ಕೊರೊನಾ ಸೋಂಕಿತನ ಚಿಕಿತ್ಸೆಗೆ ತೆರಳುತ್ತಿದ್ದ ವೈದ್ಯಕೀಯ ತಂಡದ ಮೇಲೆ ಹಲ್ಲೆ

ಲಕ್ನೋ: ಕೊರೊನಾ ಸೋಂಕಿತ ವ್ಯಕ್ತಿಗೆ ಔಷಧಿ ನೀಡಲು ತೆರಳುತ್ತಿದ್ದ ವೈದ್ಯರ ಮೇಲೆ ಜನರ ಗುಂಪೊಂದು ದಾಳಿ ನಡೆಸಿರುವ ಘಟನೆ ಉತ್ತರಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ನಡೆದಿದೆ. ದಾಳಿಯಲ್ಲಿ ವೈದ್ಯರು ಸೇರಿದಂತೆ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದು , ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಲಿಯಾ ಜಿಲ್ಲೆಯ ಪಾಸ್ವಾನ್ ಚೌಕ್ ಪ್ರದೇಶದಲ್ಲಿ ಇಬ್ಬರು ವೈದ್ಯರು ಸೇರಿದಂತೆ ಮೂವರು ಸರ್ಕಾರಿ ವೈದ್ಯಕೀಯ ಸಿಬ್ಬಂದಿಗಳು … Continued

ಕೋವಿಡ್ ಕರ್ತವ್ಯದ ವೇಳೆ ಮೃತಪಟ್ಟ ಪ್ರತಿ 5 ವೈದ್ಯರಲ್ಲಿ ಒಬ್ಬರಿಗೆ ಮಾತ್ರ 50 ಲಕ್ಷ ರೂ.ವಿಮೆ..!

ನವ ದೆಹಲಿ: ನವದೆಹಲಿ: ಭಾರತದಲ್ಲಿ ಈವರೆಗೆ ಕೋವಿಡ್ -19 ಕರ್ತವ್ಯದ ವೇಳೆ ಕನಿಷ್ಠ 756 ವೈದ್ಯರು ತಮ್ಮ ಪ್ರಾಣ ಕಳೆದುಕೊಂಡಿದ್ದು, ಈ ಪೈಕಿ ಕೇವಲ 168 ವೈದ್ಯರ ಕುಟುಂಬಗಳು ಮಾತ್ರ ಕೇಂದ್ರ ಸರ್ಕಾರದ 50 ಲಕ್ಷ ರೂ. ವಿಮೆ ಪಡೆದುಕೊಂಡಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘದ ಅಂಕಿ ಅಂಶಗಳು ತಿಳಿಸಿವೆ. ಈ ಕುರಿತು ವರದಿ ಮಾಡಿರುವ … Continued

ಕೊರೊನಾ ಉಲ್ಬಣ: ಬ್ರಿಟನ್‌ ಪ್ರಧಾನಿ ಭಾರತ ಪ್ರವಾಸ ರದ್ದು

ನವ ದೆಹಲಿ: ಕೊರೊನಾ ವೈರಸ್​ ಹೆಚ್ಚಳ ಹಿನ್ನೆಲೆ ಬ್ರಿಟಿಷ್​ ಪ್ರಧಾನಿ ಬೋರಿಸ್​ ಜಾನ್ಸನ್​​ ಮುಂದಿನ ವಾರ ಕೈಗೊಳ್ಳಬೇಕಿದ್ದ ಭಾರತ ಪ್ರವಾಸ ರದ್ದು ಮಾಡಿದ್ದಾರೆ. ಈ ಬಗ್ಗೆ ಬ್ರಿಟನ್​ ಪ್ರಧಾನಿ ಸಚಿವಾಲಯ ಅಧಿಕೃತ ಮಾಹಿತಿ ನೀಡಿದೆ. ಭಾರತದಲ್ಲಿ ಪ್ರಸ್ತುತ ಕೊರೊನಾ ವೈರಸ್​ ಗಮನದಲ್ಲಿ ಇಟ್ಟುಕೊಂಡು, ಪ್ರಧಾನ ಮಂತ್ರಿ ಬೋರಿಸ್​ ಜಾನ್ಸನ್​​ ಮುಂದಿನ ವಾರದ ಭಾರತ ಪ್ರವಾಸ ಕೈಗೊಳ್ಳುತ್ತಿಲ್ಲ. … Continued

ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿ ಸುಪರ್ದಿಗೆ ಗೋಕರ್ಣ ದೇವಾಲಯ: ಸುಪ್ರೀಂ ಕೋರ್ಟ್ ತೀರ್ಪು

ನವ ದೆಹಲಿ :ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ನಿರ್ವಹಣೆಯನ್ನು ಮಾಜಿ ಸುಪ್ರೀಂ ಕೋರ್ಟ್   ನ್ಯಾಯಮೂರ್ತಿ ಬಿ ಎನ್ ಶ್ರೀಕೃಷ್ಣ ನೇತೃತ್ವದ ಮೇಲ್ವಿಚಾರಣಾ ಸಮಿತಿಗೆ ಹಸ್ತಾಂತರಿಸಲಾಗುವುದು ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಈ ಕುರಿತು ಲೈವ್‌ ಲಾ ವರದಿ ಮಾಡಿದ್ದು, ವರದಿ ಪ್ರಕಾರ, ಮುಖ್ಯ ನ್ಯಾಯಮೂರ್ತಿ ಎಸ್. ಎ. ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎಸ್. ಎಸ್. ಬೋಪಣ್ಣ ಮತ್ತು ವಿ … Continued

ಕೆಲವು ವಿನಾಯಿತಿಯೊಂದಿಗೆ ರಾಜಸ್ಥಾನದಲ್ಲೂ 15 ದಿನಗಳ ಲಾಕ್‌ಡೌನ್ ಜಾರಿ..!

ಜೈಪುರ: ಹೆಚ್ಚುತ್ತಿರುವ ಕೊರೊನಾ ಸೋಂಕಿನ ಪ್ರಕರಣಗಳ ಹಿನ್ನೆಲೆಯಲ್ಲಿ, ಕೆಲವು ವಿನಾಯಿತಿಗಳೊಂದಿಗೆ ರಾಜಸ್ಥಾನದಲ್ಲಿ ಏಪ್ರಿಲ್ 19 ರಿಂದ ಮೇ 3ರ ವರೆಗೆ ಹದಿನೈದು ದಿನಗಳ ಲಾಕ್ ಡೌನ್ ವಿಧಿಸಲಾಗಿದೆ. ಆದರೆ, ಅಶೋಕ್ ಗೆಹ್ಲೋಟ್ ಸರ್ಕಾರ ಇದಕ್ಕೆ ‘ಜನ ಅನುಷಾನ್ ಪಖ್ವಾಡಾ’ (ಸಾರ್ವಜನಿಕ ಶಿಸ್ತು ಫೋರ್ಟ್‌ನೈಟ್) ಎಂದು ಹೆಸರಿಸಿದೆ. ಈ ಸಮಯದಲ್ಲಿ, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ಸರ್ಕಾರಿ … Continued

ಕೊರೊನಾ ಉಲ್ಬಣ: ದೆಹಲಿಯಲ್ಲಿ ಒಂದು ವಾರ ಲಾಕ್‌ಡೌನ್‌ ಘೋಷಣೆ ಮಾಡಿದ ಸಿಎಂ ಕೇಜ್ರಿವಾಲ

ದೆಹಲಿ: ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಏ.೧೯ರ ರಾತ್ರಿ ೧೦ರಿಂದ ಏ.೨೬ (ಮುಂದಿನ ಸೋಮವಾರ)ರ ಬೆಳಿಗ್ಗೆ 5 ಗಂಟೆಯ ವರೆಗೆ ಲಾಕ್‌ಡೌನ್‌ ಘೋಷಿಸಿದೆ. “ನಾನು ಯಾವಾಗಲೂ ದೆಹಲಿಯೆಲ್ಲವೂ ಒಂದು ಕುಟುಂಬದಂತಿದೆ ಎಂದು ಹೇಳುತ್ತೇನೆ. ಈಗಲೂ ನಾವು ಅದನ್ನು ಒಟ್ಟಿಗೆ ಎದುರಿಸುತ್ತೇವೆ. ನಾವು ಮೊದಲೇ ಗೆದ್ದಿದ್ದೇವೆ, ಮತ್ತೆ ಗೆಲ್ಲುತ್ತೇವೆ ”ಎಂದು ಕೇಜ್ರಿವಾಲ್ … Continued

ಅರ್ಧಕ್ಕಿಂತ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗದಂತೆ ಮುಚ್ಚಿಟ್ಟ ತೆಲಂಗಾಣ ಸರ್ಕಾರ..?

ಹೈದರಾಬಾದ್: ತೆಲಂಗಾಣದಲ್ಲಿ ಪತ್ತೆಯಾಗುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆ ಹಾಗೂ ಸರ್ಕಾರ ಮಾಧ್ಯಮಕ್ಕೆ ನೀಡುತ್ತಿರುವ ಮಾಹಿತಿಯಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ ಎಂದು ಆರೋಪಿಸಲಾಗುತ್ತಿದೆ. ತೆಲಂಗಾಣ ಸರ್ಕಾರ ಮಾಧ್ಯಮಕ್ಕೆ ನೀಡಿರುವ ಸಂಖ್ಯೆಗಿಂತ ಎರಡು ಪಟ್ಟು ಪ್ರಕರಣಗಳು ಪತ್ತೆಯಾಗುತ್ತಿವೆ, ಜಿಲ್ಲಾ ಆರೋಗ್ಯಾಧಿಕಾರಿಗಳು ನೀಡಿರುವ ವರದಿ ಸಂಖ್ಯೆಯನ್ನು ಸರ್ಕಾರವು ಮಾಧ್ಯಮಗಳಿಗೆ ನೀಡುವ ಮುನ್ನ ಕಡಿತಗೊಳಿಸಲಾಗುತ್ತಿದೆ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ. ಇಂಡಿಯನ್ … Continued

ಭಾರತದಲ್ಲಿ ಏರುತ್ತಲೇ ಇದೆ ಕೊರೊನಾ ದೈನಂದಿನ ಸೋಂಕಿನ ಗ್ರಾಫ್‌..! 2.73 ಲಕ್ಷ ಪ್ರಕರಣ ದಾಖಲು..!!

ನವ ದೆಹಲಿ: ಭಾರತವು ಮತ್ತೊಂದು ಅತಿ ಹೆಚ್ಚು ಏಕದಿನ ಕೊರೊನಾ ವೈರಸ್‌ ಸೋಂಕು ದಾಖಲಿಸಿದ್ದು, ಕಳೆದ 24 ಗಂಟೆಗಳಲ್ಲಿ 2,73,810 ಕೊರೊನಾ ದೈನಂದಿನ ಸೋಂಕು ದಾಖಲಿಸಿದೆ.ಇದೇ ಅವಧಿಯಲ್ಲಿ ದಾಖಲೆಯ 1,619 ಹೊಸ ಸಾವುಗಳು ಸಂಭವಿಸಿವೆ, ದೇಶದ ಒಟ್ಟು ಸೋಂಕಿತರ ಸಂಖ್ಯೆ 1,50,61,919 ಕ್ಕೆ ತಲುಪಿದೆ. ರಾಷ್ಟ್ರವ್ಯಾಪಿ ಸಾವಿನ ಸಂಖ್ಯೆ 1,78,769 ಕ್ಕೆ ತಲುಪಿದೆ. ಕಳೆದ 24 … Continued

ಕನ್ನಡದ ನಿಘಂಟು, ಶತಾಯುಷಿ ಪ್ರೊ.ಜಿ.ವೆಂಕಟಸುಬ್ಬಯ್ಯ ನಿಧನ

ಬೆಂಗಳೂರು: ಕನ್ನಡದ ಹಲವಾರು ನಿಘಂಟುಗಳಿಗೆ ಹೆಸರುವಾಸಿಯಾದ ಖ್ಯಾತ ಕನ್ನಡ ವಿದ್ವಾಂಸ, ಬರಹಗಾರ ಮತ್ತು ನಿಘಂಟು ಶಾಸ್ತ್ರಜ್ಞ ಪ್ರೊಫೆಸರ್ ಗಂಜಾಂ ವೆಂಕಟಸುಬ್ಬಯ್ಯ ಸೋಮವಾರ 108ನೇ ವಯಸ್ಸಿನಲ್ಲಿ ನಿಧನರಾದರು. ಕನ್ನಡ ನಿಘಂಟು ತಜ್ಞರೆಂದೇ ಖ್ಯಾತರಾಗಿರುವ ಅವರಿಗೆ ಪದ್ಮಶ್ರೀ, ನಾಡೋಜ, ಪಂಪ, ಭಾಷಾ ಸನ್ಮಾನ್ ಸೇರಿದಂತೆ ಹಲವು ಪ್ರಶಸ್ತಿ ಗೌರವಗಳು ಸಿಕ್ಕಿವೆ.ವೆಂಕಟಸುಬ್ಬಯ್ಯ ಅವರು ಎಂಟಕ್ಕೂ ಹೆಚ್ಚು ನಿಘಂಟುಗಳನ್ನ ರಚಿಸಿದ್ದಾರೆ. ಇವರ … Continued

ಕೋವಿಡ್‌ ಚಿಕಿತ್ಸೆಗೆ ಆಮ್ಲಜನಕದ ಕೊರತೆ ಕೂಗು: ಕೈಗಾರಿಕಾ ಉದ್ದೇಶಗಳಿಗಾಗಿ ಆಮ್ಲಜನಕ ಪೂರೈಕೆ ನಿಷೇಧಿಸಿದ ಕೇಂದ್ರ

ನವ ದೆಹಲಿ; ಕೊರತೆಯ ಮಧ್ಯೆ, ಕೈಗಾರಿಕಾ ಉದ್ದೇಶಗಳಿಗಾಗಿ ಆಮ್ಲಜನಕ  ಪೂರೈಸುವುದನ್ನು ಕೇಂದ್ರ ಸರ್ಕಾರ ಭಾನುವಾರ ನಿಷೇಧಿಸಿದೆ. ಎಲ್ಲಾ ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ, ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ವಿನಾಯಿತಿ ಪಡೆದವರನ್ನು ಹೊರತುಪಡಿಸಿ, ಕೈಗಾರಿಕಾ ಉದ್ದೇಶಗಳಿಗಾಗಿ ಆಮ್ಲಜನಕ ಪೂರೈಸುವುದನ್ನು ನಿಷೇಧಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಳಿಕೊಂಡಿದ್ದಾರೆ. ಕೋವಿಡ್‌-19 ಪ್ರಕರಣಗಳ ತ್ವರಿತ ಏರಿಕೆ ಮತ್ತು ವೈದ್ಯಕೀಯ … Continued