ಅಫ್ಘಾನ್​ ಹುಡುಗಿ ಕಳುಹಿಸಿದ ಕಾಬೂಲ್​ ನದಿ ನೀರಿನಿಂದ ಅಯೋಧ್ಯೆ ಶ್ರೀರಾಮ ಜನ್ಮಭೂಮಿಯಲ್ಲಿ ಜಲಾಭಿಷೇಕ ಮಾಡಿದ ಸಿಎಂ ಯೋಗಿ

ಅಯೋಧ್ಯೆ: ರಾಮಜನ್ಮಭೂಮಿಗಾಗಿ ಅಫ್ಘಾನಿಸ್ತಾನದ ಹುಡುಗಿಯೊಬ್ಬಳು ಕಳುಹಿಸಿದ್ದ ಕಾಬೂಲ್​ ನದಿಯ ನೀರಿನಿಂದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಶ್ರೀ ರಾಮಜನ್ಮಭೂಮಿಯಲ್ಲಿ ಜಲಾಭಿಷೇಕ ಮತ್ತು ಪೂಜೆ ನೆರವೇರಿಸಿದ್ದಾರೆ. ಇಂಥದ್ದೊಂದು ವಿಶೇಷ ಘಟನೆ ಇಂದು (ಭಾನುವಾರ) ಅಯೋಧ್ಯೆಯ ಶ್ರೀರಾಮಮಂದಿರ ನಿರ್ಮಾಣ ಸ್ಥಳದಲ್ಲಿ ನಡೆದಿದೆ. ಬಾಲಕಿ ಕಳುಹಿಸಿದ್ದ ಕಾಬೂಲ್​ ನದಿ ನೀರನ್ನು ಗಂಗಾಜಲದೊಂದಿಗೆ ಮಿಶ್ರಣ ಮಾಡಿ, ಮಂದಿರ ನಿರ್ಮಾಣದ ಜಾಗಕ್ಕೆ … Continued

ಸಾಯುವ ಕೆಲವೇ ತಾಸಿನ ಮೊದಲು ಅಜ್ಜಿ ನನಗೆ ಹೇಳಿದ್ದಳು, ಅಳಬೇಡ…: ಇಂದಿರಾ ಗಾಂಧಿ ಸಾವಿನ ಭಾವನಾನ್ಮಕ ವಿಡಿಯೊ ಹಂಚಿಕೊಂಡ ರಾಹುಲ್

ನವದೆಹಲಿ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಭಾನುವಾರ ಭಾವನಾತ್ಮಕ ವಿಡಿಯೊ ಹಂಚಿಕೊಳ್ಳುವ ಮೂಲಕ 1984ರಲ್ಲಿ ಇದೇ ದಿನ ದೆಹಲಿಯಲ್ಲಿ ಹತ್ಯೆಗೀಡಾದ ತಮ್ಮ ಅಜ್ಜಿ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಸ್ಮರಿಸಿಕೊಂಡಿದ್ದಾರೆ. ಮೂರು ನಿಮಿಷಗಳ ವೀಡಿಯೊದಲ್ಲಿ ರಾಹುಲ್‌ ಗಾಂಧಿ (ಆಗ ಅವರಿಗೆ ಕೇವಲ 14 ವರ್ಷ) ಅಂತ್ಯಕ್ರಿಯೆಯಲ್ಲಿ ಅಳುತ್ತಿರುವ ಹೃದಯ ಮಿಡಿಯುವ ದೃಶ್ಯಗಳಿವೆ – … Continued

ಬಾಲಿವುಡ್‌ ನಟಿ ಊರ್ಮಿಳಾ ಮಾತೋಂಡ್ಕರ್‌ಗೆ ಕೊರೊನಾ ಸೋಂಕು

ನವದೆಹಲಿ: ಬಾಲಿವುಡ್‌ ನಟಿ ಊರ್ಮಿಳಾ ಮಾತೋಂಡ್ಕರ್ ಅವರಿಗೆ ಕೋವಿಡ್ -19 ಸೋಂಕು ತಗುಲಿದೆ. 47 ವರ್ಷದ ನಟಿ, ಭಾನುವಾರ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ತಾನು ಕೊರೊನಾ ವೈರಸ್‌ಗೆ ತುತ್ತಾಗಿರುವುದಾಗಿ ಹೇಳಿದ್ದಾರೆ. ಮನೆಯಲ್ಲಿಯೇ ಪ್ರತ್ಯೇಕವಾಗಿರುವುವುದಾಗಿ ತಿಳಿಸಿರುವ ಅವರು, “ನಾನು ಕೋವಿಡ್-19 ಧನಾತ್ಮಕ ಪರೀಕ್ಷೆ ಮಾಡಿದ್ದೇನೆ. ನಾನು ಚೆನ್ನಾಗಿದ್ದೇನೆ ಮತ್ತು ಮನೆಯ ಹೋಮ್‌ ಕ್ವಾರಂಟೈನ್‌ನಲ್ಲಿ ನನ್ನನ್ನು ಪ್ರತ್ಯೇಕಿಸಿಕೊಂಡಿದ್ದೇನೆ, ಕಳೆದ ಕೆಲವು … Continued

ಭಾರತದ ಅಗ್ನಿ-5 ಕ್ಷಿಪಣಿ ಪರೀಕ್ಷೆಯಿಂದ ಬೆಚ್ಚಿಬಿದ್ದ ಚೀನಾ..: ಉಡಾವಣೆ ದೇಶೀಯ ಸಮಸ್ಯೆಗಳಿಂದ ಗಮನ ಬೇರೆಡೆಗೆ ಸೆಳೆಯುವ ಪ್ರಯತ್ನ ಎಂದ ಚೀನಾ ಮುಖವಾಣಿ

ನವದೆಹಲಿ: ಮೇಲ್ಮೈಯಿಂದ ಮೇಲ್ಮೈಗೆ ( surface-to-surface ) ಹಾರುವ ಅಗ್ನಿ-5 ಕ್ಷಿಪಣಿ ಉಡಾವಣೆಯಿಂದ ಬೆಚ್ಚಿಬಿದ್ದಿರುವ ಚೀನಾದ ಕಮ್ಯುನಿಸ್ಟ್ ಪಕ್ಷದ ಮುಖವಾಣಿ ಇದನ್ನು ತನ್ನ ದೇಶೀಯ ಸಮಸ್ಯೆಗಳಿಂದ ಗಮನವನ್ನು ಬೇರೆಡೆ ಸೆಳೆಯುವ ಭಾರತದ ಪ್ರಯತ್ನ ಎಂದು ಬಣ್ಣಿಸಿದೆ. ಸಿಸಿಪಿ (CCP) ಮುಖವಾಣಿ ಗ್ಲೋಬಲ್ ಟೈಮ್ಸ್ ಸಂಪಾದಕೀಯದಲ್ಲಿ, ಚೀನಾ ವಿರುದ್ಧ ಅಗ್ನಿ-5 ಪರೀಕ್ಷೆಯಲ್ಲಿ ಭಾರತೀಯ ಮಾಧ್ಯಮದ ಪ್ರಚಾರವು ದೇಶೀಯ … Continued

ಪಾಟ್ನಾ ಮೃಗಾಲಯದಲ್ಲಿ ತಂಪಾದ ವಾತಾವರಣ ಆನಂದಿಸುತ್ತಿರುವ ಜೋಡಿ ಸರ್ಪಗಳು… ವೀಕ್ಷಿಸಿ

ಬಿಹಾರದ ಪಾಟ್ನಾ ಮೃಗಾಲಯದಲ್ಲಿ ಎರಡು ಹಾವುಗಳು ಆಹ್ಲಾದಕರ ವಾತಾವರಣದಲ್ಲಿ ಆಟವಾಡುವ ಮತ್ತು ಕೂಲಾಗಿರುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್‌ ಆಗಿದೆ. ಎರಡು ನಾಗರ ಹಾವುಗಳ ವಿಡಿಯೋವನ್ನು ಬಿಹಾರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ದೀಪಕ್ ಕುಮಾರ್ ಸಿಂಗ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡ ನಂತರ ವೈರಲ್ ಆಗಿದೆ. https://twitter.com/i/status/1454283913417744395 ಸಿಂಗ್ ತಮ್ಮ … Continued

ದೀಪಾವಳಿ ಹಬ್ಬಕ್ಕೆ ಚೀನಾ ಉತ್ಪನ್ನ ನಿಷೇಧ: ಚೀನಾ ರಫ್ತುದಾರರಿಗೆ 50,000 ಕೋಟಿ ರೂ. ನಷ್ಟ..!

ನವದೆಹಲಿ: ಈ ವರ್ಷ ದೀಪಾವಳಿ ಮತ್ತು ಇತರ ಹಬ್ಬಗಳಿಗೆ ಮುನ್ನ ದೇಶದಲ್ಲಿ ಚೀನಾದ ಉತ್ಪನ್ನ ಮಾರಾಟಗಾರರು, ವಿಶೇಷವಾಗಿ ಪಟಾಕಿ ಮಾರಾಟಗಾರರು ದೊಡ್ಡ ಪ್ರಮಾಣದ ನಷ್ಟವನ್ನು ಅನುಭವಿಸಲಿದ್ದಾರೆ. ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ (ಸಿಎಐಟಿ) ಪ್ರಕಾರ, ದೇಶೀಯ ಮಾರುಕಟ್ಟೆಗಳಲ್ಲಿ ಚೀನಾದಿಂದ ಉತ್ಪನ್ನಗಳ ನಿಷೇಧದಿಂದಾಗಿ ಈ ವರ್ಷ ಚೀನಾದ ರಫ್ತುದಾರರು ಸುಮಾರು 50,000 ಕೋಟಿ ರೂ.ಗಳಷ್ಟು ನಷ್ಟವನ್ನು ಅನುಭವಿಸುತ್ತಾರೆ. … Continued

ಜಿ 20 ಶೃಂಗಸಭೆಯಲ್ಲಿ ಭಾರತ…2022 ರ ಅಂತ್ಯದ ವೇಳೆಗೆ ಐದುನೂರು ಕೋಟಿ ಕೋವಿಡ್ -19 ಲಸಿಕೆ ಡೋಸ್‌ ಉತ್ಪಾದಿಸಲು ಭಾರತ ಸಿದ್ಧ: ಮೋದಿ

ನವದೆಹಲಿ: ಹವಾಮಾನ ಬದಲಾವಣೆ, ಕೋವಿಡ್ -19 ಮತ್ತು ಆರ್ಥಿಕ ಚೇತರಿಕೆಯ ವಿಷಯಗಳ ಮೇಲೆ ಕೇಂದ್ರೀಕೃತವಾಗಿರುವ ಎರಡು ದಿನಗಳ ಶೃಂಗಸಭೆಗಾಗಿ ವಿಶ್ವದ ಇಪ್ಪತ್ತು ಪ್ರಮುಖ ಆರ್ಥಿಕತೆಗಳ ನಾಯಕರು ಶನಿವಾರ ಇಟಲಿಯ ರೋಮ್‌ನಲ್ಲಿ ಒಟ್ಟುಗೂಡಿದ್ದಾರೆ. ಜಿ 20 ಶೃಂಗಸಭೆಯ ನಾಯಕರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಅಧ್ಯಕ್ಷ ಜೋ ಬಿಡನ್ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ … Continued

ಹವಲಾ ಪ್ರಕರಣ: ಇಡಿ ಸಮನ್ಸ್‌ ವಜಾ ಮಾಡುವಂತೆ ಕೋರಿದ್ದ ಅನಿಲ್‌ ದೇಶಮುಖ್‌ ಅರ್ಜಿ ವಜಾ ಮಾಡಿದ ಬಾಂಬೆ ಹೈಕೋರ್ಟ್‌

ಮುಂಬೈ: ಹವಾಲಾ ಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ನೀಡಿರುವ ಸಮನ್ಸ್‌ಗಳನ್ನು ವಜಾ ಮಾಡುವಂತೆ ಕೋರಿ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್‌ ದೇಶಮುಖ್‌ ಸಲ್ಲಿಸಿದ್ದ ಮನವಿಯನ್ನು ಬಾಂಬೆ ಹೈಕೋರ್ಟ್‌ ವಜಾ ಮಾಡಿದೆ. ಸಿಆರ್‌ಪಿಸಿ ಸೆಕ್ಷನ್‌ 438ರ ಅಡಿ ಅರ್ಜಿದಾರರು ಶಾಸನಬದ್ಧವಾಗಿ ಸಕ್ಷಮ ನ್ಯಾಯಾಲಯದ ಕದತಟ್ಟಲು ಮತ್ತು ನ್ಯಾಯಾಲಯವು ಅರ್ಹತೆಯ ಆಧಾರದಲ್ಲಿ ಪರಿಗಣಿಸುವ ಸಂಬಂಧ ಅದನ್ನು … Continued

ಕಾಶ್ಮೀರದ ಎಲ್​ಒಸಿ ಬಳಿ ಸ್ಫೋಟದಲ್ಲಿ ಇಬ್ಬರು ಸೈನಿಕರ ಸಾವು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ನೌಶೇರಾ-ಸುಂದರ್‌ಬಾನಿ ವಲಯದ ಗಡಿ ನಿಯಂತ್ರಣ ರೇಖೆ ಬಳಿ ನಡೆದ ಗಣಿ ಸ್ಫೋಟದಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಜಮ್ಮು ಕಾಶ್ಮೀರದ ಪೊಲೀಸರು ತಿಳಿಸಿದ್ದಾರೆ. ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ನಡೆದ ಗಣಿ ಸ್ಫೋಟದ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯ ಓರ್ವ ಅಧಿಕಾರಿ ಮತ್ತು ಸೈನಿಕರೊಬ್ಬರು ಮೃತಪಟ್ಟಿದ್ದಾರೆ ಎಂದು … Continued

ಎಲ್ಲರಿಗೂ ಸಮಾನವಾಗಿ ಅನ್ವಯಿಸುವ ಜನಸಂಖ್ಯಾ ನೀತಿ ಭಾರತಕ್ಕೆ ಬೇಕು: ದತ್ತಾತ್ರೇಯ ಹೊಸಬಾಳೆ ಪ್ರತಿಪಾದನೆ

ಧಾರವಾಡ: ಪ್ರತಿಯೊಂದು ದೇಶವೂ ಜನಸಂಖ್ಯಾ ನೀತಿಯನ್ನು ಹೊಂದಬೇಕು ಮತ್ತು ಅದು ಸಮಾಜದ ಎಲ್ಲರಿಗೂ ಸಮಾನವಾಗಿ ಅನ್ವಯಿಸಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರೆಸ್ಸೆಸ್‌)ದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಪ್ರತಿಪಾದಿಸಿದರು. ಧಾರವಾಡದ ಗರಗ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿ ಸಭೆಯ ಅಂತಿಮ ದಿನವಾದ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೈಸರ್ಗಿಕ ಸಂಪನ್ಮೂಲಗಳ … Continued