ಪಾಕ್‌ನಲ್ಲಿ ಅನಿರೀಕ್ಷಿತ ಬೆಳವಣಿಗೆ: ಇಮ್ರಾನ್‌ ಸರ್ಕಾರದ ವಿರುದ್ಧ ಅವಿಶ್ವಾಸ ಮತ ತಿರಸ್ಕಾರ, ಪಾಕಿಸ್ತಾನ ಸಂಸತ್ತು ವಿಸರ್ಜಿಸುವಂತೆ ಅಧ್ಯಕ್ಷರಿಗೆ ಶಿಫಾರಸು ಮಾಡಿದ ಇಮ್ರಾನ್ ಖಾನ್ ..!

ಅನಿರೀಕ್ಷಿತ ಬೆಳವಣಿಗೆಯಲ್ಲಿ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿ ಡೆಪ್ಯುಟಿ ಸ್ಪೀಕರ್ ಭಾನುವಾರ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ತಿರಸ್ಕರಿಸಿದ್ದಾರೆ ಮತ್ತು ಅದು ಅಸಾಂವಿಧಾನಿಕ ಎಂದು ಘೋಷಿಸಿದ್ದಾರೆ. ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿ ಡೆಪ್ಯುಟಿ ಸ್ಪೀಕರ್ ಖಾಸಿಂ ಖಾನ್ ಸೂರಿ ಅವರು ಪ್ರಧಾನಿ ಇಮ್ರಾನ್ ಖಾನ್ ವಿರುದ್ಧದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯವನ್ನು ವಜಾಗೊಳಿಸಿದರು, ಇದು ಸಂವಿಧಾನದ 5 … Continued

ಇಮ್ರಾನ್ ಖಾನ್‌ಗೆ ಬಂಧನದ ಭೀತಿ? ಅವಿಶ್ವಾಸ ನಿರ್ಣಯದಲ್ಲಿ ಸೋಲನುಭವಿಸಿದರೆ ಪಾಕ್ ಪ್ರಧಾನಿ ಬಂಧನವಾಗಬಹುದು ಎಂದ ಸಚಿವ ಶೇಖ್ ರಶೀದ್

ನವದೆಹಲಿ: ಪಾಕಿಸ್ತಾನದ ಸಂಸತ್ತಿನಲ್ಲಿ ಪ್ರಧಾನಿ ಇಮ್ರಾನ್ ಖಾನ್ ಅವರ ವಿರುದ್ಧ ಅವಿಶ್ವಾಸ ನಿರ್ಣಯದಲ್ಲಿ ಅವರು ವಿಶ್ವಾಸ ಮತವನ್ನು ಕಳೆದುಕೊಂಡರೆ ಅವರನ್ನು ಬಂಧಿಸಬಹುದು ಎಂದು ಆಂತರಿಕ ಸಚಿವ ಶೇಖ್ ರಶೀದ್ ಅಹ್ಮದ್ ಭಾನುವಾರ ಹೇಳಿದ್ದಾರೆ. ಇಂಡಿಯಾ ಟುಡೇ ಟಿವಿ ಜೊತೆ ಮಾತನಾಡಿದ ಶೇಖ್ ರಶೀದ್ ಅಹ್ಮದ್ ಅವರು, ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ನೇತೃತ್ವದ ಆಡಳಿತಾರೂಢ ಒಕ್ಕೂಟದ … Continued

ಇಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಸರ್ಕಾರದ ಭವಿಷ್ಯ ನಿರ್ಧಾರ

ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯದ ಮೇಲೆ ಇಂದು ಭಾನುವಾರ, ಮತದಾನ ನಡೆಯಲಿದ್ದು, ಇಮ್ರಾನ್ ಸರ್ಕಾರದ ಅಳಿವು ಅಥವಾ ಉಳಿವು ನಿರ್ಣಯವಾಗಲಿದೆ. ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮತದಾನ ನಡೆಯಲಿದ್ದು, ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದ ಸುಮಾರು ಒಂದು ತಿಂಗಳ ನಂತರ ಮತದಾನ ನಡೆಯುತ್ತಿದೆ. 342 ಸಂಖ್ಯಾ ಬಲವನ್ನು ಹೊಂದಿರುವ ಪಾಕ್ ಸಂಸತ್ತಿನಲ್ಲಿ … Continued

ಶ್ರೀಲಂಕಾದಲ್ಲಿ ವಾಟ್ಸಾಪ್, ಫೇಸ್‌ಬುಕ್ ಟ್ವಿಟರ್ ಬಳಕೆಗೆ ನಿರ್ಬಂಧ

ಕೊಲಂಬೊ: ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿನ ವಿರುದ್ಧ ಹೆಚ್ಚುತ್ತಿರುವ ಪ್ರತಿಭಟನೆಗಳನ್ನು ಹತ್ತಿಕ್ಕಲು ಅಧಿಕಾರಿಗಳು ವಾರಾಂತ್ಯದಲ್ಲಿ ದೇಶದಾದ್ಯಂತ ಕರ್ಫ್ಯೂ ವಿಧಿಸಿದ ನಂತರ, ಭಾನುವಾರ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ನಿರ್ಬಂಧ ವಿಧಿಸಿರುವುದಾಗಿ ವರದಿಯಾಗಿದೆ. ಶ್ರೀಲಂಕಾ ದೇಶದಾದ್ಯಂತ ಸಾಮಾಜಿಕ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಲಾಗಿದೆ. ಟ್ವಿಟರ್, ಫೇಸ್‌ಬುಕ್, ವಾಟ್ಸಾಪ್, ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಂ ಸೇರಿದಂತೆ ಎಲ್ಲಾ ವೇದಿಕೆಗಳ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ’ ಎಂದು ಲಂಡನ್ … Continued

ಚೀನಾದಲ್ಲಿ 13,000 ದಾಟಿದ ದೈನಂದಿನ ಕೋವಿಡ್ -19 ಪ್ರಕರಣಗಳು..4ನೇ ಅಲೆ ಆತಂಕ..?!

ಬೀಜಿಂಗ್: ಚೀನಾ ಭಾನುವಾರ (ಏಪ್ರಿಲ್ 3) 13,146 ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿದೆ, ಇದು ಎರಡು ವರ್ಷಗಳ ಹಿಂದೆ ಮೊದಲ ಅಲೆಯ ಉತ್ತುಂಗದ ನಂತರ ಅತಿ ಹೆಚ್ಚು, ಒಮಿಕ್ರಾನ್ ರೂಪಾಂತರದ ಹೊಸ ಉಪಪ್ರಕಾರವನ್ನು ಗುರುತಿಸಲಾಗಿದೆ. ರೋಗ ಲಕ್ಷಣಗಳೊಂದಿಗೆ 1,455 ಪ್ರಕರಣಗಳು ಹಾಗೂ 11,691 ಲಕ್ಷಣರಹಿತ ಪ್ರಕರಣಗಳು ದಾಖಲಾಗಿದ್ದು, ಆದರೆ ಹೊಸ ಸಾವುಗಳು ವರದಿಯಾಗಿಲ್ಲ” ಎಂದು … Continued

ಅಫ್ಘಾನಿಸ್ತಾನದಲ್ಲಿ ಬಾಂಬ್ ಸ್ಫೋಟ: ಮೃತರ ಸಂಖ್ಯೆ 12ಕ್ಕೆ ಏರಿಕೆ

ಅಫ್ಘಾನಿಸ್ತಾನ : ಅಫ್ಘಾನಿಸ್ತಾನದ ಪಶ್ಚಿಮ ಪ್ರಾಂತ್ಯದ ಹೆರಾತ್‌ನಲ್ಲಿ ನಡೆದ ಕಾರ್ ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. 25 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಹೆರಾತ್ ನಗರದ ಪಿಡಿ 12ರಲ್ಲಿ ಶುಕ್ರವಾರ ಘಟನೆ ನಡೆದಿದ್ದು, ಘಟನೆ ನಡೆದ ದಿನದಂದು ಏಳು ಮಂದಿ ಸಾವನ್ನಪ್ಪಿದ್ದರು. ಶನಿವಾರ ಮೃತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ ಎಂದು ಪ್ರಾಂತೀಯ ಆರೋಗ್ಯ ಅಧಿಕಾರಿಗಳು … Continued

ಖಾಲ್ಸಾ ಟಿವಿ ಪರವಾನಗಿ ಅಮಾನತು ಮಾಡಿದ ಯುನೈಟೆಡ್‌ ಕಿಂಗ್ಡಮ್‌ ಮಾಧ್ಯಮ ವಾಚ್‌ಡಾಗ್

ಕೆಟಿವಿ (KTV) ಚಾನೆಲ್ ಖಲಿಸ್ತಾನಿ ಪ್ರಚಾರದೊಂದಿಗೆ ಪ್ರಸಾರ ನಿಯಮಗಳನ್ನು ಉಲ್ಲಂಘಿಸಿದೆ ಎಂದು ತನಿಖೆಯ ನಂತರ ಯುನೈಟೆಡ್‌ ಕಿಂಗ್‌ ಮಾಧ್ಯಮ ವಾಚ್‌ಡಾಗ್ ದೇಶದಲ್ಲಿ ಪ್ರಸಾರ ಮಾಡಲು ಖಾಲ್ಸಾ ಟೆಲಿವಿಷನ್ ಲಿಮಿಟೆಡ್‌ನ ಪರವಾನಗಿ ಅಮಾನತುಗೊಳಿಸಿದೆ. ಕಮ್ಯುನಿಕೇಷನ್ಸ್ ಕಚೇರಿ (ಆಫ್ಕಾಮ್) ಕಳೆದ ವರ್ಷ ಡಿಸೆಂಬರ್ 30 ರಂದು ಕೆಟಿವಿಯಲ್ಲಿ ಪ್ರಸಾರವಾದ ‘ಪ್ರೈಮ್ ಟೈಮ್’ ಕಾರ್ಯಕ್ರಮದ ಮೂಲಕ ಕಂಪನಿಗೆ ಅಮಾನತು ನೋಟಿಸ್ … Continued

ಕಟ್ಟುನಿಟ್ಟಿನ ಲಾಕ್‌ಡೌನ್ ಮಧ್ಯೆ ಚೀನಾದ ಶಾಂಘೈನ ಖಾಲಿ ಬೀದಿಗಳಲ್ಲಿ ಲೌಡ್‌ ಸ್ಪೀಕರ್‌ನಿಂದ ಕೋವಿಡ್‌ ಸೂಚನೆ ಕೂಗುತ್ತ ಹೋಗುವ ರೋಬೋಟ್ ನಾಯಿ ..! ವೀಕ್ಷಿಸಿ

ಈಗ ಚೀನಾದ ಶಾಂಘೈ ನಗರದಲ್ಲಿ ಕಟ್ಟುನಿಟ್ಟಿನ ಲಾಕ್ಡೌನ್‌ ಮಧ್ಯೆ ಈಗ ಕೋವಿಡ್‌-19 ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಕೂಗುತ್ತ ಜನರನ್ನು ಎಚ್ಚರಿಸುವುದು ಹಾಗೂ ಸೂಚನೆಗಳನ್ನು ಪ್ರಸಾರ ಮಾಡುವುದು ಮನುಷ್ಯರಲ್ಲ, ಯಾವುದೇ ಪೊಲೀಸ್‌ ಜೀಪ್‌ ಅಲ್ಲ, ಬದಲಿಗೆ ರೋಬೋಟ್‌ ನಾಯಿ..! ಜೊತೆಗೆ ಇದು ಬೀದಿಗಳಲ್ಲಿ ಗಸ್ತು ತಿರುಗುತ್ತದೆ. ರೋಬೋಟ್ ನಾಯಿ ಇತ್ತೀಚೆಗೆ ಚೀನಾದ ಶಾಂಘೈನ ಖಾಲಿ ಬೀದಿಗಳಲ್ಲಿ ಗಸ್ತು ತಿರುಗುತ್ತಿರುವುದು … Continued

ಕೋವಿಡ್-19 ವೈರಸ್ಸಿನ ಹೊಸ ಹೈಬ್ರಿಡ್‌ ರೂಪಾಂತರಿತ XE ಇನ್ನೂ ಹೆಚ್ಚು ಹರಡಬಹುದು: ಡಬ್ಲ್ಯುಎಚ್‌ಒ

ನವದೆಹಲಿ: ಒಮಿಕ್ರಾನ್‌ನ BA.2 ಉಪ-ರೂಪಾಂತರಕ್ಕಿಂತ ಈಗ ಕಂಡುಬಂದ XE ಎಂದು ಕರೆಯಲ್ಪಡುವ ಕೊರೊನಾ ವೈರಸ್‌ನ ಹೊಸ ರೂಪಾಂತರವು ಸುಮಾರು ಹತ್ತು ಪ್ರತಿಶತ ಹೆಚ್ಚು ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಇಲ್ಲಿಯವರೆಗೆ, ಒಮಿಕ್ರಾನ್‌ನ BA.2 ಉಪ-ರೂಪಾಂತರವನ್ನು ಕೋವಿಡ್-19 ರ ಅತ್ಯಂತ ಹೆಚ್ಚು ಹರಡುವ ತಳಿ ಎಂದು ಪರಿಗಣಿಸಲಾಗಿದೆ. ಈ ಹೊಸ ಸಂಶೋಧನೆಯು ದೃಢೀಕರಿಸಲ್ಪಟ್ಟರೆ, ಇದು … Continued

ಆರ್ಥಿಕ ಬಿಕ್ಕಟ್ಟಿನಿಂದ ದೇಶದಲ್ಲಿ ಅಶಾಂತಿ: ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

ಕೋಲಂಬೊ: ಆರ್ಥಿಕ ಬಿಕ್ಕಟ್ಟಿನಿಂದಾಗಿ ಹೆಚ್ಚುತ್ತಿರುವ ಅಶಾಂತಿಯಿಂದಾಗಿ ಶ್ರೀಲಂಕಾದ ಅಧ್ಯಕ್ಷ ಗೋತಬಯ ರಾಜಪಕ್ಸೆ ಶುಕ್ರವಾರ ದೇಶದಲ್ಲಿ ಸಾರ್ವಜನಿಕ ತುರ್ತು ಪರಿಸ್ಥಿತಿಯನ್ನು ಹೇರಿದ್ದಾರೆ. ಅವರು ದ್ವೀಪ ರಾಷ್ಟ್ರದಲ್ಲಿ ಸಾರ್ವಜನಿಕ ತುರ್ತು ಪರಿಸ್ಥಿತಿಯನ್ನು ಘೋಷಿಸುವ ಅಸಾಧಾರಣ ಗೆಜೆಟ್ ಅನ್ನು ಬಿಡುಗಡೆ ಮಾಡಿದರು ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ದೇಶದಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿ ಮತ್ತು ಸಾರ್ವಜನಿಕ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆಯ … Continued