ಪ್ರತಿಭಟನೆ ನಡೆಸಿ, ಆದರೆ ರಸ್ತೆ ಸಂಚಾರ ಬಂದ್ ಮಾಡಬೇಡಿ : ರೈತರಿಗೆ ಸುಪ್ರೀಂ ಸೂಚನೆ

ನವದೆಹಲಿ: ಪ್ರತಿಭಟನೆ ನಡೆಸುವುದು ರೈತರ ಹಕ್ಕು ಪ್ರತಿಭಟನೆ ನಡೆಸಿ, ಆದರೆ ಜನ ಸಂಚಾರಕ್ಕೆ ಅಡ್ಡಿಯಾಗುವಂತೆ ರಸ್ತೆ ಬಂದ್ ಮಾಡುವುದನ್ನು ತಕ್ಷಣವೇ ನಿಲ್ಲಿಸಿ ಎಂದು ಸುಪ್ರೀಂಕೋರ್ಟ್ ಸೂಚಿಸಿದೆ. ಕೇಂದ್ರ ಸರ್ಕಾರ ಮೂರು ಕೃಷಿ ಕಾನೂನುಗಳಿಗೆ ತಿದ್ದುಪಡಿ ತಂದಿರುವುದನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ಕಳೆದ ಹತ್ತು ತಿಂಗಳಿಂದ ದೆಹಲಿಯ ಗಡಿ ಭಾಗದ ಹೆದ್ದಾರಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ. … Continued

ಇನ್ಫೋಸಿಸ್ ಪ್ರತಿಷ್ಠಾನದ ‘ವಿಶ್ರಾಮ ಸದನ’ ಉದ್ಘಾಟಿಸಿದ ಪ್ರಧಾನಿ ಮೋದಿ

ನವದೆಹಲಿ: ಇನ್ಫೋಸಿಸ್ ಪ್ರತಿಷ್ಠಾನದ ವತಿಯಿಂದ ಕ್ಯಾನ್ಸರ್ ರೋಗಿಗಳಿಗಾಗಿ ನಿರ್ಮಿಸಲಾದ 806 ಹಾಸಿಗೆಗಳ ವಿಶ್ರಾಮ ಸದನವನ್ನು ಪ್ರಧಾನಿ ನರೇಂದ್ರ ಮೋದಿ ಇಂದು (ಗುರುವಾರ) ಉದ್ಘಾಟಿಸಿದರು. ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ (ಎಐಐಎಂಎಸ್) ಜಜ್ಜರ್ ಕ್ಯಾಂಪಸ್‍ನಲ್ಲಿರುವ ನ್ಯಾಷನಲ್ ಕ್ಯಾನ್ಸರ್ ಇನ್‍ಸ್ಟಿಟ್ಯೂಟ್‍ನಲ್ಲಿ (ಎನ್‍ಐಸಿ) 806 ಹಾಸಿಗೆಗಳ ವಿಶ್ರಮ್ ಸದನಕ್ಕೆ ವಿಡಿಯೋ ಕಾನರೆನ್ಸಿಂಗ್ ಮೂಲಕ ಪ್ರಧಾನಿ ಮೋದಿ ಚಾಲನೆ ನೀಡಿದರು. ಇನ್ಫೋಸಿಸ್ … Continued

ಚೀನಾದಲ್ಲಿ ಮತ್ತೆ ಕೋವಿಡ್‌ ಸೋಂಕು ಹೆಚ್ಚಳ: ಹಲವೆಡೆ ಶಾಲೆ ಬಂದ್‌, ವಿಮಾನಯಾನ ಸ್ಥಗಿತ

ಬೀಜಿಂಗ್‌: ಪ್ರವಾಸಿಗರಿಂದ ಚೀನಾದಲ್ಲಿ ಕೋವಿಡ್‌ ಏಕಾಏಕಿ ಹೆಚ್ಚಾಗಿದ್ದು, ಹಲವು ಪ್ರದೇಶಗಳಿಗೆ ವಿಮಾನ ಹಾರಾಟ ರದ್ದು ಮಾಡಲಾಗಿದೆ. ಶಾಲೆಗಳನ್ನು ಮುಚ್ಚಲಾಗಿದೆ ಹಾಗೂ ಜನರಿಗೆ ಸಾಮೂಹಿಕ ಪರೀಕ್ಷೆ ಮಾಡಿಸಲಾಗುತ್ತಿದೆ. ಚೀನಾ ಕಟ್ಟುನಿಟ್ಟಾದ ನಿರ್ಬಂಧವೂ ಸೇರಿದಂತೆ, ಲಾಕ್‌ಡೌನ್‌ ಕ್ರಮ ಅನುಸರಿಸಿ ಕೋವಿಡ್‌ ಸೋಂಕನ್ನು ಶೂನ್ಯಕ್ಕೆ ತಂದಿಟ್ಟಿತ್ತು. ಆದರೆ, ಸತತ ಐದನೇ ದಿನ ಚೀನಾದಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ. ಉತ್ತರ ಮತ್ತು … Continued

ಉತ್ತರ ಪ್ರದೇಶ:ಪ್ರಿಯಾಂಕಾ ಗಾಂಧಿ ಜೊತೆ ಸೆಲ್ಫಿ ಕ್ಲಿಕ್ಕಿಸಿದ್ದ ಮಹಿಳಾ ಪೇದೆಗಳ ವಿರುದ್ಧ ತನಿಖೆಗೆ ಆದೇಶ

ಆಗ್ರಾ: ಕಾಂಗ್ರೆಸ್​ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಬುಧವಾರ ಆಗ್ರಾಕ್ಕೆ ತೆರಳಿದ್ದ ಸಂದರ್ಭದಲ್ಲಿ ಪ್ರಿಯಾಂಕ ಗಾಂಧಿ ಆಗ್ರಾಕ್ಕೆ ಬರುವುದನ್ನು ಉತ್ತರಪ್ರದೇಶ ಸರ್ಕಾರ ತಡೆದಿತ್ತು. ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬ ಭೇಟಿಯಾಗಲು ಪ್ರಿಯಾಂಕಾ ಗಾಂಧಿ ಆಗ್ರಾಕ್ಕೆ ತೆರಳುತ್ತಿದ್ದಾಗ ಪೊಲೀಸರು ಪ್ರಿಯಾಂಕ ಅವರನ್ನು ತಡೆದು ವಾಪಸ್ ಕಳುಹಿಸಿದ್ದರು. ಈ ವೇಳೆ ಕೆಲವು ಮಹಿಳಾ ಪೊಲೀಸರು ಪ್ರಿಯಾಂಕ … Continued

ಡ್ರಗ್ಸ್‌ ಪ್ರಕರಣ: ಆರ್ಯನ್‌ ಖಾನ್‌ ಪುತ್ರ ಸೇರಿ 8 ಜನರಿಗೆ ನ್ಯಾಯಾಂಗ ಬಂಧನ ಅಕ್ಟೋಬರ್ 30ರ ವರೆಗೆ ವಿಸ್ತರಣೆ

ಮುಂಬೈ: ಡ್ರಗ್ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುv ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿದಂತೆ 8 ಆರೋಪಿಗಳಿಗೆ ನೀಡಲಾಗಿದ್ದ ನ್ಯಾಯಾಂಗ ಬಂಧನದ ಅವಧಿಯನ್ನು ಅಕ್ಟೋಬರ್ 30ರ ವರೆಗೆ ವಿಸ್ತರಿಸಲಾಗಿದೆ. ನಿನ್ನೆಯಷ್ಟೇ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅರ್ಜಿಯನ್ನು ಮುಂಬೈನ ಎನ್ ಡಿಪಿಎಸ್ ವಿಶೇಷ ಕೋರ್ಟ್ ವಜಾಗೊಳಿಸಿತ್ತು. ಇಂದು (ಗುರುವಾರ) ನಟ … Continued

ರಾಜಸ್ಥಾನ: ಹೋಮ್‌ವರ್ಕ್ ಮಾಡದ ಕಾರಣ 7ನೇ ತರಗತಿ ವಿದ್ಯಾರ್ಥಿಯನ್ನು ಹೊಡೆದು ಸಾಯಿಸಿದ ಶಿಕ್ಷಕ…!

ಜೈಪುರ: ರಾಜಸ್ಥಾನದ ಚುರು ಜಿಲ್ಲೆಯಲ್ಲಿ ಖಾಸಗಿ ಶಾಲೆಯ 7ನೇ ತರಗತಿಯ ವಿದ್ಯಾರ್ಥಿಯನ್ನು ಶಿಕ್ಷಕರೊಬ್ಬರು ಥಳಿಸಿದ ಪರಿಣಾಮ ವಿದ್ಯಾರ್ಥಿ ಸತ್ತೇ ಹೋಗಿದ್ದಾನೆ. ಹೋಂ ವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ ಮನಬಂದಂತೆ ಥಳಿಸಿದ ಪರಿಣಾಮ ಬಲವಾದ ಹೊಡೆತ ಬಿದ್ದು ವಿದ್ಯಾರ್ಥಿ ಸಾವಿಗೀಡಾಗಿದ್ದಾನೆ,. ವಿದ್ಯಾರ್ಥಿಯ ಸಾವಿಗೆ ಕಾರಣರಾದ ಆರೋಪಿ ಶಿಕ್ಷಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಜಸ್ಥಾನದ ಶಿಕ್ಷಣ ಸಚಿವ … Continued

ದೆಹಲಿಯಲ್ಲಿ ಆಘಾತಕಾರಿ ಘಟನೆ : ಮಂಗ ಎಸೆದ ಇಟ್ಟಿಗೆಯಿಂದ ಮನುಷ್ಯನ ಪ್ರಾಣವೇ ಹೋಯಿತು..!

ನವದೆಹಲಿ: ಕೆಲವೊಮ್ಮೆ ನಮ್ಮ ಊಹೆಗೆ ನಿಲುಕದ ಘಟನೆಗಳು ನಡೆದು ಹೋಗುತ್ತವೆ. ಕೋತಿಯೊಂದು ಮನುಷ್ಯನನ್ನು ಕೊಂದಿರುವ ಘಟನೆ ದೆಹಲಿಯಲ್ಲಿ ನಡೆದಿದೆ.ಅಂಥದ್ದೇ ಘಟನೆಯಲ್ಲಿ ದೆಹಲಿಯ ನಬಿ ಕರೀಂ ಪ್ರದೇಶದಲ್ಲಿ 30 ವರ್ಷದ ಮೊಹಮ್ಮದ್ ಕುರ್ಬಾನ್ ಎಂಬುವವರು ಕೋತಿಯಿಂದಾಗಿ ಮೃತಪಟ್ಟಿದ್ದಾರೆ. ತಲೆ ಮೇಲೆ ಕೋತಿ ಇಟ್ಟಿಗೆ ಎಸೆದದ್ದು ಅವರ ತಲೆಮೇಲೆ ಬಿದ್ದ ಪರಿಣಾಮ ಅವರು ಮೃತಪಟ್ಟಿದ್ದಾರೆ. ಕಟ್ಟಡವನ್ನು ಏರಿ ಕುಳಿತಿದ್ದ … Continued

ಕೇಂದ್ರ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ : 3% ಡಿಎ, ಡಿಆರ್‌ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ

ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಶೇ.3ರಷ್ಟು ತುಟ್ಟಿಭತ್ಯೆ (DA)ಮತ್ತು ತುಟ್ಟಿಪರಿಹಾರ (dearness relief (DR) ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ. ಡಿಎ ಮತ್ತು ಡಿಆರ್ ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟವು (union cabinet) ಅನುಮೋದನೆ ನೀಡಿದ್ದು, ಇದು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಶುಭ ಸುದ್ದಿಯಾಗಿದೆ. ಜುಲೈನಲ್ಲಿ … Continued

ಬಾಲಿವುಡ್‌ ನಟ ಶಾರುಖ್ ಮನೆಗೆ ಎನ್ ಸಿಬಿ ತಂಡ : ನಟಿ ಅನನ್ಯ ಪಾಂಡೆಗೂ ತಟ್ಟಿದ ಬಿಸಿ!

ಮುಂಬೈ: ಬಾಲಿವುಡ್‌ ನಟ ಶಾರುಖ್ ಖಾನ್ ಆರ್ಥರ್ ರೋಡ್ ಜೈಲಿನಲ್ಲಿರುವ ಮಗ ಆರ್ಯನ್ ಖಾನ್ ಅವರನ್ನು ಭೇಟಿ ಮಾಡಿದ ಗಂಟೆಗಳ ನಂತರ.ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ತಂಡ ಗುರುವಾರ ಶಾರುಖ್ ಖಾನ್ ಅವರ ಬಾಂದ್ರಾ ನಿವಾಸ ‘ಮನ್ನತ್’ ತಲುಪಿದೆ. ಮುಂಬೈ: ಮುಂಬೈನಲ್ಲಿ ಬಾಲಿವುಡ್​ ನಟ, ನಟಿಯರ ಮನೆಗಳ ಮೇಲೆ ಎನ್​ಸಿಬಿ ದಾಳಿ ನಡೆಸಿದೆ. ಬಾಲಿವುಡ್​ ನಟ … Continued

ಗೌರಿ ಲಂಕೇಶ್ ಹತ್ಯೆ ಪ್ರಕರಣ: ಆರೋಪಿ ಮೋಹನ್ ನಾಯಕ್ ವಿರುದ್ಧ ಕೋಕಾ ಕಾಯಿದೆ ಆರೋಪ ಮರುನಿಗದಿಗೊಳಿಸಿದ ಸುಪ್ರೀಂಕೋರ್ಟ್

ನವದೆಹಲಿ: ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಮೋಹನ್ ನಾಯಕ್ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯಿದೆಯಡಿ (ಕೋಕಾ- ಕೆಸಿಒಸಿಎ) ರಾಜ್ಯ ಹೈಕೋರ್ಟ್‌ ಕೈಬಿಟ್ಟಿದ್ದ ಆರೋಪಗಳನ್ನು ಸುಪ್ರೀಂಕೋರ್ಟ್‌ ಮರುನಿಗದಿಗೊಳಿಸಿದೆ (ಕವಿತಾ ಲಂಕೇಶ್‌ ಮತ್ತು ಕರ್ನಾಟಕ ಸರ್ಕಾರ ಮತ್ತಿತರರ ನಡುವಣ ಪ್ರಕರಣ). ಗೌರಿ ಅವರ ಸಹೋದರಿ ಕವಿತಾ ಲಂಕೇಶ್‌ ಅವರು ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಿದ ನ್ಯಾಯಮೂರ್ತಿಗಳಾದ … Continued