ಕಾಶ್ಮೀರದಲ್ಲಿ ‘ಸಹಾಯ’ ಕೇಳಿ ತಾಲಿಬಾನ್ ನಾಯಕತ್ವ ಭೇಟಿಯಾದ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೆಇಎಂ ಮುಖ್ಯಸ್ಥ ಮಸೂದ್ ಅಜರ್ : ಮೂಲಗಳು

ನವದೆಹಲಿ: ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸಲು ತಮ್ಮ ಬೆಂಬಲವನ್ನು ಪಡೆಯಲು ತಾಲಿಬಾನ್‌ ಅಫ್ಘಾನಿಸ್ತಾನದ ಮೇಲೆ ನಿಯಂತ್ರಣ ಸಾಧಿಸಿದ ನಂತರ ಆಗಸ್ಟ್ ಮೂರನೇ ವಾರದಲ್ಲಿ ಕಂದಹಾರ್‌ನಲ್ಲಿದ್ದರು ಎಂದು ಮೂಲಗಳು ತಿಳಿಸಿವೆ. ಮಸೂದ್ ಅಜರ್ ತಾಲಿಬಾನ್‌ ರಾಜಕೀಯ ವ್ಯವಹಾರದ ಮುಖ್ಯಸ್ಥ ಮುಲ್ಲಾ ಅಬ್ದುಲ್ ಘನಿ … Continued

ಪೈಲಟ್‌ಗೆ ಹೃದಯಾಘಾತ, ಬಾಂಗ್ಲಾದೇಶದ ವಿಮಾನ ನಾಗ್ಪುರದಲ್ಲಿ ತುರ್ತು ಭೂಸ್ಪರ್ಷ

ನಾಗ್ಪುರ: ಪೈಲಟ್‌ಗೆ ಹೃದಯಾಘಾತ ಆಗಿ ಬಾಂಗ್ಲಾದೇಶದ ಬಿಮನ್ ಏರ್‌ಲೈನ್ಸ್‌ಗೆ ಸೇರಿದ ವಿಮಾನವೊಂದು ನಾಗ್ಪುರದಲ್ಲಿ ತುರ್ತು ಲ್ಯಾಂಡಿಂಗ್ ಆಗಿರುವ ಘಟನೆ ವರದಿಯಾಗಿದೆ. ಮಸ್ಕತ್‌ನಿಂದ ಢಾಕಾಗೆ ಹೊರಟಿದ್ದ ಬಾಂಗ್ಲಾದೇಶ ವಿಮಾನದ ಪೈಲಟ್‌ಗೆ ದಾರಿ ಮಧ್ಯೆ ಹೃದಯಾಘಾತವಾಗಿದೆ. ಇದರಿಂದಾಗಿ ತಕ್ಷಣವೇ ಭೂಸ್ಪರ್ಶ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 126 ಪ್ರಯಾಣಿಕರನ್ನು ಹೊತ್ತಿದ್ದ ಬೋಯಿಂಗ್ ವಿಮಾನ ಶುಕ್ರವಾರ ಬೆಳಗ್ಗೆ 11.40ರ ಹೊತ್ತಿಗೆ … Continued

ಉತ್ತರಾಖಂಡದಲ್ಲಿ ಭಾರೀ ಮಳೆಗೆ ಡೆಹ್ರಾಡೂನ್-ರಿಷಿಕೇಶ್ ಸೇತುವೆ ಕುಸಿತ: ವಿಡಿಯೊದಲ್ಲಿ ಸೆರೆ

ನವದೆಹಲಿ: ಶುಕ್ರವಾರ ಉತ್ತರಾಖಂಡದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಡೆಹ್ರಾಡೂನ್-ಋಷಿಕೇಶ್ ಸೇತುವೆ ರಾಣಿ ಪೋಖರಿ ಗ್ರಾಮದ ಬಳಿ ಕುಸಿದಿದೆ. ಮುರಿದ ಸೇತುವೆಯ ಕೆಳಗೆ ಒಂದು ನದಿ ಹರಿಯುತ್ತಲೇ ಇದೆ. ಇದರಲ್ಲಿ ಒಂದು ಟ್ರಕ್ ಸಿಲುಕಿದೆ, ಇನ್ನೂ ಕೆಲವು ಸಿಲುಕಿಕೊಂಡಿವೆ. ಈ ಘಟನೆಯು ಕ್ಯಾಮರಾದಲ್ಲಿ ಸೆರೆಯಾಗಿದೆ. ಏತನ್ಮಧ್ಯೆ, ಮಳೆಯಿಂದ ಹಾನಿಗೊಳಗಾದ ಪ್ರದೇಶದ ದೃಶ್ಯಗಳು ಮಾಲ್ದೇವತಾ-ಸಹಸ್ರಾಧಾರ ಲಿಂಕ್ ರಸ್ತೆ … Continued

2011ರಿಂದ ಅಮೆರಿಕ ಪಡೆಗಳ ಮೇಲೆ ಮಾರಣಾಂತಿಕ ದಾಳಿ ನಡೆಸಿದ ಇಸ್ಲಾಮಿಕ್ ಸ್ಟೇಟ್-ಖೊರಾಸನ್ ಯಾರು..? ಅವರ ರಕ್ತಸಿಕ್ತ ಇತಿಹಾಸದ ಇಣುಕುನೋಟ

ಕಾಬೂಲ್ ವಿಮಾನ ನಿಲ್ದಾಣದಲ್ಲಿ ಗುರುವಾರ ರಾತ್ರಿ ನಡೆದ ಹಲವು ಬಾಂಬ್ ಸ್ಫೋಟಗಳು 2011 ರಿಂದೀಚೆಗೆ ಅಫ್ಘಾನಿಸ್ತಾನದಲ್ಲಿ ಯುಎಸ್ ಪಡೆಗಳ ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿಯಾಗಿದೆ. 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ಭಯೋತ್ಪಾದಕ ದಾಳಿಯಲ್ಲಿ 13 ಅಮೆರಿಕ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಕೊನೆಯ ಬಾರಿಗೆ ಅಮೆರಿಕ ಪಡೆಗಳು ಇಷ್ಟು ಸೈನಿಕರನ್ನು ಕಳೆದುಕೊಂಡಿದ್ದು 20 … Continued

1.50 ಕೋಟಿ ವಾರ್ಷಿಕ ಆದಾಯದ ವರದಿಗಳ ನಡುವೆ ಅಮಿತಾಬ್ ಬಚ್ಚನ್ ಪೊಲೀಸ್‌ ಅಂಗರಕ್ಷಕನ ವರ್ಗಾವಣೆ..!

ಅಮಿತಾಬ್ ಬಚ್ಚನ್ ಅವರ ಅಂಗರಕ್ಷಕ ಜಿತೇಂದ್ರ ಶಿಂಧೆ ಅವರನ್ನು 1.5 ಕೋಟಿ ವಾರ್ಷಿಕ ಆದಾಯ ಗಳಿಸಿದ ಆರೋಪದ ನಂತರ ಅವರನ್ನು ವರ್ಗಾಯಿಸಲಾಯಿತು. ಈ ವಿಷಯದ ಬಗ್ಗೆ ಇಲಾಖಾ ವಿಚಾರಣೆಯನ್ನೂ ಆರಂಭಿಸಲಾಗಿದೆ ಮುಂಬೈ ಪೊಲೀಸ್ ಇಲಾಖೆಗೆ ಸೇರಿಕೊಂಡ ಕಾನ್ ಸ್ಟೇಬಲ್ ಶಿಂಧೆ ಅವರನ್ನು ಅಮಿತಾಬ್ ಬಚ್ಚನ್ ಗೆ ಅಂಗರಕ್ಷಕರಾಗಿ ನೇಮಿಸಲಾಯಿತು. ಅವರು ಕಳೆದ ಹಲವು ವರ್ಷಗಳಿಂದ ಬಿಗ್ … Continued

ಭಾರತದಲ್ಲಿ 44,658 ಹೊಸ ಕೋವಿಡ್ -19 ಪ್ರಕರಣಗಳು ದಾಖಲು, 50% ವಯಸ್ಕ ಜನಸಂಖ್ಯೆ ದಾಟಿದ ಕನಿಷ್ಠ ಒಂದು ಡೋಸ್‌ ಲಸಿಕೆ ನೀಡಿಕೆ

ನವದೆಹಲಿ: ಭಾರತವು ಸತತ ಎರಡನೇ ದಿನ 40,000 ಕ್ಕೂ ಹೆಚ್ಚು ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದ್ದು, ಕಳೆದ 24 ಗಂಟೆಗಳಲ್ಲಿ ದೇಶವು 44,658 ಸೋಂಕುಗಳನ್ನು ದಾಖಲಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ತಿಳಿಸಿದೆ. ಭಾರತವು ತನ್ನ ಅರ್ಹ ವಯಸ್ಕ ಜನಸಂಖ್ಯೆಯ ಅರ್ಧದಷ್ಟು ಜನರಿಗೆ ಲಸಿಕೆಯ ಕನಿಷ್ಠ ಒಂದು ಡೋಸ್ ನೀಡುವುದನ್ನು ಪೂರ್ಣಗೊಳಿಸಿದ್ದರೂ ಸಹ ಕೋವಿಡ್ … Continued

ಸುಪ್ರೀಂ ಕೋರ್ಟ್‌ಗೆ ನೇಮಕವಾದ ಮೂವರು ಹೊಸ ಮಹಿಳಾ ನ್ಯಾಯಮೂರ್ತಿಗಳು..ಅವರಲ್ಲಿ ಒಬ್ಬರು 2027ರಲ್ಲಿ ಸಿಜೆಐ ಆಗಬಹುದು

ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ಉನ್ನತೀಕರಿಸಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದ ಎಲ್ಲ ಒಂಬತ್ತು ಹೆಸರುಗಳನ್ನು ಕೇಂದ್ರವು ಅನುಮೋದಿಸಿದೆ. ಅವರಲ್ಲಿ , ಮೂವರು ಮಹಿಳಾ ನ್ಯಾಯಮೂರ್ತಿಗಳಿದ್ದಾರೆ. ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ, ಬೇಲಾ ತ್ರಿವೇದಿ ಮತ್ತು ಹಿಮಾ ಕೊಹ್ಲಿ -ಈ ಮೂವರನ್ನು ಒಂದೇ ಬಾರಿಗೆ ಕೊಲಿಜಿಯಂ ಶಿಫಾರಸು ಮಾಡಿದೆ. ಇವರಲ್ಲಿ ಭಾರತದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಲು ಸಜ್ಜಾಗಿದ್ದಾರೆ. … Continued

ಕೃಷಿ ಶಾಸನಗಳ ವಿರುದ್ಧ 9 ತಿಂಗಳ ಪ್ರತಿಭಟನೆ: 2 ದಿನಗಳ ರಾಷ್ಟ್ರೀಯ ಸಮಾವೇಶಕ್ಕೆ ಸಿಂಗು ಗಡಿಯಲ್ಲಿ ಸೇರುತ್ತಿರುವ ರೈತರು

ನವದೆಹಲಿ: ಕಳೆದ ವರ್ಷ ಜಾರಿಗೆ ತರಲಾದ ಮೂರು ಹೊಸ ಕೃಷಿ ಶಾಸನಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಒಂಬತ್ತು ತಿಂಗಳುಗಳನ್ನು ಗುರುತಿಸಿ, ರೈತರು, ಮೀನುಗಾರರು, ರೈತ ಮಹಿಳೆಯರು, ಬುಡಕಟ್ಟು ಜನಾಂಗದವರಿಗೆ ರಾಷ್ಟ್ರೀಯ ವೇದಿಕೆಯನ್ನು ಸೃಷ್ಟಿಸುವ ಪ್ರಮುಖ ಕಸರತ್ತಿನಲ್ಲಿ ನೂರಾರು ರೈತರು ಗುರುವಾರ ರಾಷ್ಟ್ರೀಯ ರಾಜಧಾನಿಯ ಸಿಂಗು ಗಡಿಯಲ್ಲಿ ಜಮಾಯಿಸಿದ್ದಾರೆ. ಹನ್ನನ್ ಮೊಲ್ಲಾ ಮತ್ತು ರಾಕೇಶ್ ಟಿಕೈಟ್ ಸೇರಿದಂತೆ … Continued

ಯೋಗಿ ಆದಿತ್ಯನಾಥ್ ವಿರುದ್ಧದ ಹೇಳಿಕೆಗೆ ಮಹಾ ಸಿಎಂ ಉದ್ಧವ್ ವಿರುದ್ಧ ಎಫ್ಐಆರ್ ದಾಖಲಿಸಲು ಒತ್ತಾಯಿಸಿ ಬಿಜೆಪಿ ಅರ್ಜಿ

ಯಾವತ್ಮಲ್: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಉದ್ದೇಶಿಸಿ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಮಹಾರಾಷ್ಟ್ರ ಬಿಜೆಪಿ ನಾಯಕ ನಿತಿನ್ ಭೂತಾಡ ಒತ್ತಾಯಿಸಿದ್ದಾರೆ. ಬಿಜೆಪಿಯ ಯಾವತ್ಮಲ್ ಜಿಲ್ಲಾ ವಿಭಾಗಕ್ಕೆ ಮುಖ್ಯಸ್ಥರಾಗಿರುವ ಭೂತಾಡ ಅವರು ಬುಧವಾರ ಉದ್ಧವ್ ವಿರುದ್ಧ ಎಫ್ಐಆರ್ ದಾಖಲಿಸಲು ಒತ್ತಾಯಿಸಿ ಅರ್ಜಿ ಸಲ್ಲಿಸಿದ್ದಾರೆ. ಉಮರ್ಖೇಡ್ ಪೊಲೀಸ್ … Continued

140 ಅಫ್ಘಾನ್ ಹಿಂದೂಗಳು-ಸಿಖ್ಖರು ಭಾರತಕ್ಕೆ ಪ್ರಯಾಣಿಸುವುದನ್ನು ತಡೆದ ತಾಲಿಬಾನ್‌

ನವದೆಹಲಿ: ಆಗಸ್ಟ್ 29 ರಂದು ದೆಹಲಿಯ ಮಹಾವೀರ್ ನಗರದ ಗುರುದ್ವಾರದಲ್ಲಿ ಶ್ರೀ ಗುರು ತೇಘ್‌ ಬಹದ್ದೂರ್ ಅವರ 400 ನೇ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಬೇಕಿದ್ದ 140 ಅಫ್ಘಾನ್ ಸಿಖ್ಖರು ಮತ್ತು ಹಿಂದೂಗಳು ಭಾರತಕ್ಕೆ ಪ್ರಯಾಣಿಸುವುದನ್ನು ತಾಲಿಬಾನ್ ತಡೆದಿದೆ. ಅಫ್ಘಾನ್ ಪ್ರಜೆಗಳನ್ನು ದೇಶವನ್ನು ತೊರೆಯಲು ಅನುಮತಿಸುವುದಿಲ್ಲ ಹಾಗೂ ಸ್ಥಳಾಂತರಿಸುವ ವಿಮಾನಗಳ ವಿಸ್ತರಣೆಯನ್ನು ಗುಂಪು ವಿರೋಧಿಸುತ್ತದೆ ಎಂದು ತಾಲಿಬಾನ್ … Continued