ಕಲಬುರಗಿ-ಮುಂಬೈ ವಿಮಾನ ಯಾನ ಮಾರ್ಚ್ 25ರಿಂದ ಆರಂಭ

ಕಲಬುರಗಿ: ಏರ್ ಇಂಡಿಯಾದ ಅಂಗ ಸಂಸ್ಥೆ ಅಲಯನ್ಸ್ ಏರ್ ಇದೇ ಮಾರ್ಚ್ 25ರಿಂದ ಕಲಬುರಗಿ ಹಾಗೂ ಮುಂಬೈ ಮಧ್ಯೆ ವಾರದ ಎಲ್ಲ ದಿನವೂ ನೇರ ವಿಮಾನ ಹಾರಾಟ ಆರಂಭಿಸಲಿದೆ. ಕಲ್ಯಾಣ ಕರ್ನಾಟಕವನ್ನು ದೇಶದ ವಾಣಿಜ್ಯ ರಾಜಧಾನಿ ಮುಂಬೈಯೊಂದಿಗೆ ಸಂಪರ್ಕಿಸಬೇಕೆನ್ನುವ ಈ ಭಾಗದ ಉದ್ಯಮಿಗಳ ಬೇಡಿಕೆ ಈಡೇರಿದಂತಾಗಿದೆ. ಮಾ.25ರಿಂದ ನಿತ್ಯ ಬೆಳಿಗ್ಗೆ 7.20ಕ್ಕೆ ಮುಂಬೈನಿಂದ ಹೊರಡುವ 70 … Continued

ಸಿಡಿ ಪ್ರಕರಣ: ಎಸ್‌ಐಟಿಗೆ ಲಿಖಿತ ಹೇಳಿಕೆ ನೀಡಿದ ಕಲ್ಲಹಳ್ಳಿ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ದೂರುದಾರ ದಿನೇಶ್ ಕಲ್ಲಹಳ್ಳಿ “ದೂರು ವೃತ್ತಾಂತ”ದ ಬಗ್ಗೆ ಎಸ್‌ಐಟಿಗೆ ಮೂರು ಪುಟಗಳ ಹೇಳಿಕೆ ನೀಡಿದ್ದಾರೆ. ಮಾ. 2ರಂದು ದಿನೇಶ್ ಕಲ್ಲಹಳ್ಳಿ ಜನ ಸಂಪನ್ಮೂಲ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ವಿರುದ್ಧ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಅವರಿಗೆ ದೂರು ನೀಡಿದ್ದರು. ದೂರು ದಾಖಲು ಮೊದಲೇ ಅಶ್ಲೀಲ … Continued

ವಿದ್ಯಾರ್ಥಿಗಳಿಗೆ ಕೊರೊನಾ : ಮಣಿಪಾಲದ ಎಂಐಟಿ ಕಂಟೈನ್ಮೆಂಟ್ ಆಗಿ ಘೋಷಣೆ

ಮಣಿಪಾಲ್ : ಕೊರೊನಾ ಪ್ರಕರಣ ಹೆಚ್ಚಳದಿಂದಾಗಿ ಮಣಿಪಾಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕ್ಯಾಂಪಸ್ ಅನ್ನು ಕಂಟೇನರ್ ವಲಯವೆಂದು ಉಡುಪಿ ಜಿಲ್ಲಾ ಆರೋಗ್ಯ ಇಲಾಖೆ ಘೋಷಿಸಿದೆ. ಕ್ಯಾಂಪಸ್ ನಲ್ಲಿ ಮಾರ್ಚ್ 11 ರಿಂದ 16ರ ನಡುವೆ 59 ವಿದ್ಯಾರ್ಥಿ ಹಾಗೂ ಸಿಬ್ಬಂದಿಗೆ ಕರೋನಾ ವೈರಸ್ ಪ್ರಕರಣಗಳು ವರದಿಯಾದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಪೈಕಿ … Continued

ಯೋಗೀಶ್‌ ಗೌಡ ಕೊಲೆ ಪ್ರಕರಣ :ವಿನಯ್‌ ಕುಲಕರ್ಣಿ ಜಾಮೀನು ಅರ್ಜಿ ವಜಾ ಮಾಡಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌

ಬೆಂಗಳೂರು: ಧಾರವಾಡ ಜಿಪಂ ಸದಸ್ಯ ಯೋಗೀಶ್‌ ಗೌಡ ಕೊಲೆ ಪ್ರಕರಣದ ಪ್ರಮುಖ ಆರೋಪಿ ಮಾಜಿ ಸಚಿವ ವಿನಯ್‌ ಕುಲಕರ್ಣಿ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬುಧವಾರ ವಜಾ ಮಾಡಿದೆ. ಈ ಪ್ರಕರದಲ್ಲಿ ತಮಗೆ ಜಾಮೀನು ನೀಡುವಂತೆ ಕೋರಿ ವಿನಯ್‌ ಕುಲಕರ್ಣಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಅಕ್ಷೇಪಣೆ ಸಲ್ಲಿಸಿದ್ದ ಸಿಬಿಐ, ಯೋಗೀಶ್‌ … Continued

ಹುಬ್ಬಳ್ಳಿ-ಹೈದರಾಬಾದ್‌ ಮಧ್ಯೆ ಮಾರ್ಚ್‌ ೩೧ರಿಂದ ವಿಮಾನಸೇವೆ

ಹುಬ್ಬಳ್ಳಿ: ಹುಬ್ಬಳ್ಳಿ ಹಾಗೂ ಹೈದರಾಬಾದ್‌ ಮಧ್ಯೆ ಮಾರ್ಚ್‌ ೩೧ರಿಂದ ವಿಮಾನಸೇವೆ ಆರಂಭಿಸುವುದನ್ನು “ಅಲಾಯನ್ಸ್‌ ಏರ್‌ʼ ದೃಢಪಡಿಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ. ಸೊಮವಾರ, ಬುಧವಾರ ಹಾಗೂ ಶುಕ್ರವಾರ ವಾರದಲ್ಲಿ ಮೂರು ದಿನ ವಿಮಾನಸೇವೆ ಲಭ್ಯವಿರಲಿದೆ. ಬೆಳಗ್ಗೆ ೬:೨೫ಕ್ಕೆ ಹುಬ್ಬಳ್ಳಿಯಿಂದ ಹೊರಡುವ ವಿಮಾನ ಬೆಳಗ್ಗೆ ೮:೦೦ ಗಂಟೆಗೆ ಹೈದರಾಬಾದ್‌ಗೆ ತಲುಪಲಿದ್ದು, ಬೆಳಗ್ಗೆ ೮:೨೫ಕ್ಕೆ ಹೈದರಾಬಾದ್‌ನಿಂದ … Continued

ಪುಟಾಣಿ ಮಕ್ಕಳಿಗೆ ವಿಷವುಣಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡ ತಂದೆ

ಕಾಸರಗೋಡು : ದಾಂಪತ್ಯದಲ್ಲಿ ವಿರಸ ಮೂಡಿ ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದ ರಿಕ್ಷಾ ಚಾಲಕ ಮಕ್ಕಳಿಗೆ ವಿಷವುಣಿಸಿ ತಾನೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಚೆರ್ವತ್ತೂರಿನಲ್ಲಿ ನಡೆದಿದೆ. ಪಿಲಿಕ್ಕೋಡು ಮಡಿವಾಯಿಯ ಆಟೋರಿಕ್ಷಾ ಚಾಲಕ ರೂಪೇಶ್ (37) ಮತ್ತು ಮಕ್ಕಳಾದ ವೈದಹಿ (10) , ಶಿವಾನಂದ (6) ಮೃತಪಟ್ಟವರು. ಅವರ ಮೃತದೇಹ ನಿರ್ಮಾಣ ಹಂತದಲ್ಲಿರುವ ಮನೆಯ ಕೋಣೆಯೊಂದರಲ್ಲಿ … Continued

ಮತ್ತೆ ಹೆಚ್ಚಳ.. ಕರ್ನಾಟಕದಲ್ಲಿ 1200 ದಾಟಿದ ದೈನಂದಿನ ಕೊರೊನಾ ಪ್ರಕರಣ

ಬೆಂಗಳೂರು : ರಾಜ್ಯದಲ್ಲಿ ಮತ್ತೆ ಕೊರೊನಾ ಪ್ರಕರಣ ಮಂಗಳವಾರಕ್ಕಿಂತ ಬುಧವಾರ ಮತ್ತೂ ಹೆಚ್ಚಾಗಿದೆ. ಕಳೆದ 24 ಗಂಟೆಯಲ್ಲಿ 1275 ಮಂದಿಗೆ ಕೊರೊನಾ ಸೋಂಕು ಧೃಡವಾಗಿದೆ. ನಾಲ್ವರು ಮೃತಪಟ್ಟಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬುಧವಾರ ಹೇಳಿದೆ. ಬೆಂಗಳೂರಿನಲ್ಲಿ 786 ಮಂದಿಗೆ ಸೋಂಕು ತಗುಲಿದ್ದು, ಮೂವರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ … Continued

ಸಾಮಾಜಿಕ ಜಾಲತಾಣ “ಕೂʼನಲ್ಲಿನ ಚೀನಾದ ಪಾಲು ಖರೀದಿಗೆ ಮುಂದಾದ ಕ್ರಿಕೆಟಿಗ ಜಾವಗಲ್‌ ಶ್ರೀನಾಥ

ಬೆಂಗಳೂರು: ಸಾಮಾಜಿಕ ಜಾಲತಾಣ “ಕೂʼ ನ ಮೂಲಸಂಸ್ಥೆ ಬಾಂಬಿನೆಟ್‌ ಟೆಕ್ನಾಲಜೀಸ್‌ನಲ್ಲಿ ಚೀನಾದ ಹೂಡಿಕೆದಾರ ಶುನ್‌ವೇ ಕ್ಯಾಪಿಟಲ್‌ ಪಾಲನ್ನು ಭಾರತದ ಟೆಕ್‌ ಸಿಇಒಗಳು ಹಾಗೂ ಹಿರಿಯ ಕ್ರಿಕೆಟಿಗ ಜಾವಗಲ್‌ ಶ್ರೀನಾಥ ಖರೀದಿಸಲು ಉತ್ಸುಕರಾಗಿದ್ದಾರೆ. ಕಳೆದ ತಿಂಗಳು ಭಾರತ ಸರ್ಕಾರ ಮತ್ತು ಟ್ವಿಟರ್ ನಡುವಿನ ಭಿನ್ನಾಭಿಪ್ರಾಯದ ಮಧ್ಯೆ ಬೆಳಕಿಗೆ ಬಂದ ನಂತರ ಕೂದಲ್ಲಿನ ಚೀನಾದ ಹೂಡಿಕೆ ವಿರುದ್ಧ ಧ್ವನಿ … Continued

ರಾತ್ರಿ ೧೦ರಿಂದ ಬೆಳಗ್ಗೆ ೬ಗಂಟೆ ವರೆಗೆ ದರ್ಗಾ, ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆಗೆ ನಿಷೇಧ ಹೇರಿದ ವಕ್ಫ್‌ ಮಂಡಳಿ

ಬೆಂಗಳೂರು: ರಾಜ್ಯದ ಎಲ್ಲ ಮಸೀದಿ ಹಾಗೂ ದರ್ಗಾಗಳಲ್ಲಿ ರಾತ್ರಿ ೧೦ ಗಂಟೆಯಿಂದ ಬೆಳಗಿನ ೬ ಗಂಟೆ ವರೆಗೆ ಧ್ವನಿವರ್ಧಕ ಬಳಕೆಗೆ ನಿಷೇಧ ಹೇರಿ ಕರ್ನಾಟಕ ವಕ್ಫ್‌ ಮಂಡಳಿ ಸುತ್ತೋಲೆ ಹೊರಡಿಸಿದೆ. ದ್ವನಿವರ್ಧಕಗಳನ್ನು “ಅಜಾನ್‌ʼ ಹಾಗೂ ಪ್ರಮುಖ ಪ್ರಕಟನೆಗಳಿಗಾಗಿ ಮಾತ್ರ ಬಳಕೆ ಮಾಡಬೇಕು ಎಂದು ತಿಳಿಸಿದೆ. ಧ್ವನಿವರ್ಧಕಗಳಿಂದಾಗುವ ಶಬ್ದದ ಮಟ್ಟ ಮಾನವನ ಆರೋಗ್ಯ ಹಾಗೂ ಜನರ ಸ್ವಾಸ್ಥ್ಯದ … Continued

ಬೆಂಗಳೂರಲ್ಲಿ ಮೂರು ಕೊವಿಡ್‌ ಆರೈಕೆ ಕೇಂದ್ರ, ರಾಜ್ಯದಲ್ಲಿ ಪ್ರತಿದಿನ ೩ ಲಕ್ಷ ಜನರಿಗೆ ಲಸಿಕೆ: ಸಿಎಂ ಬಿಎಸ್‌ವೈ

ಬೆಂಗಳೂರು: ಬೆಂಗಳೂರು, ಕಲಬುರಗಿ ಮತ್ತು ಬೀದರ್ ಈ ಪ್ರದೇಶಗಳಲ್ಲಿ ಕೊವಿಡ್‌ ಪ್ರಕರಣಗಳಲ್ಲಿ ಹೆಚ್ಚಳವಾಗಿರುವುದನ್ನು ಗಮನದಲ್ಲಿಟ್ಟುಕೊಂಡು ಈ ಪ್ರದೇಶಗಳ ಬಗ್ಗೆ ಹೆಚ್ಚು ಗಮನ ಕೊಡುವಂತೆ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಸೂಚಿಸಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಕೆಲವು ರಾಜ್ಯಗಳಲ್ಲಿ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ದೇಶದ ಕೊವಿಡ್‌ ಪರಿಸ್ಥಿತಿ ಕುರಿತು ಪ್ರಧಾನಿ ಮೋದಿ ವಿಡಿಯೋ ಸಮಾವೇಶದ ನಂತರ … Continued