ರೈತ ಹೋರಾಟಗಾರರ ಜೊತೆ ಮಾತುಕತೆ ಆರಂಭಿಸಿ: ಪ್ರಧಾನಿಗೆ ಬಿಜೆಪಿ ಸರ್ಕಾರದ ಡಿಸಿಎಂ ಒತ್ತಾಯ

ಚಂಡೀಗಢ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹೋರಾಟ ನಡೆಸುತ್ತಿರುವ ರೈತರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತೆ ಮಾತುಕತೆ ಆರಂಭಿಸಬೇಕು ಎಂದು ಹರಿಯಾಣ ಉಪಮುಖ್ಯಮಂತ್ರಿ ದುಷ್ಯಂತ ಚೌಟಾಲಾ ಹೇಳಿದ್ದಾರೆ. ಈ ಕುರಿತು ಅವರು ಪ್ರಧಾನಿಗೆ ಪತ್ರ ಬರೆದಿದ್ದು, ನಾಲ್ಕು ತಿಂಗಳುಗಳಿಂದ ರೈತರು ಬೇಡಿಕೆಗಳ ಈಡೇರಿಕೆಗೆ ಹೋರಾಟ ಮಾಡುತ್ತಿದ್ದಾರೆ. ಅನ್ನದಾತರು ದೆಹಲಿ ಗಡಿಯ ರಸ್ತೆಯ ಮೇಲಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು. ಎಲ್ಲ … Continued

ಪಶ್ಚಿಮ ಬಂಗಾಳ: ಆರ್‌ಎಸ್‌ಪಿ ಅಭ್ಯರ್ಥಿ ಸಾವು, ಚುನಾವಣೆ ಮುಂದಕ್ಕೆ

ನವದೆಹಲಿ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಕ್ರಾಂತಿಕಾರಿ ರೆವಲೂಶನರಿ ಸೋಶಿಯಲಿಸ್ಟ್‌ ಪಾರ್ಟಿ (ಆರ್‌ಎಸ್‌ಪಿ) ಸಾವಿನಿಂದಾಗಿ ಚುನಾವಣಾ ಆಯೋಗ ಜಂಗಿಪುರ ವಿಧಾನಸಭಾ ಕ್ಷೇತ್ರದ ಚುನಾವಣೆಯನ್ನು ಮುಂದೂಡಿದೆ. ಜನ ಪ್ರಾತಿನಿಧ್ಯ ಕಾಯ್ದೆಯ ನಿಬಂಧನೆಗಳ ಪ್ರಕಾರ, ಮಾನ್ಯತೆ ಪಡೆದ ಪಕ್ಷದ ಅಭ್ಯರ್ಥಿಯೊಬ್ಬರು ಮೃತಪಟ್ಟರೆ, ಪಕ್ಷವು ಹೊಸ ಅಭ್ಯರ್ಥಿಯನ್ನು ನಿರ್ಧರಿಸಲು ಅನುವು ಮಾಡಿಕೊಡಲು ಮತದಾನವನ್ನು ಮುಂದೂಡಲಾಗುತ್ತದೆ. ಆರ್‌ಎಸ್‌ಪಿ ಅಭ್ಯರ್ಥಿಯ ಸಾವಿನಿಂದಾಗಿ ಏಪ್ರಿಲ್ … Continued

ಕೊರೊನಾ ಔಷಧ, ಸಲಕರಣೆ ಜಿಎಸ್‌ಟಿಯಿಂದ ಹೊರಗಿಡಿ: ಸೋನಿಯಾ ಒತ್ತಾಯ

ನವದೆಹಲಿ: ಕೊರೊನಾ ಚಿಕಿತ್ಸೆಗಾಗಿ ಅಗತ್ಯವಿರುವ ಎಲ್ಲಾ ಉಪಕರಣಗಳು, ಔಷಧಿಗಳು ಮತ್ತು ಇತರೆ ಸಾಧನಗಳನ್ನು ಜಿಎಸ್‌ಟಿಯಿಂದ ಮುಕ್ತಗೊಳಿಸಬೇಕು ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ದೇಶದಲ್ಲಿ ಕೊರೊನಾ ವೈರಸ್‌ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದ್ದು, ಬಿಕ್ಕಟ್ಟು ನಿರ್ವಹಿಸುವಲ್ಲಿ ಮೋದಿ ಸರಕಾರ ಸಂಪೂರ್ಣ ವಿಫಲವಾಗಿದೆ. ಕಾಂಗ್ರೆಸ್‌ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಲಸಿಕೆ ಕೊರತೆಯ ಬಗ್ಗೆ ಮನವಿ ಮಾಡಿದರೂ … Continued

ಕುಂಭಮೇಳ: ಪ್ರಧಾನಿ ಮೋದಿ ಮನವಿ ಮೇರೆಗೆ ಕುಂಭ ಮೇಳದ ಮುಕ್ತಾಯ ಪ್ರಕಟಿಸಿದ ಜುನಾ ಅಖಾಡಾ..!

ಹರಿದ್ವಾರ: ಜುನಾ ಅಖಾಡದ ಕುಂಭಮೇಳವು ಮುಕ್ತಾಯಗೊಂಡಿದೆ ಎಂದು ಮಹಾಮಂಡಲೇಶ್ವರ ಸ್ವಾಮಿ ಅವ್ದೇಶಾನಂದ್ ಗಿರಿ ಶನಿವಾರ ಪ್ರಕಟಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದ ನಂತರ ಅವರು ಅಖಾಡಾದ ಕುಂಭ ಹಬ್ಬದ ಮುಕ್ತಾಯವನ್ನು ಘೋಷಿಸಿದರು. ಪ್ರಧಾನಿ ನರೇಂದ್ರ ಮೋದಿ ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಅವ್ದೇಶಾನಂದ್ ಗಿರಿ ಅವರೊಂದಿಗೆ ದೂರವಾಣಿ ಸಂವಾದ ನಡೆಸಿದರು ಮತ್ತು ಎಲ್ಲಾ ಸಂತರ ಆರೋಗ್ಯದ … Continued

ರೈಲ್ವೆ ಪ್ಲಾಟ್ ಫಾರ್ಮ್, ರೈಲಿನಲ್ಲಿ ಸಂಚರಿಸುವಾಗ ಮಾಸ್ಕ್ ಧರಿಸದಿದ್ದರೆ 500 ರೂ.ವರೆಗೆ ದಂಡ

ನವ ದೆಹಲಿ: ಕೊರೋನಾ ಸೋಂಕು ನಿಯಂತ್ರಣಕ್ಕೆ ಭಾರತೀಯ ರೈಲ್ವೆ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ರೈಲುಗಳಲ್ಲಿ ಪ್ರಯಾಣಿಸುವಾಗ ಮತ್ತು ರೈಲ್ವೆ ನಿಲ್ದಾಣದ ಆವರಣದಲ್ಲಿ ಮಾಸ್ಕ್ ಧರಿಸದವರಿಗೆ 500 ರೂಪಾಯಿ ವರೆಗೆ ದಂಡ ವಿಧಿಸಲು ಇಲಾಖೆ ನಿರ್ಧರಿಸಿದೆ. ಇದನ್ನು ಮುಂದಿನ ಆದೇಶದವರೆಗೆ 6 ತಿಂಗಳವರೆಗೆ ಜಾರಿಗೆ ತರಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಈ ಮಧ್ಯೆ ಕೊರೋನಾ ಸೋಂಕು … Continued

ಮೇವು ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಲಾಲುಗೆ ಜಾಮೀನು

ಪಾಟ್ನಾ: ಬಿಹಾರ ಮೇವು ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಜೈಲಿನಲ್ಲಿರುವ ರಾಷ್ಟ್ರೀಯ ಜನತಾದಳದ ನಾಯಕ ಲಾಲು ಯಾದವ್ ಅವರಿಗೆ ಜಾರ್ಖಂಡ್ ಹೈಕೋರ್ಟ್ ಜಾಮೀನು ನೀಡಿದೆ. ಬಿಹಾರದ ಮಾಜಿ ಮುಖ್ಯಮಂತ್ರಿ “ಡುಮ್ಕಾ ಖಜಾನೆ ಪ್ರಕರಣ” ಎಂದು ಕರೆಯಲ್ಪಡುವ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು, ಜಾರ್ಖಂಡ್ ನಗರದ ಖಜಾನೆಯಿಂದ 3.13 ಕೋಟಿ ಹಣವನ್ನು ಈ ಹಿಂದೆ ಹಿಂತೆಗೆದುಕೊಂಡಿದ್ದಾರೆ ಎದು ಆರೋಪಿಸಲಾಗಿತ್ತು. ಪ್ರಸ್ತುತ … Continued

ಗಣರಾಜ್ಯದಿನದ ಕೆಂಪುಕೋಟೆ ಹಿಂಸಾಚಾರ ಪ್ರಕರಣ: ನಟ ದೀಪ್ ಸಿಧುಗೆ ಜಾಮೀನು

ನವ ದೆಹಲಿ: ಜನವರಿ 26ರ ದೆಹಲಿ ಕೆಂಪುಕೋಟೆ ಹಿಂಸಾಚಾರ ಪ್ರಕರಣದ ಆರೋಪಿ ನಟ ದೀಪ್ ಸಿಧುಗೆ ದೆಹಲಿ ನ್ಯಾಯಾಲಯ ಜಾಮೀನು ನೀಡಿದೆ. ಕಳೆದ ವಿಚಾರಣೆಯ ವೇಳೆ, ಜನವರಿ 26ರಂದು ಕೆಂಪು ಕೋಟೆಗೆ ಹೋಗುವಂತೆ ಪ್ರತಿಭಟನೆ ನಡೆಸುತ್ತಿದ್ದ ರೈತರಿಗೆ ನಾನು ಯಾವುದೇ ಕರೆ ನೀಡಿಲ್ಲ ಎಂದು ದೀಪ್ ಸಿಧು ನ್ಯಾಯಾಲಯಕ್ಕೆ ತಿಳಿಸಿದ್ದರು. ಸಿಧು ಅವರು ಪ್ರತಿಭಟನೆಗಾಗಿ ಕರೆ … Continued

ಕೋವಿಡ್ -19 ವಿರುದ್ಧದ ಹೋರಾಟ ಬಲಪಡಿಸಲು ಕುಂಭಮೇಳ ಈಗ ಸಾಂಕೇತಿಕವಾಗಿರಬೇಕು ಎಂದ ಪ್ರಧಾನಿ ಮೋದಿ

ನವ ದೆಹಲಿ: ಹರಿದ್ವಾರದ ಕುಂಭಮೇಳ ಪ್ರದೇಶದಿಂದ ಅಪಾರ ಸಂಖ್ಯೆಯ ಕೊರೊನಾ ಸೋಂಕಿಗೆ ಒಳಗಾಗುತ್ತಿರುವ ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಶನಿವಾರ ಬೆಳಿಗ್ಗೆ ವಾರಗಳ ಕಾಲ ನಡೆಯುವ ಧಾರ್ಮಿಕ ಹಬ್ಬವು “ಈಗ ಮಾತ್ರ ಸಾಂಕೇತಿಕವಾಗಿರಬೇಕು” ಎಂದು ಹೇಳಿದ್ದಾರೆ. ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ಭಾರತದ ಹೋರಾಟಕ್ಕೆ ಇದು ಉತ್ತೇಜನ ನೀಡುತ್ತದೆ ಎಂದು ಪ್ರಧಾನಿ ಮೋದಿ ಒತ್ತಿ … Continued

ಮತ್ತೊಂದು ಆಘಾತಕಾರಿ ಸುದ್ದಿ..ಕೊರೊನಾ ಪ್ರಧಾನವಾಗಿ ಹರಡುವುದೇ ಗಾಳಿಯ ಮೂಲಕ ಎಂದ ಅಧ್ಯಯನ ವರದಿ..!!

ಕೆಮ್ಮದ ಅಥವಾ ಸೀನದ ಜನರಿಂದಲೂ ಕೋವಿಡ್‌-19 ಕನಿಷ್ಠ ಶೇ.40ರಷ್ಟು ಹರಡುತ್ತದೆ ನವ ದೆಹಲಿ: ಕೋವಿಡ್‌-19 ಸಾಂಕ್ರಾಮಿಕದ ಹಿಂದಿರುವ SARS-CoV-2 ವೈರಸ್ ಪ್ರಧಾನವಾಗಿ ಗಾಳಿಯ ಮೂಲಕ ಹರಡುತ್ತದೆ ಎಂದು ಸಾಬೀತು ಪಡಿಸಲು ಸ್ಥಿರವಾದ, ಬಲವಾದ ಪುರಾವೆಗಳಿವೆ ಎಂದು ದಿ ಲ್ಯಾನ್ಸೆಟ್ ಜರ್ನಲ್‌ನಲ್ಲಿ ಶುಕ್ರವಾರ ಪ್ರಕಟವಾದ ಹೊಸ ಅಧ್ಯಯನ ಹೇಳಿದೆ. ಬ್ರಿಟನ್‌, ಅಮೆರಿಕ ಮತ್ತು ಕೆನಡಾದ ಆರು ತಜ್ಞರ … Continued

ಭಾರತದಲ್ಲಿ ಮುಂದುವರಿದ ದೈನಂದಿನ ಕೊರೊನಾ ಸೋಂಕಿನ ದಾಖಲೆ ಏರಿಕೆ ಗ್ರಾಫ್‌..ಸಾವಿನ ಸಂಖ್ಯೆಯೂ ಏರಿಕೆ..!

ನವ ದೆಹಲಿ: ಭಾರತದಲ್ಲಿ ಕಳೆದ ಇಪ್ಪತ್ನಾಲ್ಕು ತಾಸಿನಲ್ಲಿ ದಾಖಲೆಯ ದೈನಂದಿನ 2,34,692 ಕೊರೊನಾ ಸೋಂಕು ದಾಖಲಾಗಿದೆ, ಮತ್ತು 1,341 ಸಾವುಗಳು ವರದಿಯಾಗಿವೆ. ಭಾರತದ ಕೋವಿಡ್ -19 ಸಂಖ್ಯೆ 1,45,26,609 ಕ್ಕೆ ಏರಿದ್ದು, ಮತ್ತು ಮೃತಪಟ್ಟವರ ಸಂಖ್ಯೆ 1,75,649 ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ. . ದೇಶದಲ್ಲಿ ಸಕ್ರಿಯ ಕಕೊರೊನಾ ವೈರಸ್ ಪ್ರಕರಣಗಳ … Continued