ಮಾರಕಾಸ್ತ್ರ ಹಿಡಿದು ಜನರಿಗೆ ಹೆದರಿಸುತ್ತಿದ್ದ ವ್ಯಕ್ತಿಯ ಮೇಲೆ‌ ಪೊಲೀಸರಿಂದ ಫೈರಿಂಗ್

ಕಲಬುರಗಿ : ನಗರದ ಸೂಪರ್ ಮಾರ್ಕೆಟ್‌ನಲ್ಲಿ ಭಾನುವಾರ ರಾತ್ರಿ ಮಾರಕಾಸ್ತ್ರ ಹಿಡಿದು ಜನರಿಗೆ ಹೆದರಿಸುತ್ತಿದ್ದ ವ್ಯಕ್ತಿಯ ಮೇಲೆ‌ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಕಾಲಿಗೆ ಗುಂಡು ತಗುಲಿ ಗಾಯಗೊಂಡ ಅಬ್ದುಲ ಜಾಫರ್ ಸಾಬ್ ಎಂಬಾತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಲಬುರಗಿ ನಗರದ ಸೂಪರ್ ಮಾರ್ಕೇಟ್‌ನಲ್ಲಿ ಈ ವ್ಯಕ್ತಿ ಮಾರಕಾಸ್ತ್ರಗಳನ್ನು ಹಿಡಿದು ಅನೇಕರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಸುಮಾರು ಒಂದು … Continued

ಗ್ರ್ಯಾಮಿ ಅವಾರ್ಡ್ಸ್ 2023: ಮೂರನೇ ಗ್ರ್ಯಾಮಿ ಪ್ರಶಸ್ತಿ ಗೆದ್ದ ಬೆಂಗಳೂರು ಮೂಲದ ರಿಕಿ ಕೇಜ್, ಈ ಸಾಧನೆ ಮಾಡಿದ ಏಕೈಕ ಭಾರತೀಯ

ನವದೆಹಲಿ: ಡಿವೈನ್ ಟೈಡ್ಸ್ ಆಲ್ಬಂಗಾಗಿ ಬೆಂಗಳೂರು ಮೂಲದ ಸಂಗೀತ ಸಂಯೋಜಕ ರಿಕಿ ಕೇಜ್ ಈ ವರ್ಷದ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಹಾಗೂ ಇದು ಅವರ ಮೂರನೇ ಗ್ರ್ಯಾಮಿ ಪ್ರಶಸ್ತಿಯಾಗಿದೆ. ಅವರ ಆಲ್ಬಮ್ ಅತ್ಯುತ್ತಮ ತಲ್ಲೀನಗೊಳಿಸುವ ಆಡಿಯೊ ಆಲ್ಬಮ್ ವಿಭಾಗದಲ್ಲಿ (Best Immersive Audio Album category) ನಾಮನಿರ್ದೇಶನಗೊಂಡಿತು. ಅವರು ಈ ಪ್ರಶಸ್ತಿಯನ್ನು ಸಾಂಪ್ರದಾಯಿಕ ಬ್ರಿಟಿಷ್ ರಾಕ್ … Continued

ಇಂದು ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮನ, ಬೆಂಗಳೂರು, ತುಮಕೂರಿನ ಕಾರ್ಯಕ್ರಮಗಳಲ್ಲಿ ಭಾಗಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ನಾಳೆ, ಸೋಮವಾರ (ಫೆಬ್ರವರಿ 6) ಬೆಂಗಳೂರು, ತುಮಕೂರು ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ನಾಳೆ, ಫೆಬ್ರವರಿ 6ರಂದು ಬೆಂಗಳೂರು ಹೊರವಲಯ ನೆಲಮಂಗಲದ ಮಾದವಾರದ ಬಿಐಇಸಿಯಲ್ಲಿ, ಬೆಳಿಗ್ಗೆ 11ಕ್ಕೆ ಇಂಡಿಯಾ ಎನರ್ಜಿ ವೀಕ್ 2023ಕ್ಕೆ ಚಾಲನೆ ನೀಡಲಿದ್ದಾರೆ. ಇದರಲ್ಲಿ 30 ಸಾವಿರಕ್ಕೂ ಹೆಚ್ಚು ಜನರು, 8,000 ಹೊರ ದೇಶದ ಪ್ರತಿನಿಧಿಗಳು, … Continued

ಪ್ರಶ್ನಾವಳಿ ಬಿಡುಗಡೆ ಮಾಡಿದ 7ನೇ ರಾಜ್ಯ ವೇತನ ಆಯೋಗ : ಸಲಹೆ, ಅಭಿಪ್ರಾಯ ಆಹ್ವಾನ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆ ಪರಿಷ್ಕರಣೆ ಮಾಡಲು ರಚಿಸಲಾಗಿರುವ ಏಳನೇ ರಾಜ್ಯ ವೇತನ ಆಯೋಗವು ಪ್ರಶ್ನಾವಳಿ ಬಿಡುಗಡೆ ಮಾಡಿದ್ದು ಸಲಹೆ, ಅಭಿಪ್ರಾಯಗಳನ್ನು ಸೂಚಿತ ದಿನಾಂಕ ಫೆ.10ರೊಳಗೆ ಸಲ್ಲಿಸಬಹುದಾಗಿದೆ. ಆಯೋಗಕ್ಕೆ ವಹಿಸಲಾಗಿರುವ ಪರಿಶೀಲನಾ ಅಂಶಗಳಿಗೆ ಸಾರ್ವಜನಿಕರು, ಸೇವಾ ಸಂಘಗಳು, ಸರ್ಕಾರಿ ನೌಕರರು, ಸಂಘಸಂಸ್ಥೆಗಳು, ಇಲಾಖೆಗಳಿಂದ ಮಾಹಿತಿ, ಅನಿಸಿಕೆ ಹಾಗೂ ಮುಕ್ತ ಸಲಹೆ ಪಡೆಯುವ … Continued

ಉಡುಪಿಯಲ್ಲಿ ಫೆಬ್ರವರಿ 11, 12ರಂದು ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನ, 1300 ಕಲಾವಿದರು ಭಾಗಿ

ಕುಮಟಾ: ರಾಜ್ಯ ಸರ್ಕಾರದ ವತಿಯಿಂದ ರಾಜ್ಯಮಟ್ಟದ ಪ್ರಥಮ ಯಕ್ಷಗಾನ ಸಮ್ಮೇಳನ ಫೆಬ್ರವರಿ 11ಮತ್ತು 12ರಂದು ಉಡುಪಿಯ ಎ. ಎಲ್. ಎಂ ಕಾಲೇಜಿನ ಎ. ಎಲ್. ಎನ್. ರಾವ್‌ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಸಮ್ಮೇಳನದ ಕಾರ್ಯಾಧ್ಯಕ್ಷ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ಜಿ.ಎಲ್‌.ಹೆಗಡೆ ತಿಳಿಸಿದ್ದಾರೆ. ಕುಮಟಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ … Continued

ಸಂಚಾರ ನಿಯಮ ಉಲ್ಲಂಘನೆ ಬಾಕಿ ದಂಡ ಪಾವತಿ : ಎರಡು ದಿನದಲ್ಲಿ 14 ಕೋಟಿ ರೂ. ಸಂಗ್ರಹ

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡದ ಮೊತ್ತ ಪಾವತಿಗೆ ಶೇ.50ರಷ್ಟು ರಿಯಾಯಿತಿ ನೀಡಿರುವ ಹಿನ್ನೆಲೆಯಲ್ಲಿ ದಂಡ ಪಾವತಿಸಲು ಮುಗಿಬಿದ್ದಿದ್ದಾರೆ. ರಿಯಾಯಿತಿ ಆರಂಭಗೊಂಡ ‌ಮೊದಲ ದಿನವಾದ ನಿನ್ನೆ ಭಾರೀ ಸಂಖ್ಯೆಯಲ್ಲಿ ಸಾರ್ವಜನಿಕರು ನಗರದ ಸಂಚಾರ ಪೊಲೀಸ್‌ ಠಾಣೆಗಳಿಗೆ ತೆರಳಿ ಬಾಕಿ ದಂಡದ ಮೊತ್ತ ಪಾವತಿಸಿದ್ದು ಮೊದಲ ದಿನವೇ 5.6 ಕೋಟಿ ಸಂಗ್ರಹವಾಗಿತ್ತು. ಎರಡನೇ ದಿನವಾದ … Continued

ತುಮಕೂರು: ಫೆಬ್ರವರಿ 6 ರಂದು ಎಚ್‌ಎಎಲ್‌ನ ಭಾರತದ ಅತಿ ದೊಡ್ಡ ಹೆಲಿಕಾಪ್ಟರ್ ಉತ್ಪಾದನಾ ಸೌಲಭ್ಯ ಉದ್ಘಾಟಿಸಲಿರುವ ಪ್ರಧಾನಿ

ನವದೆಹಲಿ: ರಕ್ಷಣಾ ಕ್ಷೇತ್ರದಲ್ಲಿ ‘ಆತ್ಮ ನಿರ್ಭರʼದತ್ತ ಮತ್ತೊಂದು ಹೆಜ್ಜೆಯಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ತುಮಕೂರಿನಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ (ಎಚ್‌ಎಎಲ್) ಹೆಲಿಕಾಪ್ಟರ್ ಕಾರ್ಖಾನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಗ್ರೀನ್‌ಫೀಲ್ಡ್ ಹೆಲಿಕಾಪ್ಟರ್ ಫ್ಯಾಕ್ಟರಿ, 615 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ, ದೇಶದ ಎಲ್ಲಾ ಹೆಲಿಕಾಪ್ಟರ್ ಅವಶ್ಯಕತೆಗಳಿಗೆ ಪರಿಹಾರ ಒದಗಿಸುವ ಕೇಂದ್ರವಾಗುವ ದೃಷ್ಟಿಯೊಂದಿಗೆ ಯೋಜಿಸಲಾಗಿದೆ. ಇದು ಭಾರತದ ಅತಿದೊಡ್ಡ … Continued

ಸೌದಿ ಅರೇಬಿಯಾದಲ್ಲಿ ಒಂಟೆಗೆ ಕಾರು ಡಿಕ್ಕಿ ಹೊಡೆದು ಅಪಘಾತ; ದಕ್ಷಿಣ ಕನ್ನಡದ ಮೂವರು ಸಾವು

ಮಂಗಳೂರು: ಸೌದಿ ಅರೇಬಿಯಾದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ದಕ್ಷಿಣ ಕನ್ನಡದ ಮೂವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಸೌದಿ ಅರೇಬಿಯಾದ ರಿಯಾದ್ ಪ್ರಾಂತ್ಯದ ಖುರೈಸ್ ರಸ್ತೆಯ ಬಳಿ ಒಟೆಗೆ ಕಾರು ಡಿಕ್ಕಿ ಹೊಡೆದು ನಾಲ್ವರು ಮೃತಪಟ್ಟಿದ್ದು, ಅದರಲ್ಲಿ ಮೂವರು ದಕ್ಷಿಣ ಕನ್ನಡ ಮೂಲದವರು, ಮತ್ತೊಬ್ಬರು ಬಾಂಗ್ಲಾದೇಶದವರು ಎಂದು ವರದಿಗಳು ತಿಳಿಸಿವೆ. ನಾಲ್ವರು ಕಾರಿನಲ್ಲಿ ಹೋಗುತ್ತಿದ್ದಾಗ ಖುರೈಸ್ … Continued

ಕರ್ನಾಟಕ ವಿಧಾನಸಭಾ ಚುನಾವಣೆ 2023; ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಬಿಜೆಪಿ ಉಸ್ತುವಾರಿ; ಅಣ್ಣಾಮಲೈ ಸಹ-ಉಸ್ತುವಾರಿ

ಬೆಂಗಳೂರು: ಕರ್ನಾಟಕ ವಿಧಾನ ಸಭೆ ಚುನಾವಣೆಗೆ ಬಿಜೆಪಿ ಸಿದ್ಧತೆ ನಡೆಸಿದ್ದು, ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿಯು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಉಸ್ತುವಾರಿಯನ್ನಾಗಿ ಶನಿವಾರ ನೇಮಿಸಿದೆ. ಪಕ್ಷದ ಹಿರಿಯ ಸಂಘಟನೆಯ ವ್ಯಕ್ತಿಯಾಗಿರುವ ಪ್ರಧಾನ್ ಅವರು ಈ ಹಿಂದೆ ಹಲವು ಚುನಾವಣೆಗಳ ಜವಾಬ್ದಾರಿ ಹೊತ್ತಿದ್ದಾರೆ. ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಅವರನ್ನು ಚುನಾವಣೆಯ ಸಹ … Continued

ಫೆಬ್ರವರಿ ಕೊನೆಯೊಳಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಘೋಷಣೆ ಸಾಧ್ಯತೆ: ಬಿ.ಕೆ ಹರಿಪ್ರಸಾದ

ಉಡುಪಿ : ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಫೆಬ್ರವರಿ ತಿಂಗಳ ಕೊನೆಯೊಳಗೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ ಹೇಳಿದ್ದಾರೆ. ಇಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಅಭ್ಯರ್ಥಿಗಳ ಪಟ್ಟಿಗಳು ಈಗಾಗಲೇ ನಿನ್ನೆ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ 37 ಜನರ ಸಮ್ಮುಖ ಬಂದಿದ್ದು, ನಿನ್ನೆ ಸಂಜೆ … Continued