ಮಾನ್ಸೂನ್‌ 2 ದಿನ ವಿಳಂಬ: ಜೂನ್ 3ರಂದು ಕೇರಳಕ್ಕೆ ಪ್ರವೇಶ

ನವ ದೆಹಲಿ: ಭಾರತದಲ್ಲಿ ನೈಋತ್ಯ ಮಾನ್ಸೂನ್ ಮಳೆಯು ಎರಡು ದಿನ ವಿಳಂಬವಾಗಲಿದೆ. ಮೇ 31ರ ಬದಲಿಗೆ ಜೂನ್ 3ರಂದು ಕರಾವಳಿಗೆ ಮಾನ್ಸೂನ್ ಅಪ್ಪಳಿಸಲಿದೆ ಎಂದು ಭಾನುವಾರ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಯಾಸ್ ಮತ್ತು ತೌಕ್ಟೆ ಚಂಡಮಾರುತದ ಪ್ರಭಾವದಿಂದ ಮೇ 31ರಂದು ಕರಾವಳಿಗೆ ಮಾನ್ಸೂನ್ ಪ್ರವೇಶಿಸಲಿದೆ ಎಂದು ಈ ಮೊದಲು ಹವಾಮಾನ ಇಲಾಖೆ ತಿಳಿಸಿತ್ತು. ಆದರೆ … Continued

ಪಿಪಿಇ ಕಿಟ್‌ನಲ್ಲಿದ್ದ ಮೃತ ದೇಹವನ್ನು ನದಿಗೆ ಎಸೆಯುವ ವಿಡಿಯೋ ವೈರಲ್‌ ಆದ ನಂತರ ಇಬ್ಬರ ಬಂಧನ

ಉತ್ತರ ಪ್ರದೇಶದ ರಾಪ್ತಿ ನದಿಗೆ ಶವವನ್ನು ಎಸೆಯಲಾಗುತ್ತಿರುವ ವಿಡಿಯೋ ಹೊರಬಿದ್ದ ನಂತರ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ವಿಡಿಯೊದಲ್ಲಿ, ಮಳೆ ಬೀಳುತ್ತಿರುವಾಗ ಇಬ್ಬರು ಯುವಕರು ಸಿಸಾಯ್ ಘಾಟ್‌ನಲ್ಲಿರುವ ಸೇತುವೆಯಿಂದ ದೇಹವನ್ನು ನದಿಗೆ ಎಸೆಯುವುದನ್ನು ಕಾಣಬಹುದು. ಅವರಲ್ಲಿ ಒಬ್ಬರು ವೈಯಕ್ತಿಕ ರಕ್ಷಣಾ ಸಾಧನ (ಪಿಪಿಇ) ಸೂಟ್ ಧರಿಸಿರುತ್ತಾರೆ. ಬಲರಾಂಪುರದ ಕೊಟ್ವಾಲಿ ಪ್ರದೇಶದಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದೆ … Continued

5.1 ಕೆಜಿಗಿಂತ ಹೆಚ್ಚು ತೂಕದ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ…!

ಮಾಂಡ್ಲಾ: ಮಧ್ಯಪ್ರದೇಶದ ಮಾಂಡ್ಲಾ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 29 ವರ್ಷದ ಮಹಿಳೆ 5.1 ಕಿಲೋಗ್ರಾಂ ತೂಕದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ವೈದ್ಯರು ಭಾನುವಾರ ತಿಳಿಸಿದ್ದಾರೆ. ನವಜಾತ ಶಿಶುವಿನ ಸಾಮಾನ್ಯ ತೂಕವು 2.5 ಕೆಜಿ ಮತ್ತು 3.7 ಕೆಜಿ ನಡುವೆ ಇರುವುದರಿಂದ ಇದು ಅಪರೂಪದ ಪ್ರಕರಣವಾಗಿದೆ ಎಂದು ಅವರು ಹೇಳಿದ್ದಾರೆ. ರಕ್ಷಾ ಕುಶ್ವಾಹ … Continued

ಲಸಿಕೆ ಕೊರತೆ ದೂರುಗಳ ಮಧ್ಯೆ, ಸೀರಮ್‌ ನಿಂದ ಜೂನ್‌ನಲ್ಲಿ 10 ಕೋಟಿ ಕೋವಿಶೀಲ್ಡ್ ಡೋಸ್‌ ಪೂರೈಕೆ ಭರವಸೆ

ನವ ದೆಹಲಿ: ದೇಶದ ಹಲವಾರು ರಾಜ್ಯಗಳಲ್ಲಿ ಲಸಿಕೆ ಡೋಸುಗಳ ಕೊರತೆಯ ಬಗ್ಗೆ ಹೆಚ್ಚುತ್ತಿರುವ ದೂರುಗಳ ಮಧ್ಯೆ, ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಜೂನ್‌ನಲ್ಲಿ 9ರಿಂದ 10 ಕೋಟಿ ಡೋಸ್ ಕೋವಿಶೀಲ್ಡ್ ತಯಾರಿಸಲು ಮತ್ತು ಪೂರೈಸಲು ಸಾಧ್ಯವಾಗುತ್ತದೆ ಎಂದು ಸರ್ಕಾರಕ್ಕೆ ಮಾಹಿತಿ ನೀಡಿದೆ. ಸಾಂಕ್ರಾಮಿಕ ರೋಗದಿಂದಾಗಿ ವಿವಿಧ ಸವಾಲುಗಳ ನಡುವೆಯೂ ತನ್ನ ನೌಕರರು ಇಪ್ಪತ್ನಾಲ್ಕು ತಾಸೂ … Continued

ಜೂನ್ 7ರ ವರೆಗೆ ಕಾದುನೋಡಿ ಲಾಕ್‌ಡೌನ್ ಕುರಿತು ನಿರ್ಧಾರ: ಶೆಟ್ಟರ

ಹುಬ್ಬಳ್ಳಿ:ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಕೋವಿಡ್ ಸೋಂಕಿತರ ಖಚಿತತೆ ಪ್ರಮಾಣ ಶೇ.16 ರಷ್ಟಿದೆ. ಪಾಸಿಟಿವ್ ದರ ಕಡಿಮೆಯಾದರೆ ರಾಜ್ಯದಲ್ಲಿ ಲಾಕ್‌ಡೌನ್ ತೆರವು ಮಾಡಲು ಸಿದ್ದವಿರುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರು ಹೇಳಿದ್ದಾರೆ. ಜೂನ್‌ 7 ರ ವರೆಗೆ ಕಾದು ನೋಡಿ ಲಾಕ್ ಡೌನ್ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಹೇಳಿದರು. ಕೇಂದ್ರದ … Continued

ಕೊರೊನಾ ರೋಗಿ ಶವ ಸೇತುವೆಯಿಂದ ನದಿಗೆ ಎಸೆದ ಕುಟುಂಬದವರು.. ಕ್ಯಾಮರಾದಲ್ಲಿ ಸೆರೆಯಾಯ್ತು ಆಘಾತಕಾರಿ ದೃಶ್ಯ..!

ಬಲರಾಂಪುರ್: ಉತ್ತರಪ್ರದೇಶದಲ್ಲಿ ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿಯ ಮೃತದೇಹವನ್ನು ನದಿಗೆ ಎಸೆಯುವ ಆಘಾತಕಾರಿ ದೃಶ್ಯ ವಿಡಿಯೊದಲ್ಲಿ ಬಹಿರಂಗವಾಗಿದೆ. ಗಂಗಾ ನದಿ ತೀರದಲ್ಲಿ ಮರಳಿನಲ್ಲಿ ಆಳವಿಲ್ಲದ ಸಮಾಧಿಗಳಲ್ಲಿ ಸಾವಿರಾರು ಮೃತದೇಹಗಳ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ಕೆಲವು ಮೃತದೇಹಗಳನ್ನು ನದಿಗೆ ಎಸೆಯಲಾಗಿದೆ ಎಂದು ಕೆಲವು ವಾರಗಳ ಹಿಂದೆ ವಿಶ್ವದಾದ್ಯಂತ ಸುದ್ದಿಯಾಗಿತ್ತು. ಮೃತದೇಹಗಳು ಬಿಹಾರದ ವರೆಗೆ ಗಂಗಾನದಿಯಲ್ಲಿ ತೇಲಿಕೊಂಡು ಹೋಗಿತ್ತು. … Continued

ಭಾರತವು ಮೆಹುಲ್ ಚೋಕ್ಸಿ ಗಡೀಪಾರು ದಾಖಲೆಗಳನ್ನು ಡೊಮಿನಿಕಾಗೆ ಕಳುಹಿಸಿದೆ: ಆಂಟಿಗುವಾನ್ ಪಿಎಂ

ನವ ದೆಹಲಿ:ಮೆಹುಲ್ ಚೋಕ್ಸಿ ಅವರನ್ನು ಗಡೀಪಾರು ಮಾಡಲು ಸಂಬಂಧಿಸಿದ ದಾಖಲೆಗಳನ್ನು ಭಾರತ ಕಳುಹಿಸಿದೆ ಎಂದು ಆಂಟಿಗುವಾ ಮತ್ತು ಬಾರ್ಬುಡಾ ಪ್ರಧಾನಿ ಗ್ಯಾಸ್ಟನ್ ಬ್ರೌನ್ ಭಾನುವಾರ ಹೇಳಿದ್ದಾರೆ. 13,500 ಕೋಟಿ ರೂ.ಗಳ ಬ್ಯಾಂಕ್ ಸಾಲ ವಂಚನೆ ಪ್ರಕರಣದಲ್ಲಿ ಮೆಹುಲ್ ಚೋಕ್ಸಿ ಭಾರತದಲ್ಲಿ ಬೇಕಾಗಿದ್ದಾರೆ. 2018 ರಿಂದ ಆಂಟಿಗುವಾದಲ್ಲಿ ವಾಸಿಸುತ್ತಿದ್ದ ಚೋಕ್ಸಿ ಮೇ 26 ರಂದು ಡೊಮಿನಿಕಾದಲ್ಲಿ ಸೆರೆ … Continued

ಭೀಮಾ ನದಿಯಲ್ಲಿ ಕೊಚ್ಚಿಹೋದ ನಾಲ್ವರು ಮಕ್ಕಳು

ಸೋಲಾಪುರ ; ಮಹಾರಾಷ್ಟ್ರ ಗಡಿ ಭಾಗದ ಭೀಮಾ ನದಿಯಲ್ಲಿ ಈಜಲು ಹೋಗಿದ್ದ ನಾಲ್ವರು ಮಕ್ಕಳು ನೀರಿನ ರಭಸಕ್ಕೆ ಕೊಚ್ಚಿಹೋದ ಘಟನೆ ಮಹಾರಾಷ್ಟ್ರದ ದಕ್ಷಿಣ ಸೋಲಾಪುರ ತಾಲೂಕಿನ ಲವಗಿ ಗ್ರಾಮದ ಬಳಿ ನಡೆದ ವರದಿಯಾಗಿದೆ. ಶವಗಳಿಗಾಗಿ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಶೋಧಕಾರ್ಯ ನಡೆಸಿದ್ದಾರೆ. ಲವಗಿ ಗ್ರಾಮದ ಶಿವಾನಂದ ಪಾರ್ಶೆಟ್ಟಿ ಅವರ ಮಕ್ಕಳಾದ ಆರತಿ (13), ವಿಠ್ಠಲ (10), … Continued

ಧೈರ್ಯವಾಗಿರಿ, ಕೊರೊನಾ ಸೋಂಕು ಇಳಿದ ಮೇಲೆ ನಾನು ಸಕ್ರಿಯವಾಗಿ ಮತ್ತೆ ಬರುವೆ: ರಾಜಕೀಯಕ್ಕೆ ಮರಳುವ ಬಗ್ಗೆ ವೈರಲ್ ಆಡಿಯೋ ಕ್ಲಿಪ್‌ನಲ್ಲಿ ಶಶಿಕಲಾ ಸುಳಿವು

ಉಚ್ಚಾಟಿತ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಮತ್ತು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ಅವರ ಆಪ್ತೆ ವಿ.ಕೆ.ಶಶಿಕಲಾ ಮತ್ತೆ ರಾಜಕೀಯಕ್ಕೆ ಮರಳುವುದಾಗಿ ಹೇಳಿರುವ ಅವರ ಧ್ವನಿ ಕ್ಲಿಪ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆ ಪಕ್ಷದ ಒಬ್ಬ ಕಾರ್ಯಕರ್ತರ ನಡುವಿನ ಧ್ವನಿಮುದ್ರಣ ಕರೆ ಎಂದು ಹೇಳಲಾದ ಧ್ವನಿ ಕ್ಲಿಪ್‌ ಅವರು ದೂರವಾಣಿಯಲ್ಲಿ ಮಾತನಾಡುವಾಗ, ನೀವು … Continued

ಹೋಟೆಲ್‌ಗಳ ಸಹಯೋಗದೊಂದಿಗೆ ಖಾಸಗಿ ಆಸ್ಪತ್ರೆಗಳಿಂದ ಕೋವಿಡ್ ವ್ಯಾಕ್ಸಿನೇಷನ್ ಪ್ಯಾಕೇಜ್‌ಗಳು ನಿಯಮಗಳಿಗೆ ವಿರುದ್ಧ, ತಕ್ಷಣವೇ ನಿಲ್ಲಿಸಿ:ಸರ್ಕಾರ

ನವ ದೆಹಲಿ: ಖಾಸಗಿ ಆಸ್ಪತ್ರೆಗಳು ಹೋಟೆಲ್‌ಗಳ ಸಹಯೋಗದೊಂದಿಗೆ ನೀಡುತ್ತಿರುವ ಕೋವಿಡ್ -19 ವ್ಯಾಕ್ಸಿನೇಷನ್ ಪ್ಯಾಕೇಜ್‌ಗಳು ರಾಷ್ಟ್ರೀಯ ಕೋವಿಡ್ ವ್ಯಾಕ್ಸಿನೇಷನ್ ಕಾರ್ಯಕ್ರಮಕ್ಕಾಗಿ ನೀಡಲಾದ ಮಾರ್ಗಸೂಚಿಗಳಿಗೆ ವಿರುದ್ಧವಾಗಿವೆ ಎಂದು ಕೇಂದ್ರ ಸರ್ಕಾರ ಶನಿವಾರ ಪ್ರಕಟಣೆಯಲ್ಲಿ ತಿಳಿಸಿದೆ. ಮಾರ್ಗಸೂಚಿಗಳ ಪ್ರಕಾರ, ಕೋವಿಡ್ ವ್ಯಾಕ್ಸಿನೇಷನ್ ಅನ್ನು ಸರ್ಕಾರಿ ಕೇಂದ್ರ, ಖಾಸಗಿ ಆಸ್ಪತ್ರೆ, ಸರ್ಕಾರಿ ಅಥವಾ ಖಾಸಗಿ ಕಚೇರಿಗಳು ನಡೆಸುವ ಖಾಸಗಿ ಕೇಂದ್ರ … Continued