ಕುಮಟಾ: ಬಾಳಿಗಾ ವಾಣಿಜ್ಯ ಕಾಲೇಜಿನಲ್ಲಿ ರ್‍ಯಾಂಕ್ ಪಡೆದ ವಿದ್ಯಾಥಿಗಳಿಗೆ ಸನ್ಮಾನ

ಕುಮಟಾ; ಪ್ರಯತ್ನವಿಲ್ಲದೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸದಾ ಪ್ರಯತ್ನಶೀಲರಾಗಿರ ಬೇಕು ಎಂದು ಡಾ.ಎಸ್.ವಿ.ಶೇಣ್ವಿ ಹೇಳಿದರು. ಅವರು ಡಾ.ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಂಗಳವಾರ ಪದವಿ ಮತ್ತು ಪೂರ್ವ ವಿಭಾಗದಲ್ಲಿ ರ್‍ಯಾಂಕ್ ಪಡೆದ ವಿದ್ಯಾಥಿಗಳನ್ನು ಸನ್ಮಾನಿಸಿ ಮಾತನಾಡಿದರು. ಆಧುನಿಕ ಕಾಲದಲ್ಲಿ ಉದ್ಯೋಗಕ್ಕೆ ಸಾಕಷ್ಟು ಅವಕಾಶವಿದೆ. ವಿದ್ಯಾರ್ಥಿಗಳು ಅದರ ಸದುಪಯೋಗ ಮಾಡಿಕೊಳ್ಳ ಬೇಕು.ಕಾಲೇಜಿನ ಇತಿಹಾಸದಲ್ಲೆ … Continued

ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ: ಉತ್ತರ ಕನ್ನಡ ಜಿಲ್ಲೆಯ ನಾಲ್ವರಿಗೆ 625ಕ್ಕೆ 625 ಅಂಕ

ಶಿರಸಿ/ಕಾರವಾರ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯ ಮೂವರಿಗೆ ಹಾಗೂ ಕಾರವಾರ ಜಿಲ್ಲೆಯ ಓರ್ವ ವಿದ್ಯಾರ್ಥಿನಿ 625ಕ್ಕೆ 625 ಅಂಕ ಪಡೆದು ಸಾಧನೆ ಮಾಡಿದ್ದಾರೆ.ಶಿರಸಿ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯ ಸಿದ್ದಾಪುರ ತಾಲ್ಲೂಕಿನ ಮೂವರು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದಿದ್ದಾರೆ. ಕಾನಸೂರಿನ ಕಾಳಿಕಾ ಭವಾನಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ರೇಷ್ಮಾ ಗಣೇಶ … Continued

ಶ್ರೀವಿಷ್ಣು ಸಹಸ್ರನಾಮ ವಿಷ್ಣುವ್ಯಾಖ್ಯಾ ಕೃತಿ ಬಿಡುಗಡೆ

ಬೆಂಗಳೂರು: ಮನಸ್ಸು ಒಂದೇ ಕಡೆ ಸ್ಥಿರವಾದರೆ ಅದೇ ಧ್ಯಾನ, ಅದು ಮೋಕ್ಷಕ್ಕೆ ಮಾರ್ಗ; ಮನಸ್ಸು ಚರವಾದರೆ ಅದು ಸಂಸಾರವಾಗುತ್ತದೆ. ಮನಸ್ಸು ಚಂಚಲ; ಅದು ಅದರ ಸ್ವಭಾವ. ಆ ಸ್ವಭಾವಕ್ಕೆ ಹೊಂದಿಕೊಂಡೇ ತತ್ವಕ್ಕೆ ಬದ್ಧವಾಗಿರುವಂತೆ ಮಾಡುವುದು ವಿಷ್ಣುಸಹಸ್ರನಾಮದ ಮಹತಿಯಾಗಿದೆ ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು. ಗಿರಿನಗರ ಶ್ರೀರಾಮಾಶ್ರಮದಲ್ಲಿ ನಡೆದ ‘ಶ್ರೀ ವಿಷ್ಣು ಸಹಸ್ರನಾಮ … Continued

ಕುಮಟಾ ಬಾಳಿಗಾ ಕಾಲೇಜಿನಲ್ಲಿ ಬೃಹತ್ ಕೋವಿಡ್ ಲಸಿಕಾ ಮೇಳ: ೭೦೦ ವಿದ್ಯಾರ್ಥಿಗಳಿಗೆ ಲಸಿಕೆ

ಕುಮಟಾ; ಡಾ.ಎ.ವಿ.ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಬೃಹತ್ ಕೋವಿಡ್ ಲಸಿಕಾ ಮೇಳ ನಡೆಯಿತು. ಬಾಳಿಗಾ ವಿದ್ಯಾರ್ಥಿಗಳಿಗೆ ಮತ್ತು ತಾಲೂಕಿನ ಸರ್ಕಾರಿ ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕೊರೊನಾ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಯಿತು. ಒಟ್ಟು ೭೦೦ ವಿದ್ಯಾರ್ಥಿಗಳಿಗೆ ಲಸಿಕೆಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಪದವಿ ಪ್ರಾಚಾರ್ಯ ಡಾ.ಪಿ.ಕೆ.ಭಟ್ಟ ವಿದ್ಯಾಥಿಗಳಿಗೆ ತಿಳಿವಳಿಕೆ ನೀಡಿದರು. ಶೈಕ್ಷಣಿಕ … Continued

ಕುಮಟಾ ಬಾಳಿಗಾ ವಾಣಿಜ್ಯ ಕಾಲೇಜಿನಲ್ಲಿ ಯಶಸ್ವಿಯಾದ ಕೋವಿಡ್ ಲಸಿಕಾ ಅಭಿಯಾನ

ಕುಮಟಾ; ಉತ್ತರ ಕನ್ನಡ ಜಿಲ್ಲೆ  ಕುಮಟಾದ ಡಾ.ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಗುರುವಾರ ಕಾಲೇಜು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಒಟ್ಟು ೨೦೬ ಜನರಿಗೆ ಎರಡನೆ ಡೋಸ್ ಕೋವಿಡ್ ಲಸಿಕೆ ನೀಡಲಾಯಿತು. ಕಾಲೇಜಿನ ೧೮ ವರ್ಷ ಮೇಲ್ಪಟ್ಟ ಪದವಿ, ಬಿ.ಬಿ.ಎ ಮತ್ತು ಎಂ.ಕಾಮ್‌ ವಿದ್ಯಾರ್ಥಿಗಳು ಲಸಿಕಾ ಅಭಿಯಾನದಲ್ಲಿ ಭಾಗವಹಿಸಿದ್ದರು. ಪದವಿ ಪ್ರಾಚಾರ್ಯ ಡಾ.ಎಸ್.ವಿ.ಶೇಣ್ವಿ ಮಾತನಾಡಿ, ಲಸಿಕೆ ಪಡೆದುಕೊಳ್ಳುವುದರಿಂದ ವಿದ್ಯಾರ್ಥಿಗಳು … Continued

ಉತ್ತರ ಕನ್ನಡ ಜಿಲ್ಲೆ ಅತಿವೃಷ್ಟಿ-ಪ್ರವಾಹಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ: ದೇಶಪಾಂಡೆ

ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿವೃಷ್ಠಿಯಿಂದಾಗಿ ಅಪಾರ ಪ್ರಮಾಣದಲ್ಲಿ ಆಸ್ತಿ,ಬೆಳೆಗಳು, ಮನೆಗಳು ಮತ್ತು ಜೀವ ಹಾನಿಯಾಗಿದ್ದರೂ ಸರ್ಕಾರ ಅದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ. ಅತಿವೃಷ್ಠಿಯಲ್ಲಿ ಹಾನಿಗೊಳಗಾದ ತಾಲೂಕಿನ ಹಲವು ಭಾಗಗಳಿಗೆ ಭೇಟಿ ನೀಡಿ ನಂತರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ೪ ದಿನಗಳಿಂದ ಹಾನಿಗೊಳಗಾದ … Continued

ಬಸವರಾಜ ಬೊಮ್ಮಾಯಿ ಸಿಎಂ ಸ್ಥಾನಕ್ಕೆ ಆಯ್ಕೆ: ರೂಪಾಲಿ ಸಂತಸ

ಕಾರವಾರ: ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಬಸವರಾಜ ಬೊಮ್ಮಾಯಿ ಆಯ್ಕೆಯಾಗಿರುವುದು ಅತೀವ ಸಂತಸವಾಗಿದೆ ಎಂದು ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕರಾದ ರೂಪಾಲಿ ನಾಯ್ಕ ಪ್ರತಿಕ್ರಿಯಿಸಿದ್ದಾರೆ. ಮಾನ್ಯ ಬೊಮ್ಮಾಯಿ ಅವರು ಸರ್ವಾನುಮತದಿಂದ ಮುಖ್ಯಮಂತ್ರಿ ಆಗಿ ಆಯ್ಕೆಯಾಗಿರುವುದು ಹರ್ಷದಾಯಕ ಸಂಗತಿ. ರೈತರು, ಬಡವರು, ಹಿಂದುಳಿದವರು, ದೀನ ದಲಿತರ ಬಗ್ಗೆ ಅಪಾರ ಕಾಳಜಿ ಉಳ್ಳವರಾಗಿರುವ ಮಾನ್ಯ ಬಸವರಾಜ ಬೊಮ್ಮಾಯಿ ಅವರು ಅಭಿವೃದ್ಧಿಪರ … Continued

ನೂತನ ಸಿಎಂ ಬಸವರಾಜ ಬೊಮ್ಮಾಯಿಗೆ ಶಿವರಾಮ ಹೆಬ್ಬಾರ ಅಭಿನಂದನೆ

ಕಾರವಾರ: ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಆಯ್ಕೆಯಾದ ಪಕ್ಷದ ಹಿರಿಯ ನಾಯಕರು ಹಾಗೂ ಆತ್ಮೀಯರಾದ ಬಸವರಾಜ ಬೊಮ್ಮಾಯಿ ಅವರಿಗೆ ಶಿವರಾಮ ಹೆಬ್ಬಾರ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಹೋರಾಟ ಮೂಲಕವಾಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿ ದಶಕಗಳ ಕಾಲ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅನುಭವಿ ರಾಜಕಾರಣಿ ಬಸವರಾಜ ಬೊಮ್ಮಾಯಿ ಅವರಿಗೆ ಕನ್ನಡ ನಾಡಿನ ಮುಖ್ಯಮಂತ್ರಿ ಸ್ಥಾನ ಲಭಿಸಿರುವುದು … Continued

ಮಾಣಿ ಹೊಳೆಯಲ್ಲಿ ಮನೆಯೊಟ್ಟಿಗೆ ಕೊಚ್ಚಿ ಹೋದ ಬದುಕು

ಸಿದ್ದಾಪುರ : ತಾಲೂಕಿನ ಕಾಸಸೂರು ಸಮೀಪದ ಹಸರಗೋಡ ಗ್ರಾಮ ಪಂಚಾಯ ವ್ಯಾಪ್ತಿಯ ಕರ್ಜಗಿ ಗ್ರಾಮದ ನಿವಾಸಿ ಮಹಾಬಲೇಶ್ವರ ಗೌಡ ಎಂಬವರ ಮನೆ ಮಾಣಿಹೊಳೆ ಆರ್ಭಟಕ್ಕೆ ಕೊಚ್ಚಿ ಹೋಗಿದೆ. ನೀರಿನ ವೇಗಕ್ಕೆ ಮನೆ ಸಂಪೂರ್ಣವಾಗಿ ಕೊಚ್ಚಿ ಹೋಗಿದ್ದು, ಮನೆಯ ಅಸ್ತಿಪಂಜರ ಮಾತ್ರ ಉಳಿದಿದೆ. ಈಗ ಮನೆ ಕಳೆದುಕೊಂಡ ಕುಟುಂಬಸ್ಥರು ನಿರಾಶ್ರಿತರಾಗಿದ್ದಾರೆ. ಬಡ ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದ … Continued

ಕುಮಟಾ; ೧೫ ಕ್ಕೂ ಹೆಚ್ಚು ಮನೆ ಸಂಪೂರ್ಣ ಕುಸಿತ, ೬೦೦ ಜನರ ಸ್ಥಳಾಂತರ, ಎನ್.ಡಿಆರ್ ಎಫ್ ತಂಡ ಆಗಮನ

ಕುಮಟಾ: ಶಿರಸಿ -ಸಿದ್ದಾಪುರದಲ್ಲಿ ಸುರಿದ ಮಳೆ ಕರಾವಳಿಯಲ್ಲಿ ಪ್ರವಾಹದ ಭೀಕರತೆ ಸೃಷ್ಟಿಸಿದೆ. ಹೇಚ್ಚುತ್ತಿರುವ ನದಿ ನೀರಿನ ನೀರಿನ ಮಟ್ಟದಿಂದ ಜನರನ್ನು ರಕ್ಷಿಸುವುದೇ ತಾಲೂಕಾಡಳಿಕ್ಕೆ ಹರಸಾಹಸವಾಗಿದೆ. ಸುಮಾರು ೫೦೦ಕ್ಕೂ ಹೆಚ್ಚುಮನೆಗಳು ಜಲಾವೃತಗೊಂಡಿದೆ. ಹೊಲನಗದ್ದೆ, ಹೀಣಿ, ದಿವಗಿ, ಮಿರ್ಜಾನ, ಹೆಗಡೆ, ಐಗಳಕೂರ್ವೆ ಇತ್ಯಾದಿ ಗ್ರಾಮಗಳು ಸಂಪೂರ್ಣ ಜಲಾವೃತವಾಗಿದ್ದು ೨೮ಕ್ಕೂ ಹೆಚ್ಚು ನೆಮ್ಮದಿ ಕೇಂದ್ರವನ್ನು ತೆರೆಯಲಾಗಿದೆ. ೧೫ ಮನೆಗಳು ಕುಸಿದು … Continued