ಕಾಶಿ ವಿಶ್ವನಾಥ ಧಾಮ್ ಕಾರಿಡಾರ್ ಯೋಜನೆ ಯಶಸ್ಸಿನ ಹಿಂದೆ ದಕ್ಷಿಣ ಕಾಶಿ ಖ್ಯಾತಿಯ ಗೋಕರ್ಣ ಮೂಲದ ವ್ಯಕ್ತಿ…!

ವಾರಾಣಸಿಯಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪ್ರವಾಸೋದ್ಯಮವನ್ನು ದೊಡ್ಡ ಮಟ್ಟದಲ್ಲಿ ಉತ್ತೇಜಿಸುವ ನಿಟ್ಟಿನಲ್ಲಿ ಬೃಹತ್ ಯೋಜನೆಯಾದ ಕಾಶಿ ವಿಶ್ವನಾಥ್ ಧಾಮ್ ಕಾರಿಡಾರ್ ಅನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅನಾವರಣಗೊಳಿಸಿದ್ದಾರೆ. 339 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಅತ್ಯಾಧುನಿಕ ಕಾಶಿ ವಿಶ್ವನಾಥ ಕಾರಿಡಾರ್‌ ಯೋಜನೆಯು ಐತಿಹಾಸಿಕ ಕಾಶಿ ವಿಶ್ವನಾಥ ದೇವಾಲಯ ಹಾಗೂ ಐತಿಹಾಸಿಕ ದಶಾಶ್ವಮೇಧ ಘಾಟ್ ವರೆಗೂ ಸುತ್ತುವರೆದಿದೆ. … Continued

ಪುತ್ತೂರು ಉಪವಿಭಾಗೀಯ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ

ಪುತ್ತೂರು: ಉಪ್ಪಿನಂಗಡಿ ಠಾಣೆಯ ಎದುರು ಮಂಗಳವಾರ ಸಂಜೆ ಪಿಎಫ್ ಐ ಕಾರ್ಯಕರ್ತರ ಪ್ರತಿಭಟನೆ ವೇಳೆ ಲಾಠಿ ಚಾರ್ಜ್ ನಡೆದು ಪೊಲೀಸರು ಮತ್ತು ಪ್ರತಿಭಟನಾಕಾರರು ಗಾಯಗೊಂಡ ಬೆನ್ನಲ್ಲೇ ಪುತ್ತೂರು ಉಪವಿಭಾಗೀಯ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಪುತ್ತೂರು ಉಪವಿಭಾಗದಲ್ಲಿ ಸೆಕ್ಷನ್ 144ರ ಅನ್ವಯ ಇಂದಿನಿಂದ ಡಿ.17ರ ಮಧ್ಯರಾತ್ರಿ ವರೆಗೆ ನಿಷೇದಾಜ್ಞೆ ವಿಧಿಸಿ ಸಹಾಯಕ … Continued

ಬೆಳಗಾವಿ ಅಧಿವೇಶನ: ಸಭಾಪತಿ ಆದೇಶ ಉಲ್ಲಂಘಿಸಿದ ಪರಿಷತ್ತಿನ 14 ಕಾಂಗ್ರೆಸ್ ಸದಸ್ಯರು ಅಮಾನತು

ಬೆಳಗಾವಿ: ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವಂತ ಚಳಿಗಾಲದ ವಿಧಾನ ಮಂಡಲದ ಅಧಿವೇಶನದಲ್ಲಿ ಪರಿಷತ್ತಿಲ್ಲಿ ಅಶಿಸ್ತು ತೋರಿದ 14 ಕಾಂಗ್ರೆಸ್ ಸದಸ್ಯರನ್ನು ಒಂದು ದಿನದ ಮಟ್ಟಿಗೆ ಅಮಾನತು ಮಾಡಿ, ಸಭಾಪತಿ ಬಸವರಾಜ ಹೊರಟ್ಟಿ ಆದೇಶ ಮಾಡಿದ್ದಾರೆ. ವಿಧಾನ ಪರಿಷತ್ತಿನಲ್ಲಿ ಅಶಿಸ್ತು ತೋರಿದ ಕಾರಣ ನೀಡಿ, ಸಭಾಪತಿ ಬಸವರಾಜ ಹೊರಟ್ಟಿಯವರು ವಿಪಕ್ಷ ನಾಯಕ ಎಸ್. ಆರ್. ಪಾಟೀಲ್ ಸೇರಿದಂತೆ … Continued

ಡಿಕೆಶಿಗೆ ಕಠೋರವಾಗಿಯೇ ಉತ್ತರ ಕೊಡ್ತೇನೆ, ಸಿದ್ದರಾಮಯ್ಯ ವೇಸ್ಟ್ ಬಾಡಿ: ರಮೇಶ್ ಜಾರಕಿಹೊಳಿ

ಬೆಳಗಾವಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದಲ್ಲಿ ಬಿಜೆಪಿ ಸೋತಿದ್ದರಿಂದ ಪಕ್ಷಕ್ಕೆ ತೀವ್ರ ಮುಖಭಂಗವಾಗಿದೆ. ಸಾಹುಕಾರ್ ಸೋದರರು ಇದ್ದರೂ ಕೊನೆ ಕ್ಷಣದಲ್ಲಿ ಲಖನ್ ಜಾರಕಿಹೊಳಿ ಸ್ವತಂತ್ರವಾಗಿ ಸ್ಪರ್ಧಿಸಿ ಚುನಾವಣಾ ಕಣದ ಚಿತ್ರಣ ಬದಲಾಯಿತು. ಕಾಂಗ್ರೆಸ್‌ ಹಾಗೂ ಪಕ್ಷೇತರ ಲಖನ್‌ ಜಾರಕಿಹೊಳಿ ಗೆದ್ದರು., ಆದರೆ ಗೆಲ್ಲುವ ಕುದುರೆಯಾಗಿದ್ದ ಬಿಜೆಪಿ ಸೋಲನುಭವಿಸಿತು. ಈ ಚರ್ಚೆಗಳ ನಡುವೆ ಪಕ್ಷದ ಸೋಲಿನ … Continued

ಕ್ರೀಡಾ ಚಟುವಟಿಕೆ ನಡೆಸದೆ ಕ್ರೀಡಾ ನಿಧಿ ಶುಲ್ಕ ಸಂಗ್ರಹಕ್ಕೆ ಮುಂದಾದ ಸಾರ್ವಜನಿಕ ಶಿಕ್ಷಣ ಇಲಾಖೆ : ಚರ್ಚೆಗೆ ಗ್ರಾಸ

ಬೆಂಗಳೂರು: ಕ್ರೀಡಾ ಚಟುವಟಿಕೆ ನಡೆಸದೆ ಕ್ರೀಡಾ ನಿಧಿ ಶುಲ್ಕ ಸಂಗ್ರಹ ಮಾಡಲು ಶಿಕ್ಷಣ ಇಲಾಖೆ ಮುಂದಾಗಿದೆ. 2021-22ನೇ ಸಾಲಿನ ವಿದ್ಯಾರ್ಥಿ ಕ್ರೀಡಾ ನಿಧಿ ಶುಲ್ಕ ವಸೂಲಿ ಮಾಡಿ, ಕ್ರೀಡಾ ನಿಧಿ ಖಾತೆಗೆ ಜಮಾ ಮಾಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶಿಸಿದೆ. ಕೊರೊನಾ ಹಿನ್ನೆಲೆ ಶಿಕ್ಷಣ ಸಂಸ್ಥೆಗಳಲ್ಲಿ ಕ್ರೀಡಾ ಚಟುವಟಿಕೆಗಳೇ ನಡೆದಿಲ್ಲ. ಆದರೂ ಕ್ರೀಡಾ ನಿಧಿ ಶುಲ್ಕ … Continued

ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌; ಹಬ್ಬದ ಮುಂಗಡ ಹಣ 25 ಸಾವಿರ ರೂಪಾಯಿಗೆ ಹೆಚ್ಚಳ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಮಂಜೂರು ಮಾಡುತ್ತಿರುವ ಹಬ್ಬದ ಮುಂಗಡ ಮೊತ್ತವನ್ನು ಪರಿಷ್ಕರಿಸಿ ಸರ್ಕಾರ ಆದೇಶ ಹೊರಡಿಸಿದೆ. ಈಗ ಹಬ್ಬದ ಮುಂಗಡ ಮೊತ್ತವನ್ನು 10 ಸಾವಿರ ರೂಪಾಯಿಗಳಿಂದ 25 ಸಾವಿರ ರೂಪಾಯಿಗಳಿಗೆ ಹೆಚ್ಚಳ ಮಾಡಿ ಆದೇಶ ಮಾಡಲಾಗಿದೆ. ರಾಜ್ಯ ಸಿವಿಲ್ ಸೇವಾ ವೃಂದದಲ್ಲಿ ಕಾಯಂ ಆಗಿ ಸೇರ್ಪಡೆಯಾಗಿರುವ ಅಖಿಲ ಭಾರತ ಸೇವೆಯ ಅಧಿಕಾರಿಗಳು ಸೇರಿದಂತೆ ಒಬ್ಬ … Continued

ಐದು ಗುಂಟೆಗಿಂತ ಕಡಿಮೆ ಇರುವ ಕೃಷಿಭೂಮಿ ಮಾರುವಂತಿಲ್ಲ

ಬೆಂಗಳೂರು: ಐದು ಗುಂಟೆಗಿಂತ ಕಡಿಮೆ ವಿಸ್ತೀರ್ಣದ ಕೃಷಿ ಜಮೀನು ಮಾರಾಟ ಮಾಡುವಂತಿಲ್ಲ. ಮಾರಾಟ ಮಾಡಿದರೆ ಫೋಡಿ ಅಥವಾ 11ಇ ನಕ್ಷೆ ದೊರೆಯುವುದಿಲ್ಲ. ಈ ಬಗ್ಗೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಆಯುಕ್ತ ಮನಿಶ್ ಮೌದ್ಗಿಲ್ ಆದೇಶ ಹೊರಡಿಸಿದ್ದಾರೆ.ಆದರೆ ಕೊಡಗು, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈ ಮಿತಿಯನ್ನು 3 … Continued

ಪತ್ನಿಯ ಸಾವಿನ ಸುದ್ದಿ ತಿಳಿದು ಪತಿಯೂ ಆತ್ಮಹತ್ಯೆ

ಹಾವೇರಿ: ಪತ್ನಿಯ ಸಾವಿನ ಸುದ್ದಿ ತಿಳಿದು ಪತಿ ನೇಣಿಗೆ ಶರಣಾಗಿರುವ ಘಟನೆ ಹಾವೇರಿ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ನಡೆದಿದೆ. ವಾಣಿಶ್ರೀ (50) ಮತ್ತು ಶಂಕ್ರಪ್ಪ ಅಗಡಿ (56) ಮೃತರು  ಎಂದು ಗುರುತಿಸಲಾಗಿದೆ. ಎರಡು ದಿನಗಳ ಹಿಂದೆ ವಾಣಿಶ್ರೀ ಮತ್ತು ಆಕೆಯ ಪುತ್ರಿ ಕೀರ್ತಿ (21) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ನಿನ್ನೆ ರಾತ್ರಿ ಚಿಕಿತ್ಸೆ ಫಲಿಸದೆ … Continued

ಜಾರಕಿಹೊಳಿ ಸಿ ಡಿ ಪ್ರಕರಣ: ಮೂವರು ಪೊಲೀಸ್‌ ಅಧಿಕಾರಿಗಳ ವಿರುದ್ಧದ ತನಿಖೆ ಆದೇಶ ರದ್ದು ಮಾಡಿದ ಹೈಕೋರ್ಟ್

ಬೆಂಗಳೂರು: ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇಶ್‌ ಕಲ್ಲಹಳ್ಳಿ ದಾಖಲಿಸಿದ್ದ ದೂರನ್ನು ಆಧರಿಸಿ ಎಫ್‌ಐಆರ್‌ ದಾಖಲಿಸಲು ವಿಫಲವಾದ ಕಾರಣಕ್ಕೆ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂಥ್‌ ಸಹಿತ ಮೂವರು ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲು ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನು ಹೈಕೋರ್ಟ್‌ ರದ್ದುಪಡಿಸಿದೆ. ಎಂಟನೇ ಎಸಿಎಂಎಂ ನ್ಯಾಯಾಲಯ ನೀಡಿದ್ದ ಆದೇಶ … Continued

ಮೈಸೂರು: ಮೈಮೇಲೆ ಬಿಸಿ ನೀರು ಬಿದ್ದು 2 ವರ್ಷದ ಮಗು ಸಾವು

ಮೈಸೂರು: ತಿಳಿಯದೆ ಅಕಸ್ಮಾತ್‌ ಆಗಿ ಮೈಮೇಲೆ ಬಿಸಿ ನೀರು ಚೆಲ್ಲಿಕೊಂಡಿದ್ದ  2 ವರ್ಷದ ಮಗು ಮೃತಪಟ್ಟ ಘಟನೆ ಮೈಸೂರು ತಾಲೂಕಿನ ದಾಸನಕೊಪ್ಪಲು ಗ್ರಾಮದಲ್ಲಿ ನಡೆದಿದೆ. ರಾಮು-ಜಯಲಕ್ಷ್ಮೀ ದಂಪತಿಯ ಪುತ್ರಿ ಆದ್ಯಾ(2) ಮೃತ ಮಗು ಎಂದು ಗುರುತಿಸಲಾಗಿದೆ. ಸ್ನಾನ ಮಾಡಿಸುವಾಗ ತಣ್ಣೀರು ತರಲು ತಾಯಿ ಹೋಗಿದ್ದ ವೇಳೆ ತಿಳಿಯದೆ ಮಗು ಮೈಮೇಲೆ ಬಿಸಿ ನೀರು ಸುರಿದುಕೊಂಡಿದೆ. ಸುಟ್ಟು … Continued