ಭಾರತದಲ್ಲಿ ಮತ್ತಷ್ಟು ಕುಸಿದ ದೈನಂದಿನ ಕೋವಿಡ್‌ ಸೋಂಕಿನ ಸಂಖ್ಯೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ತೀವ್ರಗತಿಯಲ್ಲಿ ಇಳಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಹೊಸದಾಗಿ 13,166 ಹೊಸ ಕೋವಿಡ್ ಸೋಂಕು ಪತ್ತೆಯಾಗಿದ್ದು, 302 ಮಂದಿಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಈಗ ದೇಶದಲ್ಲಿ ಒಟ್ಟು 1,34,235 ಸಕ್ರಿಯ ಪ್ರಕರಣಗಳಿವೆ. ದೇಶದಲ್ಲಿ ಈವರೆಗೆ ಕಾಣಿಸಿಕೊಂಡಿರುವ ಒಟ್ಟು ಸೋಂಕಿತರಲ್ಲಿ ಶೇಕಡಾ 0.31ರಷ್ಟು … Continued

ಉಕ್ರೇನ್-ರಷ್ಯಾ ಯುದ್ಧ: ಇಂದು ರಾತ್ರಿ ಪುಟಿನ್ ಜೊತೆ ಪ್ರಧಾನಿ ಮೋದಿ ಮಾತುಕತೆ ಸಾಧ್ಯತೆ

ನವದೆಹಲಿ: ರಷ್ಯಾದ ಆಕ್ರಮಣದ ನಂತರ ಉಕ್ರೇನ್‌ನಲ್ಲಿ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಸಂಜೆ ತಡವಾಗಿ ಮಾತನಾಡುವ ಸಾಧ್ಯತೆಯಿದೆ. ಪ್ರಸ್ತುತ ನಡೆಯುತ್ತಿರುವ ಕ್ಯಾಬಿನೆಟ್ ಸಭೆಯ ನಂತರ ಪ್ರಧಾನಿ ಮೋದಿ ಅಧ್ಯಕ್ಷ ಪುಟಿನ್ ಅವರೊಂದಿಗೆ ಮಾತನಾಡುವ ಸಾಧ್ಯತೆಯಿದೆ. ಈ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ … Continued

ಇಡಿ ಬಂಧನದಲ್ಲಿರುವ ಮಹಾರಾಷ್ಟ್ರ ಸಚಿವ ನವಾಬ್ ಮಲಿಕಗೆ ಮನೆ ಆಹಾರ ಕೊಡಲು ಕೋರ್ಟ್‌ ಅನುಮತಿ

ಮುಂಬೈ: ಮಹಾರಾಷ್ಟ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ನವಾಬ್ ಮಲಿಕ್ ಅವರು ಜಾರಿ ನಿರ್ದೇಶನಾಲಯದ (ಇಡಿ) ವಶದಲ್ಲಿರುವಾಗ ಮನೆ ಆಹಾರ ಮತ್ತು ಔಷಧಿಗಳನ್ನು ಕೋರಿ ಸಲ್ಲಿಸಿದ ಮನವಿಯನ್ನು ಇಲ್ಲಿನ ವಿಶೇಷ ನ್ಯಾಯಾಲಯ ಗುರುವಾರ ಅಂಗೀಕರಿಸಿದೆ. ವಿಚಾರಣೆಯ ಸಮಯದಲ್ಲಿ ಅವರ ವಕೀಲರು ಗೋಚರ ದೂರದಲ್ಲಿ ಹಾಜರಿರಲು ಸಹ ನ್ಯಾಯಾಲಯವು ಅನುಮತಿ ನೀಡಿದೆ. ಪರಾರಿಯಾಗಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ … Continued

ಉಕ್ರೇನ್-ರಷ್ಯಾ ಯುದ್ಧ: ಶೇರು ಮಾರುಕಟ್ಟೆಯಲ್ಲಿ ಒಂದೇ ದಿನ 13.4 ಲಕ್ಷ ಕೋಟಿ ರೂ.ಗಳನ್ನು ಕಳೆದುಕೊಂಡ ಹೂಡಿಕೆದಾರರು…!

ಮುಂಬೈ: ಗುರುವಾರ ಬೆಳಿಗ್ಗೆ ಉಕ್ರೇನ್ ವಿರುದ್ಧ ರಷ್ಯಾ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತಿದ್ದಂತೆ ಜಾಗತಿಕ ಮಾರುಕಟ್ಟೆಗಳಲ್ಲಿ ಇದು ಪ್ರತಿಫಲನಗೊಂಡಿತು. ಭಾರತದ ಶೇರುಮಾರುಕಟ್ಟೆಯ ಬೆಂಚ್‌ಮಾರ್ಕ್ ಸೂಚ್ಯಂಕಗಳು ಶೇಕಡಾ 4.8 ರಷ್ಟು ಕುಸಿದವು, ಹೂಡಿಕೆದಾರರು 13.4 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಸಂಪತ್ತನ್ನು ಕಳೆದುಕೊಂಡರು ಎಂದು ವರದಿಗಳು ತಿಳಿಸಿವೆ. ಬಿಎಸ್‌ಇ ಸೆನ್ಸೆಕ್ಸ್ 2,702 ಪಾಯಿಂಟ್‌ಗಳು ಅಥವಾ ಶೇಕಡಾ 4.72 ರಷ್ಟು … Continued

ಕಚೋರಿ ತೆಗೆದುಕೊಳ್ಳಲು ಮಾರ್ಗ ಮಧ್ಯೆ ರೈಲು ನಿಲ್ಲಿಸಿದ ಚಾಲಕ; ವಿಡಿಯೋ ವೈರಲ್ ಆದ ನಂತರ ಐವರು ಅಮಾನತು.. ವೀಕ್ಷಿಸಿ

ನವದೆಹಲಿ: ವಿಲಕ್ಷಣ ಘಟನೆಯಲ್ಲಿ ಒಬ್ಬ ರೈಲು ಚಾಲಕ ಕಚೋರಿ ತಿನಿಸಿಗಾಗಿ ರೈಲನ್ನು ಮಧ್ಯದಲ್ಲಿ ನಿಲ್ಲಿಸಿದ್ದಾನೆ..!. ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಈ ವಿಲಕ್ಷಣ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಒಬ್ಬ ಟ್ವಿಟ್ಟರ್ ಬಳಕೆದಾರರು ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ, ಇದು ರೈಲು ಹಳಿಗಳ ಮಧ್ಯದಲ್ಲಿ ವ್ಯಕ್ತಿ ಕಾಯುತ್ತಿರುವುದನ್ನು ತೋರಿಸುತ್ತದೆ. ಕ್ಲಿಪ್‌ನಲ್ಲಿ … Continued

ಆಸ್ಟ್ರೇಲಿಯಾದಲ್ಲಿ ಪತ್ತೆಯಾದ ತಮಿಳುನಾಡಿನಲ್ಲಿ ಕಳುವು ಮಾಡಿದ 500 ವರ್ಷಗಳಷ್ಟು ಹಳೆಯ ಹನುಮಾನ್ ವಿಗ್ರಹ ಶೀಘ್ರ ಭಾರತಕ್ಕೆ ವಾಪಸ್‌

ನವದೆಹಲಿ: ದಶಕದ ಹಿಂದೆ ತಮಿಳುನಾಡಿನಿಂದ ಕದ್ದು ವಿದೇಶಕ್ಕೆ ಸಾಗಿಸಲಾಗಿದ್ದ ಹನುಮಂತನ ವಿಗ್ರಹವನ್ನು ಶೀಘ್ರದಲ್ಲೇ ಭಾರತಕ್ಕೆ ತರಲಾಗುವುದು ಎಂದು ಕೇಂದ್ರ ಸಂಸ್ಕೃತಿ ಸಚಿವ ಜಿ ಕಿಶನ್ ರೆಡ್ಡಿ ಬುಧವಾರ ಹೇಳಿದ್ದಾರೆ. ವಿಜಯನಗರ ಕಾಲಕ್ಕೆ ಸೇರಿದ 14-15 ನೇ ಶತಮಾನದ ಪ್ರತಿಮೆಯನ್ನು ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಖಾಸಗಿ ಖರೀದಿದಾರ ಬಳಿ ಇರುವುದು ಗೊತ್ತಾಗಿದೆ. ತಮಿಳುನಾಡಿನ ದೇವಸ್ಥಾನದಿಂದ ಕದ್ದ ಐದು ನೂರು … Continued

ಉಕೇನ್-ರಷ್ಯಾ ಯುದ್ಧ: ತನ್ನ ವಾಯು ಪ್ರದೇಶ ಮುಚ್ಚಿದ ಉಕ್ರೇನ್‌, ಆ ದೇಶಕ್ಕೆ ಹೊರಟಿದ್ದ ಏರ್ ಇಂಡಿಯಾ ವಿಮಾನ ದೆಹಲಿಗೆ ವಾಪಸ್‌

ನವದೆಹಲಿ: ಭಾರತೀಯರನ್ನು ಕರೆತರಲು ಉಕ್ರೇನ್‌ಗೆ ಹೊರಟ ಏರ್ ಇಂಡಿಯಾ ವಿಮಾನವು ದೆಹಲಿಗೆ ಹಿಂತಿರುಗುತ್ತಿದೆ. ರಷ್ಯಾದ ಮಿಲಿಟರಿ ಕಾರ್ಯಾಚರಣೆಗಳ ಮಧ್ಯೆ ಉಕ್ರೇನ್ತನ್ನ ವಾಯುಪ್ರದೇಶವನ್ನು ಮುಚ್ಚಲಾಗಿದೆ ಎಂದು ಹೇಳಿದೆ. ರಷ್ಯಾದೊಂದಿಗಿನ ಸಂಘರ್ಷದ ನಡುವೆ ಸಾವಿರಾರು ಭಾರತೀಯರು ಉಕ್ರೇನ್‌ನಿಂದ ಸ್ವದೇಶಕ್ಕೆ ಮರಳಲು ಕಾಯುತ್ತಿದ್ದಾರೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಂದು, ಗುರುವಾರ ಬೆಳಿಗ್ಗೆ ರಷ್ಯಾದ ವಿಶೇಷ ಪಡೆಗಳಿಗೆ ಉಕ್ರೇನ್‌ನಲ್ಲಿ ಎರಡು … Continued

ಕುಡಿದು, ಬೆತ್ತಲೆಯಾಗಿ ಅಡ್ಡಾಡಿದ ಜೆಡಿಯು ನಾಯಕನ ಬಂಧನ; ವಿಡಿಯೊ ವೈರಲ್

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ್ ಅವರಿಗೆ ಇರಿಸುಮುರಿಸಾಗುವ ಘಟನೆ ಬಿಹಾರದಲ್ಲಿ ನಡೆದಿದ್ದು, ಜನತಾ ದಳ (ಯುನೈಟೆಡ್) ನಾಯಕ ಜಯ ಪ್ರಕಾಶ್ ಪ್ರಸಾದ್ ಅಲಿಯಾಸ್ ಕಾಲು ಅವರು ನಳಂದಾ ಜಿಲ್ಲೆಯಲ್ಲಿ ಕುಡಿದು ಬೆತ್ತಲೆಯಾಗಿ ತಿರುಗಾಡಿದ ಅವಮಾನಕರ ಘಟನೆ ನಡೆದಿದೆ…! ಜೆಡಿಯು ನಾಯಕನನ್ನು ಪೊಲೀಸರು ಬಂಧಿಸಿದ್ದಾರೆ. ನಳಂದದ ಇಸ್ಲಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯ ಜಗದೀಶ್‌ಪುರ ಗ್ರಾಮದಲ್ಲಿ ಈ ಅವಮಾನಕರ … Continued

ಉಕ್ರೇನ್ ಬಿಕ್ಕಟ್ಟು : ಭಾರತದ ನಿಲುವನ್ನು ಸ್ವಾಗತಿಸಿದ ರಷ್ಯಾ

ಮುಂಬೈ: ಉಕ್ರೇನ್ ಬಿಕ್ಕಟ್ಟಿನ ಕುರಿತು ಭಾರತದ ‘ಸ್ವತಂತ್ರ ನಿಲುವು’ವನ್ನು ರಷ್ಯಾ ಬುಧವಾರ ಸ್ವಾಗತಿಸಿದೆ ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಈ ವಿಷಯದ ಬಗ್ಗೆ ತನ್ನ ಅಭಿಪ್ರಾಯಗಳು ಉಭಯ ದೇಶಗಳ ನಡುವಿನ ವಿಶೇಷವಾದ ಕಾರ್ಯತಂತ್ರದ ಪಾಲುದಾರಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದೆ. ಭಾರತವು ಜವಾಬ್ದಾರಿಯುತ ಜಾಗತಿಕ ಶಕ್ತಿಯಾಗಿ ಪ್ರಮುಖ ಪಾತ್ರ ವಹಿಸುತ್ತಿದೆ ಮತ್ತು ಜಾಗತಿಕ ವ್ಯವಹಾರಗಳಿಗೆ ಸ್ವತಂತ್ರ ಮತ್ತು … Continued

ಅಕ್ರಮ ಹಣ ವರ್ಗಾವಣೆ ಪ್ರಕರಣ: ಬಂಧನಕ್ಕೊಳಗಾದ ಮಹಾರಾಷ್ಟ್ರ ನವಾಬ್ ಮಲಿಕ್ ಅವರನ್ನು ಮಾರ್ಚ್ 3ರ ವರೆಗೆ ಇಡಿ ವಶಕ್ಕೆ ನೀಡಿದ ಕೋರ್ಟ್‌

ಮುಂಬೈ: ಪರಾರಿಯಾಗಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಬಂಧನಕ್ಕೊಳಗಾಗಿರುವ ಮಹಾರಾಷ್ಟ್ರ ಸಚಿವ ಮತ್ತು ಎನ್‌ಸಿಪಿ ವಕ್ತಾರ ನವಾಬ್ ಮಲಿಕ್ ಅವರನ್ನು ಮುಂಬೈ ವಿಶೇಷ ಕೋರ್ಟ್‌ ಮಾರ್ಚ್ 3ರ ವರೆಗೆ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಲಾಗಿದೆ. ನವಾಬ್ ಮಲಿಕ್ ಅವರನ್ನು ಬುಧವಾರ ಬೆಳಗ್ಗೆ ದಕ್ಷಿಣ ಮುಂಬೈನಲ್ಲಿರುವ ಇಡಿ ಕಚೇರಿಗೆ … Continued