ಮಯೂರ್‌ಭಂಜ್‌ನಲ್ಲಿ ಬಾವಿಗೆ ಬಿದ್ದ 12 ಅಡಿ ಉದ್ದದ ಬೃಹತ್‌ ಕಾಳಿಂಗ ಸರ್ಪ ರಕ್ಷಿಸಿದ ಅರಣ್ಯ ಇಲಾಖೆ.. ವೀಕ್ಷಿಸಿ

ಒಡಿಶಾದ ಅರಣ್ಯ ಇಲಾಖೆಯು ಪಾಳುಬಿದ್ದ ಬಾವಿಯೊಳಗೆ ಪತ್ತೆಯಾದ 12 ಅಡಿ ಉದ್ದದ ಬೃಹತ್‌ ಕಾಳಿಂಗ ಸರ್ಪವನ್ನು ರಕ್ಷಿಸಿದೆ. ಮಂಗಳವಾರ ಮಯೂರ್‌ಭಂಜ್ ಜಿಲ್ಲೆಯ ಖುಂಟಾ ಪ್ರದೇಶದಲ್ಲಿ ಈ ಕಾಳಿಂಗ ಸರ್ಪ ಬಾವಿಯಲ್ಲಿ ಪತ್ತೆಯಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ಚಿತ್ರವು ಹಾವು ತನ್ನ ರಕ್ಷಿಸಿದವನೊಂದಿಗೆ ಮುಖಾಮುಖಿಯಾಗಿರುವುದನ್ನು ತೋರಿಸುತ್ತದೆ. ಹಾವನ್ನು ರಕ್ಷಿಸಿದ್ದಕ್ಕಾಗಿ ಕೆಲವರು ಅರಣ್ಯ ಇಲಾಖೆಯನ್ನು ಶ್ಲಾಘಿಸಿದ್ದಾರೆ. ರಕ್ಷಣಾ … Continued

ತಮಿಳುನಾಡು: ಅಸ್ವಸ್ಥ ಯುವಕನ ಹೆಗಲ ಮೇಲೆ ಹೊತ್ತು ನಡೆದ ಮಹಿಳಾ ಇನ್ಸ್‌ಪೆಕ್ಟರ್‌..!

ಚೆನ್ನೈ: ತಮಿಳುನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಈವರೆಗೆ ಜನ್ನೆರಡು ಜನ ಮೃತಪಟ್ಟಿದ್ದಾರೆ. ಈ ಮಧ್ಯೆ ಮಹಿಳಾ ಪೊಲೀಸ್ ಇನ್ಸ್‌ಪೆಕ್ಟರ್‌ ಒಬ್ಬರು ಅಸ್ವಸ್ಥಗೊಂಡಿದ್ದ ವ್ಯಕ್ತಿಯೊಬ್ಬನನ್ನು ಹೆಗಲ ಮೇಲೆ ಹೊತ್ತೊಯ್ದು ಭಾರೀ ಸುದ್ದಿಯಾಗಿದ್ದಾರೆ. ಮಹಿಳಾ ಇನ್ಸ್ ಪೆಕ್ಟರ್ ರಾಜೇಶ್ವರಿ ಎನ್ನುವವರು 28 ವರ್ಷದ ಯುವಕನನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ನಡೆದಿದ್ದಾರೆ. ಇದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ … Continued

ಚಿತ್ರಕೂಟ ಸಾಮೂಹಿಕ ಅತ್ಯಾಚಾರ ಪ್ರಕರಣ: ಉತ್ತರ ಪ್ರದೇಶದ ಮಾಜಿ ಸಚಿವ ಗಾಯತ್ರಿ ಪ್ರಜಾಪತಿ ದೋಷಿ ಎಂದ ಲಕ್ನೋ ಕೋರ್ಟ್‌

ನವದೆಹಲಿ: ಚಿತ್ರಕೂಟ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶ ಮಾಜಿ ಸಚಿವ ಗಾಯತ್ರಿ ಪ್ರಜಾಪತಿ ಹಾಗೂ ಇತರ ಇಬ್ಬರು ಸಹ ಆರೋಪಿಗಳು ತಪ್ಪಿತಸ್ಥರು ಎಂದು ಲಕ್ನೋ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಸಂಸದ/ಶಾಸಕರ ವಿರುದ್ಧದ ಪ್ರಕರಣಗಳನ್ನು ವಿಚಾರಣೆ ನಡೆಸುವ ವಿಶೇಷ ನ್ಯಾಯಾಧೀಶ ಪವನ್ ಕುಮಾರ್ ರೈ ಅವರು ಪ್ರಜಾಪತಿ ತಪ್ಪಿತಸ್ಥರು ಎಂದು ಘೋಷಿಸಿದ್ದು, ಶಿಕ್ಷೆಯ ಪ್ರಮಾಣವನ್ನು … Continued

ಹಿಂದುತ್ವವನ್ನು ಐಸಿಸ್-ಬೊಕೊ ಹರಾಮ್‌ ಉಗ್ರ ಸಂಘಟನೆಗೆ ಹೋಲಿಸಿ ವಿವಾದ ಸೃಷ್ಟಿಸಿದ ಸಲ್ಮಾನ್‌ ಖುರ್ಷಿದ್‌ ಪುಸ್ತಕ..! :ದೂರು ದಾಖಲು

ನವದೆಹಲಿ: ಕೇಂದ್ರದ ಮಾಜಿ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ತಮ್ಮ ‘ಸನ್‌ರೈಸ್ ಓವರ್ ಅಯೋಧ್ಯಾ ( ‘Sunrise over Ayodhya) ಪುಸ್ತಕವನ್ನು ಬುಧವಾರ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಹಿಂದುತ್ವವನ್ನು ಐಸಿಸ್‌ ಹಾಗೂ ಬೊಕೊ ಹರಾಮ್‌ ನಂಥಹ ಉಗ್ರ ಸಂಘಟನೆಗಳಿಗೆ ಹೋಲಿಸಿದ್ದಾರೆ ಎಂಬುದು ಈಗ ವಿವಾದಕ್ಕೆ ಕಾರಣವಾಗಿದೆ. ಈ ನಡುವೆ ಸಲ್ಮಾನ್ ಖುರ್ಷಿದ್ … Continued

ವಿಶ್ವದ ಮೊದಲ ಹವಾನಿಯಂತ್ರಿತ (ಎಸಿ) ಹೆಲ್ಮೆಟ್‌ ಬಿಡುಗಡೆ..! ಭಾರತದ ಸ್ಟಾರ್ಟ್-ಅಪ್ ಕಂಪನಿಯಿಂದ ತಯಾರಿಕೆ

ಮುಂಬೈ: ವಿಶ್ವದ ಮೊದಲ ಹವಾನಿಯಂತ್ರಿತ (ಎಸಿ) ಸುರಕ್ಷತಾ ಹೆಲ್ಮೆಟ್ ಬಿಡುಗಡೆಯಾಗಿದೆ. ಇದನ್ನು ದುಬೈನ ಎಕ್ಸ್‌ಪೋ 2020ರಲ್ಲಿ ಭಾರತೀಯ ಪೆವಿಲಿಯನ್‌ನಲ್ಲಿ ಅನಾವರಣಗೊಳಿಸಲಾಗಿದೆ. ಹೆಲ್ಮೆಟ್‌ಗಳ ಶ್ರೇಣಿಯನ್ನು ಭಾರತದ ಸ್ಟಾರ್ಟ್-ಅಪ್ ಕಂಪನಿ  ಜಾರ್ಶ್ ಸೇಫ್ಟಿ ಅಭಿವೃದ್ಧಿಪಡಿಸಿದೆ ಮತ್ತು ದುಬೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಕಂಪನಿಯಾದ ಎಲೆಕ್ಟ್ರಾನಿಕ್ಸ್ ವಿತರಕ ಎನ್‌ಐಎ ಲಿಮಿಟೆಡ್ ಅನಾವರಣಗೊಳಿಸಿದೆ. ಮುಖದ ಶೀಲ್ಡ್‌ನೊಂದಿಗೆ ಸಂಪೂರ್ಣವಾದ ವಿಶೇಷ ವೆಲ್ಡಿಂಗ್ ಹೆಲ್ಮೆಟ್ಟುಗಳು … Continued

ಭಾರತದಲ್ಲಿ 13,091 ಕೋವಿಡ್ ಪ್ರಕರಣಗಳು ದಾಖಲು, ಸಕ್ರಿಯ ಪ್ರಕರಣಗಳು 266 ದಿನಗಳಲ್ಲೇ ಕನಿಷ್ಠ

ನವದೆಹಲಿ: : ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 13,091 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು, ಸೋಂಕಿನಿಂದ 340 ಸಾವುಗಳು ಸಂಭವಿಸಿವೆ. ಕೇಂದ್ರ ಆರೋಗ್ಯ ಸಚಿವಾಲಯವು ಗುರುವಾರ ಹಂಚಿಕೊಂಡ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶವು ಒಟ್ಟು 13,878 ಡಿಸ್ಚಾರ್ಜ್‌ಗಳನ್ನು ಕಂಡಿದೆ, ಒಟ್ಟು ಚೇತರಿಕೆ ದರವನ್ನು ಸುಮಾರು 98.25 ಪ್ರತಿಶತದಷ್ಟು ಇದೆ. ಇದು ಮಾರ್ಚ್ 2020 … Continued

ತಮಿಳುನಾಡಿನಲ್ಲಿ ಭಾರೀ ಮಳೆ ಮುನ್ಸೂಚನೆ: 20 ಜಿಲ್ಲೆಗಳಲ್ಲಿ ರೆಡ್ ಅಲರ್ಟ್, 9 ಜಿಲ್ಲೆಗಳಲ್ಲಿ ಶಾಲೆಗಳು ಬಂದ್‌..ಕೆಲವಿಮಾನ ಸಂಚಾರಗಳು ಸ್ಥಗಿತ

ಚೆನ್ನೈ: ಬುಧವಾರ ಸಂಜೆಯ ಹೊತ್ತಿಗೆ, ತಮಿಳುನಾಡು ದಿನವಿಡೀ ಕಂಡ ಮಧ್ಯಂತರ ಮತ್ತು ಲಘು ಮಳೆಯು ವೇಗ ಪಡೆದುಕೊಂಡು ಚೆನ್ನೈ ಮತ್ತು ಹತ್ತಿರದ ಚೆಂಗೆಲ್‌ಪೇಟ್, ತಿರುವಳ್ಳೂರು, ಕಾಂಚೀಪುರಂ ಮತ್ತು ವಿಲ್ಲುಪುರಂ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಿ ಮಾರ್ಪಟ್ಟಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಮುಂದಿನ ಎರಡು ದಿನಗಳ ಕಾಲ ರಾಜ್ಯದಲ್ಲಿ ಮಳೆ ಮುಂದುವರೆಯುವ … Continued

ಕೇವಲ 2 ದಿನದಲ್ಲಿ 3.72 ಲಕ್ಷ ಕೋಟಿ ರೂಗಳಷ್ಟು ಸಂಪತ್ತು ಕಳೆದುಕೊಂಡ ಎಲೋನ್ ಮಸ್ಕ್.. ಆದ್ರೂ ವಿಶ್ವದ ನಂ.1 ಶ್ರೀಮಂತ..!

ಟೆಸ್ಲಾ ಇಂಕ್ ಷೇರುಗಳು ಸತತ ಎರಡನೇ ದಿನ ಕುಸಿದ ನಂತರ ಎಲಾನ್ ಮಸ್ಕ್ ಈ ವಾರ ಇಲ್ಲಿಯ ವರೆಗೆ 5000 ಕೋಟಿ ಅಮೆರಿಕನ್ ಡಾಲರ್ ಕಳೆದುಕೊಂಡಿದ್ದಾರೆ. ಭಾರತದ ರೂಪಾಯಿ ಲೆಕ್ಕ ಹಾಕಿದರೆ ಬರೋಬ್ಬರಿ 3,71,516 ಕೋಟಿ (3.72 ಲಕ್ಷ ಕೋಟಿ) ಆಗುತ್ತದೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಇತಿಹಾಸದಲ್ಲೇ ಇದು ಅತಿದೊಡ್ಡ ಎರಡು ದಿನಗಳ ಕುಸಿತವಾಗಿದೆ. 2019ರಲ್ಲಿ … Continued

ಪಾಕ್ ಸೈನಿಕನಿಂದ ಭಾರತದ ಪದ್ಮಶ್ರೀ ವರೆಗೆ: ಬಾಂಗ್ಲಾದೇಶ ಸ್ವತಂತ್ರಗೊಳಿಸಲು ಭಾರತಕ್ಕೆ ಸಹಾಯ ಮಾಡಲು ತನ್ನ ಸೇನೆ ತೊರೆದ ಕ್ವಾಜಿ ಸಜ್ಜದ್..! ಇಲ್ಲಿದೆ ವಿವರ

ನವದೆಹಲಿ: ಮಾರ್ಚ್ 1971 ರಲ್ಲಿ ಪೂರ್ವ ಪಾಕಿಸ್ತಾನದಲ್ಲಿ ದುಷ್ಕೃತ್ಯಗಳು ನಡೆದಾಗ ಮತ್ತು ನರಮೇಧವನ್ನು ಯೋಜಿಸಲಾಗುತ್ತಿದ್ದಂತೆ ಸಿಯಾಲ್‌ಕೋಟ್ ಸೆಕ್ಟರ್‌ನಲ್ಲಿ ನಿಯೋಜಿಸಲಾದ ಪಾಕಿಸ್ತಾನದ ಸೇನೆಯ 20 ವರ್ಷದ ಯುವ ಅಧಿಕಾರಿ ತನ್ನ ಬೂಟುಗಳಲ್ಲಿ ದಾಖಲೆಗಳು ಮತ್ತು ನಕ್ಷೆಗಳನ್ನು ತುಂಬಿಕೊಂಡು ಭಾರತಕ್ಕೆ ದಾಟಲು ಯಶಸ್ವಿಯಾದರು. ಪಾಕಿಸ್ತಾನ ಸೇನೆಯ ನಿಯೋಜನೆಯ ವಿವರಗಳು ಮತ್ತು ಆ ಯುವ ಅಧಿಕಾರಿಯ ಜೇಬಿನಲ್ಲಿದ್ದ 20 ರೂಪಾಯಿಗಳು … Continued

ಅಫ್ಘಾನ್ ನೆಲ ಭಯೋತ್ಪಾದನೆಯ ತಾಣವಾಗದಂತೆ ತಡೆಯಲು ಭಾರತದ ನೇತೃತ್ವದ ನಿರ್ಧಾರ

ನವದೆಹಲಿ: ಅಫ್ಘಾನಿಸ್ತಾನ ನೆಲವು ಜಾಗತಿಕ ಭಯೋತ್ಪಾದನೆಗೆ ಪ್ರಶಸ್ತ ಸ್ಥಳವಾಗಲು ಅವಕಾಶ ನೀಡದಂತೆ ಕೆಲಸ ಮಾಡುವುದಕ್ಕೆ ಭಾರತ, ರಷ್ಯಾ, ಇರಾನ್ ಹಾಗೂ ಮಧ್ಯಪ್ರಾಚ್ಯದ ಐದು ರಾಷ್ಟ್ರಗಳು ದೆಹಲಿಯಲ್ಲಿ ನಡೆದ ಸಂವಾದದಲ್ಲಿ ನಿರ್ಧರಿಸಿವೆ. ಫ್ಘಾನಿಸ್ತಾನದ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಭಾರತ ಆಯೋಜಿಸಿದ್ದ ರಾಷ್ಟ್ರೀಯ ಭದ್ರತಾ ಸಲಹೆಗಾರರ ಈ ಸಂವಾದದಲ್ಲಿ ಮುಕ್ತ ಹಾಗೂ ನೈಜ ದೃಷ್ಟಿಯಲ್ಲಿ ಎಲ್ಲರನ್ನೂ ಒಳಗೊಳ್ಳುವ ಸರ್ಕಾರ ಅಲ್ಲಿ … Continued