ಜನವರಿ 1ರಿಂದ ಚೀನಾ ಸೇರಿ 6 ದೇಶಗಳಿಂದಬರುವ ಪ್ರಯಾಣಿಕರಿಗೆ ನೆಗೆಟಿವ್‌ ಕೋವಿಡ್ ವರದಿ ಕಡ್ಡಾಯ

ನವದೆಹಲಿ: ಜನವರಿ 1ರಿಂದ ಚೀನಾ ಮತ್ತು ಇತರ ಐದು ದೇಶಗಳಿಂದ ಭಾರತಕ್ಕೆ ಬರುವ ಪ್ರಯಾಣಿಕರು ಆಗಮನದ ಮೊದಲು ನೆಗೆಟಿವ್ ಕೋವಿಡ್ ಪರೀಕ್ಷಾ ವರದಿ ಸಲ್ಲಿಸಬೇಕು ಎಂದು ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ‌ ಗುರುವಾರ ಹೇಳಿದ್ದಾರೆ. ಚೀನಾ, ಹಾಂಗ್ ಕಾಂಗ್, ಜಪಾನ್, ದಕ್ಷಿಣ ಕೊರಿಯಾ, ಸಿಂಗಾಪುರ ಮತ್ತು ಥೈಲ್ಯಾಂಡ್‌ನಿಂದ ಬರುವ ಪ್ರಯಾಣಿಕರು ನಿರ್ಗಮಿಸುವ ಮೊದಲು ಏರ್ ಸುವಿಧಾ … Continued

ಸುಖೋಯ್ ಯುದ್ಧವಿಮಾನದಿಂದ ಹಾರಿಸಲಾದ ವಿಸ್ತೃತ ಶ್ರೇಣಿಯ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿ

ನವದೆಹಲಿ : ಯುದ್ಧ ವಿಮಾನಗಳ ಮೂಲಕ ಹಾರಿಸಲಾಗುವ ವಿಸ್ತೃತ ಶ್ರೇಣಿಯ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಭಾರತೀಯ ವಾಯುಪಡೆ ಇಂದು, ಗುರುವಾರ ಯಶಸ್ವಿಯಾಗಿ ಪರೀಕ್ಷಿಸಿದೆ. ಎಸ್‌ಯು-30 ಎಂಕೆಐ ಫೈಟರ್ ಜೆಟ್‌ನಿಂದ ಹಾರಿಸಲಾದ ಬ್ರಹ್ಮೋಸ್ ಕ್ಷಿಪಣಿಯ ವಿಸ್ತೃತ ಶ್ರೇಣಿಯು ದೂರದ ಸಮುದ್ರದ ಹಡಗಿನ ಗುರಿಯನ್ನು ಯಶಸ್ವಿಯಾಗಿ ತಲುಪಿದೆ. ಬ್ರಹ್ಮೋಸ್ ಕ್ಷಿಪಣಿಯ ವಿಸ್ತೃತ ಶ್ರೇಣಿಯು 400 ಕಿಮೀ ದೂರದ … Continued

ಫೆಬ್ರವರಿ 21ರಿಂದ ಮಾರ್ಚ್ 10ರ ವರೆಗೆ ಯುಜಿಸಿ ಎನ್‌ಇಟಿ ಪರೀಕ್ಷೆ

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು ಯುಜಿಸಿ ನೆಟ್‌ (UGC NET) 2023ರ ಪರೀಕ್ಷಾ ದಿನಾಂಕಗಳನ್ನು ಪ್ರಕಟಿಸಿದೆ. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ಪ್ರಕಾರ, ಯುಜಿಸಿ- ರಾಷ್ಟ್ರೀಯ ಅರ್ಹತಾ ಪರೀಕ್ಷೆ (NET) ಫೆಬ್ರವರಿ 21ರಿಂದ ಮಾರ್ಚ್ 10ರ ವರೆಗೆ ನಡೆಯಲಿದೆ. ಯುಜಿಸಿ ನೆಟ್‌ (UGC NET) 2023 ಪರೀಕ್ಷೆಯ ನೋಂದಣಿ ಪ್ರಕ್ರಿಯೆಯು ಇಂದು, ಗುರುವಾರ ಪ್ರಾರಂಭವಾಗಿದೆ. ಯುಜಿಸಿ … Continued

ಅಸಾಧ್ಯವೂ ಸಾಧ್ಯ..: ಕಡಿದಾದ ಬಂಡೆಗಳ ಪರ್ವತವನ್ನು ಬೈಕ್‌ ಮೇಲೆ ಏರಿದ ಸಾಹಸಿ…ವೀಕ್ಷಿಸಿ

ಮೋಟಾರ್‌ಸೈಕಲ್ ಸವಾರನ ಅಸಾಧಾರಣ ಸಾಹಸದ ವೀಡಿಯೊ ಇಂಟರ್ನೆಟ್‌ನಲ್ಲಿ ಹೆಚ್ಚು ವೈರಲ್ ಆಗುತ್ತಿದೆ, ಇದರಲ್ಲಿ ವ್ಯಕ್ತಿಯೊಬ್ಬ ಕಡಿದಾದ ಬಂಡೆಯ ಪರ್ವತವನ್ನು ಅಪಾಯಕಾರಿ ರೀತಿಯಲ್ಲಿ ಏರಲು ಡರ್ಟ್ ಬೈಕ್‌ ಚಲಾವಣೆ ಮಾಡಿಕೊಂಡು ಏರುತ್ತಿರುವುದನ್ನು ಕಾಣಬಹುದು. ಈ ಸಾಹಸವು ತುಂಬಾ ಕಷ್ಟಕರವಾಗಿದೆ ಎಂದು ತೋರುತ್ತದೆ, ಹೆಚ್ಚಿನ ವೀಕ್ಷಕರು ಈ ಸಾಹಸಕ್ಕೆ ಬೆರಗಾಗಿದ್ದಾರೆ. ಸಾಹಸಮಯ ಬೈಕ್‌ ಸವಾರಿಗಳ ವೀಡಿಯೋಗಳನ್ನು ಈಗ ಇಂಟರ್ನೆಟ್‌ನಲ್ಲಿ … Continued

ರಾಜಸ್ಥಾನದಲ್ಲಿ ನಡೆದ ಮುಖೇಶ ಅಂಬಾನಿ ಕಿರಿಯ ಪುತ್ರನ ಮದುವೆ ನಿಶ್ಚಿತಾರ್ಥ

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ (ಆರ್‌ಐಎಲ್) ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಪುತ್ರ ಅನಂತ ಅಂಬಾನಿ ಇಂದು, ಗುರುವಾರ ರಾಧಿಕಾ ಮರ್ಚೆಂಟ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ರಾಜಸ್ಥಾನದ ನಾಥದ್ವಾರದಲ್ಲಿರುವ ಶ್ರೀನಾಥಜಿ ದೇವಸ್ಥಾನದಲ್ಲಿ ಇವರಿಬ್ಬರ ಸಾಂಪ್ರದಾಯಿಕ ರೋಕಾ ಸಮಾರಂಭ ನಡೆಯಿತು. ರಾಧಿಕಾ ಮರ್ಚಂಟ್ ಅವರು, ಔಷಧೀಯ ತಯಾರಿಕಾ ಕಂಪನಿಯ ಸಿಇಒ ಹಾಗೂ ಕೈಗಾರಿಕೋದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ. … Continued

ಗ್ಯಾಂಬಿಯಾ ನಂತರ ತಮ್ಮ ದೇಶದ 18 ಮಕ್ಕಳ ಸಾವಿಗೂ ಭಾರತೀಯ ಕಂಪನಿ ಸಿರಪ್‌ಗೂ ಸಂಬಂಧವಿದೆ ಎಂದು ಉಜ್ಬೇಕಿಸ್ತಾನ್ ಆರೋಪ

ಉಜ್ಬೇಕಿಸ್ತಾನ್ ಬುಧವಾರ 18 ಮಕ್ಕಳ ಸಾವನ್ನು ಭಾರತೀಯ ಕೆಮ್ಮು ಸಿರಪ್‌ಗೆ ಜೋಡಿಸಿದ ನಂತರ ಕೇಂದ್ರ ಸರ್ಕಾರವು ಕಾರಣ ಸ್ಥಿತಿಯನ್ನು ಹುಡುಕಿದೆ ಎಂದು ಮೂಲಗಳು ತಿಳಿಸಿವೆ. ಗ್ಯಾಂಬಿಯಾದಲ್ಲಿ ಇದೇ ರೀತಿಯ ಘಟನೆ ವರದಿಯಾದ ತಿಂಗಳ ನಂತರ, ಭಾರತೀಯ ಔಷಧೀಯ ಕಂಪನಿಯೊಂದು ತಯಾರಿಸಿದ ಔಷಧಿಗಳನ್ನು ಸೇವಿಸಿ ದೇಶದಲ್ಲಿ 18 ಮಕ್ಕಳು ಸಾವಿಗೀಡಾಗಿದ್ದಾರೆ ಎಂದು ಉಜ್ಬೇಕಿಸ್ತಾನ್ ಆರೋಗ್ಯ ಸಚಿವಾಲಯ ಆರೋಪಿಸಿದೆ. … Continued

ರಾಹುಲ್ ಗಾಂಧಿ 113 ಬಾರಿ ಭದ್ರತಾ ಮಾರ್ಗಸೂಚಿ ಉಲ್ಲಂಘಿಸಿದ್ದಾರೆ: ಭದ್ರತಾ ಉಲ್ಲಂಘನೆ ಆರೋಪದ ನಂತರ ಸಿಆರ್‌ಪಿಎಫ್‌ ಹೇಳಿಕೆ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಭಾರತ ಜೋಡೋ ಯಾತ್ರೆಯ ಸಂದರ್ಭದಲ್ಲಿ ಭದ್ರತಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಗುರುವಾರ ಕೇಂದ್ರ ಮೀಸಲು ಪೊಲೀಸ್ ಪಡೆ ಆರೋಪಿಸಿದೆ, ಕಾಂಗ್ರೆಸ್ ಪಕ್ಷದ ಭದ್ರತಾ ಲೋಪಗಳ ಹೇಳಿಕೆಗಳಿಗೆ ಪ್ರತಿಕ್ರಿಯೆಯಾಗಿ ಸಿಆರ್‌ಪಿಎಫ್ ಈ ಹೇಳೀಕೆಗಳು ಬಂದಿವೆ. ರಾಹುಲ್ ಗಾಂಧಿಯವರ ಕಡೆಯಿಂದ ನಿಗದಿಪಡಿಸಿದ ಮಾರ್ಗಸೂಚಿಗಳ ಉಲ್ಲಂಘನೆಯನ್ನು ಹಲವಾರು ಸಂದರ್ಭಗಳಲ್ಲಿ ಗಮನಿಸಲಾಗಿದೆ … Continued

ಪಿಎಫ್‌ಐಗೆ ಸಂಬಂಧಿಸಿದ 56 ಸ್ಥಳಗಳ ಮೇಲೆ ಎನ್‌ಐಎ ದಾಳಿ

ಚೆನ್ನೈ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಗುರುವಾರ ಕೇರಳದ 56 ಸ್ಥಳಗಳ ಮೇಲೆ ದಾಳಿ ಆರಂಭಿಸಿದೆ. ಪಿಎಫ್‌ಐ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯು ಕೇರಳದ 56 ಸ್ಥಳಗಳಲ್ಲಿ ದಾಳಿ ನಡೆಸುತ್ತಿದೆ ಎಂದು ತಿಳಿಸುತ್ತಿವೆ. ಪಿಎಫ್‌ಐ ಸದಸ್ಯರೊಂದಿಗೆ ನಂಟು ಹೊಂದಿರುವ ಹಲವಾರು ಶಂಕಿತರ ಆವರಣ ಮತ್ತು … Continued

ಮೊದಲು ವಾಗ್ವಾದ, ನಂತರ ಜೋರಾಗಿ ಹೊಡೆದಾಟ : ಬ್ಯಾಂಕಾಕ್-ಕೋಲ್ಕತ್ತಾ ವಿಮಾನದಲ್ಲಿ ಹೊಡೆದಾಡಿಕೊಂಡ ಇಬ್ಬರು ಭಾರತೀಯ ಪ್ರಯಾಣಿಕರು | ವೀಕ್ಷಿಸಿ

ಬ್ಯಾಂಕಾಕ್‌ನಿಂದ ಕೋಲ್ಕತ್ತಾಕ್ಕೆ ಪ್ರಯಾಣಿಸುತ್ತಿದ್ದ ಅಂತಾರಾಷ್ಟ್ರೀಯ ವಿಮಾನದಲ್ಲಿ ಇಬ್ಬರು ಭಾರತೀಯ ಪ್ರಯಾಣಿಕರು ವಿಮಾನ ಹಾರಾಡುತ್ತಿದ್ದಾಗಲೇ ಹೊಡೆದಾಡಿಕೊಂಡ ವಿಲಕ್ಷಣ ಘಟನೆ ನಡೆದ ವರದಿಯಾಗಿದೆ. ಮೊದಲು ಪರಸ್ಪರ ನಡೆದ ವಾಗ್ದಾವು ವಿಕೋಪಕ್ಕೆ ತೆರಳಿದ ನಂತರ ಹೊಡೆದಾಟ ನಡೆದಿದೆ. ಈ ಮಂಗಳವಾರ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಈಗ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ಈ ವೀಡಿಯೊದಲ್ಲಿ, ಥಾಯ್ ಸ್ಮೈಲ್ ಏರ್‌ವೇ … Continued

‘ ಬಾಳ ಸಂಗಾತಿ ಆಗಲು ಈ ಗುಣಗಳಿರುವ ಮಹಿಳೆಗೆ ಆದ್ಯತೆ…’: ಬಾಳ ಸಂಗಾತಿ ಬಗ್ಗೆ ಇದೇ ಮೊದಲ ಬಾರಿಗೆ ಮಾತನಾಡಿದ ರಾಹುಲ್ ಗಾಂಧಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ತಮ್ಮ ಜೀವನ ಸಂಗಾತಿ ಹೇಗಿರಬೇಕು ಎಂಬುದರಿಂದ ಹಿಡಿದು ಮೋಟಾರ್‌ ಸೈಕಲ್‌ಗಳ ಮೇಲಿನ ಪ್ರೀತಿಯ ವರೆಗೆ ತಮ್ಮ ಜೀವನದ ಬಗೆಗಿನ ಕೆಲವು ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯ ನೇತೃತ್ವ ವಹಿಸಿರುವ ರಾಹುಲ್ ಗಾಂಧಿ ಅವರು, ತಮ್ಮ ಬಾಳ ಸಂಗಾತಿ ಆಗುವವರು ತಮ್ಮ ತಾಯಿ ಸೋನಿಯಾ … Continued