ಇಬ್ಬರು ಪುಟ್ಟ ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆ

ಮಲಪ್ಪುರಂ : ಕೇರಳದ ಮಲಪ್ಪುರಂ ಜಿಲ್ಲೆಯ ಮೈತ್ರಿ ನಗರದಲ್ಲಿ ದಂಪತಿ ಮತ್ತು ಅವರ ಇಬ್ಬರು ಮಕ್ಕಳು ತಮ್ಮ ಬಾಡಿಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಮಲಪ್ಪುರಂನ ಖಾಸಗಿ ಹಣ ವರ್ಗಾವಣೆ ಸಂಸ್ಥೆಯ ವ್ಯವಸ್ಥಾಪಕ 37 ವರ್ಷದ ಸಬೀಶ, ಅವರ ಪತ್ನಿ ಶೀನಾ (35), ಮತ್ತು ಅವರ ಮಕ್ಕಳಾದ ಹರಿಗೋವಿಂದ (6) ಮತ್ತು … Continued

ದೆಹಲಿ ಮದ್ಯ ಹಗರಣ : ದೆಹಲಿ ಮಾಜಿ ಸಿಎಂ ಮನೀಶ ಸಿಸೋಡಿಯಾ, ಇತರರಿಂದ 52 ಕೋಟಿ ಮೌಲ್ಯದ ಆಸ್ತಿ ವಶ

ನವದೆಹಲಿ: ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ ಸಿಸೋಡಿಯಾ, ಅವರ ಪತ್ನಿ ಸೀಮಾ ಸಿಸೋಡಿಯಾ ಮತ್ತು ಇತರರಿಂದ 52 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಶುಕ್ರವಾರ ವಶಪಡಿಸಿಕೊಂಡಿದೆ. ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಮನೀಶ … Continued

ಮೈಕ್ರೋಸಾಫ್ಟ್ ಇಂಡಿಯಾ ಅಧ್ಯಕ್ಷ ಅನಂತ ಮಹೇಶ್ವರಿ ರಾಜೀನಾಮೆ

ನವದೆಹಲಿ: ಮೈಕ್ರೋಸಾಫ್ಟ್ ಇಂಡಿಯಾ ಅಧ್ಯಕ್ಷ ಅನಂತ ಮಹೇಶ್ವರಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಮತ್ತು ಇತರ ಆಸಕ್ತಿಗಳನ್ನು ಅನುಸರಿಸಲು ಸಂಸ್ಥೆಯನ್ನು ತೊರೆಯಲಿದ್ದಾರೆ. ಈ ಬೆಳವಣಿಗೆಯನ್ನು ಮೊದಲು ಶುಕ್ರವಾರ ದಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. “ಕಂಪನಿಯ ಹೊರಗಿನ ಪಾತ್ರವನ್ನು ಮುಂದುವರಿಸಲು ಅನಂತ ಅವರು ಮೈಕ್ರೋಸಾಫ್ಟ್ ತೊರೆಯಲು ನಿರ್ಧರಿಸಿದ್ದಾರೆ ಎಂದು ನಾವು ಖಚಿತಪಡಿಸಬಹುದು. ಭಾರತದಲ್ಲಿನ ನಮ್ಮ … Continued

“ಗೀತಾ ಪ್ರೆಸ್‌ ದೇವಾಲಯಕ್ಕಿಂತ ಕಡಿಮೆಯಿಲ್ಲ”: ಕಾಂಗ್ರೆಸ್ ಆಕ್ರೋಶದ ನಂತರ ಗೀತಾ ಪ್ರೆಸ್‌ ಬಗ್ಗೆ ಪ್ರಧಾನಿ ಮೋದಿ ಪ್ರಶಂಸೆ

ನವದೆಹಲಿ: ಉತ್ತರ ಪ್ರದೇಶದ ಗೋರಖಪುರದಲ್ಲಿ ಇಂದು, ಶುಕ್ರವಾರ ನಡೆದ ಗೀತಾ ಮುದ್ರಣಾಲಯದ ಶತಮಾನೋತ್ಸವ ಸಮಾರಂಭದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಪ್ರಕಾಶನ ಸಂಸ್ಥೆಯು ಯಾವುದೇ ದೇವಾಲಯಕ್ಕಿಂತ ಕಡಿಮೆಯಿಲ್ಲ ಎಂದು ಹೇಳಿದ್ದಾರೆ. “ಕೆಲವೊಮ್ಮೆ ಸಂತರು ದಾರಿ ತೋರಿಸುತ್ತಾರೆ, ಕೆಲವೊಮ್ಮೆ ಗೀತಾ ಪ್ರೆಸ್‌ನಂತಹ ಸಂಸ್ಥೆಗಳು ದಾರಿ ತೋರಿಸುತ್ತವೆ” ಎಂದು ಪ್ರಧಾನಿ ಮೋದಿ ಹೇಳಿದರು. ಹಿಂದೂ … Continued

ಬಾಲಸೋರ್ ರೈಲು ಅಪಘಾತ ಪ್ರಕರಣ : ಮೂವರು ರೈಲ್ವೆ ಉದ್ಯೋಗಿಗಳನ್ನು ಬಂಧಿಸಿದ ಸಿಬಿಐ

ನವದೆಹಲಿ: 250ಕ್ಕೂ ಹೆಚ್ಚು ಪ್ರಯಾಣಿಕರ ಸಾವಿಗೆ ಕಾರಣವಾದ ಬಾಲಸೋರ್ ರೈಲು ದುರಂತಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಶುಕ್ರವಾರ ಮೂವರು ರೈಲ್ವೆ ಉದ್ಯೋಗಿಗಳನ್ನು ಬಂಧಿಸಿದೆ. ಎಲ್ಲಾ ಮೂವರು ಉದ್ಯೋಗಿಗಳನ್ನು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 304 ರ ಅಡಿಯಲ್ಲಿ ಬಂಧಿಸಲಾಗಿದೆ. ಅರುಣಕುಮಾರ ಮಹಾಂತ (ಹಿರಿಯ ವಿಭಾಗ ಎಂಜಿನಿಯರ್), ಎಂ.ಡಿ. ಅಮೀರ್ ಖಾನ್ (ಕಿರಿಯ … Continued

ವರ್ಷಾಂತ್ಯಕ್ಕೆ ವಿಧಾನಸಭೆ ಚುನಾಚಣೆ ನಡೆಯುವ 4 ರಾಜ್ಯಗಳಿಗೆ ಚುನಾವಣಾ ಉಸ್ತುವಾರಿಗಳನ್ನು ನೇಮಿಸಿದ ಬಿಜೆಪಿ

ನವದೆಹಲಿ: ಶುಕ್ರವಾರ ಭಾರತೀಯ ಜನತಾ ಪಕ್ಷ (ಬಿಜೆಪಿ) ಈ ವರ್ಷಾಂತ್ಯದೊಳಗೆ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜಸ್ಥಾನ, ಛತ್ತೀಸ್‌ಗಢ, ತೆಲಂಗಾಣ ಮತ್ತು ಮಧ್ಯಪ್ರದೇಶ ಈ ನಾಲ್ಕು ರಾಜ್ಯಗಳಿಗೆ ಚುನಾವಣಾ ಉಸ್ತುವಾರಿಗಳನ್ನು ನೇಮಿಸಿದೆ. 2024ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಪಂಜಾಬ್, ತೆಲಂಗಾಣ, ಜಾರ್ಖಂಡ್ ಮತ್ತು ಆಂಧ್ರಪ್ರದೇಶಕ್ಕೆ ಬಿಜೆಪಿ ರಾಜ್ಯ ಮುಖ್ಯಸ್ಥರನ್ನು ನೇಮಕ ಮಾಡಿದ ಕೆಲವು ದಿನಗಳ ನಂತರ ಈ … Continued

ಮೋದಿ ಉಪನಾಮ ಪ್ರಕರಣದಲ್ಲಿ ರಾಹುಲ್‌ ಗಾಂಧಿಗೆ ದೊಡ್ಡ ಹಿನ್ನಡೆ: ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಗುಜರಾತ್ ಹೈಕೋರ್ಟ್

ಅಹಮದಾಬಾದ್‌: ರಾಹುಲ್ ಗಾಂಧಿಗೆ ದೊಡ್ಡ ಹಿನ್ನಡೆಯಾಗಿ, ಮೋದಿ ಉಪನಾಮದ ಬಗ್ಗೆ ಅವರ ಹೇಳಿಕೆಗೆ ಸಂಬಂಧಿಸಿದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೆ ತಡೆ ಕೋರಿ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಗುಜರಾತ್ ಹೈಕೋರ್ಟ್ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ. ಈ ತೀರ್ಪಿನ ಪರಿಣಾಮವಾಗಿ ರಾಹುಲ್ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ ಹಾಗೂ ಅನರ್ಹಗೊಂಡ ಸಂಸತ್ತಿನ ಸದಸ್ಯತ್ವವನ್ನು ಮರಳಿ ಪಡೆಯಲು … Continued

ಕೊಯಮತ್ತೂರು : ಡಿಐಜಿ ಸಿ.ವಿಜಯಕುಮಾರ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ಕೊಯಮತ್ತೂರು: ಕೊಯಮತ್ತೂರು ವೃತ್ತದ ಪೊಲೀಸ್ ಉಪ ಮಹಾನಿರೀಕ್ಷಕ (ಡಿಐಜಿ) ಸಿ.ವಿಜಯಕುಮಾರ ಅವರು ಇಂದು, ಶುಕ್ರವಾರ ಬೆಳಗ್ಗೆ ನಗರದ ರೆಡ್‌ಫೀಲ್ಡ್ಸ್‌ನಲ್ಲಿರುವ ತಮ್ಮ ಮನೆಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಸುಮಾರು 45 ವರ್ಷ ವಯಸ್ಸಿನ ಸಿ.ವಿಜಯಕುಮಾರ ಅವರು ಕೊಯಮತ್ತೂರು ನಗರದ ರೆಡ್ ಫೀಲ್ಡ್ಸ್‌ನಲ್ಲಿರುವ ಅವರ ಕ್ವಾರ್ಟರ್ಸ್‌ನಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದರು. ಶುಕ್ರವಾರ ಬೆಳಗ್ಗೆ 6:15ರ ಸುಮಾರಿಗೆ … Continued

ಟ್ರಕ್‌ಗಳ ಕ್ಯಾಬಿನ್‌ಗಳಲ್ಲಿ ಹವಾನಿಯಂತ್ರಣ ವ್ಯವಸ್ಥೆ ಅಳವಡಿಕೆ ಕಡ್ಡಾಯಗೊಳಿಸುವ ಕರಡು ಅಧಿಸೂಚನೆಗೆ ಕೇಂದ್ರದ ಅನುಮೋದನೆ : ಸಚಿವ ಗಡ್ಕರಿ

ನವದೆಹಲಿ : ಟ್ರಕ್‌ಗಳ ಕ್ಯಾಬಿನ್‌ಗಳಲ್ಲಿ ಹವಾನಿಯಂತ್ರಣ ವ್ಯವಸ್ಥೆ ಅಳವಡಿಸುವುದನ್ನು ಕಡ್ಡಾಯಗೊಳಿಸುವ ಕರಡು ಅಧಿಸೂಚನೆಗೆ ಅನುಮೋದನೆ ನೀಡಲಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಗುರುವಾರ ಹೇಳಿದ್ದಾರೆ. ಸಿದ್ಧಪಡಿಸಲಾದ ಕರಡು ಎನ್ 2 ಮತ್ತು ಎನ್ 3 ವರ್ಗಗಳ ಅಡಿಯಲ್ಲಿನ ಟ್ರಕ್‌ಗಳನ್ನು ಒಳಗೊಂಡಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಟ್ವೀಟ್ ಮಾಡಿದ್ದಾರೆ. “N2 ಮತ್ತು N3 … Continued

ದೆಹಲಿ ಮದ್ಯ ಹಗರಣ : ಮನೀಶ್ ಸಿಸೋಡಿಯಾ ಆಪ್ತನ ಬಂಧಿಸಿದ ಜಾರಿ ನಿರ್ದೇಶನಾಲಯ

ನವದೆಹಲಿ: ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಜೈಲು ಪಾಲಾಗಿರುವ ಎಎಪಿ ನಾಯಕ ಹಾಗೂ ದೆಹಲಿ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಅವರ ಆಪ್ತ ಎಂದು ಪರಿಗಣಿಸಲಾದ ಉದ್ಯಮಿ ದಿನೇಶ ಅರೋರಾ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಗುರುವಾರ ಬಂಧಿಸಿದೆ. ಕಳೆದ ವರ್ಷ, ಸಿಟಿ ನ್ಯಾಯಾಲಯವು ಪ್ರಕರಣದಲ್ಲಿ ದಿನೇಶ ಅರೋರಾ ಅವರನ್ನು ಅನುಮೋದಕರನ್ನಾಗಿ ಮಾಡುವಂತೆ ಸಿಬಿಐ ಕೋರಿಕೆಯನ್ನು … Continued