ಅಯ್ಯೋ ದೇವ್ರೆ..ಅಜ್ಜಿ ಪಕ್ಕ ಮಲಗಿದ್ದ ಮಗುವನ್ನು ಸದ್ದಿಲ್ಲದೆ ಎತ್ತಿಕೊಂಡು ಹೋಗಿ ನೀರಿನ ಟ್ಯಾಂಕ್​ನಲ್ಲಿ ಹಾಕಿದ ಕೋತಿಗಳು..!

ನವದೆಹಲಿ: ಆಘಾತಕಾರಿ ಘಟನೆಯೊಂದರಲ್ಲಿ ಮಗುವೊಂದು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಭಾನುವಾರ ಉತ್ತರ ಪ್ರದೇಶದ ಬಾಗ್​ಪತ್​ನಲ್ಲಿ ನಡೆದಿದ್ದು, ಕೋತಿಗಳು ಮಗುವನ್ನು ಎತ್ತಿಕೊಂಡು ಟೆರೇಸ್​ನ ಹೊರಭಾಗದಲ್ಲಿದ್ದ ನೀರಿನ ಟ್ಯಾಂಕ್​ನೊಳಗೆ ಹಾಕಿದ್ದರಿಂದ ಈ ದುರ್ಘಟನೆ ಸಂಭವಿಸಿದೆ. 2 ತಿಂಗಳ ಮಗು ಮನೆಯ ಟೆರೇಸ್‌ನಲ್ಲಿರುವ ಕೋಣೆಯಲ್ಲಿ ತನ್ನ ಅಜ್ಜಿಯ ಪಕ್ಕದಲ್ಲಿ ಮಲಗಿತ್ತು. ಗಾಳಿ ಬರಲೆಂದು ಅಜ್ಜಿ ಬಾಗಿಲು ತೆರೆದು, ಮೊಮ್ಮಗುವಿನೊಂದಿಗೆ … Continued

ಕಾಶಿ ಸನ್ನಿಧಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಮೋದಿಯಿಂದ ಪಾದರಕ್ಷೆ ಉಡುಗೊರೆ

ವಾರಣಾಸಿ: ವಿಶ್ವ ಪ್ರಸಿದ್ಧ ಕಾಶಿ ವಿಶ್ವನಾಥ ದೇಗುಲದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೆಣಬಿ(ಜೂಟ್)ನಿಂದ ತಯಾರಿಸಿದ 100 ಜೋಡಿ ಪಾದರಕ್ಷೆಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇತ್ತೀಚೆಗೆ ವಾರಣಾಸಿಯಲ್ಲಿ ಹಲವು ಕಾಮಗಾರಿಗಳನ್ನು ಉದ್ಘಾಟಿಸಿದ ನರೇಂದ್ರ ಮೋದಿ ಅವರು ಕಾಶಿ ವಿಶ್ವನಾಥನ ಸನ್ನಿಧಾನಕ್ಕೆ ಭೇಟಿ ನೀಡಿಗ ವೇಳೆಯಲ್ಲಿ ಅನೇಕ ಕಾರ್ಮಿಕರು ಬರೀ ಕಾಲಲ್ಲೇ ದೇಗುಲದ ಸುತ್ತಮುತ್ತಲಿನ … Continued

ಕೋವಿಡ್‌ ಮೂರನೇ ಅಲೆ ಜನವರಿ ಅಂತ್ಯದ ವೇಳೆಗೆ ಗರಿಷ್ಠ ಮಟ್ಟಕ್ಕೆ ತಲುಪಬಹುದು.. ಮಾರ್ಚ್ ಮಧ್ಯಕ್ಕೆ ಮುಕ್ತಾಯವಾಗಬಹುದು: ಐಐಟಿ ಪ್ರೊಫೆಸರ್

ಕಾನ್ಪುರ: ದೇಶದಲ್ಲಿ ಕೋವಿಡ್-19 ಸೋಂಕುಗಳು ಹೆಚ್ಚುತ್ತಿರುವ ಮಧ್ಯೆ ಜನವರಿ ಅಂತ್ಯದಲ್ಲಿ ಸೋಂಕು ಉತ್ತುಂಗಕ್ಕೇರಲಿದೆ ಎಂದು ಐಐಟಿ ಕಾನ್ಪುರದ ಪ್ರೊಫೆಸರ್ ಮಣಿಂದ್ರ ಅಗರವಾಲ್ ಸೋಮವಾರ ಹೇಳಿದ್ದಾರೆ. ಎರಡನೇ ಅಲೆಯಲ್ಲಿ ದಾಖಲಾದ ಪ್ರಕರಣಗಳಿಗಿಂತ ಹೆಚ್ಚು ದೈನಂದಿನ ಸೋಂಕು ದಾಖಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಪ್ರಕರಣಗಳು ವೇಗವಾಗಿ ಇಳಿಮುಖವಾಗಲಿದ್ದು, ಮಾರ್ಚ್ ವೇಳೆಗೆ ಅದು ಮುಗಿಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. … Continued

ರಕ್ಷಣಾ ಸಚಿವ ರಾಜನಾಥ್ ಸಿಂಗ್‌ಗೆ ಕೊರೊನಾ ಸೋಂಕು

ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೋವಿಡ್‌ ಸೋಂಕಿಗೆ ಒಳಗಾಗಿದ್ದು, ಮನೆಯಲ್ಲಿ ತಮ್ಮನ್ನು ತಾವು ಪ್ರತ್ಯೇಕಿಸಿಕೊಂಡಿದ್ದಾರೆ. ಕೊರೊನಾ ಸೋಂಕಿಗೆ ಒಳಗಾಗಿದ್ದು, ಸೌಮ್ಯ ರೋಗಲಕ್ಷಣಗಳನ್ನು” ಹೊಂದಿರುವುದಾಗಿ ರಾಜನಾಥ್‌ ಸಿಂಗ್‌ ಟ್ವೀಟ್‌ ಮಾಡಿದ್ದಾರೆ. ನಾನು ಇಂದು ಸೌಮ್ಯ ರೋಗಲಕ್ಷಣಗಳೊಂದಿಗೆ ಕೊರೊನಾಗೆ ಧನಾತ್ಮಕ ಪರೀಕ್ಷೆ ಮಾಡಿದ್ದೇನೆ. ನಾನು ಹೋಮ್ ಕ್ವಾರಂಟೈನ್‌ನಲ್ಲಿದ್ದೇನೆ. ಇತ್ತೀಚೆಗೆ ನನ್ನ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರೂ ತಮ್ಮನ್ನು ಪ್ರತ್ಯೇಕಿಸಲು … Continued

ಕೇರಳದ ತಿರುವನಂತಪುರಂನಲ್ಲಿ ಪ್ರಧಾನಿ ಮೋದಿ ವಿರೋಧಿ ಬರಹವಿದ್ದ ಉತ್ತರ ಪ್ರದೇಶ ನೋಂದಣಿಯ ಕಾರು ಪತ್ತೆ: ಚಾಲಕ ಪರಾರಿ..!

ತಿರುವನಂತಪುರಂ: ಆಘಾತಕಾರಿ ಘಟನೆಯೊಂದರಲ್ಲಿ, ‘ನರೇಂದ್ರ ಮೋದಿ ವಿರೋಧಿ’ ಘೋಷಣೆಗಳನ್ನು ಬರೆದಿರುವ ಕಾರೊಂದು ಕೇರಳದ ರಾಜಧಾನಿ ತಿರುವನಂತಪುರಂನಲ್ಲಿ ಭಾನುವಾರ ಪತ್ತೆಯಾಗಿದೆ. ಬಿಳಿ ಬಣ್ಣದ ಕಾರ್‌ ಉತ್ತರ ಪ್ರದೇಶದ ನೋಂದಣಿ ಸಂಖ್ಯೆಯನ್ನು ಹೊಂದಿದೆ. ಈ ಆಕ್ಷೇಪಾರ್ಹ ಬರಹವಿದ್ದ ಕಾರನ್ನು ಕೇರಳದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ತಿರುವನಂತಪುರಂನ ಪಟ್ಟೋಮ್ ಪ್ರದೇಶದಲ್ಲಿ ಇದು ಪತ್ತೆಯಾದಾಗ, ಕಾರಿನಲ್ಲಿ ಬರೆದಿರುವುದನ್ನು ಗುರುತಿಸಿದ ತಕ್ಷಣ ಕಾರಿನ … Continued

ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿಯಿಂದ ಪ್ರಧಾನಿ ಭದ್ರತಾ ಉಲ್ಲಂಘನೆಯ ತನಿಖೆ: ಸುಪ್ರೀಂ ಕೋರ್ಟ್ ಆದೇಶ

ನವದೆಹಲಿ: ಕಳೆದ ವಾರ ಪಂಜಾಬ್‌ನ ಫಿರೋಜ್‌ಪುರದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಭದ್ರತಾ ಲೋಪದ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸ್ವತಂತ್ರ ಸಮಿತಿ ರಚಿಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ. ಸಮಿತಿಯು ಡಿಜಿಪಿ ಚಂಡೀಗಢ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್, ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಅಧಿಕಾರಿ ಮತ್ತು … Continued

ಭಾರತದಲ್ಲಿ ಹೊಸದಾಗಿ ಸುಮಾರು 1.8 ಲಕ್ಷ ಕೋವಿಡ್‌-19 ಪ್ರಕರಣಗಳು ದಾಖಲು, 227 ದಿನಗಳಲ್ಲಿ ಅತಿ ಹೆಚ್ಚು..!

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಓಮಿಕ್ರಾನ್ ರೂಪಾಂತರದ 4,033 ಪ್ರಕರಣಗಳು ಸೇರಿದಂತೆ ದೇಶವು ಹೊಸದಾಗಿ 1,79,723 ಕೊರೊನಾ ವೈರಸ್ ಸೋಂಕುಗಳ ದಾಖಲು ಮಾಡಿದೆ. ಇದು ಸುಮಾರು 227 ದಿನಗಳಲ್ಲಿ ಅತಿ ಹೆಚ್ಚು ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಸೋಮವಾರ ನವೀಕರಿಸಿದ ಮಾಹಿತಿ ತಿಳಿಸಿದೆ. ಕಳೆದ ವರ್ಷ ಮೇ 27 ರಂದು ಒಟ್ಟು 1,86,364 ಹೊಸ ಸೋಂಕುಗಳು … Continued

ಶ್ರೀನಗರ: ಭಾರೀ ಹಿಮಪಾತದ ಮಧ್ಯೆ ಉರಿಯಲ್ಲಿ ಗರ್ಭಿಣಿ ಮಹಿಳೆಯನ್ನು ಭುಜದ ಮೇಲೆ ಹೊತ್ತು ಆಸ್ಪತ್ರೆಗೆ ಕರೆತಂದ ಸೈನಿಕರು|ವಿಡಿಯೋ ವೈರಲ್‌

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ಭಾರೀ ಹಿಮಪಾತದ ನಡುವೆ ಭಾರತೀಯ ಸೇನೆಯ ಯೋಧರು ಗರ್ಭಿಣಿ ಮಹಿಳೆಯನ್ನು ತಮ್ಮ ಭುಜದ ಮೇಲೆ ಆಸ್ಪತ್ರೆಗೆ ಸಾಗಿಸುತ್ತಿರುವ ವೀಡಿಯೊ ಕ್ಲಿಪ್ ಭಾನುವಾರ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲು ತುರ್ತು ಸಹಾಯಕ್ಕಾಗಿ ವಿನಂತಿಸಿದ ಎಲ್ಒಸಿ ಬೋನಿಯಾರ್‌ನ ಘಗರ್ ಹಿಲ್ ಗ್ರಾಮದಿಂದ ಸೇನೆಯು ಸಂಕಷ್ಟದ ಕರೆಯನ್ನು … Continued

ಚುನಾವಣೆಗೆ ಒಳಪಡುವ ಪಂಚ ರಾಜ್ಯಗಳಲ್ಲಿ ನೀಡುವ ಲಸಿಕೆ ಪ್ರಮಾಣಪತ್ರಗಳು ಪ್ರಧಾನಿ ಮೋದಿ ಚಿತ್ರ ಇರುವುದಿಲ್ಲ :ವರದಿ

ನವದೆಹಲಿ: ಚುನಾವಣೆಗೆ ಒಳಪಡುವ ಪಂಚ ರಾಜ್ಯಗಳಲ್ಲಿ ನೀಡಲಾದ ಕೋವಿಡ್-19 ಲಸಿಕೆ ಪ್ರಮಾಣಪತ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹೆಸರು ಅಥವಾ ಭಾವಚಿತ್ರ ಇರುವುದಿಲ್ಲ. ಈ ಉದ್ದೇಶಕ್ಕಾಗಿ ಕೇಂದ್ರ ಆರೋಗ್ಯ ಸಚಿವಾಲಯವು CoWin ಪ್ಲಾಟ್‌ಫಾರ್ಮ್‌ಗೆ ಫಿಲ್ಟರ್‌ಗಳನ್ನು ಸೇರಿಸಿದೆ ಎಂದು ಮೂಲಗಳು ತಿಳಿಸಿವೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ಕಳೆದ ವರ್ಷ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ … Continued

ಪಶ್ಚಿಮ ಬಂಗಾಳದಲ್ಲಿ ಒಂದೇ ದಿನದಲ್ಲಿ 24,000 ಹೊಸ ಕೊರೊನಾ ಸೋಂಕು, ಕೋಲ್ಕತ್ತಾ ಭಾರೀ ಏರಿಕೆ

ಕೋಲ್ಕತ್ತಾ: ಕಳೆದ 24 ಗಂಟೆಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ದೈನಂದಿನ ಪ್ರಕರಣದಲ್ಲಿ ಭಾರಿ ಏರಿಕೆ ಕಂಡಿದ್ದು, ಭಾನುವಾರ 24,287 ಹೊಸ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿದೆ. ರಾಜ್ಯ ಸರ್ಕಾರ ಹೊರಡಿಸಿದ ಆರೋಗ್ಯ ಬುಲೆಟಿನ್ ಪ್ರಕಾರ, ಕಳೆದ 24 ಗಂಟೆಗಳಲ್ಲಿ 8,712 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿರುವುದರಿಂದ ರಾಜ್ಯ ರಾಜಧಾನಿ ಕೋಲ್ಕತ್ತಾದಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಶನಿವಾರದ … Continued