ಭಯೋತ್ಪಾದಕರೊಂದಿಗೆ ಸಂಪರ್ಕ: ಭಟ್ಕಳದಲ್ಲಿ ಎನ್‌ಐಎ ದಾಳಿ, ಮೂವರು ವಶಕ್ಕೆ

ಕಾರವಾರ: ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‍ಐಎ (ರಾಷ್ಟ್ರೀಯ ತನಿಖಾ ದಳ) ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ದಾಳಿ ನಡೆಸಿದ್ದು ಮೂವರನ್ನು ವಶಕ್ಕೆ ಪಡೆದಿದೆ ಎಂದು ತಿಳಿದುಬಂದಿದೆ. ಭಟ್ಕಳದ ಉಮರ್ ಸ್ಟ್ರೀಟ್, ತೆಂಗಿನ ಗುಂಡಿ ಹಾಗೂ ಸಾಗರ ರಸ್ತೆಯಲ್ಲಿರುವ ಮನೆಗಳಿಗೆ ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದ್ದು. ಎನ್‌ಇಎ ಮೂವರನ್ನು ವಶಕ್ಕೆ ಪಡೆದಿದೆ ಎನ್ನಲಾಗಿದೆ. … Continued

ರಾಜ್ಯದ ಎಸ್.ಎಸ್.ಎಲ್.ಸಿ. ಫಲಿತಾಂಶ ನಾಳೆಯೇ ಪ್ರಕಟ…!

posted in: ರಾಜ್ಯ | 1

ಬೆಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ವಿಳಂಭವಾಗಿ ನಡೆದಿರುವ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಪ್ರಕಟಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಾಳೆಯೇ ಫಲಿತಾಂಶ ಪ್ರಕಟಿಸುವ ಸಾಧ್ಯತೆ ಇದೆ ಎಂದು  ಎಸ್.ಎಸ್.ಎಲ್.ಸಿ. ನಿರ್ದೇಶಕಿ ವಿ. ಸುಮಂಗಲ ತಿಳಿಸಿದ್ದಾರೆ. ಗುರುವಾರ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಸದಸ್ಯರ ಸಭೆ ನಡೆಸಿದ್ದು ಸಭೆಯಲ್ಲಿ ಫಲಿತಾಂಶ ಪ್ರಕಟಿಸಲು … Continued

ಮಹತ್ವದ ನಿರ್ಧಾರ.. ಕರ್ನಾಟಕದ 8 ಜಿಲ್ಲೆಗಳಲ್ಲಿ ಇಂದಿನಿಂದಲೇ ವೀಕೆಂಡ್ ಕರ್ಫ್ಯೂ ಜಾರಿ, ಆ. 23 ರಿಂದ ಶಾಲಾ -ಕಾಲೇಜುಗಳು ಆರಂಭ..!

ಬೆಂಗಳೂರು:ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ, ಕೇರಳದ ಗಡಿಯಲ್ಲಿರುವ 8 ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಇಂದಿನಿಂದಲೇ ಜಾರಿಯಾಗಲಿದೆ. ಕೊರೊನಾ ನಿಯಂತ್ರಣ ಸಂಬಂಧ ಸಿಎಂ ಬೊಮ್ಮಾಯಿ ತಜ್ಞರ ಜೊತೆ ಸಭೆ ನಡೆಸಿದ ಬಳಿಕ ಈ ನಿರ್ಧಾರ ಪ್ರಕಟವಾಗಿದೆ. ದಕ್ಷಿಣ ಕನ್ನಡ, ಕೊಡಗು,  ಮೈಸೂರು, ಚಾಮರಾಜನಗರ, ಬೆಳಗಾವಿ,  ಬೀದರ್, ಕಲುಬುರಗಿ, ವಿಜಯಪುರದಲ್ಲಿ ಶನಿವಾರ, ಭಾನುವಾರ ಲಾಕ್‍ಡೌನ್ ಘೋಷಣೆಯಾಗಿದೆ.ರಾಜ್ಯಾದ್ಯಂತ ನೈಟ್ … Continued

ಶಾಸಕ ಜಮೀರ್ ಅಹಮದ್ ಮನೆ ಮೇಲೆ ಇಡಿ ದಾಳಿ: ೨೩ ಗಂಟೆಗಳ ಕಾಲ ದಾಖಲೆಗಳ ಹುಡುಕಾಟ

posted in: ರಾಜ್ಯ | 0

ಬೆಂಗಳೂರು: ಶಾಸಕ ಜಮೀರ್ ಅಹಮದ್ ಮನೆ ಮೇಲೆ ಐಎಂಎ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ನಡೆದ ಇಡಿ ರೇಡ್ ೨೩ ಗಂಟೆಗಳ ಬಳಿಕ ಜಮೀರ್ ಮನೆಯಿಂದ ಅಧಿಕಾರಿಗಳು ದಾಳಿ ಮುಗಿಸಿ ಹೊರಹೋಗಿದ್ದು, ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ನಾಲ್ಕು ಕಾರುಗಳಲ್ಲಿ ಬಂದಿದ್ದ ಇಡಿ ಅಧಿಕಾರಿಗಳ ತಂಡ ಸಿ.ಆರ್.ಪಿ.ಎಫ್. ಸಿಬ್ಬಂದಿಯೊಂದಿಗೆ ದಾಖಲೆಗಳ ಸಮೇತ ನಿರ್ಗಮಿಸಿದೆ. ಬಹಳಷ್ಟು ಮಹತ್ವದ … Continued

ಚುನಾವಣಾ ರಾಜಕೀಯಕ್ಕೆ ಸಂಸದ ಶ್ರೀನಿವಾಸ ಪ್ರಸಾದ ನಿವೃತ್ತಿ ಘೋಷಣೆ

ಮೈಸೂರು: ಮೈಸೂರು ಭಾಗದಲ್ಲಿ ಪ್ರಭಾವಿ ನಾಯಕನಾಗಿ ಗುರುತಿಸಿಕೊಂಡಿರುವ ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್ (V Srinivasa Prasad) ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಇಂದು (ಆಗಸ್ಟ್​ 06) ಅವರ ಜನ್ಮವಾಗಿದ್ದು ಇದೇ ಸಂದರ್ಭದಲ್ಲಿ ಅವರು ತಮ್ಮ ರಾಜಕೀಯ ಜೀವನದ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಯೋಜಿಸಲಾಗಿದೆ. ನಾಲ್ಕು ವರ್ಷದ ಹಿಂದೆಯೇ ನಾನು ನಿವೃತ್ತಿ ಬಯಸಿದ್ದೆ. ಆದರೆ ರಾಜಕೀಯ … Continued

ಮೈಸೂರು ವಿವಿ ಪ್ರಾಧ್ಯಾಪಕನ ವಿರುದ್ಧ ಸಂಶೋಧನಾ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪಿಸಿ ಪತ್ನಿಯಿಂದಲೇ ದೂರು, ನಡೆದಿಲ್ಲ ಎಂದ ವಿದ್ಯಾರ್ಥಿನಿ..!

ಮೈಸೂರು: ನನ್ನ ಪತಿಯು ಪಿಎಚ್‌ಡಿ ಸಂಶೋಧನೆ ನಡೆಸುತ್ತಿದ್ದ ಯುವತಿ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಪತ್ನಿ ದೂರಿದರೆ, ಪತಿ-ಪತ್ನಿಯ ಜಗಳದಲ್ಲಿ ನನ್ನನ್ನು ಎಳೆತರಲಾಗಿದೆ. ನನ್ನ ಮೇಲೆ ಯಾರೂ ಅತ್ಯಾಚಾರ ನಡೆಸಿಲ್ಲ ಎಂದು ಯುವತಿ ಹೇಳಿಕೆ ನೀಡಿರುವ ವಿಚಿತ್ರ ಪ್ರಸಂಗ ಮೈಸೂರು ನಗರದಲ್ಲಿ ನಡೆದಿದೆ. ಹೀಗಾಗಿ ಈಗ ಈ ಪ್ರಕರಣದಲ್ಲಿ ಪೊಲೀಸರೇ ಗೊಂದಲಕ್ಕೆ ಒಳಗಾಗಿದ್ದಾರೆ. ನಗರದ ಮೈಸೂರು ವಿವಿ … Continued

ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿಗೆ ಕಾಂಗ್ರೆಸ್‌ ಕಾರ್ಯಕರ್ತರ ಅಭಿನಂದನೆ..!

ಉಡುಪಿ :ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕು ಶೇಡಿಮನೆ ಗ್ರಾಮದ ಅರಸಮ್ಮಕಾನು ಎಂಬಲ್ಲಿ ಬಿಜೆಪಿ ಸಚಿವರಿಗೆ ಕಾಂಗ್ರೆಸ್ಸಿಗರು ಶುಭಕೋರಿದ್ದಾರೆ..! ಮುಖ್ಯಮಂತ್ರಿ ಬೊಮ್ಮಾಯಿ ಮಂತ್ರಿಮಂಡಳದಲ್ಲಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಕಾಂಗ್ರೆಸ್ಸಿಗರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಅಭಿನಂದನೆಗಳು..ಶುಭ ಕೋರುವವರು ಕಾಂಗ್ರೆಸ್ ಕಾರ್ಯಕರ್ತರು ಶೇಡಿಮನೆ ವಾರ್ಡ್ ಎಂಬ ಬ್ಯಾನರ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ … Continued

ಸಂಕಷ್ಟದಲ್ಲಿರುವ ನೆರೆ ಸಂತ್ರಸ್ತರಿಗೆ ಅಮೆರಿಕ ಹವ್ಯಕದಿಂದ ನೆರವಿನ ಹಸ್ತ

ಶಿರಸಿ: ಅತಿವೃಷ್ಟಿಗೆ ಕೃಷಿ ಭೂಮಿ ಹಾಗೂ ಮನೆಗಳನ್ನು ಕಳೆದುಕೊಂಡು ಅತ್ಯಂತ ಸಂಕಷ್ಟದಲ್ಲಿರುವ, ಉತ್ತರ ಕನ್ನಡದ ಕಳಚೆ ಹಾಗೂ ಇತರ ಪ್ರದೇಶದ ರೈತರ ನೆರವಿಗೆ ಅಮೆರಿಕದ ಹವ್ಯಕ ಅಸೋಸಿಯೇಶನ್ ಮುಂದಾಗಿ ಸ್ವರ್ಣವಲ್ಲೀ ಮಠದ ಮೂಲಕ ನೆರವಿನ ಹಸ್ತ ಚಾಚಿದೆ. ಈ ಕುರಿತು ಮಾಹಿತಿ ನೀಡಿರುವ, ಅಸೋಸಿಯೇಶನ್ ಅಧ್ಯಕ್ಷ ಗೋಪಾಲ ಭಟ್ಟ, ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶರಾದ … Continued

ಸಿಎಂ ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ ಪ್ರಸಾದ್ ನೇಮಕ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ್ ಪ್ರಸಾದ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಮಂಜುನಾಥ್ ಪ್ರಸಾದ್ ಅವರನ್ನು ಮುಖ್ಯಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸರ್ಕಾರ ವರ್ಗಾವಣೆ ಮಾಡಲಾಗಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಇ.ವಿ. ರಮಣ ರೆಡ್ಡಿ ಅವರನ್ನು ಕೈಗಾರಿಕೆ ಇಲಾಖೆಗೆ … Continued

ಬೆಲೇಕೇರಿ ಬಳಿ ಟ್ರಾಲ್‌ ಬೋಟ್‌ ಮುಳುಗಡೆ: ಆರು ಮೀನುಗಾರರ ರಕ್ಷಣೆ

ಅಂಕೋಲಾ: ಮೀನುಗಾರಿಕೆಗೆ ತೆರಳಿದ ಟ್ರಾಲ್ ಬೋಟ್ ಇಲ್ಲಿನ ಬೆಲೇಕೇರಿ ಬಳಿ ಸಮುದ್ರದಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗಡೆಗೊಂಡಿದ್ದು ಬೋಟಿನಲ್ಲಿದ್ದ 6 ಮೀನುಗಾರರನ್ನು ಬೇರೆ ಬೋಟ್ ಮತ್ತು ಕರಾವಳಿ ಕಾವಲು ಪಡೆ ಸಿಬ್ಬಂದಿ ರಕ್ಷಿಸಿದ್ದಾರೆ. ತದಡಿ ಮೀನುಗಾರಿಕೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಕಿಮಾನಿಯ ಶಂಕರ ಹರಿಕಂತ್ರ ಎನ್ನುವವರಿಗೆ ಸೇರಿದ ಶಾಂತಿಕಾ ಪರಮೇಶ್ವರಿ ಹೆಸರಿನ ಬೋಟ್ ಬೆಲೇಕೇರಿ ಸಮೀಪ … Continued