ಭಾರತದಲ್ಲಿ 1,68,063 ಹೊಸ ಕೋವಿಡ್ -19 ಪ್ರಕರಣಗಳು ದಾಖಲು, ಇದು ನಿನ್ನೆಗಿಂತ 6.5% ಕಡಿಮೆ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತವು 1,68,063 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ, ಇದು ನಿನ್ನೆಗಿಂತ 6.5% ರಷ್ಟು ಕಡಿಮೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ. ಇದರೊಂದಿಗೆ, ದೇಶದಲ್ಲಿ ಒಟ್ಟು ಸೋಂಕು 3,58,75,790 ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 277 ಸಾವುಗಳು ವರದಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 4,84,213 … Continued

ಮಣ್ಣಿನಗುಡ್ಡ ಕುಸಿದು ನಾಲ್ವರು ಬಾಲಕಿಯರು ಮಣ್ಣಿನಡಿ ಸಮಾಧಿ, ಮತ್ತೊಬ್ಬಳಿಗೆ ಗಾಯ

ನುಹ್ (ಹರಿಯಾಣ): ಹರಿಯಾಣದ ನುಹ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಸೋಮವಾರ ಬೃಹತ್ ಮಣ್ಣಿನ ಗುಡ್ಡ ಕುಸಿದು ನಾಲ್ವರು ಹುಡುಗಿಯರು ಮಣ್ಣಿನಡಿ ಸಮಾಧಿಯಾಗಿದ್ದಾರೆ ಮತ್ತು ಮತ್ತೊಬ್ಬಳು ಹುಡುಗಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲೆಯ ತಾವೂರು ಉಪವಿಭಾಗದ ಕಂಗರ್ಕ ಗ್ರಾಮದ ಇವರೆಲ್ಲರೂ ತಮ್ಮ ಮನೆಗಳಿಗೆ ಮಣ್ಣು ತರಲು ತೆರಳಿದ್ದ ವೇಳೆ ದೊಡ್ಡ ಪ್ರಮಾಣದ ಮಣ್ಣುಗುಡ್ಡ ಕುಸಿದು ಬಿದ್ದಿದೆ. … Continued

ಕೋವಿಡ್ ಲಸಿಕೆ ಕೇಂದ್ರಗಳು ರಾತ್ರಿ 10 ಗಂಟೆ ವರೆಗೂ ತೆರೆದಿರಬಹುದು: ರಾಜ್ಯಗಳಿಗೆ ತಿಳಿಸಿದ ಕೇಂದ್ರ

ನವದೆಹಲಿ: ಕೋವಿಡ್-19 ಲಸಿಕೆ ಕೇಂದ್ರಗಳ ಕಾರ್ಯಾಚರಣೆಗೆ ಯಾವುದೇ ಸಮಯ ಮಿತಿಯನ್ನು ನಿಗದಿಪಡಿಸಲಾಗಿಲ್ಲ ಮತ್ತು ಅವು ರಾತ್ರಿ 10 ಗಂಟೆ ವರೆಗೆ ತೆರೆದಿರಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತಿಳಿಸಿದೆ. ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಡಾ ಮನೋಹರ್ ಅಗ್ನಾನಿ ಅವರು ಲಸಿಕೆ ನೀಡುವ ಸಮಯವು ನಿರ್ದಿಷ್ಟ ಕೇಂದ್ರದಲ್ಲಿ ಬೇಡಿಕೆ ಮತ್ತು … Continued

ಕೋವಿಡ್‌ಗೆ ಯಾರು ಪರೀಕ್ಷೆಗೆ ಒಳಗಾಗಬೇಕು? ಉದ್ದೇಶಿತ ಪರೀಕ್ಷಾ ಕಾರ್ಯತಂತ್ರ’ ಕುರಿತು ಸಲಹೆ ನೀಡಿದ ಐಸಿಎಂಆರ್‌

ನವದೆಹಲಿ: ಭಾರತದ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಲೇ ಇರುವುದರಿಂದ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು “ಉದ್ದೇಶಪೂರ್ವಕ ಪರೀಕ್ಷಾ ಕಾರ್ಯತಂತ್ರ” ಕುರಿತು ಸಲಹೆಯನ್ನು ಬಿಡುಗಡೆ ಮಾಡಿದೆ. ಕೋವಿಡ್ -19ಕ್ಕೆ ಧನಾತ್ಮಕವಾಗಿರುವವರ ಸಂಪರ್ಕಗಳನ್ನು ಅವರು “ಹೆಚ್ಚಿನ-ಅಪಾಯದ” ವರ್ಗಕ್ಕೆ ಸೇರದ ಹೊರತು ಪರೀಕ್ಷಿಸಬೇಕಾಗಿಲ್ಲ ಎಂದು ಸರ್ಕಾರದ ಹೊಸ ಸಲಹೆ ಹೇಳುತ್ತದೆ. ಭಾರತದ ದೈನಂದಿನ ಕೋವಿಡ್‌-19 ಸಂಖ್ಯೆಯು ಸೋಮವಾರ ಬೆಳಿಗ್ಗೆ 1.8 ಲಕ್ಷದ … Continued

ಕೋವಿಡ್‌ ಹೆಚ್ಚಳ: ದೆಹಲಿಯಲ್ಲಿ ರೆಸ್ಟೋರೆಂಟ್‌ಗಳು, ಬಾರ್‌ಗಳನ್ನು ಮುಚ್ಚಲು ಆದೇಶ

ನವದೆಹಲಿ: ದೆಹಲಿಯಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳ ಮಧ್ಯೆ, ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಸೋಮವಾರ ಉನ್ನತ ಮಟ್ಟದ ಸಭೆ ನಡೆಸಿತು ಮತ್ತು ರೆಸ್ಟೋರೆಂಟ್‌ಗಳು ಮತ್ತು ಬಾರ್‌ಗಳನ್ನು ಮುಚ್ಚಲು ಆದೇಶಿಸಿದೆ. ಆದಾಗ್ಯೂ, ಮನೆ ಡೆಲಿವರಿ ಮತ್ತು ಪಾರ್ಸಲ್‌ಗಳಲ್ಲಿ ತಿನಿಸುಗಳನ್ನು ಒಯ್ಯಲು ಅನುಮತಿಸಲಾಗುತ್ತದೆ. ಡಿಡಿಎಂಎ ಸಭೆಯಲ್ಲಿ ಎಲ್-ಜಿ ಅನಿಲ್ ಬೈಜಾಲ್, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಉಪಮುಖ್ಯಮಂತ್ರಿ … Continued

ಬಿಜೆಪಿ ಅಧ್ಯಕ್ಷ ನಡ್ಡಾಗೆ ಕೋವಿಡ್‌ ಸೋಂಕು

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಕೋವಿಡ್ -19 ಗೆ ಸೋಂಕಿಗೆ ಒಳಗಾಗಿದ್ದೇನೆ ಎಂದು ಸೋಮವಾರ ಹೇಳಿದ್ದಾರೆ. ವೈದ್ಯರ ಸಲಹೆಯ ಮೇರೆಗೆ ಅವರು ತಮ್ಮನ್ನು ಪ್ರತ್ಯೇಕಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಆರಂಭಿಕ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದ್ದೇನೆ. ನನ್ನ ವರದಿ ಪಾಸಿಟಿವ್ ಬಂದಿದೆ. ನಾನು ಆರೋಗ್ಯವಾಗಿದ್ದೇನೆ. … Continued

ವಿಧಾನಸಭೆ ಚುನಾವಣೆ-2022: ಟೈಮ್ಸ್ ನೌ ಒಪಿನಿಯನ್‌ ಪೋಲ್‌-ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಾರ್ಟಿ ಸರ್ಕಾರ ಸಾಧ್ಯತೆ..!

ನವದೆಹಲಿ: ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಾಹಿನಿ ಟೈಮ್ಸ್ ನೌ ಒಪಿನಿಯನ್‌ ಪೋಲ್‌ ನಡೆಸಿದ್ದು, ಪಂಜಾಬಿನಲ್ಲಿ ಆಮ್‌ ಆದ್ಮಿ ಪಾರ್ಟಿ (ಎಎಪಿ) ಆಮ್ ಆದ್ಮಿ ಪಕ್ಷ (ಎಎಪಿ) ಪಂಜಾಬ್‌ನಲ್ಲಿ ಸರ್ಕಾರ ರಚಿಸುವ ಹಾದಿಯಲ್ಲಿದೆ ಎಂದು ಹೇಳಿದೆ. 2022ರ ಪಂಜಾಬ್ ಚುನಾವಣೆಯಲ್ಲಿ ಎಎಪಿ (AAP) ಸುಮಾರು 54-58 ವಿಧಾನಸಭಾ ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಒಪಿನಿಯನ್‌ … Continued

ವಿಧಾನಸಭೆ ಚುನಾವಣೆ -2022: ಬಿಜೆಪಿ ಉತ್ತರ ಪ್ರದೇಶ ಉಳಿಸಿಕೊಳ್ಳಲಿದೆಯೇ ? ಎಬಿಪಿ ನ್ಯೂಸ್-ಸಿವೋಟರ್ ಒಪಿನಿಯನ್ ಪೋಲ್‌ ಏನು ಹೇಳುತ್ತದೆ..?

ನವದೆಹಲಿ: ಎಬಿಪಿ ನ್ಯೂಸ್-ಸಿವೋಟರ್ ಒಪಿನಿಯನ್ ಪೋಲ್‌ ನಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಪುನಃ ಅಧಿಕಾರಕ್ಕೆ ಬರುವ ಸಾಧ್ಯತೆ ನಿಚ್ಚಳವಾಗಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನಾಯಕತ್ವದಲ್ಲಿ, 403 ಸದಸ್ಯ ಬಲದ ಶಾಸಕಾಂಗ ಸಭೆಯಲ್ಲಿ ಬಿಜೆಪಿ ಬಹುಮತ ಸಾಧಿಸಲಿದೆ ಎಂದು ಸಮೀಕ್ಷೆ ಹೇಳುತ್ತದೆ. ಎಬಿಪಿ ನ್ಯೂಸ್-ಸಿವೋಟರ್ ಅಭಿಪ್ರಾಯ ಸಂಗ್ರಹವು ಬಿಜೆಪಿ 223-235 ಸ್ಥಾನಗಳನ್ನು ಪಡೆಯಲು ಸಾಧ್ಯವಾಗುತ್ತದೆ … Continued

ಬಿಹಾರ ಸಿಎಂ ನಿತೀಶಕುಮಾರಗೆ ಕೊರೊನಾ ಸೋಂಕು

ಬಿಹಾರ: ಬಿಹಾರದ ಮುಖ್ಯಮಂತ್ರಿ ನಿತೀಶಕುಮಾರ ಅವರಿಗೆ ಕೊರೊನಾ ಸೋಂಕು ದೃಢವಾಗಿದೆ. ನಿತೀಶ ಅವರು ಕೋವಿಡ್-19 ಪರೀಕ್ಷೆಯನ್ನು ಮಾಡಿಸಿಕೊಂಡಿದ್ದು, ಇಂದು ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಅವರು ಮನೆಯಲ್ಲಿ ಪ್ರತ್ಯೇಕವಾಗಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳ ಕಚೇರಿ(ಸಿಎಂಒ) ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಗೌರವಾನ್ವಿತ ಸಿಎಂ ನಿತೀಶಕುಮಾರ ಅವರ ಕೊರೊನಾ ಪರೀಕ್ಷೆಯು ಪಾಸಿಟಿವ್ ಬಂದಿದೆ. ವೈದ್ಯರ ಸಲಹೆಯ ಪ್ರಕಾರ, … Continued

ಕೋವಿಡ್‌ಗೆ ಹೆದರಿ ವಿಷ ಸೇವಿಸಿ ತಾಯಿ-ಮಗು ಸಾವು

ತಮಿಳುನಾಡಿನ ಮಧುರೈನಲ್ಲಿ ಕೋವಿಡ್ -19 ಸೋಂಕಿಗೆ ಒಳಗಾಗುವ ಭಯದಿಂದ 23 ವರ್ಷದ ಮಹಿಳೆ ಮತ್ತು ಅವರ ಮೂರು ವರ್ಷದ ಮಗ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಂಕಿನ ಭಯದಿಂದ ಮೃತ ಮಹಿಳೆಯ ತಾಯಿ ಮತ್ತು ಸಹೋದರರು ಸೇರಿದಂತೆ ಕುಟುಂಬದ ಐವರು ವಿಷ ಸೇವಿಸಿದ್ದಾರೆ. ಅವರಲ್ಲಿ ಮೂವರು ಬದುಕುಳಿದರೆ, ಮಹಿಳೆ ಮತ್ತು ಅವರ ಮೂರು ವರ್ಷದ ಮಗು … Continued