅವರು ಜರ್ಮನ್ … Continued

ಯಾವುದೇ ವ್ಯಕ್ತಿಯನ್ನು ಕೋವಿಡ್‌ ಲಸಿಕೆ ಹಾಕಿಸಿಕೊಳ್ಳುವಂತೆ ಒತ್ತಾಯಿಸುವಂತಿಲ್ಲ: ಸುಪ್ರೀಂಕೋರ್ಟ್​

ನವದೆಹಲಿ: ಯಾವುದೇ ವ್ಯಕ್ತಿಯನ್ನು ಕೋವಿಡ್​ ಲಸಿಕೆ ಹಾಕಿಸಿಕೊಳ್ಳುವಂತೆ ಬಲವಂತ ಮಾಡುವ ಹಾಗಿಲ್ಲ. ಪ್ರಸ್ತುತವಿರುವ ಸರ್ಕಾರದ ಕೋವಿಡ್​-19 ಲಸಿಕೆ ನೀತಿ ಅಸಮಂಜಸ ಅಥವಾ ಅನಿಯಂತ್ರಿತವಲ್ಲ ಎಂದು ಸೋಮವಾರ ಸುಪ್ರೀಂಕೋರ್ಟ್ ಹೇಳಿದೆ. ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್ ಮತ್ತು ಬಿ.ಆರ್.ಗವಾಯಿ ಅವರಿದ್ದ ದ್ವಿಸದಸ್ಯ ಪೀಠ, ವಿವಿಧ ಸಂಸ್ಥೆಗಳು ಮತ್ತು ಸರ್ಕಾರಗಳು ಲಸಿಕೆ ಹಾಕಿಸಿಕೊಳ್ಳದ ಜನರ ಮೇಲೆ ನಿರ್ಬಂಧಗಳನ್ನು ವಿಧಿಸಿರುವುದು ಸರಿಯಲ್ಲ. … Continued

ವೈದ್ಯಕೀಯ ವಿದ್ಯಾರ್ಥಿಗಳು ಸಂಸ್ಕೃತದಲ್ಲಿ ‘ಚರಕ ಶಪಥʼದ ಪ್ರತಿಜ್ಞಾವಿಧಿ ತೆಗೆದುಕೊಂಡ ನಂತರ ಡೀನ್ ಅವರನ್ನು ಹುದ್ದೆಯಿಂದ ತೆಗೆದ ತಮಿಳುನಾಡು ಸರ್ಕಾರ

ತಮಿಳುನಾಡಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮಧುರೈ ಮೆಡಿಕಲ್ ಕಾಲೇಜಿನ ಡೀನ್ ಎ. ರತ್ನವೇಲ್ ಅವರನ್ನು ಭಾನುವಾರದಂದು ಅವರ ಹುದ್ದೆಯಿಂದ ಬಿಡುಗಡೆಗೊಳಿಸಿದೆ ಮತ್ತು ಎಲ್ಲಿಯೂ ಪೋಸ್ಟ್​ ಕೊಟ್ಟಿಲ್ಲ. ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿಗಳು ಸಂಸ್ಕೃತದಲ್ಲಿ ‘ಮಹರ್ಷಿ ಚರಕ ಶಪಥ’ ತೆಗೆದುಕೊಂಡ ಒಂದು ದಿನದ ನಂತರ ತಮಿಳುನಾಡು ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ವೈದ್ಯಕೀಯ ಕೋರ್ಸ್‌ಗೆ … Continued

ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ರಾಜಕೀಯ ಪಕ್ಷ ಕಟ್ಟುತ್ತಾರಾ? ಅದನ್ನು ಮಾಡಬಹುದು ಎನ್ನುತ್ತವೆ ಮೂಲಗಳು

ನವದೆಹಲಿ: ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು “ಪುಟವನ್ನು ತಿರುಗಿಸಲು” ಸಿದ್ಧರಾಗಿದ್ದಾರೆ ಮತ್ತು 2024 ರ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ತಮ್ಮದೇ ಆದ ರಾಜಕೀಯ ಪಕ್ಷ ಸ್ಥಾಪಿಸಲು ಸಿದ್ಧರಾಗಿದ್ದಾರೆ ಎಂದು ಈ ವಿಷಯದ ಬಗ್ಗೆ ತಿಳಿದಿರುವ ಮೂಲಗಳು ತಿಳಿಸಿವೆ. ಬಿಹಾರಕ್ಕೆ ತೆರಳಿ, ಜನರನ್ನು ಭೇಟಿ ಮಾಡುವ ಮೂಲಕ ಮತ್ತು ಅವರನ್ನು ಪೀಡಿಸುವ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ಮೂಲಕ … Continued