ಹುಬ್ಬಳ್ಳಿ: ಬ್ಯಾರಿಕೇಡ್‌ ದಾಟಿ ಹಾರ ಹಿಡಿದು ಪ್ರಧಾನಿ ಮೋದಿಯತ್ತ ಓಡಿ ಬಂದಿದ್ಯಾಕೆ ಎಂಬುದಕ್ಕೆ ಕಾರಣ ಹೇಳಿದ 12ರ ಬಾಲಕ

ಹುಬ್ಬಳ್ಳಿ: ನಗರದಲ್ಲಿ ಜನವರಿ 12ರಂದು ನಡೆದ ರಾಷ್ಟ್ರೀಯ ಯುವಜನೋತ್ಸವ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುವಾರ ವಾಣಿಜ್ಯನಗರಿ ಹುಬ್ಬಳ್ಳಿಗೆ ಆಗಮಿಸಿದ್ದಾಗ ರೋಡ್‌ ಶೋ ನಡೆಸಿದ್ದರು. ಬಿಗಿ ಪೊಲೀಸ್‌ ಬಂದೋಬಸ್ತ್‌ ನಡುವೆಯೇ ಬಾಲಕನೊಬ್ಬ ಬ್ಯಾರಿಕೇಡ್ ದಾಟಿ ಪ್ರಧಾನ ಮಂತ್ರಿಗೆ ಹೂವಿನ ಹಾರ ಹಾಕಲು ಓಡಿ ಬಂದು ದೇಶಾದ್ಯಂತ ಸುದ್ದಿಯಾಗಿದ್ದ. ಈಗ ಪೊಲೀಸರನ್ನು ದಾಟಿ ಆತ ಪ್ರಧಾನಿಗಳ … Continued

ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದಿಂದ ಡಾ.ರಾಮಚಂದ್ರ ಭಟ್ಟ ಕೋಟೆಮನೆಗೆ ಗೌರವ ಡಾಕ್ಟರೇಟ್ ಪ್ರದಾನ

ಯಲ್ಲಾಪುರ: ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ (S- VYASA ) ತನ್ನ ೨೦ ನೇ ಘಟಿಕೋತ್ಸವದಲ್ಲಿ ನಿವೃತ್ತ ಕುಲಪತಿ, ವಿದ್ವಾಂಸ ಡಾ.ರಾಮಚಂದ್ರ ಭಟ್ಟ ಕೋಟೆಮನೆ ಅವರಿಗೆ ಗೌರವ ಡಾಕ್ಟರೇಟ್ ( ಡಿ,ಲಿಟ್) ಪುರಸ್ಕಾರ ನೀಡಿ ಗೌರವಿಸಿದೆ. ಕುಲಪತಿ ಡಾ.ಎಚ್.ಆರ್.ನಾಗೇಂದ್ರ ಅವರು ಗುರುವಾರ  ಬೆಂಗಳೂರಿನ ಪ್ರಶಾಂತಿ ಕುಠಿರದ ಸಂಸ್ಕೃತಿ ಭವನದಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ಗೌರವ … Continued

ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿ ಗುಜರಾತ್‌ನಲ್ಲಿ ಬಂಧನ

ಬೆಂಗಳೂರು : ಅನೈತಿಕ ದಂಧೆ ಹಾಗೂ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಸ್ಯಾಂಟ್ರೋ ರವಿ ಅಲಿಯಾಸ್ ಮಂಜುನಾಥನನ್ನು ಪೊಲೀಸರು ಗುಜರಾತಿನಲ್ಲಿ ಬಂಧಿಸಿದ್ದಾರೆ. ಕಳೆದ 11 ದಿನಗಳಿಂದ ಮೈಸೂರು ಪೊಲೀಸರು ಸ್ಯಾಂಟ್ರೋ ರವಿಗಾಗಿಹುಡುಕಾಟ ನಡೆಸಿದ್ದರು. ರಾಜ್ಯದಿಂದ ಪರಾರಿಯಾಗಿ ಗುಜರಾತ್‌ನಲ್ಲಿ ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿಯನ್ನು ಮೈಸೂರು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಸ್ವಂತ ಫೋನ್‌ ಬಳಸದೆ ಪೊಲೀಸರಿಂದ ತಪ್ಪಿಸಿಕೊಂಡಿದ್ದ ಸ್ಯಾಂಟ್ರೋ … Continued

ಚಿಕ್ಕಬಳ್ಳಾಪುರ : ಆದಿಯೋಗಿ ಪ್ರತಿಮೆ ಅನಾವರಣಕ್ಕೆ ಹೈಕೋರ್ಟ್‌ ಅನುಮತಿ; ಕಾಮಗಾರಿಗೆ ನಿರ್ಬಂಧ ಮುಂದುವರಿಕೆ

ಬೆಂಗಳೂರು: ಸುಪ್ರಸಿದ್ಧ ನಂದಿ ಬೆಟ್ಟದ ಸಮೀಪ ಚಿಕ್ಕಬಳ್ಳಾಪುರದ ಅವಲಗುರ್ಕಿ ಗ್ರಾಮದ ಬಳಿ 112 ಅಡಿ ಎತ್ತರದ ಆದಿಯೋಗಿ ಪ್ರತಿಮೆ ಅನಾವರಣ ಮಾಡುವ ಸಂಬಂಧ ಜನವರಿ 15ರಂದು ಆಯೋಜಿಸಿರುವ ಕಾರ್ಯಕ್ರಮ ನಡೆಸಲು ಇಶಾ ಯೋಗ ಕೇಂದ್ರಕ್ಕೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಅನುಮತಿ ನೀಡಿದೆ. ಉಪರಾಷ್ಟ್ರಪತಿ ಜಗದೀಪ್ ಧನಕರ್‌ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಇಶಾ ಯೋಗ ಕೇಂದ್ರದ … Continued

ಕುಮಟಾ: ಬೆಟ್ಕುಳಿ ಬಳಿ ಅಪರಿಚಿತ ವಾಹನ ಡಿಕ್ಕಿಯಾಗಿ ಚಿರತೆ ಸಾವು | ವೀಕ್ಷಿಸಿ

ಕುಮಟಾ : ಅಪರಿಚಿತ ವಾಹನ ಬಡಿದು ಚಿರತೆಯೊಂದು ಮೃತ ಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೀರೆಗುತ್ತಿ ವಲಯ ಅರಣ್ಯ ವ್ಯಾಪ್ತಿಯ ಬೆಟ್ಕುಳಿ ಬಳಿ ಸಂಭವಿಸಿದೆ. ಶುಕ್ರವಾರ ಬೆಳಿಗ್ಗಿನ ಜಾವ ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕದಲ್ಲಿ ಚಿರತೆಯ ಮೃತ ದೇಹ ಕಂಡು ಬಂದಿದ್ದು ಅದನ್ನು ನೋಡಿದ ಸ್ಥಳೀಯರು ತಕ್ಷಣವೇ ಅರಣ್ಯ ಇಲಾಖೆಗೆ … Continued

ಒಂದು ಕಡೆ ಸ್ಪರ್ಧಿಸಿದರೆ ಬಲವಿಲ್ಲ… ಎರಡು ಕಡೆ ಸ್ಪರ್ಧಿಸಬೇಕು : ಸಿದ್ದರಾಮಯ್ಯಗೆ ರಾಜಕೀಯ ಭವಿಷ್ಯ ನುಡಿದ ಮನೆ ದೇವರು

ಮಂಡ್ಯ: ವಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಸ್ಫರ್ಧಿಸುವುದಾಗಿ ಘೋಷಣೆ ಮಾಡಿದ್ದರೂ ಇನ್ನೂ ಯಾವುದೂ ಫೈನಲ್‌ ಆಗಿಲ್ಲ. ತವರು ಕ್ಷೇತ್ರ ವರುಣಾ ಅಥವಾ ಕೋಲಾರ (Kolara) ಕ್ಷೇತ್ರದಲ್ಲಿ ಸ್ಪರ್ಧಿಸಬೇಕೆ ಎಂಬುದರ ಬಗ್ಗೆ ಸಿದ್ದರಾಮಯ್ಯರೇ ಗೊಂದಲದಲ್ಲಿ ಇದ್ದಂತೆ ಕಾಣುತ್ತಿದೆ. ಇದೇ ಹೊತ್ತಿನಲ್ಲಿ ಸಿದ್ದರಾಮಯ್ಯ ಅವರ ಮನೆ ದೇವರು ಅವರ ರಾಜಕೀಯ ಭವಿಷ್ಯ ನುಡಿದಿದೆ. ಸಿದ್ದರಾಮಯ್ಯ ಅವರ ಮನೆ … Continued

ಕೊನೆಗೂ ಮುಹೂರ್ತ ಫಿಕ್ಸ್ : ಜನವರಿ 29ರಂದು ವಿಷ್ಣು ಸ್ಮಾರಕ ಉದ್ಘಾಟನೆ

ಬೆಂಗಳೂರು: ಮೈಸೂರಿನಲ್ಲಿ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ಜನವರಿ 29 ರಂದು ಲೋಕಾರ್ಪಣೆಗೊಳ್ಳಲಿದೆ. ವಿಷ್ಣುವರ್ಧನ್ ಇಹಲೋಕ ತ್ಯಜಿಸಿದ ಸರಿ ಸುಮಾರು 14 ವರ್ಷದ ನಂತರ ಸ್ಮಾರಕ ಉದ್ಘಾಟನೆಯಾಗುತ್ತಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಿನಾಂಕ ನಿಗದಿ ಪಡಿಸಿದ್ದಾರೆ. ಈ ಕುರಿತು ಮಾಹಿತಿ ಹಂಚಿಕೊಂಡಿರುವ ನಟ ಹಾಗು ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ ಅವರು, ಇದೇ 29 … Continued

ಪಂಚಮಸಾಲಿ ಲಿಂಗಾಯತ, ಒಕ್ಕಲಿಗ ಹೊಸ ಮೀಸಲಾತಿಗೆ ಹೈಕೋರ್ಟ್ ಬ್ರೇಕ್, ಯಥಾಸ್ಥಿತಿ ಕಾಪಾಡಲು ಆದೇಶ

ಬೆಂಗಳೂರು: ಪಂಚಮಸಾಲಿ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಕ್ಕೆ ಪ್ರತ್ಯೇಕ ಪ್ರವರ್ಗ ಸೃಷ್ಟಿಸಿ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ನೀಡುವ ರಾಜ್ಯ ಸರ್ಕಾರದ ತೀರ್ಮಾನದ ವಿಚಾರಣೆ ನಡೆಸಿದ ಹೈಕೋರ್ಟ್ ಗುರುವಾರ ಮೀಸಲಾತಿ ಸಂಬಂಧ ಯಥಾಸ್ಥಿತಿ ಕಾಪಾಡುವಂತೆ ಆದೇಶ ನೀಡಿದೆ. ಪಂಚಮಸಾಲಿ ಸೇರಿದಂತೆ ವೀರಶೈವ ಲಿಂಗಾಯತ ಸಮುದಾಯಕ್ಕೆ 2ಡಿ ಮತ್ತು ಒಕ್ಕಲಿಗರಿಗೆ 2ಸಿ ಮೀಸಲಾತಿ ನೀಡಲು ಮುಖ್ಯಮಂತ್ರಿ … Continued

ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ಅನುಮತಿಸಿದ ರಾಜ್ಯ ಸರ್ಕಾರ

ಬೆಂಗಳೂರು: ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಗೆ ಸೇರಿದ ಹೆಚ್ಚುವರಿ ಆಸ್ತಿಗಳ ಜಪ್ತಿಗೆ ಸಂಬಂಧಿಸಿದಂತೆ ಸಿಬಿಐ ಸಲ್ಲಿಸಿದ್ದ ಕೋರಿಕೆ ಪರಿಗಣಿಸಿ ರಾಜ್ಯ ಸರ್ಕಾರವು ಅನುಮತಿ ನೀಡಿ ಆದೇಶಿಸಿದೆ. ಈ ಕುರಿತು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ. ಜನಾರ್ದನ ರೆಡ್ಡಿ ಅವರಿಗೆ ಸೇರಿದ ಹೆಚ್ಚುವರಿ ಆಸ್ತಿಗಳ ಜಪ್ತಿಗೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಅನುಮತಿ … Continued

26ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಪ್ರಧಾನಿ ಮೋದಿ ಚಾಲನೆ : ರನ್‌ವೇ ಸಿದ್ಧವಾಗಿದೆ, ಕೌಶಲ್ಯ ಕಲಿತು ಟೇಕಾಫ್‌ ಆಗಿ ; ಯುವಕರಿಗೆ ಕರೆ

* ಡಿಜಿಟಲ್ ಇಂಡಿಯಾ ಯುವಜನತೆಗೆ ಅವಕಾಶಗಳ ಆಗರ* * ಯುವಶಕ್ತಿಯೇ ದೇಶದ ಶಕ್ತಿ * ಏಕ ಭಾರತ ಶ್ರೇಷ್ಠ ಭಾರತ ನಿರ್ಮಾಣಕ್ಕೆ ಕರೆ * ಭಾರತವನ್ನು 3 ನೇ‌ ಅತೀದೊಡ್ಡ ಆರ್ಥಿಕ ಶಕ್ತಿಯಾಗಿಸುವ ಸಂಕಲ್ಪ ಹುಬ್ಬಳ್ಳಿ : ಡಿಜಿಟಲ್ ಇಂಡಿಯಾದ ಪ್ರಸ್ತುತ ಕಾಲಘಟ್ಟದಲ್ಲಿ ಕೌಶಲ್ಯಭರಿತ ಯುವಜನತೆಗೆ ಅವಕಾಶಗಳ ಬಾಗಿಲು ತೆರೆದಿದೆ. ಏಳಿ ಎದ್ದೇಳಿ ಗುರಿ ಮುಟ್ಟುವ … Continued