ಬೆಂಗಳೂರಿನ ಚಾಮರಾಜಪೇಟೆ ಮೈದಾನದಲ್ಲಿ ಗಣೇಶ ಚತುರ್ಥಿ ಆಚರಣೆ: ಸರ್ಕಾರದ ವಿವೇಚನೆಗೆ ಬಿಟ್ಟ ಹೈಕೋರ್ಟ್

ಬೆಂಗಳೂರು: ಬೆಂಗಳೂರು: ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡುವ ನಿರ್ಧಾರ ಸರ್ಕಾರದ ವಿವೇಚನೆಗೆ ಬಿಡಲಾಗಿದೆ ಎಂದು ಕರ್ನಾಟಕ ಹೈಕೋರ್ಟ್‌ ಆದೇಶ ಹೊರಡಿಸಿದೆ. ಚಾಮರಾಜಪೇಟೆ ಮೈದಾನ ಕ್ರೀಡೆಗಳಿಗೆ ಮಾತ್ರ ಸೀಮಿತವಾಗಿರಬೇಕು ಎಂದು ಗುರುವಾರ ಹೈಕೋರ್ಟ್‌ ಮಧ್ಯಂತರ ಆದೇಶ ಹೊರಡಿಸಿತ್ತು. ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಕೋರ್ಟ್‌ಗೆ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಶುಕ್ರವಾರ ಮಧ್ಯಂತರ ಆದೇಶದಲ್ಲಿ … Continued

ದೆಹಲಿ, ಇತರ 8 ರಾಜ್ಯಗಳ 21 ನಕಲಿ ವಿಶ್ವವಿದ್ಯಾಲಯಗಳ ಪಟ್ಟಿ ಬಿಡುಗಡೆ ಮಾಡಿದ ಯುಜಿಸಿ

ನವದೆಹಲಿ: ಶುಕ್ರವಾರ ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ) ದೆಹಲಿ, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಒಡಿಶಾ, ಪುದುಚೇರಿ ಮತ್ತು ಆಂಧ್ರಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ 21 ನಕಲಿ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ವಿಶ್ವವಿದ್ಯಾನಿಲಯಗಳಲ್ಲಿ ಸೇಂಟ್ ಜಾನ್ಸ್ ವಿಶ್ವವಿದ್ಯಾಲಯ, ವಿಶ್ವಸಂಸ್ಥೆಯ ವಿಶ್ವವಿದ್ಯಾಲಯ ಮತ್ತು ವೃತ್ತಿಪರ ವಿಶ್ವವಿದ್ಯಾಲಯಗಳು ಸೇರಿವೆ. ಅಧಿಕೃತ ಅಧಿಸೂಚನೆ ಏನು ಹೇಳಿದೆ? … Continued

ಸೋನಾಲಿ ಫೋಗಟ್ ಸಾವಿನ ಪ್ರಕರಣ-ಪಾನೀಯದಲ್ಲಿ ಪದಾರ್ಥ ಬೆರೆಸಿದ್ದನ್ನು ಒಪ್ಪಿಕೊಂಡ ಇಬ್ಬರು ಆರೋಪಿಗ : ಗೋವಾ ಪೊಲೀಸರು

ಪಣಜಿ: ಗೋವಾದ ರೆಸ್ಟೋರೆಂಟ್ ಕಮ್ ನೈಟ್‌ಕ್ಲಬ್‌ನಲ್ಲಿ ಪಾರ್ಟಿ ಮಾಡುತ್ತಿದ್ದಾಗ ನಟಿ ಮತ್ತು ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಅವರನ್ನು ಆಕೆಯ ಇಬ್ಬರು ಸಹಚರರು ಬಲವಂತವಾಗಿ ಕೆಲವು ಪದಾರ್ಥ” ವನ್ನು ಕುಡಿಯುವಂತೆ ಮಾಡಿದ್ದಾರೆ ಎಂದು ಭದ್ರತಾ ಕ್ಯಾಮೆರಾ ದೃಶ್ಯಗಳು ಮತ್ತು ಆರೋಪಿಗಳ ತಪ್ಪೊಪ್ಪಿಗೆಗಳನ್ನು ಉಲ್ಲೇಖಿಸಿ ಪೊಲೀಸರು ಹೇಳಿದ್ದಾರೆ. ಬೆರಸಿದ ಪದಾರ್ಥವನ್ನು ಕುಡಿದ ನಂತರ ಸೋನಾಲಿ ಫೋಗಟ್‌ ಅವರು … Continued

ಗುಲಾಂ ನಬಿ ಆಜಾದ್‌ಗೆ ಬೆಂಬಲ ಸೂಚಿಸಿ ಜಮ್ಮು-ಕಾಶ್ಮೀರದ ಐವರು ನಾಯಕರು ಕಾಂಗ್ರೆಸ್‌ಗೆ ರಾಜೀನಾಮೆ

ನವದೆಹಲಿ: ಗುಲಾಂ ನಬಿ ಆಜಾದ್ ಅವರಿಗೆ ಬೆಂಬಲ ಸೂಚಿಸಿ ಐವರು ಜಮ್ಮು ಮತ್ತು ಕಾಶ್ಮೀರದ ನಾಯಕರು ಮತ್ತು ಮಾಜಿ ಶಾಸಕರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ. ಆಜಾದ್ ಅವರು ಪಕ್ಷದ ಸಮಾಲೋಚನಾ ಕಾರ್ಯವಿಧಾನವನ್ನು ನಾಶಪಡಿಸಿದ್ದಾರೆ ಎಂದು ರಾಹುಲ್ ಗಾಂಧಿ ವಿರುದ್ಧ ದೂರಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ನಾಯಕರಾದ ಗುಲಾಂ ಮೊಹಮ್ಮದ್ ಸರೂರಿ, ಹಾಜಿ ಅಬ್ದುಲ್ ರಶೀದ್, … Continued

ರಾಹುಲ್ ʼಅಪ್ರಬುದ್ಧತೆʼಯಿಂದ ಕಾಂಗ್ರೆಸ್‌ಗೆ ಹೇಗೆ ಸೋಲಾಯ್ತೆಂದು ರಾಜೀನಾಮೆ ಪತ್ರದಲ್ಲಿ ಪಟ್ಟಿ ಮಾಡಿ ಸೋನಿಯಾ ಗಾಂಧಿಗೆ ಕಳುಹಿಸಿದ ಗುಲಾಂ ನಬಿ ಆಜಾದ್‌…!

ನವದೆಹಲಿ: ಹಿರಿಯ ನಾಯಕ ಗುಲಾಂ ನಬಿ ಆಜಾದ್​ ದಿಢೀರ್​ ರಾಜೀನಾಮೆ ನೀಡಿ ಕಾಂಗ್ರೆಸ್​ನ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ತನಗೆ ನೀಡಿದ ಎಲ್ಲ ಜವಾಬ್ದಾರಿಗಳಿಂದಲೂ ಮುಕ್ತರಾಗುವುದಾಗಿ ಹೇಳಿದ್ದಾರೆ. ಇದು ಪಕ್ಷದ ಪಾಲಿಗೆ ಒಂದು ದೊಡ್ಡ ಆಘಾತ ಎಂದು ವಿಶ್ಲೇಷಿಸಲಾಗುತ್ತಿದೆ. ರಾಹುಲ್‌ ಗಾಂಧಿಯವರ ಮೇಲೆ ತೀಕ್ಷ್ಣ ವಾಗ್ದಾಳಿ ನಡೆಸಿದ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಇಂದು,ಶುಕ್ರವಾರ ಕಾಂಗ್ರೆಸ್‌ಗೆ … Continued

ಚುನಾವಣಾ ಉಚಿತ ಕೊಡುಗೆ ವಿಚಾರಣೆ ತ್ರಿಸದಸ್ಯ ಪೀಠಕ್ಕೆ ವಹಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ: ಉಚಿತ ಕೊಡುಗೆಗಳಿಗೆ ಸಂಬಂಧಿಸಿದ ವಿಚಾರಣೆಯನ್ನು ಮತ್ತೊಂದು ತ್ರಿಸದಸ್ಯ ಪೀಠಕ್ಕೆ ವಹಿಸಲು ಸುಪ್ರೀಂ ಕೋರ್ಟ್‌ ತೀರ್ಮಾನಿಸಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರು ಶುಕ್ರವಾರ ರಾಜಕೀಯ ಪಕ್ಷಗಳು ಭರವಸೆ ನೀಡುವ “ತರ್ಕಬದ್ಧವಲ್ಲದ ಉಚಿತ” ಗಳನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ತ್ರಿಸದಸ್ಯ ಪೀಠಕ್ಕೆ ವರ್ಗಾಯಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಹಾಗೂ … Continued

ಕಾಂಗ್ರೆಸ್‌ಗೆ ಆಘಾತ: ಗುಲಾಂ ನಬಿ ಆಜಾದ್‌ ಕಾಂಗ್ರೆಸ್‌ಗೆ ರಾಜೀನಾಮೆ, ರಾಹುಲ್ ಗಾಂಧಿ ಭದ್ರತಾ ಸಿಬ್ಬಂದಿಯೂ ನಿರ್ಧಾರ ತೆಗೆದುಕೊಳ್ತಿದ್ರು ಎಂದು ವಾಗ್ದಾಳಿ

ನವದೆಹಲಿ: ಕಾಂಗ್ರೆಸ್‌ಗೆ ಹೊಸ ಆಘಾತದಲ್ಲಿ, ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿದ್ದಾರೆ. ಪಕ್ಷದ ಸಾಂಸ್ಥಿಕ ನಾಯಕತ್ವದ ವಿರುದ್ಧ ತೀಕ್ಷ್ಣವಾದ ವಾಗ್ದಾಳಿ ನಡೆಸಿದ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ, ಆಜಾದ್ ಅವರು, ಪಕ್ಷದಲ್ಲಿ ಹಿರಿಯ ನಾಯಕರನ್ನು ಕಡೆಗಣಿಸಿರುವುದು ಪಕ್ಷದಿಂದ ನಿರ್ಗಮಿಸಲು … Continued

ಲಂಡನ್‌: ಗೋಪೂಜೆ ನೆರವೇರಿಸಿದ ಬ್ರಿಟನ್‌ ಪ್ರಧಾನಿ ಹುದ್ದೆ ಮುಂಚೂಣಿ ಅಭ್ಯರ್ಥಿ ರಿಷಿ ಸುನಕ್‌-ಅಕ್ಷತಾ ಮೂರ್ತಿ ದಂಪತಿ | ವೀಕ್ಷಿಸಿ

ಲಂಡನ್‌: ಬ್ರಿಟನ್‌ ಪ್ರಧಾನ ಮಂತ್ರಿ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ಕನ್ಸರ್ವೇಟಿವ್ ಪಕ್ಷದ ನಾಯಕತ್ವದ ಅಭ್ಯರ್ಥಿ ರಿಷಿ ಸುನಕ್ ಲಂಡನ್‌ನಲ್ಲಿ ಗೋ ಪೂಜೆ (ಹಸುವಿನ ಪೂಜೆ) ನಡೆಸುತ್ತಿರುವುದು ಕಂಡುಬಂದಿದೆ. ಲಂಡನ್‌ನಲ್ಲಿ ಗೋ ಪೂಜೆ ಮಾಡಲು ರಿಚ್‌ಮಂಡ್‌ನ ಸಂಸದ ರಿಷಿ ಸುನಕ್‌ ತಮ್ಮ ಪತ್ನಿ ಅಕ್ಷತಾ ಮೂರ್ತಿ ಅವರೊಂದಿಗೆ ಕಾಣಿಸಿಕೊಂಡರು. ಲಂಡನ್‌ನಲ್ಲಿ ಸುನಕ್ ತನ್ನ ಕೈಯಲ್ಲಿ ಹಿತ್ತಾಳೆಯ ಬಟ್ಟಲಿನೊಂದಿಗೆ ಅಕ್ಷತಾಳೊಂದಿಗೆ … Continued

ಸೋನಾಲಿ ಫೋಗಟ್ ಶವ ಪರೀಕ್ಷೆಯಲ್ಲಿ ದೇಹದ ಮೇಲೆ ಗಾಯಗಳು ಪತ್ತೆ: ನಂತರ ಇಬ್ಬರು ಸಹಾಯಕರ ಬಂಧನ

ಪಣಜಿ: : ಹರ್ಯಾಣ ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಅವರ ದೇಹದ ಮೇಲೆ ಬಹು ಗಾಯಗಳಿರುವುದನ್ನು ಮರಣೋತ್ತರ ಪರೀಕ್ಷೆ ಬಹಿರಂಗಪಡಿಸಿದ ನಂತರ ಅವರ ಕೊಲೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಗೋವಾ ಪೊಲೀಸರು ಅವರ ಇಬ್ಬರು ಸಹಾಯಕರನ್ನು ಗುರುವಾರ ಬಂಧಿಸಿದ್ದಾರೆ. ಸೋನಾಲಿ ಫೋಗಟ್ ಅವರ ದೇಹದಲ್ಲಿ ಯಾವುದೇ ಚೂಪಾದ ಗಾಯಗಳು ಕಂಡುಬಂದಿಲ್ಲ ಎಂದು ಗೋವಾ ಪೊಲೀಸ್ ಅಧಿಕಾರಿಗಳು … Continued

ರೈಲ್ವೇ ಪರೀಕ್ಷೆ ಪಾಸ್‌ ಮಾಡಲು‌ ಹೆಬ್ಬೆರಳಿನ ಚರ್ಮವನ್ನೇ ಕಿತ್ತು ಸ್ನೇಹಿತನ ಬೆರಳಿಗೆ ಅಂಟಿಸಿದ ಭೂಪ…! ಆದ್ರೆ ಸ್ಯಾನಿಟೈಸರ್ ಹಾಳು ಮಾಡ್ಬಿಡ್ತು ಇವರ ಪ್ಲ್ಯಾನ್…

ವಡೋದರಾ: ರೈಲ್ವೇ ಉದ್ಯೋಗವನ್ನು ಪಡೆಯುವ ಹತಾಶ ಪ್ರಯತ್ನದಲ್ಲಿ, ಅಭ್ಯರ್ಥಿಯೊಬ್ಬ ತನ್ನ ಹೆಬ್ಬೆರಳಿನ ಚರ್ಮವನ್ನು ಬಿಸಿ ಪ್ಯಾನ್ ಬಳಸಿ ತೆಗೆದು ಅದನ್ನು ತನ್ನ ಸ್ನೇಹಿತನ ಹೆಬ್ಬೆರಳಿಗೆ ಅಂಟಿಸಿದ ವಿದ್ಯಮಾನ ಬೆಳಕಿಗೆ ಬಂದಿದೆ. ಈತ ಸ್ನೇಹಿತ ಈತನ ಬಯೋಮೆಟ್ರಿಕ್ ಪರಿಶೀಲನೆಯಲ್ಲಿ ಓಕೆ ಆಗಿ ತನ್ನ ಸ್ಥಾನದಲ್ಲಿ ನೇಮಕಾತಿ ಪರೀಕ್ಷೆಗೆ ಹಾಜರಾಗುತ್ತಾನೆ ಎಂಬ ಭರವಸೆಯ ಮೇಲೆ ಈ ಕೃತ್ಯಕ್ಕೆ ಮುಂದಾಗಿದ್ದಾನೆ…! … Continued