ಸಾರ್ವಜನಿಕರ ಮೇಲೆ ಪೊಲೀಸರಿಂದ ಅನಗತ್ಯ ಬಲಪ್ರಯೋಗ ಬೇಡ: ಹೈಕೋರ್ಟ್

ಬೆಂಗಳೂರು: ಸಾರ್ವಜನಿಕರ ಮೇಲೆ ಪೊಲೀಸರು ಅನಗತ್ಯ ಬಲಪ್ರಯೋಗ ಮಾಡುವುದು ಬೇಡ ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಕೋವಿಡ್ ನಿಯಂತ್ರಣ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಅನೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ನ್ಯಾಯಪೀಠವು ಈ ಸೂಚನೆ ನೀಡಿದೆ. ಅರ್ಜಿ ವಿಚಾರಣೆ ವೇಳೆ ಅರ್ಜಿದಾರರ ಪರ … Continued

ಲಸಿಕೆ 2ನೇ ಡೋಸ್‌ ಬಾಕಿ ಇರುವವರಿಗೆ ಆದ್ಯತೆ ನೀಡಿ: ರಾಜ್ಯಗಳಿಗೆ ಕೇಂದ್ರದ ಸಲಹೆ

ನವ ದೆಹಲಿ : ಕೊರೊನಾ ಲಸಿಕೆ ನೀಡಿಕೆಯಲ್ಲಿ 2ನೇ ಡೋಸ್ ಬಾಕಿ ಇರುವವರಿಗೆ ಆದ್ಯತೆ ನೀಡುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸಲಹೆ ನೀಡಿದೆ. ಕೇಂದ್ರದಿಂದ ಸರಬರಾಜು ಮಾಡಲಾದ ಡೋಸ್‌ಗಳಲ್ಲಿ ಕನಿಷ್ಠ ಶೇಕಡಾ 70ರಷ್ಟನ್ನ ಕಾಯ್ದಿರಿಸುವಂತೆ ಕೇಂದ್ರವು ಮಂಗಳವಾರ ರಾಜ್ಯಗಳಿಗೆ ಮನವಿ ಮಾಡಿದ್ದು, ಲಸಿಕೆಯ ಡೋಸುಗಳು ವ್ಯರ್ಥವಾಗುವುದನ್ನು ಕಡಿಮೆ ಮಾಡಬೇಕು ಸೂಚಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ … Continued

ಕೋವಿಡ್ ಲಸಿಕೆ ಪ್ರಮಾಣಪತ್ರ: ಕೋವಿನ್‌,ಆರೋಗ್ಯ ಸೇತುನಿಂದ ಡೌನ್‌ಲೋಡ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

ಭಾರತವು ಪ್ರಸ್ತುತ ಮಾರಣಾಂತಿಕ ಕೋವಿಡ್ -19 ಸಾಂಕ್ರಾಮಿಕದ ಅಭೂತಪೂರ್ವ ಎರಡನೇ ಅಲೆಯನ್ನು ಎದುರಿಸುತ್ತಿದೆ. ಮೇ 1 ರಿಂದ ದೇಶವು 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಡೋಸ್‌ ತೆರೆಯಿತು. ಪ್ರಸ್ತುತ ಎರಡು ಲಸಿಕೆಗಳಿವೆ – ಕೋವಿಶೀಲ್ಡ್, ಇದನ್ನು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಮತ್ತು ಭಾರತ್ ಬಯೋಟೆಕ್‌ ಕೊವಾಕ್ಸಿನ್ ಅಭಿವೃದ್ಧಿಪಡಿಸಿದೆ -ಇದನ್ನು ಈಗ ಲಸಿಕೆ … Continued

ಮಹತ್ವದ ಸೂಚನೆ.. ಕರ್ನಾಟಕದಲ್ಲಿ ಲಾಕ್‌ಡೌನ್‌ ವೇಳೆ ಕೂಲಿ ಕಾರ್ಮಿಕರು, ವಲಸಿಗರಿಗೆ ಇಂದಿರಾ ಕ್ಯಾಂಟೀನ್’ನಲ್ಲಿ ಉಟಿತ ಊಟ

ಬೆಂಗಳೂರು :ಕರ್ನಾಟಕದಲ್ಲಿ ಮೇ 10 ರಿಂದ 24ರ ವರೆಗೆ ಕೋವಿಡ್‌ ಲಾಕ್ ಡೌನ್ ಜಾರಿಗೊಳಿಸಿರುವುದರಿಂದ ಕೂಲಿ ಕಾರ್ಮಿಕರು, ವಲಸಿಗರು ಮತ್ತು ದುರ್ಬಲ ವರ್ಗದವರಿಗೆ ಅನನುಕೂಲವಾಗದಂತೆ ರಾಜ್ಯದ ನಗರ ಸ್ಥಳೀಯ ಸಂಸ್ಧೆಗಳಲ್ಲಿ ಚಾಲನೆಯಲ್ಲಿರುವ ಇಂದಿರಾ ಕ್ಯಾಂಟೀನ್ ಗಳಲ್ಲಿ ಉಚಿತವಾಗಿ ಬೆಳಗಿನ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟ ಒದಗಿಸುವಂತೆ ಪೌರಾಡಳಿತ ನಿರ್ದೇಶನಾಲಯ ಆದೇಶಿಸಿದೆ. ರಾಜ್ಯ ಎಲ್ಲ ಜಿಲ್ಲಾಧಿಕಾರಿಗಳಿಗೆ … Continued

ಕರ್ನಾಟಕಕ್ಕೆ ಮೊದಲ ಬಾರಿಗೆ ರೈಲಿನಲ್ಲಿ ಬಂದ ಆಮ್ಲಜನಕ ಹೊತ್ತ ಕಂಟೇನರ್‌ಗಳು

ಬೆಂಗಳೂರು: ಕರ್ನಾಟಕದಲ್ಲಿ ಆಮ್ಲಜನಕ ಅಭಾವ ನೀಗಿಸಲು ಇದೇ ಮೊದಲ ಬಾರಿಗೆ ಮಂಗಳವಾರ ರೈಲಿನ ಮೂಲಕ ಆಮ್ಲಜನಕ ಬಂದಿದೆ. ಜಮ್ಶೆಡ್ಪುರದಿಂದ ಬೆಂಗಳೂರಿಗೆ ಎಕ್ಸ್‌ಪ್ರೆಸ್ ರೈಲಿನಲ್ಲಿ 6 ಆಮ್ಲಜನಕ ಕಂಟೇನರ್‌ಗಳು ತಲುಪಿವೆ. ತಲಾ 20 ಟನ್ ಇರುವ ಆಮ್ಲಜನಕ ಕಂಟೇನರ್‌ಗಳು ಈಗ ವೈಟ್‌ಫೀಲ್ಡ್‌ನಲ್ಲಿರುವ ಕಾರ್ಪೊರೇಷನ್ ಆಫ್ ಇಂಡಿಯಾ ಡಿಪೋಕ್ಕೆ ಆಗಮಿಸಿವೆ. ಜಮ್ಶೆಡ್ಪುರದಿಂದ ಸೋಮವಾರ ಮುಂಜಾನೆ 3ಕ್ಕೆ ಹೊರಟಿದ್ದ ಈ … Continued

ಮಾರ್ಗಸೂಚಿಯಲ್ಲಿ ಬದಲಾವಣೆ.. ಅಗತ್ಯವಸ್ತು ಖರೀದಿಗೆ ಮಾತ್ರ ವಾಹನ ಬಳಸಬಹುದು-ಡಿಜಿಪಿ ಟ್ವೀಟ್‌

ಬೆಂಗಳೂರು:ಲಾಕ್‌ಡೌನ್ ಮಾರ್ಗಸೂಚಿಯಲ್ಲಿ ಕೆಲವು ಬದಲಾವಣೆ ಮಾಡಲಾಗಿದ್ದು, ದಿನಸಿ, ತರಕಾರಿ ಸೇರಿದಂತೆ ಅಗತ್ಯವಸ್ತು ಖರೀದಿಸಲು ವಾಹನ ಬಳಸಬಹುದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿ ಸೋಮವಾರ ಸಂಜೆ ಈ ಕುರಿತು ಟ್ವೀಟ್ ಮಾಡಿದೆ. ಈ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿ ಟ್ವೀಟ್ ಮಾಡಿದ್ದು, , ತರಕಾರಿ, ದಿನಸಿ ತರಲು ವಾಹನ ಬಳಕೆ ಮಾಡಲು ಅನುಮತಿ ನೀಡಲಾಗಿದೆ,ನಿಮ್ಮ … Continued

ದೆಹಲಿ ಭೇಟಿಯಲ್ಲಿ ಕೋವಿಡ್‌ ಚರ್ಚೆ, ನಾಯಕತ್ವ ಬದಲಾವಣೆ ಹಸಿ ಸುಳ್ಳು: ಬೊಮ್ಮಾಯಿ ಸ್ಪಷ್ಟನೆ

ಬೆಂಗಳೂರು ತಮ್ಮ ಹಾಗೂ ಬಿ. ವೈ.  ವಿಜಯೇಂದ್ರ ನವದೆಹಲಿ ಭೇಟಿಯ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇರಲಿಲ್ಲ. ನಾಯಕತ್ವ ಬದಲಾವಣೆ ಎಂಬುದು ಹಸಿ ಸುಳ್ಳು. ಅದು  ಸತ್ಯಕ್ಕೆ ಬಹಳ ದೂರವಾದ ಸಂಗತಿ ಎಂದು ಗೃಹ ಖಾತೆ ಸಚಿವರಾದ ಬಸವರಾಜಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಸೋಮವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ … Continued

 ಮೊಬೈಲ್ ಆಮ್ಲಜನಕ ಪೂರೈಕೆಗೆ ಗಂಭೀರ ಚಿಂತನೆ: ಬೊಮ್ಮಾಯಿ

ಬೆಂಗಳೂರು : ಜನರ ಪ್ರಾಣ ಉಳಿಸಲು ತುರ್ತು ಸಂದರ್ಭಗಳಲ್ಲಿ ಬೆಂಗಳೂರು ನಗರದಲ್ಲಿ ಮೊಬೈಲ್ ಆಮ್ಲಜನಕ ಸಿಲಿಂಡರ್‌ಗಳ ಪೂರೈಕೆ ವ್ಯವಸ್ಥೆ ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ ಎಂದು ಗೃಹ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ತಿಳಿಸಿದರು. ಬೆಂಗಳೂರಿನ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸೋಮವಾರ ಬೆಂಗಳೂರು ಪೂರ್ವವಲಯದ ಕೋವಿಡ್ ಸ್ಥಿತಿಗತಿ ಕುರಿತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜೊತೆ ನಡೆಸಿದ … Continued

ಕೋವಿಡ್‌ ಆಸ್ಪತ್ರೆ: ಬಿಬಿಎಂಪಿ ಬೆಡ್ ಬುಕಿಂಗ್ ವಿಧಾನದಲ್ಲಿ ಪರಿಣಾಮಕಾರಿ ಸುಧಾರಣೆ

ಬೆಂಗಳೂರು :ಬೆಡ್ ಹಂಚಿಕೆ ಪದ್ಧತಿಯಲ್ಲಿ ಹಲವು ಸುಧಾರಣೆಗಳಿಗೆ ಕೋರಿ ನಮ್ಮ ಮನವಿಗೆ ಬಿಬಿಎಂಪಿ ಸ್ಪಂದಿಸಿದ್ದು, ಕ್ಷಿಪ್ರಗತಿಯಲ್ಲಿ 4 ಪರಿಣಾಮಕಾರಿ ಸುಧಾರಣೆಗಳು ಈಗಾಗಲೇ ಕಾರ್ಯರೂಪಕ್ಕೆ ಬಂದಿದೆ. ಈ ಕುರಿತು ತಾಂತ್ರಿಕ ತಂಡಕ್ಕೆ 100 ತಾಸುಗಳ ಗುರಿ ನಿಗದಿ ಮಾಡಲಾಗಿತ್ತು ಎಂದು ಸಂಸದ ತೇಜಸ್ವೀ ಸೂರ್ಯ ತಿಳಿಸಿದರು. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸೇವೆಗೆ ನಿಯೋಜನೆಗೊಂಡಿರುವ ಅಧಿಕಾರಿಗಳು … Continued

ಅತ್ಯಗತ್ಯ ಸೇವೆ’ ಇಲಾಖೆ ನೌಕರರಿಗೆ ಪೂರ್ಣ ಹಾಜರಾತಿ, ಇತರೆ ಇಲಾಖೆಗಳಿಗೆ ‘ಶೇ.50 ಹಾಜರಾತಿ: ಸರ್ಕಾರದ ಆದೇಶ

ಬೆಂಗಳೂರು:ಕರ್ನಾಟಕದಲ್ಲಿ ಅತ್ಯಗತ್ಯ ಸೇವೆ ನೀಡುತ್ತಿರುವ 7 ಇಲಾಖೆಯ ಎಲ್ಲ ವರ್ಗದ ಅಧಿಕಾರಿ, ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಬೇಕು. ಇತರೆ ಇಲಾಖೆಯ ಅಧಿಕಾರಿ, ಸಿಬ್ಬಂದಿ ಶೇ.50ರಂತೆ ರೊಟೇಷನ್ ಆಧಾರದ ಮೇಲೆ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ರಾಜ್ಯ ಸರ್ಕಾರ ಆದೇಶ ಮಾಡಿದೆ. ಈ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಸುತ್ತೋಲೆ ಹೊರಡಿಸಿದ್ದು, ರಾಜ್ಯದಲ್ಲಿ ಕೊರೋನಾ ವೈರಸ್ … Continued