ನೇಪಾಳದಲ್ಲಿ ಟೈರ್ ಒಡೆದ ನಂತರ ರನ್‌ ವೇಯಿಂದ ವಿಮಾನವನ್ನೇ ತಳ್ಳಿದ ಪ್ರಯಾಣಿಕರು- ನಿಲ್ದಾಣದ ಸಿಬ್ಬಂದಿ ..!: ವೀಕ್ಷಿಸಿ

ನೇಪಾಳದಲ್ಲಿ ನಡೆದ ಒಂದು ಅಸಾಮಾನ್ಯ ವಿದ್ಯಮಾನದಲ್ಲಿ ವಿಮಾನ ಪ್ರಯಾಣಿಕರು ಮತ್ತು ಭದ್ರತಾ ಅಧಿಕಾರಿಗಳು ಸೇರಿ ರನ್‌ ವೇಯಿಂದ ವಿಮಾನವನ್ನೇ ತಳ್ಳಿದ್ದಾರೆ..! ನೇಪಾಳದ ಸುದ್ದಿಗಳ ಪ್ರಕಾರ, ಕೋಲ್ಟಿಯ ಬಾಜುರಾ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ, ತಾರಾ ಏರ್ ವಿಮಾನವು ಟೈರ್ ಸ್ಫೋಟಗೊಂಡ ನಂತರ ಏರ್‌ಸ್ಟ್ರಿಪ್‌ನಲ್ಲಿ ಸಿಲುಕಿಕೊಂಡಿತ್ತು. ವಿಮಾನವು ವಿಮಾನ ನಿಲ್ದಾಣದಲ್ಲಿ ಇಳಿಯಲು ಮುಂದಾದಾಗ ಅದರ ಹಿಂದಿನ … Continued

ಉಪ್ಪಿನ ಹರಳಿನ ಗಾತ್ರದಷ್ಟು ಚಿಕ್ಕದಾದ ಸೂಕ್ಷ್ಮಕ್ಯಾಮೆರಾ ಆವಿಷ್ಕಾರ..!..ಈ ತಂತ್ರಜ್ಞಾನದ ಬಗ್ಗೆ ನೋಡಿ

ಪ್ರಿನ್ಸ್‌ಟನ್ ವಿಶ್ವವಿದ್ಯಾನಿಲಯ ಮತ್ತು ವಾಷಿಂಗ್ಟನ್ ವಿಶ್ವವಿದ್ಯಾನಿಲಯದ ಸಂಶೋಧಕರು ಒಂದು ಉಪ್ಪಿನ ಹರಳಿನ ಗಾತ್ರದ ಅಲ್ಟ್ರಾಕಾಂಪ್ಯಾಕ್ಟ್ ಕ್ಯಾಮೆರಾವನ್ನು ಆವಿಷ್ಕಾರ ಮಾಡಿದ್ದಾರೆ. ಈ ಸಣ್ಣ ಗಾತ್ರದ ಕ್ಯಾಮೆರಾಗಳು ಮಾನವನ ದೇಹದೊಳಗೆ ರೋಗಗಳ ಕುರಿತು ಅನ್ವೇಷಿಸಲು ಉತ್ತಮ ಸಾಮರ್ಥ್ಯ ಹೊಂದಿವೆ ಎಂದು ಹೇಳಲಾಗಿದೆ. ಈ ಅತ್ಯಂತ ಸಣ್ಣ ಕ್ಯಾಮೆರಾವು 5,00,000 ಪಟ್ಟು ದೊಡ್ಡದಾದ ಸಾಂಪ್ರದಾಯಿಕ ಸಂಯುಕ್ತ ಕ್ಯಾಮೆರಾ ಲೆನ್ಸ್‌ಗೆ ಸಮನಾಗಿ … Continued

ವಿಮಾನದ ಲ್ಯಾಂಡಿಂಗ್ ಗೇರ್‌ನಲ್ಲಿ ಅಡಗಿಕೊಂಡು 2.5 ಗಂಟೆ ಹಾರಾಟ ಹಾರಾಟ ಮಾಡಿದರೂ ಬದುಕುಳಿದ ಯುವಕ..!

ಸರ್ಫ್‌ಸೈಡ್ (ಅಮೆರಿಕ): ಯುವಕನೊಬ್ಬ ವಿಮಾನದ ಲ್ಯಾಂಡಿಂಗ್ ಗೇರ್‌ನಲ್ಲಿ ಅಡಗಿಕೊಂಡು 1,600 ಕಿಮೀಗಿಂತಲೂ ಹೆಚ್ಚು ದೂರವನ್ನು ಕ್ರಮಿಸಿಯೂ ಬದುಕಿ ಉಳಿದಿದ್ದಾನೆ..! ಅಮೆರಿಕದ ಮಿಯಾಮಿಯಲ್ಲಿ ಈ ಅಚ್ಚರಿಯ ಘಟನೆ ನಡೆದಿದ್ದು, ಗ್ವಾಟೆಮಾಲಾದಿಂದ ಮಿಯಾಮಿಗೆ ಚಲಿಸುತ್ತಿದ್ದ ವಿಮಾನದ ಲ್ಯಾಂಡಿಂಗ್‌ ಗೇರ್‌ನಲ್ಲಿ 26 ವರ್ಷದ ಯುವಕ ಅಡಗಿಕೊಂಡು 1,600 ಕಿ.ಮೀ ದೂರ ಪ್ರಯಾಣಿಸಿದ್ದಾನೆ.ಆತ ಜೀವಂತವಾಗಿ ಹೊರಬಂದಿದ್ದಾನೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗ್ವಾಟೆಮಾಲಾದಿಂದ … Continued

ವಿದ್ಯಾರ್ಥಿಗಳ ಸಫಾರಿ ವಾಹನದ ಮೇಲೆ ಬೃಹತ್ ಆನೆ ದಾಳಿ‌, ವಾಹನ ನುಜ್ಜುಗುಜ್ಜು.. ವಿಡಿಯೊದಲ್ಲಿ ಸೆರೆ

ಪ್ರಿಟೋರಿಯಾ: ಆನೆ ತಾನಾಗಿ ಯಾರ ಸುದ್ದಿಗೂ ಹೋಗುವುದಿಲ್ಲ, ಆದರೆ ಅದನ್ನು ಕೆಣಕಿದರೆ ಅಥವಾ ಅದಕ್ಕೆ ಕಿರಿಕಿರಿ ಮಾಡಿದರೆ ಅದು ಸಿಟ್ಟಿಗೇಳುತ್ತದೆ. ಅದು ಸಿಟ್ಟಿಗೆದ್ದರೆ ಏನೂ ಬೇಕಾದರೂ ಆಗಬಹುದು. ಇಂಥದ್ದೇ ಒಂದು ಘಟನೆ ನಡೆದಿದೆ. ಆನೆ ಕಿರಿಕಿರಯಾಗಿ ವಿದ್ಯಾರ್ಥಿಗಳ ಸಫಾರಿ ವಾಹನದ ಮೇಲೆ ಆನೆ ದಾಳಿಮಾಡಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ದಕ್ಷಿಣ ಆಫ್ರಿಕಾದ ಲಿಂಪೊಪೊ ಪ್ರಾಂತ್ಯದ … Continued

ಲಸಿಕೆಗಳು ಓಮಿಕ್ರಾನ್ ವಿರುದ್ಧ ರಕ್ಷಣೆ ನೀಡುವುದಿಲ್ಲ ಎಂದು ಯಾವುದೇ ಹೇಳಲು ಪುರಾವೆಗಳಿಲ್ಲ: ಆಕ್ಸ್‌ಫರ್ಡ್ ವಿವಿ

ಲಂಡನ್‌ : ಕೋವಿಡ್‌ ಲಸಿಕೆಗಳು ಹೊಸ ರೂಪಾಂತರ ಓಮಿಕ್ರಾನ್‌ನಿಂದ ತೀವ್ರವಾದ ರೋಗವನ್ನು ತಡೆಯುವುದಿಲ್ಲ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯವು ಮಂಗಳವಾರ ಹೇಳಿದೆ, ಆದರೆ ಅಗತ್ಯವಿದ್ದರೆ ಆಸ್ಟ್ರಾಜೆನೆಕಾ (AZN.L) ನೊಂದಿಗೆ ಅಭಿವೃದ್ಧಿಪಡಿಸಿದ ಅದರ ಲಸಿಕೆಯ ನವೀಕರಿಸಿದ ಆವೃತ್ತಿಯನ್ನು ತ್ವರಿತವಾಗಿ ಅಭಿವೃದ್ಧಿಪಡಿಸಲು ಸಿದ್ಧವಾಗಿರುವುದಾಗಿ ತಿಳಿಸಿದೆ. ಮಂಗಳವಾರ, ಔಷಧ ತಯಾರಕ ಮಾಡರ್ನಾ ಮುಖ್ಯಸ್ಥರು, ಕೋವಿಡ್‌-19 ಡೋಸ್‌ಗಳು ಓಮಿಕ್ರಾನ್‌ … Continued

ಪರಾಗ್ ಅಗರವಾಲ್ ಟ್ವಿಟರ್ ಸಿಇಒ ಆದ ನಂತರ ಭಾರತೀಯ ಪ್ರತಿಭೆಯಿಂದ ಅಮೆರಿಕ ಹೆಚ್ಚು ಪ್ರಯೋಜನ ಪಡೆಯುತ್ತಿದೆ ಎಂದ ಎಲೋನ್ ಮಸ್ಕ್

ಸಾಮಾಜಿಕ ಮಾಧ್ಯಮ ದೈತ್ಯ ಟ್ವಿಟ್ಟರ್‌ ಸಹ-ಸಂಸ್ಥಾಪಕ ಜಾಕ್ ಡೋರ್ಸೆ ಸೋಮವಾರ ರಾಜೀನಾಮೆ ನೀಡಿದ ನಂತರ ಭಾರತೀಯ ಮೂಲದ ತಂತ್ರಜ್ಞಾನ ಕಾರ್ಯನಿರ್ವಾಹಕ ಪರಾಗ್ ಅಗರವಾಲ್ ಅವರನ್ನು ಟ್ವಿಟರ್‌ನ ಹೊಸ ಸಿಇಒ ಆಗಿ ನೇಮಿಸಲಾಗಿದೆ. ಈ ಪ್ರಕಟಣೆಯು ಭಾರತೀಯ ಟ್ವಿಟರ್ ಜಾಗದಲ್ಲಿ ಸಂತೋಷಕ್ಕೆ ಕಾರಣವಾಗಿದೆ. ಈ ಬೆಳವಣಿಗೆ ಮಧ್ಯೆ ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಂಸ್ಥಾಪಕ ಹಾಗೂ ಜಗತ್ತಿನ ನಂ.೧ … Continued

ಓಮಿಕ್ರಾನ್‌ ವರ್ಸಸ್‌ ಡೆಲ್ಟಾ : ಎರಡು ಕೋವಿಡ್‌-19 ರೂಪಾಂತರಗಳು ಪರಸ್ಪರ ಹೇಗೆ ಭಿನ್ನ..?

ನವದೆಹಲಿ: ಜಗತ್ತಿನ ವಿಜ್ಞಾನಿಗಳು ಕೋವಿಡ್ -19 ರ ಓಮಿಕ್ರಾನ್ ರೂಪಾಂತರವನ್ನು ಅರ್ಥಮಾಡಿಕೊಳ್ಳಲು ನಿರತರಾಗಿದ್ದಾರೆ, ಈಗ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಇದನ್ನು ಕಾಳಜಿಯ ರೂಪಾಂತರವೆಂದು ಘೋಷಿಸುವುದರೊಂದಿಗೆ ಇದು ದೊಡ್ಡ ಭೀತಿಗೆ ಕಾರಣವಾಗಿದೆ. ಓಮಿಕ್ರಾನ್ ರೂಪಾಂತರವು ಇತರರಿಗಿಂತ ಹೆಚ್ಚು ಅಪಾಯಕಾರಿ ಎಂದು ಊಹಿಸಲಾಗಿದೆ. ಎಲ್ಲಾ ವೈರಸ್‌ಗಳು ರೂಪಾಂತರಗೊಳ್ಳುತ್ತವೆ ಮತ್ತು SARS-CoV-2 ಕೊರೊನಾ ವೈರಸ್ 2019ರ ಕೊನೆಯಲ್ಲಿ ಹೊರಹೊಮ್ಮಿದಾಗಿನಿಂದ … Continued

ಓಮಿಕ್ರಾನ್ ಕೋವಿಡ್‌ ರೂಪಾಂತರ ಡೆಲ್ಟಾಕ್ಕಿಂತ 6 ಪಟ್ಟು ಹೆಚ್ಚು ಹರಡುತ್ತದೆಯಂತೆ…!

ನವದೆಹಲಿ : ಹೊಸದಾಗಿ ಹೊರಹೊಮ್ಮಿದ ರೂಪಾಂತರ B.1.1.529 ಓಮಿಕ್ರಾನ್‌ ಕೋವಿಡ್‌ ರೂಪಾಂತರವು ಡೆಲ್ಟಾ ರೂಪಾಂತರಕ್ಕಿಂತ ಆರು ಪಟ್ಟು ಹೆಚ್ಚು ಹರಡುತ್ತದೆ ಎಂದು ತಜ್ಞರು ಸೂಚಿಸಿದ್ದಾರೆ. ಪ್ರಸ್ತುತ ಅಸ್ತಿತ್ವದಲ್ಲಿರುವ ಮೊನೊಕ್ಲೋನಲ್ ಎಂಟಿಬಾಡಿ ಥೆರಪಿ ಅಥವಾ ಕಾಕ್ಟೈಲ್ ಚಿಕಿತ್ಸೆಯು ಡೆಲ್ಟಾ ಪ್ಲಸ್ ರೂಪಾಂತರದಂತಹ ಓಮಿಕ್ರಾನ್ ರೂಪಾಂತರದ ವಿರುದ್ಧ ಅಷ್ಟು ಪರಿಣಾಮಕಾರಿಯಾಗಿರುವುದಿಲ್ಲ. ಐಜಿಐಬಿ (IGIB)ಯ ಸಂಶೋಧನಾ ತಜ್ಞರಾದ ಮರ್ಸಿ ರೋಫಿನಾ … Continued

ಟ್ವಿಟರ್ ಸಿಇಒ ಸ್ಥಾನಕ್ಕೆ ಜ್ಯಾಕ್ ಡಾರ್ಸೆ ರಾಜೀನಾಮೆ; ನೂತನ ಸಿಇಒ ಆಗಿ ಭಾರತೀಯ ಮೂಲದ ಪರಾಗ್ ಅಗರ್​ವಾಲ್ ನೇಮಕ

ನವದೆಹಲಿ: ಟ್ವಿಟರ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸ್ಥಾನಕ್ಕೆ ಜ್ಯಾಕ್ ಡಾರ್ಸೆ ಸೋಮವಾರ ರಾಜೀನಾಮೆ ಸಲ್ಲಿಸಿದ್ದಾರೆ. ಟ್ವಿಟರ್ ಸಂಸ್ಥೆಯ ಸಹ ಸಂಸ್ಥಾಪಕರಾಗಿದ್ದ ಜ್ಯಾಕ್ ಡಾರ್ಸೆ ಟ್ವಿಟರ್ ಸಂಸ್ಥೆಯಲ್ಲಿ 16 ವರ್ಷ ಕಾರ್ಯನಿರ್ವಹಿಸಿದ್ದರು. ಇದೀಗ, ಟ್ವಿಟರ್ ಹೊಸ ಸಿಇಒ ಆಗಿ ಭಾರತೀಯ ಪರಾಗ್ ಅಗರವಾಲ್ ಆಯ್ಕೆ ಆಗಿದ್ದಾರೆ. ಮುಂಬೈನ ಐಐಟಿಯಲ್ಲಿ ವ್ಯಾಸಂಗ ಮಾಡಿರುವ ಪರಾಗ್, ಪ್ರಸ್ತುತ … Continued

ಸ್ಪುಟ್ನಿಕ್ ವಿ, ಸ್ಪುಟ್ನಿಕ್ ಲೈಟ್ ಲಸಿಕೆಗಳು ಹೊಸ ಕೋವಿಡ್‌ ರೂಪಾಂತರ ಓಮಿಕ್ರಾನ್ ವಿರುದ್ಧ ಕೆಲಸ ಮಾಡುತ್ತದೆ: ರಷ್ಯಾ

ಮಾಸ್ಕೋ: ಕೋವಿಡ್‌-೧೯ ವಿರುದ್ಧ ರಷ್ಯಾದ ಸ್ಪುಟ್ನಿಕ್ ವಿ ಮತ್ತು ಸ್ಪುಟ್ನಿಕ್ ಲೈಟ್ ಲಸಿಕೆಗಳು ಹೊಸ ಕೋವಿಡ್ ರೂಪಾಂತರವಾದ ಓಮಿಕ್ರಾನ್ ಅನ್ನು ತಟಸ್ಥಗೊಳಿಸುವ ನಿರೀಕ್ಷೆಯಿದೆ ಎಂದು ಗಮಾಲೆಯಾ ಇನ್ಸ್ಟಿಟ್ಯೂಟ್ ಸೋಮವಾರ ತಿಳಿಸಿದೆ. ಸ್ಪುಟ್ನಿಕ್ ವಿ ಮತ್ತು ಸ್ಪುಟ್ನಿಕ್ ಲೈಟ್ ಎರಡೂ ಇತ್ತೀಚಿನ ಒಮಿಕ್ರಾನ್ ರೂಪಾಂತರವನ್ನು ತಟಸ್ಥಗೊಳಿಸುತ್ತದೆ ಮತ್ತು ಅಗತ್ಯ ಅಧ್ಯಯನಗಳನ್ನು ಪ್ರಾರಂಭಿಸಿದೆ ಎಂದು ಗಮಾಲೆಯ ಇನ್ಸ್ಟಿಟ್ಯೂಟ್ ನಂಬುತ್ತದೆ … Continued