ಹೃದಯದ ತೊಂದರೆ: ತೆಲುಗು-ತಮಿಳು ನಟ ವಿವೇಕ್‌ ಆಸ್ಪತ್ರೆಗೆ ದಾಖಲು

ಚೆನ್ನೈ: ಎದೆನೋವಿನ ತೊಂದರೆಯಿಂದ ತಮಿಳು ಹಾಗೂ ತೆಲುಗಿನ ಜನಪ್ರಿಯ ನಟ ವಿವೇಕ್ ಅವರನ್ನು ಏಪ್ರಿಲ್ 16, ಶುಕ್ರವಾರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೃದಯ ಆಘಾತದಿಂದ ಬಳಲುತ್ತಿರುವ ನಟನ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ಮೂಲವೊಂದು ದೃಢಪಡಿಸಿದೆ ಎಂದು ದಿ ನ್ಯೂಸ್‌ ಮಿನಿಟ್‌ ವರದಿ ಮಾಡಿದೆ. ವರದಿ ಪ್ರಕಾರ, ವಿವೇಕ್ ಅವರನ್ನು ಪ್ರಸ್ತುತ ಖಾಸಗಿ ಆಸ್ಪತ್ರೆಯ ವೈದ್ಯರ … Continued

ನೈಋತ್ಯ ಮಾನ್ಸೂನ್ ಈ ವರ್ಷ ಸಾಮಾನ್ಯ: ಹವಾಮಾನ ಇಲಾಖೆ

ನವ ದೆಹಲಿ: ದೇಶಕ್ಕೆ ಶೇಕಡಾ 75 ಕ್ಕಿಂತ ಹೆಚ್ಚು ಮಳೆಯಾಗುವ ನೈಋತ್ಯ ಮಾನ್ಸೂನ್ ಈ ವರ್ಷ ಸಾಮಾನ್ಯವಾಗಲಿದೆ ಎಂದು ಭಾರತ ಹವಾಮಾನ ಇಲಾಖೆ ಶುಕ್ರವಾರ ತಿಳಿಸಿದೆ. ಜೂನ್‌ನಿಂದ ಸೆಪ್ಟೆಂಬರ್ ವರೆಗಿನ ಮಳೆಗಾಲದಲ್ಲಿ ಒಟ್ಟು ಮಳೆ ದೀರ್ಘಾವಧಿಯ ಸರಾಸರಿಗಿಂತ 98% ಆಗುವ ಸಾಧ್ಯತೆಯಿದೆ ಎಂದು ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಮಾಧವನ್ ನಾಯರ್ ರಾಜೀವನ್ ಶುಕ್ರವಾರ ಆನ್‌ಲೈನ್ … Continued

ಕುಂಭ: ಹರಿದ್ವಾರದ 30 ಸಾಧುಗಳಿಗೆ ಕೊರೊನಾ ಸೋಂಕು..!

ಹರಿದ್ವಾರ: ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭ ಮೇಳದ ಮಧ್ಯೆ ನಗರದ 30 ಸಾಧುಗಳು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ ಎಂದು ಮುಖ್ಯ ವೈದ್ಯಕೀಯ ಅಧಿಕಾರಿ ಶುಕ್ರವಾರ ತಿಳಿಸಿದ್ದಾರೆ. ಹರಿದ್ವಾರ್ ಮುಖ್ಯ ವೈದ್ಯಾಧಿಕಾರಿ ಡಾ.ಎಸ್‌.ಕೆ ಝಾ, “ಹರಿದ್ವಾರದಲ್ಲಿ ಈವರೆಗೆ 30 ಸಾಧುಗಳು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.. ವೈದ್ಯಕೀಯ ತಂಡಗಳು ಅಖಾಡಾಗಳಿಗೆ ಹೋಗುತ್ತಿವೆ ಮತ್ತು ಸಾಧುಗಳ ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ. … Continued

ಕೊರೊನಾ ರೋಗಿಗೆ ಕುರ್ಚಿಯಲ್ಲೇ ಕೂಡ್ರಿಸಿ ಆಮ್ಲಜನಕ ಸಿಲಿಂಡರ್ ನೀಡಿದ ಆಸ್ಪತ್ರೆ..!!

ಛತ್ತೀಸ್​ಗಡ ಛತ್ತೀಸ್​ಗಡದಲ್ಲಿ ಕೋವಿಡ್-19 ಪ್ರಕರಣಗಳನ್ನು ನಿರ್ವಹಿಸುವ ಆಸ್ಪತ್ರೆಗಳ ಪರಿಸ್ಥಿತಿ ಚಿಂತಾಜನಕವಾಗಿದೆ. ಅಷ್ಟೊಂದು ದೊಡ್ಡ ರಾಜ್ಯವಲ್ಲದ ಛತ್ತೀಸ್‌ಗಡದಲ್ಲಿ ಕೊರೊನಾ ಸೋಂಕಿನ ಹಾವಳಿಗೆ ಅರೋಗ್ಯ ವ್ಯವಸ್ಥೆಯೇ ತತ್ತರಿಸಿದೆ. ಮಹಾಸಮುಂಡ್‌ನ ಜಿಲ್ಲಾ ಆಸ್ಪತ್ರೆಯಲ್ಲಿ ಖಾಲಿ ಹಾಸಿಗೆಗಳಿಲ್ಲದ ಕಾರಣ ಕೋವಿಡ್ ಪೀಡಿತ ಯುವಕನೊಬ್ಬ ಮೂರು ಗಂಟೆಗಳ ಕಾಲ ಆಮ್ಲಜನಕ ಸಿಲಿಂಡರ್‌ನೊಂದಿಗೆ ಕುರ್ಚಿಯ ಮೇಲೆಯೇ ಕುಳಿತಿರುವ ಘಟನೆ ವರದಿಯಾಗಿದೆ. ಇತ್ತೀಚೆಗೆ ಸಂಸದೀಯ ಕಾರ್ಯದರ್ಶಿ … Continued

ಭಾರತದಲ್ಲಿ 2.17 ಲಕ್ಷ ದಾಟಿದ ದೈನಂದಿನ ಕೊರೊನಾ ಸೋಂಕು..ಏರುತ್ತಲೇ ಇದೆ ಗ್ರಾಫ್‌

ನವ ದೆಹಲಿ: ಭಾರತದಲ್ಲಿ ಹೊಸ ಕೊರೊನಾ ವೈರಸ್ (ಕೋವಿಡ್ -19) ಪ್ರಕರಣಗಳು ಶುಕ್ರವಾರ ದಾಖಲೆಯ ಹೆಚ್ಚಳದ ವರದಿಮಾಡಿದೆ. ಕಳೆದ 24 ಗಂಟೆಗಳಲ್ಲಿ 2,17,353 ಹೊಸ ಸೋಂಕುಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಇದೇ ಅವಧಿಯಲ್ಲಿ ಕೊರೊನಾ ಸೋಂಕಿನಿಂದ 1185 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಡ್ಯಾಶ್‌ಬೋರ್ಡ್ … Continued

ಕೊರೊನಾಕ್ಕೆ ಬಳಸುವ ರೆಮ್ಡೆಸಿವಿರ್ ಚುಚ್ಚುಮದ್ದು ಕಾಳಸಂತೆಯಲ್ಲಿ ಮಾರಾಟಕ್ಕೆ ಯತ್ನ: ಮೂವರ ಬಂಧನ

ಇಂದೋರ್: ಕೋವಿಡ್‌-19 ರೋಗಿಗಳ ಚಿಕಿತ್ಸೆಯಲ್ಲಿ ಬಳಸುವ ರೆಮ್ಡೆಸಿವಿರ್ ಚುಚ್ಚುಮದ್ದನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದ ಆರೋಪದ ಮೇಲೆ ವೈದ್ಯಕೀಯ ಅಂಗಡಿ ಮಾಲೀಕರು ಮತ್ತು ಇತರ ಇಬ್ಬರನ್ನು ಮಧ್ಯಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಗುರುವಾರ ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಂಧಿತ ವ್ಯಕ್ತಿಗಳನ್ನು ರಾಜೇಶ್ ಪಟಿದಾರ್, ಜ್ಞಾನೇಶ್ವರ ಬಾರಸ್ಕರ್ ಮತ್ತು ಅನುರಾಗ್ ಸಿಂಗ್ ಸಿಸೋಡಿಯಾ ಎಂದು ಗುರುತಿಸಲಾಗಿದೆ … Continued

‘ಆನ್ ಟ್ಯಾಪ್’ ಪರವಾನಗಿ ಅಡಿ ಬ್ಯಾಂಕುಗಳ ಸ್ಥಾಪನೆಗೆ ಆರ್‌ಬಿಐಗೆ 8 ಅರ್ಜಿಗಳು ಸಲ್ಲಿಕೆ

ಮುಂಬೈ: ಸಾರ್ವತ್ರಿಕ ಬ್ಯಾಂಕುಗಳು ಮತ್ತು ಸಣ್ಣ ಹಣಕಾಸು ಬ್ಯಾಂಕುಗಳಿಗೆ ‘ಆನ್ ಟ್ಯಾಪ್’ ಪರವಾನಗಿ ನೀಡುವ ಮಾರ್ಗಸೂಚಿಗಳ ಅಡಿಯಲ್ಲಿ ತಲಾ ನಾಲ್ಕು ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಗುರುವಾರ ತಿಳಿಸಿದೆ. ಯುಎಇ ಎಕ್ಸ್ಚೇಂಜ್ ಮತ್ತು ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್, ದಿ ರಿಪ್ಯಾಟ್ರಿಯೇಟ್ಸ್ ಕೋಆಪರೇಟಿವ್ ಫೈನಾನ್ಸ್ ಅಂಡ್ ಡೆವಲಪ್ಮೆಂಟ್ ಬ್ಯಾಂಕ್ ಲಿಮಿಟೆಡ್ (ರೆಪ್ಕೊ ಬ್ಯಾಂಕ್), ಚೈತನ್ಯ ಇಂಡಿಯಾ … Continued

ಕೋವಿಡ್ -19: ಕೊವಾಕ್ಸಿನ್ ಉತ್ಪಾದಿಸಲು ಮುಂಬೈ ಹ್ಯಾಫ್ಕಿನ್ ಸಂಸ್ಥೆಗೆ ಅನುಮತಿ ನೀಡಿದ ಕೇಂದ್ರ

  ಮುಂಬೈ: ಭಾರತ್ ಬಯೋಟೆಕ್‌ನ ಕೋವಿಡ್‌ -19 ಲಸಿಕೆ ‘ಕೋವಾಕ್ಸಿನ್’ ಅನ್ನು ಮುಂಬೈನ ಹ್ಯಾಫ್‌ಕೈನ್ ಬಯೋ ಫಾರ್ಮಾಸ್ಯುಟಿಕಲ್ ಕಾರ್ಪೊರೇಶನ್‌ಗೆ ಉತ್ಪಾದಿಸುವ ತಂತ್ರಜ್ಞಾನ ವರ್ಗಾವಣೆ ಮಾಡಲು ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಗುರುವಾರ ಅನುಮೋದನೆ ನೀಡಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಕಾರ್ಯದರ್ಶಿ ರೇಣು ಸ್ವರೂಪ್ ಮಹಾರಾಷ್ಟ್ರ ಮುಖ್ಯ ಕಾರ್ಯದರ್ಶಿ ಸೀತಾರಾಮ್ ಕುಂಟೆ ಅವರಿಗೆ … Continued

ಕಸದ ಲಾರಿಗಳಲ್ಲಿ ಕೊರೊನಾದಿಂದ ಮೃತಪಟ್ಟವರ ಶವಗಳ ಸಾಗಣೆ

ರಾಜನಂದಗಾಂವ: ಛತ್ತೀಸಗಢ ರಾಜ್ಯದ ರಾಜನಂದಗಾಂವನಲ್ಲಿ ಕೊರೊನಾ ಕಾರಣದಿಂದ ಮೃತಪಟ್ಟವರನ್ನು ಆರೋಗ್ಯ ಕಾರ್ಯಕರ್ತರು ಕಸ ತುಂಬುವ ಲಾರಿಗಳಲ್ಲಿ ಶವಾಗಾರಕ್ಕೆ ಸಾಗಿಸುತ್ತಿರುವ ವಿಡಿಯೋ ವೈರಲ್‌ ಆಗಿದೆ. ಆಂಬುಲೆನ್ಸ್‌ಗಳು ಹಾಗೂ ಶವಸಾಗಣೆ ವಾಹನಗಳ ಕೊರತೆಯಿಂದಾಗಿ ಮೃತದೇಹಗಳನ್ನು ಕಸ ತುಂಬುವ ವಾಹನಗಳಲ್ಲಿ ಸಾಗಿಸಲಾಗುತ್ತಿದೆ. ವಿಡಿಯೋದಲ್ಲಿ ಶವಗಳನ್ನು ಕಸದ ಲಾರಿಗೆ ಎಸೆಯುತ್ತಿರುವ ದೃಷ್ಯಗಳಿವೆ. ಈ ಘಟನೆ ಕುರಿತು ರಾಜ್ಯ ಸರಕಾರ ಅಥವಾ ಆರೋಗ್ಯ … Continued

ಮಹಾರಾಷ್ಟ್ರದಲ್ಲಿ ಗುರುವಾರವೂ 61,695 ದೈನಂದಿನ ಸೋಂಕು ದಾಖಲು

ಮುಂಬೈ: ಮಹಾರಾಷ್ಟ್ರದಲ್ಲಿ ಗುರುವಾರ (ಏಪ್ರಿಲ್ 15) 61,695 ಹೊಸ ಕೋವಿಡ್‌ -19 ಪ್ರಕರಣಗಳು ದಾಖಲಾಗಿವೆ. ಅಲ್ಲದೆ, ದಿನದಲ್ಲಿ 349 ಕೋವಿಡ್‌ ಸಾವುಗಳು ದಾಖಲಾಗಿದ್ದು, ಸಾವಿನ ಸಂಖ್ಯೆ 59,153 ಕ್ಕೆ ತಲುಪಿದೆ. ಮಹಾರಾಷ್ಟ್ರದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 6,20,060 ತಲುಪಿದೆ. ರಾಜ್ಯದಲ್ಲಿ ಸಾವಿನ ಪ್ರಮಾಣ 1.63%. ದಿನದಲ್ಲಿ 39,624 ರೋಗಿಗಳನ್ನು ಬಿಡುಗಡೆ ಮಾಡಲಾಗಿದ್ದು, ಬಿಡುಗಡೆಯಾದವರ ಸಂಖ್ಯೆ … Continued