ಪಾಟ್ನಾ ಮೃಗಾಲಯದಲ್ಲಿ ತಂಪಾದ ವಾತಾವರಣ ಆನಂದಿಸುತ್ತಿರುವ ಜೋಡಿ ಸರ್ಪಗಳು… ವೀಕ್ಷಿಸಿ

ಬಿಹಾರದ ಪಾಟ್ನಾ ಮೃಗಾಲಯದಲ್ಲಿ ಎರಡು ಹಾವುಗಳು ಆಹ್ಲಾದಕರ ವಾತಾವರಣದಲ್ಲಿ ಆಟವಾಡುವ ಮತ್ತು ಕೂಲಾಗಿರುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್‌ ಆಗಿದೆ. ಎರಡು ನಾಗರ ಹಾವುಗಳ ವಿಡಿಯೋವನ್ನು ಬಿಹಾರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ದೀಪಕ್ ಕುಮಾರ್ ಸಿಂಗ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡ ನಂತರ ವೈರಲ್ ಆಗಿದೆ. https://twitter.com/i/status/1454283913417744395 ಸಿಂಗ್ ತಮ್ಮ … Continued

ದೀಪಾವಳಿ ಹಬ್ಬಕ್ಕೆ ಚೀನಾ ಉತ್ಪನ್ನ ನಿಷೇಧ: ಚೀನಾ ರಫ್ತುದಾರರಿಗೆ 50,000 ಕೋಟಿ ರೂ. ನಷ್ಟ..!

ನವದೆಹಲಿ: ಈ ವರ್ಷ ದೀಪಾವಳಿ ಮತ್ತು ಇತರ ಹಬ್ಬಗಳಿಗೆ ಮುನ್ನ ದೇಶದಲ್ಲಿ ಚೀನಾದ ಉತ್ಪನ್ನ ಮಾರಾಟಗಾರರು, ವಿಶೇಷವಾಗಿ ಪಟಾಕಿ ಮಾರಾಟಗಾರರು ದೊಡ್ಡ ಪ್ರಮಾಣದ ನಷ್ಟವನ್ನು ಅನುಭವಿಸಲಿದ್ದಾರೆ. ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ (ಸಿಎಐಟಿ) ಪ್ರಕಾರ, ದೇಶೀಯ ಮಾರುಕಟ್ಟೆಗಳಲ್ಲಿ ಚೀನಾದಿಂದ ಉತ್ಪನ್ನಗಳ ನಿಷೇಧದಿಂದಾಗಿ ಈ ವರ್ಷ ಚೀನಾದ ರಫ್ತುದಾರರು ಸುಮಾರು 50,000 ಕೋಟಿ ರೂ.ಗಳಷ್ಟು ನಷ್ಟವನ್ನು ಅನುಭವಿಸುತ್ತಾರೆ. … Continued

ಜಿ 20 ಶೃಂಗಸಭೆಯಲ್ಲಿ ಭಾರತ…2022 ರ ಅಂತ್ಯದ ವೇಳೆಗೆ ಐದುನೂರು ಕೋಟಿ ಕೋವಿಡ್ -19 ಲಸಿಕೆ ಡೋಸ್‌ ಉತ್ಪಾದಿಸಲು ಭಾರತ ಸಿದ್ಧ: ಮೋದಿ

ನವದೆಹಲಿ: ಹವಾಮಾನ ಬದಲಾವಣೆ, ಕೋವಿಡ್ -19 ಮತ್ತು ಆರ್ಥಿಕ ಚೇತರಿಕೆಯ ವಿಷಯಗಳ ಮೇಲೆ ಕೇಂದ್ರೀಕೃತವಾಗಿರುವ ಎರಡು ದಿನಗಳ ಶೃಂಗಸಭೆಗಾಗಿ ವಿಶ್ವದ ಇಪ್ಪತ್ತು ಪ್ರಮುಖ ಆರ್ಥಿಕತೆಗಳ ನಾಯಕರು ಶನಿವಾರ ಇಟಲಿಯ ರೋಮ್‌ನಲ್ಲಿ ಒಟ್ಟುಗೂಡಿದ್ದಾರೆ. ಜಿ 20 ಶೃಂಗಸಭೆಯ ನಾಯಕರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಅಧ್ಯಕ್ಷ ಜೋ ಬಿಡನ್ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ … Continued

ಹವಲಾ ಪ್ರಕರಣ: ಇಡಿ ಸಮನ್ಸ್‌ ವಜಾ ಮಾಡುವಂತೆ ಕೋರಿದ್ದ ಅನಿಲ್‌ ದೇಶಮುಖ್‌ ಅರ್ಜಿ ವಜಾ ಮಾಡಿದ ಬಾಂಬೆ ಹೈಕೋರ್ಟ್‌

ಮುಂಬೈ: ಹವಾಲಾ ಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ನೀಡಿರುವ ಸಮನ್ಸ್‌ಗಳನ್ನು ವಜಾ ಮಾಡುವಂತೆ ಕೋರಿ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್‌ ದೇಶಮುಖ್‌ ಸಲ್ಲಿಸಿದ್ದ ಮನವಿಯನ್ನು ಬಾಂಬೆ ಹೈಕೋರ್ಟ್‌ ವಜಾ ಮಾಡಿದೆ. ಸಿಆರ್‌ಪಿಸಿ ಸೆಕ್ಷನ್‌ 438ರ ಅಡಿ ಅರ್ಜಿದಾರರು ಶಾಸನಬದ್ಧವಾಗಿ ಸಕ್ಷಮ ನ್ಯಾಯಾಲಯದ ಕದತಟ್ಟಲು ಮತ್ತು ನ್ಯಾಯಾಲಯವು ಅರ್ಹತೆಯ ಆಧಾರದಲ್ಲಿ ಪರಿಗಣಿಸುವ ಸಂಬಂಧ ಅದನ್ನು … Continued

ಕಾಶ್ಮೀರದ ಎಲ್​ಒಸಿ ಬಳಿ ಸ್ಫೋಟದಲ್ಲಿ ಇಬ್ಬರು ಸೈನಿಕರ ಸಾವು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ನೌಶೇರಾ-ಸುಂದರ್‌ಬಾನಿ ವಲಯದ ಗಡಿ ನಿಯಂತ್ರಣ ರೇಖೆ ಬಳಿ ನಡೆದ ಗಣಿ ಸ್ಫೋಟದಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಜಮ್ಮು ಕಾಶ್ಮೀರದ ಪೊಲೀಸರು ತಿಳಿಸಿದ್ದಾರೆ. ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ನಡೆದ ಗಣಿ ಸ್ಫೋಟದ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯ ಓರ್ವ ಅಧಿಕಾರಿ ಮತ್ತು ಸೈನಿಕರೊಬ್ಬರು ಮೃತಪಟ್ಟಿದ್ದಾರೆ ಎಂದು … Continued

ಎಲ್ಲರಿಗೂ ಸಮಾನವಾಗಿ ಅನ್ವಯಿಸುವ ಜನಸಂಖ್ಯಾ ನೀತಿ ಭಾರತಕ್ಕೆ ಬೇಕು: ದತ್ತಾತ್ರೇಯ ಹೊಸಬಾಳೆ ಪ್ರತಿಪಾದನೆ

ಧಾರವಾಡ: ಪ್ರತಿಯೊಂದು ದೇಶವೂ ಜನಸಂಖ್ಯಾ ನೀತಿಯನ್ನು ಹೊಂದಬೇಕು ಮತ್ತು ಅದು ಸಮಾಜದ ಎಲ್ಲರಿಗೂ ಸಮಾನವಾಗಿ ಅನ್ವಯಿಸಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರೆಸ್ಸೆಸ್‌)ದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಪ್ರತಿಪಾದಿಸಿದರು. ಧಾರವಾಡದ ಗರಗ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿ ಸಭೆಯ ಅಂತಿಮ ದಿನವಾದ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೈಸರ್ಗಿಕ ಸಂಪನ್ಮೂಲಗಳ … Continued

ಸೂಪರ್‌ ಸ್ಟಾರ್‌ ರಜನೀಕಾಂತಗೆ ಕ್ಯಾರೋಟಿಡ್ ಎಂಡಾರೆಕ್ಟಮಿ ಚಿಕಿತ್ಸೆ

ಚೆನ್ನೈ : ಗುರುವಾರ ಆಸ್ಪತ್ರೆಗೆ ದಾಖಲಾಗಿದ್ದು ಸೂಪರ್‌ ಸ್ಟಾರ್‌ ರಜನೀಕಾಂತ ಅಕ್ಟೋಬರ್ 29, ಶುಕ್ರವಾರದಂದು ಶೀರ್ಷಧಮನಿ ರಿವಾಸ್ಕುಲಲೈಸೇಶನ್‌ (carotid artery revascularization) ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಚೆನ್ನೈನ ಕಾವೇರಿ ಆಸ್ಪತ್ರೆ ತಿಳಿಸಿದೆ. ಕೆಲವು ದಿನಗಳ ನಂತರ ರಜನಿಕಾಂತ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ. ಆಸ್ಪತ್ರೆಯು ಬಿಡುಗಡೆ ಮಾಡಿದ ಬುಲೆಟಿನ್ ನಲ್ಲಿ, ರಜನಿಕಾಂತ್ … Continued

ಅರುಣಾಚಲ ಪ್ರದೇಶದ ಚೀನಾ ಗಡಿಯಲ್ಲಿ ಸಂಪೂರ್ಣ ಕಪ್ಪುಬಣ್ಣಕ್ಕೆ ತಿರುಗಿದ ನದಿ; ಲಕ್ಷಾಂತರ ಮೀನುಗಳು ಸಾವು

ನವದೆಹಲಿ: ಅರುಣಾಚಲ ಪ್ರದೇಶದಲ್ಲಿ ನದಿಯೇ ಪೂರ್ತಿ ಕಪ್ಪುಬಣ್ಣಕ್ಕೆ ತಿರುಗಿದ್ದು ಆತಂಕಕ್ಕೆ ಕಾರಣವಾಗಿದೆ. ಇದು ಕಪ್ಪು ಬಣ್ಣಕ್ಕೆ ತಿರುಗುತ್ತಿದ್ದಂತೆ ಲಕ್ಷಾಂತರ ಮೀನುಗಳು ಮೃತಪಟ್ಟಿವೆ. ಈ ನದಿಯಲ್ಲಿ ಮೀನು ಹಿಡಿದು ತಿನ್ನಬೇಡಿ.. ನದಿ ನೀರು ಕುಡಿಯಬೇಡಿ ಎಂದು ಸ್ಥಳೀಯರಿಗೆ ಅಧಿಕಾರಿಗಳು ಸೂಚಿಸಿದ್ದಾರೆ. ಈ ನದಿ ನೀರು ಹೀಗಾಗಲು ಇದರಲ್ಲಿ ಭಾರೀ ಪ್ರಮಾಣದ ವಿಷಯುಕ್ತ ಅಂಶ ಕರಗಿದ್ದು (ಟಿಡಿಎಸ್​) ಕಾರಣ … Continued

ಮೊದಲ ಬಾರಿಗೆ ಪೋಪ್ ಫ್ರಾನ್ಸಿಸ್ ಭೇಟಿ ಮಾಡಿದ ಪ್ರಧಾನಿ ಮೋದಿ: 20 ನಿಮಿಷ ನಿಗದಿಯಾದ ಮಾತುಕತೆ 1 ಗಂಟೆ ವಿಸ್ತರಣೆ..!

ನವದೆಹಲಿ: ಜಿ-20 ಶೃಂಗಸಭೆಗಾಗಿ ರೋಮ್ ಭೇಟಿಯ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿಯಾದರು. ಪೋಪ್ ಫ್ರಾನ್ಸಿಸ್ ಅವರೊಂದಿಗೆ ಪ್ರಧಾನಿ ಮೋದಿಯವರ ಮೊದಲ ಭೇಟಿ ಇದಾಗಿದೆ. ಹವಾಮಾನ ಬದಲಾವಣೆಯ ವಿರುದ್ಧ ಹೋರಾಡುವುದು ಮತ್ತು ಬಡತನವನ್ನು ತೊಡೆದುಹಾಕುವುದು ಸೇರಿದಂತೆ ಜನಜೀವನವನ್ನು ಉತ್ತಮಗೊಳಿಸುವ ಗುರಿಯನ್ನು ಹೊಂದಿರುವ ವ್ಯಾಪಕ ವಿಷಯಗಳ ಕುರಿತು ಪ್ರಧಾನಿ ಮೋದಿ ಮತ್ತು … Continued

ಡ್ರಗ್ಸ್‌ ಪ್ರಕರಣ: ಇಂದು ಜೈಲಿನಿಂದ ಬಿಡುಗಡೆಯಾದ ಆರ್ಯನ್​ ಖಾನ್

ಮುಂಬೈ: ಮುಂಬೈ ಕ್ರೂಸ್‌ ಡ್ರಗ್ಸ್​ ಪ್ರಕರಣದಲ್ಲಿ ಎನ್​ಸಿಬಿ ಅಧಿಕಾರಿಗಳ ಬಲೆಗೆ ಬಿದ್ದು ಜೈಲು ಸೇರಿದ್ದ ಬಾಲಿವುಡ್‌ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್​ ಖಾನ್​ ಜಾಮೀನು ಪಡೆದು ಇಂದು (ಶನಿವಾರ( ಹೊರಬಂದಿದ್ದಾರೆ. ಬಾಂಬೆ ಹೈಕೋರ್ಟ್​ ಗುರುವಾರವೇ (ಅ.28) ಆರ್ಯನ್‌​ ಖಾನಗೆ​ ಪುತ್ರನಿಗೆ ಜಾಮೀನು ನೀಡಿತ್ತು. ಅದಕ್ಕೆ ಸಂಬಂಧಿಸಿದಂತೆ ಜೈಲಿನ ಕೆಲವು ಪ್ರಕ್ರಿಯೆಗಳು ಇಂದು ಮುಗಿದ ನಂತರ … Continued